ಅಣ್ಣಯ್ಯ ಧಾರಾವಾಹಿ: ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು; ಪಾರುಗೆ ಅಜ್ಜಿ ಮಾತಿನಿಂದ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು; ಪಾರುಗೆ ಅಜ್ಜಿ ಮಾತಿನಿಂದ ಬೇಸರ

ಅಣ್ಣಯ್ಯ ಧಾರಾವಾಹಿ: ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು; ಪಾರುಗೆ ಅಜ್ಜಿ ಮಾತಿನಿಂದ ಬೇಸರ

ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಪಾರು ಮಾತ್ರ ತಾನು ಇವರ ಕಾಟದಿಂದ ತಪ್ಪಿಸಿಕೊಂಡ್ರೆ ಸಾಕು ಎಂದು ಒದ್ದಾಡುತ್ತಾ ಇದ್ದಾಳೆ. ತಂಗಿಯರ ಮಾತಿನ ಪ್ರಕಾರ ಈ ಮದುವೆ ನಡೆಯೋದಿಲ್ಲ ಎಂದಾಗಿದೆ. ಕಾವೇರಜ್ಜಿ ಮಾತು ನಿಜವಾಗುತ್ತಾ ನೋಡಿ.

ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು
ಸೋಮೆಗೌಡನಿಗೆ ಬುದ್ದಿ ಕಲಿಸಲು ಹೊರಟ ಶಿವು (ಝೀ ಕನ್ನಡ)

ಪಾರು ಮದುವೆ ಆಗೋದಿಲ್ಲ ಎಂದರೂ ಈಗ ಮದುವೆ ಆಗಲೇಬೇಕಾದ ಪ್ರಸಂಗ ಎದುರಾಗಿದೆ. ಯಾಕೆಂದರೆ ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಮದುವೆ ಮಂಟಪಕ್ಕೆ ಬಂದಾಗಿದೆ. ಆದರೆ ಸೋಮೇಗೌಡನ ಧೀಮಾಕಿಗೆ ಶಿವು ಕೋಪಗೊಂಡಿದ್ದಾನೆ. ಒಮ್ಮೆ ಜ್ಯೂಸ್ ತೆಗೆದುಕೊಂಡು ಬಾ ಎಂದು ಹೇಳಿದರೆ, ಇನ್ನೊಮ್ಮೆ ಕಾಫಿ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದಾನೆ. ಅವನು ಬೇಕು ಎಂದೇ ಕಾಟ ಕೊಡಲು ಆರಂಭಿಸಿದ್ದಾನೆ ಎಂಬ ಸಂಗತಿ ತಿಳಿದಿದೆ. ಇನ್ನು ಇತ್ತ ಪಾರುಗೆ ಸೋಮೇಗೌಡನ ಅಜ್ಜಿ ಕಾಟ ಕೊಡುತ್ತಿದ್ದಾಳೆ. ಅವಳು ಉಟ್ಟ ಸೀರೆ, ಅವಳ ಹೇರ್ ಸ್ಟೈಲ್ ಯಾವುದು ಸಮಂಜಸ ಎನಿಸಲಿಲ್ಲ. “ಇದೇನು ಕೂದಲಾ? ಇಲ್ಲ ಚೀಲ ಕಟ್ಟುವ ಹಗ್ಗವಾ?” ಎಂದು ಕೇಳಿದ್ದಾಳೆ. ಯಾಕೆಂದರೆ ಪಾರು ಫ್ರೀ ಹೇರ್ ಬಿಟ್ಟಿರುತ್ತಾಳೆ.

