ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಜೊತೆ ಭಾಗ್ಯಾ ಭೇಟಿಯಾಗಲು ಶ್ರೇಷ್ಠಾ ತಯಾರಿ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 30th september episode shrestha came bhagya home rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಜೊತೆ ಭಾಗ್ಯಾ ಭೇಟಿಯಾಗಲು ಶ್ರೇಷ್ಠಾ ತಯಾರಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಜೊತೆ ಭಾಗ್ಯಾ ಭೇಟಿಯಾಗಲು ಶ್ರೇಷ್ಠಾ ತಯಾರಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 30ರ ಎಪಿಸೋಡ್‌ನಲ್ಲಿ ಸುಂದ್ರಿಯನ್ನು ಶ್ರೇಷ್ಠಾ ಮನೆಯಿಂದ ಹೊರ ಹಾಕಿರುವ ವಿಚಾರ ಪೂಜಾಗೆ ತಿಳಿಯುತ್ತದೆ. ಅಕ್ಕನ ಒಪ್ಪಿಗೆ ಪಡೆದು ಪೂಜಾ ಸುಂದ್ರಿಯನ್ನು ಮನೆಗೆ ಕರೆತರುತ್ತಾಳೆ. ಸತ್ಯ ತಿಳಿದುಕೊಳ್ಳುವ ಉದ್ದೇಶದಿಂದ ಭಾಗ್ಯಾ, ಪೂಜಾ ಮಾತಿಗೆ ಒಪ್ಪಿಗೆ ಕೊಡುತ್ತಾಳೆ.

ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಹಿಡಿದು ಭಾಗ್ಯಾ ಭೇಟಿಯಾಗಲು ಬಂದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಸುಂದ್ರಿಯನ್ನು ಮನೆಗೆ ಕರೆತಂದ ಪೂಜಾ, ತನ್ನ ತಾಂಡವ್‌ ಫೋಟೋ ಹಿಡಿದು ಭಾಗ್ಯಾ ಭೇಟಿಯಾಗಲು ಬಂದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Kannada Serial: ಕುಸುಮಾ ಹಾಗೂ ಪೂಜಾ ಸರಿಯಾದ ಸಮಯಕ್ಕೆ ಹೋಗಿ ತಾಂಡವ್‌ ಶ್ರೇಷ್ಠಾ ಮದುವೆಯನ್ನು ತಪ್ಪಿಸಿದ್ದಾರೆ. ಒಂದು ತಿಂಗಳ ಒಳಗೆ ಭಾಗ್ಯಾಳನ್ನು ನಿನಗೆ ಇಷ್ಟವಾಗುವಂತೆ ಬದಲಿಸುತ್ತೇನೆ ಎಂದು ಕಂಡಿಷನ್‌ ಮಾಡಿ ಕುಸುಮಾ, ಮಗನನ್ನು ಮನೆಗೆ ಕರೆ ತರುತ್ತಾಳೆ. ಈ ಬಾರಿಯೂ ಮದುವೆ ನಿಂತಿದ್ದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಪದೇ ಪದೆ ತಾನು ಸೋಲುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಶ್ರೇಷ್ಠಾ ಯೋಚಿಸುತ್ತಾಳೆ.

ಭಾಗ್ಯಾಗೆ ತನ್ನ ತಾಂಡವ್‌ ವಿಚಾರ ತಿಳಿಸಲು ನಿರ್ಧರಿಸಿದ ಶ್ರೇಷ್ಠಾ

ಭಾಗ್ಯಾಗೆ ಏನೂ ಸತ್ಯ ಗೊತ್ತಿಲ್ಲ, ನಾನು ಮದುವೆ ಆಗುತ್ತಿರುವುದು ಅವಳ ಗಂಡನನ್ನೇ ಎಂದು ತಿಳಿದರೆ ಅವಳೇ ಕೋಪದಿಂದ ಮನೆ ಬಿಟ್ಟು ಹೋಗುತ್ತಾಳೆ. ಆಗ ನಾನು ತಾಂಡವ್‌ನನ್ನು ಮದುವೆ ಆಗಬಹುದು ಎಂದು ಶ್ರೇಷ್ಠಾ ಪ್ಯ್ಲಾನ್‌ ಮಾಡುತ್ತಾಳೆ. ತಾಂಡವ್‌ ಜೊತೆ ಮಾಡಿಸಿದ ಫೋಟೋ ಶೂಟ್‌ ಆಲ್ಬಂ ತೆಗೆದು ಕೆಲವು ಫೋಟೋಗಳನ್ನು ತೆಗೆದುಕೊಳ್ಳುತ್ತಾಳೆ. ಇನ್ನು ನಾನು ಗೆದ್ದಂತೆಯೆ. ಪದೇ ಪದೆ ನಾನು ಸೋಲುತ್ತಿದ್ದೆ, ನಾನೊಬ್ಬಳೇ ಏಕೆ ದುಃ:ಖ ಅನುಭವಿಸಬೇಕು? ನೀನೂ ಅನುಭವಿಸು ಭಾಗ್ಯಾ, ನಿನ್ನ ಗಂಡ ನನ್ನ ಜೊತೆ ಅಫೇರ್‌ ಇಟ್ಟುಕೊಂಡಿದ್ದಾನೆ ಎಂದು ತಿಳಿದು ನೀನು ಪ್ರತಿ ಕ್ಷಣ ನೋವಿನಿಂದ ನರಳಬೇಕು ಎಂದು ಮನಸ್ಸಿನಲ್ಲೇ ಕೆಟ್ಟ ಆಲೋಚನೆ ಮಾಡುತ್ತಾಳೆ.

ಸುಂದ್ರಿಯನ್ನು ಭೇಟಿ ಮಾಡಲು ಹೊರಟ ಪೂಜಾ

ಇತ್ತ ಸುಂದ್ರಿ ಎಲ್ಲಿಗೆ ಹೋಗುವುದು ಎಂದು ತಿಳಿಯದೆ ಕಂಗಾಲಾಗಿ ಒಂದು ಅಂಗಡಿ ಮುಂದೆ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ಪೂಜಾ, ಸುಂದ್ರಿಗೆ ಕರೆ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ಪೂಜಾಗೆ ನಾನು ಇಲ್ಲಿ ಇರುವ ವಿಚಾರ ಗೊತ್ತಾಗಬಾರದು ಎಂಬ ಕಾರಣಕ್ಕೆ ಸುಂದ್ರಿ ನಾನು ಮನೆಯಲ್ಲೆ ಇದ್ದೀನಿ, ಎಲ್ಲಾ ಆರಾಮ್‌ ಎಂದು ಸುಳ್ಳು ಹೇಳುತ್ತಾಳೆ. ಪೂಜಾಗೆ ಅನುಮಾನ ಬಂದು ವಿಡಿಯೋ ಕಾಲ್‌ ಮಾಡುತ್ತಾಳೆ. ಸುಂದ್ರಿ ಹೊರಗೆ ಇದ್ದಾಳೆಂದು ಪೂಜಾ ಗಾಬರಿ ಆಗುತ್ತಾಳೆ. ಏನಾಯ್ತು ನಿಜ ಹೇಳು ಎಂದಾಗ ಸುಂದ್ರಿ, ಶ್ರೇಷ್ಠಾ ತನ್ನನ್ನು ಮನೆಯಿಂದ ಹೊರ ಹಾಕಿದ ವಿಚಾರವನ್ನು ತಿಳಿಸುತ್ತಾಳೆ. ಸುಂದ್ರಿ ಪರಿಸ್ಥಿತಿಯಿಂದ ಬೇಸರಗೊಂಡ ಪೂಜಾ ಅವಳನ್ನು ಭೇಟಿ ಮಾಡಲು ಹೊರಡುತ್ತಾಳೆ.

ಪೂಜಾ ಬರುವ ಮುನ್ನ ಸುಂದ್ರಿ ಬಳಿ ಹೊರಟ ಭಾಗ್ಯಾ

ಪೂಜಾ, ಸುಂದ್ರಿ ಮಾತುಕತೆಯನ್ನು ಕೇಳಿಸಿಕೊಳ್ಳುವ ಭಾಗ್ಯಾ, ಪೂಜಾಗೆ ಗುಂಡಣ್ಣನನ್ನು ಸ್ಕೂಲ್‌ಗೆ ಬಿಡುವಂತೆ ಹೇಳುತ್ತಾಳೆ. ಪೂಜಾ ಒಲ್ಲದ ಮನಸ್ಸಿನಿಂದಲೇ ಗುಂಡಣ್ಣನನ್ನು ಸ್ಕೂಲ್‌ಗೆ ಬಿಡಲು ಕರೆದೊಯ್ಯುತ್ತಾಳೆ. ಅಲ್ಲಿಂದ ಸುಂದ್ರಿಯನ್ನು ಭೇಟಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಬಂದಿರುತ್ತಾಳೆ. ನನ್ನಿಂದ ನೀವು ಮುಚ್ಚಿಟ್ಟಿರುವ ಸತ್ಯ ತಿಳಿಸಬೇಕು ಎಂದು ಭಾಗ್ಯಾ, ಸುಂದ್ರಿಗೆ ತಾಕೀತು ಮಾಡುತ್ತಾಳೆ. ಆದರೆ ಅಷ್ಟರಲ್ಲಿ ಪೂಜಾ ಬರುತ್ತಾಳೆ. ಅಕ್ಕ ಸುಂದ್ರಿ ಬಳಿ ಇರುವುದನ್ನು ನೋಡಿ ಶಾಕ್‌ ಆಗುತ್ತಾಳೆ. ಶ್ರೇಷ್ಠಾ ಇವಳನ್ನು ಮನೆಯಿಂದ ಹೊರ ಹಾಕಿದ್ದಾಳೆ. ಇವಳಿಂದಲೇ ನನ್ನ ಪ್ರಾಣ ಉಳಿದದ್ದು, ಇವಳನ್ನು ಮನೆಗೆ ಕರೆದುಕೊಂಡು ಹೋಗೋಣ ಎಂದು ಪೂಜಾ ಮನವಿ ಮಾಡುತ್ತಾಳೆ.

ಭಾಗ್ಯಾ ಮನೆಗೆ ಬಂದ ಸುಂದ್ರಿ 

ಸುಂದ್ರಿಯನ್ನು ಮನೆಯಲ್ಲಿ ನೋಡುವ ತಾಂಡವ್‌, ಇದೇನು ಧರ್ಮಛತ್ರಾನಾ ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಧರ್ಮರಾಜ್‌, ಈಗ ನನ್ನ ಸೊಸೆ ಕೂಡಾ ಈ ಮನೆಗೆ ಇಎಂಐ ಕಟ್ಟುತ್ತಿದ್ದಾಳೆ ಅದು ನೆನಪಿರಲಿ ಎನ್ನುತ್ತಾನೆ. ಇವಳ ಮೇಲೆ ಒಂದು ಕಣ್ಣು ಇಡು ಎಂದು ಕುಸುಮಾ, ಪೂಜಾ ಕಿವಿಯಲ್ಲಿ ಪಿಸುಗುಡುತ್ತಾಳೆ. ಪೂಜಾ, ಸುಂದ್ರಿಯನ್ನು ತನ್ನ ಕೋಣೆಗೆ ಕರೆದೊಯ್ಯುತ್ತಾಳೆ. ಸುಂದ್ರಿ ಬಂದಾಯ್ತು ಅವಳಿಂದ ಸತ್ಯ ತಿಳಿದುಕೊಳ್ಳಬಹುದು ಎಂದು ಭಾಗ್ಯಾ ಮನಸ್ಸಿನಲ್ಲಿ ಯೋಚಿಸುತ್ತಾಳೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

mysore-dasara_Entry_Point