Ananya Serial: ಪಾರು ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರ; ಪಾರು ಕೈಯ್ಯಲ್ಲಿ ರಂಗೇರಿದ ಮದರಂಗಿ-ಶಿವು ಉಪಾಯ ಫಲಿಸುತ್ತಾ
Zee Kannada Serial: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮನೆಯಲ್ಲಿ ಮದರಂಗಿ ಶಾಸ್ತ್ರ ಆರಂಭವಾಗಿದೆ. ಪಾರು ಅಸಮಾಧಾನದಿಂದ ಒಳಗೊಳಗೆ ಸಂಕಟಪಡುತ್ತಾ ಇದ್ದಾಳೆ. ಅದನ್ನು ಶಿವು ಹತ್ತಿರ ನೋಡಲು ಸಾಧ್ಯವಾಗುತ್ತಿಲ್ಲ. ಮುಂದೇನಾಗುತ್ತದೆ ನೋಡಿ.
ಪಾರು ಬೆಂಕಿಯಲ್ಲಿ ಬಿದ್ದು ಸುಡುತ್ತಿರುವಾಗ ಶಿವು ಅವಳನ್ನು ಕಾಪಾಡಿದ್ದಾನೆ. ಅವನಿರುವುದಕ್ಕಾಗಿ ಅಲ್ಲಿ ಯಾವ ಅಪಾಯವೂ ಆಗಿಲ್ಲ. ಅವನು ಇಲ್ಲದೇ ಹೋಗಿದ್ದರೆ ಯಾರೊಬ್ಬರೂ ಪಾರುವನ್ನು ಕಾಪಾಡುತ್ತಿರಲಿಲ್ಲ. ಹೀಗಿರುವಾಗ ಶಿವುಗೆ ಯಾರೂ ಕನಿಷ್ಠ ಧನ್ಯವಾದವನ್ನೂ ತಿಳಿಸಿಲ್ಲ. ಈ ಸಂಗತಿ ಅವನಿಗೆ ಮನಸಿನಿಂದ ಬೇಸರ ತಂದರೂ ಯಾರೊಂದಿಗೂ ಹೇಳಿಕೊಂಡಿಲ್ಲ. ಆದ್ರೆ ತಂಗಿಯರು ಮಾತ್ರ ತುಂಬಾ ಬೇಜಾರಿನಲ್ಲೇ ಇದ್ದಾರೆ. “ನಮಗೆಲ್ಲ ಆಧಾರವಾಗಿ ಇರುವವನು ನೀನು ಒಬ್ಬನೇ. ಆದರೆ ನೀನೇ ಬೆಂಕಿಗೆ ಹಾರಿದಾಗ ನಮಗೆಲ್ಲ ಹೇಗಾಯ್ತು ಗೊತ್ತಾ” ಎಂದು ಪ್ರಶ್ನೆ ಮಾಡುತ್ತಾರೆ. ಅವರು ಆಡಿದ ಮಾತಿನಲ್ಲೂ ಸತ್ಯ ಇರುತ್ತದೆ. ಆದರೆ ಶಿವುಗೆ ಪಾರು ಅಂದ್ರೆ ಪ್ರಾಣ.
ಅತ್ತೆಯಿಂದ ಸಮಾಧಾನ
ಇನ್ನು ಅವನು ಮರುದಿನ ಪಾರು ಹೇಗಿದ್ದಾಳೆ ಎಂದು ನೋಡುವುದಕ್ಕಾಗಿ ದಿನಸಿ ಕೊಡುವ ನೆಪದಲ್ಲಿ ಅವರ ಮನೆಗೆ ಹೋಗುತ್ತಾನೆ. ಹೋಗಿ ನೋಡುವಷ್ಟರಲ್ಲಿ ಅವನ ಅತ್ತೆ ಅವನಿದ್ದಲ್ಲಿಗೆ ಬಂದು “ನಿನಗೆ ಧನ್ಯವಾದ ತಿಳಿಸೋಕು ಆಗಲೇ ಇಲ್ಲ ನಂಗೆ. ಪಾರುಗೆ ಹಾಗಾಯ್ತಲ್ಲ ಅಂತ ನಾನು ಅವಳ ಯೋಚನೆಯಲ್ಲೇ ಇದ್ದೆ. ಆದರೆ ನೀನು ಹೇಗಿದ್ದೀಯಾ ಅಂತ ವಿಚಾರಿಸಿಕೊಂಡು ಬರೋಣ ಅಂತ ಈಗ ನಾನು ನಿಮ್ಮ ಮನೆಕಡೆ ಬರೋಳಿದ್ದೆ” ಎಂದು ಹೇಳುತ್ತಾಳೆ. ಆಗ ಅವನು ಹೇಳುತ್ತಾನೆ. “ಇಲ್ಲ ಅತ್ತೆ ನನಗೇನೂ ಆಗೋದಿಲ್ಲ. ನೋಡಿ ನಾನು ಗುಂಡ್‌ಕಲ್ ಇದ್ದಾಗಿದಿನಿ” ಅಂತ.
ಅಷ್ಟರಲ್ಲಿ ಅಲ್ಲಿಗೆ ಮಾವ ಬರ್ತಾನೆ. ಬಂದು “ಏನಯ್ಯ ಶಿವು ಹೇಗಿದ್ದೀಯಾ? ನೀನು ನನ್ನ ಮಗಳನ್ನು ಕಾಪಾಡಿದ್ದು ಒಳ್ಳೆದಾಯ್ತು” ಎಂದು ಹೇಳಿ ನಾಳೆ ಮಾಡಬೇಕಾದ ಇನ್ನೊಂದಷ್ಟು ಕೆಲಸಗಳನ್ನು ವಹಿಸಿ ಅಲ್ಲಿಂದ ನಡೆದು ಬಿಡುತ್ತಾನೆ. ಇನ್ನು ಇವನ ಕಣ್ಣುಗಳು ಮಾತ್ರ ಪಾರುವನ್ನೇ ಹುಡುಕುತ್ತಾ ಇರುತ್ತದೆ. ಪಾರು ಕಾಣುತ್ತಾಳೆ. “ಮಾವ ಹೇಗಿದ್ದೀಯಾ?” ಎಂದು ಪ್ರೀತಿಯಿಂದ ಕೇಳುತ್ತಾಳೆ. ಆಗ ಶಿವುಗೆ ಸಮಾಧಾನ ಆಗುತ್ತದೆ.
“ನೀನು ಹೇಗಿದ್ದೀಯಾ?” ಎಂದು ಇವನು ತಕ್ಷಣ ಪ್ರಶ್ನೆ ಮಾಡುತ್ತಾನೆ. ಆಗ ಅವಳು ಆರೋಗ್ಯವಾಗಿದ್ದೀನಿ ಎಂದು ಹೇಳುತ್ತಾಳೆ. ನಾಳೆಯೇ ಚಪ್ಪರ ಶಾಶ್ತ್ರ ಎಂಬ ವಿಷಯ ಅವರಿಗೆ ಗೊತ್ತಾಗುತ್ತದೆ. ಚಪ್ಪರ ಶಾಸ್ತ್ರವೂ ಆಗುತ್ತದೆ. ಇಂದು ಮದರಂಗಿ ಶಾಸ್ತ್ರ ನಡೆಯುತ್ತಿದೆ. ಹುಡುಗಿ ಕೈಗೆ ಮಾವನೇ ಮದರಂಗಿ ಹಾಕಬೇಕು ಎಂದು ಹೇಳಿದ್ದಕ್ಕೆ ಶಿವು ಬಂದು ಅವಳ ಕೈಗೆ ಮದರಂಗಿ ಹಾಕಿದ್ದಾನೆ. ಮನೆಯಲ್ಲಿ ಸಡಗರ ರಂಗೇರಿದೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.