ಅಜ್ಜಿಯ ದರ್ಪ

ನಮ್ಮ ಸಂಪ್ರದಾಯದ ಪ್ರಕಾರ ಕೂದಲನ್ನು ಈ ರೀತಿ ಬಿಡಬಾರದು ಎಂದು ಅಜ್ಜಿ ಹೇಳುತ್ತಾರೆ. ನಂತರ ಮೊದಲನೇ ಸೊಸೆ “ಹೌದು ನಮ್ಮ ರೀತಿರಿವಾಜಿನ ಪ್ರಕಾರವೇ ಮದುವೆಯ ಎಲ್ಲಾ ಶಾಸ್ತ್ರ ಆಗಬೇಕು. ನೀವು ಹೇಳಿದ್ದನ್ನೆಲ್ಲ ಕೇಳುವುದಕ್ಕೆ ಆಗುವುದಿಲ್ಲ. ನಾವು ಗಂಡಿನ ಕಡೆಯವರು. ನಮ್ಮ ಮಾತಿಗೆ ಇಲ್ಲಿ ಬೆಲೆ ಕೊಡಬೇಕು” ಎಂದು ಹೇಳುತ್ತಾಳೆ. ಆಗ ಪಾರುವಿನ ಇಬ್ಬರು ತಾಯಿಯರು ತಲೆ ತಗ್ಗಿಸಿ ನಿಂತುಕೊಳ್ಳುತ್ತಾರೆ. ಪಾರುಗೆ ಅವರ ಮಾತನ್ನು ಕೇಳಿ ತುಂಬಾ ಕೋಪ ಬಂದಿರುತ್ತದೆ. ಆದರೂ ತಡೆದುಕೊಂಡು ನಿಂತಿರುತ್ತಾಳೆ.

ಸೋಮೆಗೌಡನಿಗೆ ಪಾಠ ಕಲಿಸಿದ ಶಿವು

ಇನ್ನು ಇತ್ತ ಶಿವೂ ಕೂಡ ಸೋಮೇಗೌಡನ ಧಿಮಾಕನ್ನು ತಡೆದು ನಿಂತಿರುತ್ತಾನೆ. ಅವನಿಗೆ ಪರಿಸ್ಥಿತಿ ಅರ್ಥವಾದ ಮೇಲೆ, ನನಗೆ ಗೊತ್ತು ನಿಮಗೆ ಯಾವ ರೀತಿ ಆತಿತ್ಯ ಮಾಡಬೇಕು ಎಂದು. ಇರಿ ಬಂದೆ ಎಂದು ಹೇಳುತ್ತಾನೆ. ನಂತರ ಸೋಮೇಗೌಡನ ಕತ್ತಿಗೆ ಆದ ಪೆಟ್ಟನ್ನು ತಾನು ಸರಿಪಡಿಸಬೇಕು ಎಂಬಂತೆ ಅವನ ಕತ್ತಿಗೆ ಕೈಹಾಕಲು ಮುಂದಾಗುತ್ತಾನೆ. ಆಗ ಹಿಂದೆ ಕತ್ತಿಗೆ ನೋವು ಮಾಡಿದ್ದು, ನೆನಪಾಗಿ ಅವನು ಸುಮ್ಮನಾಗುತ್ತಾನೆ. “ಇಲ್ಲ ಬೇಡ ಸುಮ್ಮನೆ ಇರು” ಎಂದು ಹೇಳುತ್ತಾನೆ ಸೋಮೆಗೌಡ. ಅವನ ಫ್ರೆಂಡ್ಸ್ ಎಲ್ಲರೂ ಅವರಿಬ್ಬರನ್ನೇ ನೋಡುತ್ತಿರುತ್ತಾರೆ. ಹೇಗಾದರೂ ಮಾಡಿ ಶಿವೂನ ಇಲ್ಲಿಂದ ಕಳಿಸಬೇಕು ಎಂದುಕೊಂಡರೂ, ಶಿವು ಇನ್ನಷ್ಟು ಹತ್ತಿರವಾಗುತ್ತಿರುವುದನ್ನು ನೋಡಿ ಸೋಮೇಗೌಡನಿಗೆ ತಡೆದುಕೊಳ್ಳಲಾಗದಷ್ಟು ಕೋಪ ಬಂದಿರುತ್ತದೆ.

ತಂಗಿಯರ ಮಾತೇ ನಿಜವಾಗುತ್ತೆ

ಇನ್ನು ಕಾವೇರಿ ಅಜ್ಜಿಯ ಮಾತು ನಿಜ ಆಗುತ್ತದೆ. ಇಂದು ಈ ಮದುವೆ ನಡೆಯೋದೇ ಇಲ್ಲ ಎಂದು ಶಿವುನ ತಂಗಿಯರು ಮಾತನಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಅವರಿಗೂ ಮನಸಿನೊಳಗಡೆ ಗಾಬರಿ ಇರುತ್ತದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner