BBK 10: ಕಾರ್ತಿಕ್‌ ಬಳಿ ಸ್ನೇಹದ ಹಸ್ತ ಚಾಚಿದ ವಿನಯ್; ಕಿಚ್ಚನ ಸಮ್ಮುಖದಲ್ಲಿ ಒಂದಾದವು ಒಡೆದ ಮನಸುಗಳು
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಕಾರ್ತಿಕ್‌ ಬಳಿ ಸ್ನೇಹದ ಹಸ್ತ ಚಾಚಿದ ವಿನಯ್; ಕಿಚ್ಚನ ಸಮ್ಮುಖದಲ್ಲಿ ಒಂದಾದವು ಒಡೆದ ಮನಸುಗಳು

BBK 10: ಕಾರ್ತಿಕ್‌ ಬಳಿ ಸ್ನೇಹದ ಹಸ್ತ ಚಾಚಿದ ವಿನಯ್; ಕಿಚ್ಚನ ಸಮ್ಮುಖದಲ್ಲಿ ಒಂದಾದವು ಒಡೆದ ಮನಸುಗಳು

ಭಾನುವಾರದ ಏಪಿಸೋಡ್‌ನಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಬದ್ಧ ವೈರಿಗಳಾಗಿದ್ದ ಮನಸುಗಳೀಗ ಒಂದಾಗಿವೆ. ಕಿಚ್ಚನ ಸಮ್ಮುಖದಲ್ಲಿ ಹಳೇ ದ್ವೇಷ ಮರೆತು ಕಾರ್ತಿಕ್-‌ ವಿನಯ್‌ ಒಂದಾಗಿದ್ದಾರೆ.

BBK 10: ಕಾರ್ತಿಕ್‌ ಬಳಿ ಸ್ನೇಹದ ಹಸ್ತ ಚಾಚಿದ ವಿನಯ್; ಕಿಚ್ಚನ ಸಮ್ಮುಖದಲ್ಲಿ ಒಂದಾದವು ಒಡೆದ ಮನಸುಗಳು
BBK 10: ಕಾರ್ತಿಕ್‌ ಬಳಿ ಸ್ನೇಹದ ಹಸ್ತ ಚಾಚಿದ ವಿನಯ್; ಕಿಚ್ಚನ ಸಮ್ಮುಖದಲ್ಲಿ ಒಂದಾದವು ಒಡೆದ ಮನಸುಗಳು

BBK 10: ಈ ಸಲದ ಬಿಗ್‌ಬಾಸ್‌ ಕನ್ನಡ ಹಲವು ವಿಶೇಷಗಳಿಂದ ಕೂಡಿದೆ. ಕಿತ್ತಾಟಗಳು, ಜಗಳಗಳು, ಮಾತಿನ ಕಾಳಗದ ಜತೆಗೆ ಕೈ ಕೈ ಮಿಲಾಯಿಸಿದ ಹಲವು ಉದಾಹರಣೆಗಳೂ ವೀಕ್ಷಕನ ಕಣ್ಣಿಗೆ ಬಿದ್ದಿವೆ. ಸಣ್ಣ ಪುಟ್ಟ ವಿಚಾರಗಳು ಅತಿರೇಕಕ್ಕೆ ಹೋಗುತ್ತಿವೆ. ಟಾಸ್ಕ್‌ ಆಟ ಟಾಸ್ಕ್‌ ರೀತಿಯಲ್ಲಿ ಇರದೇ, ದ್ವೇಷದ ಹಗೆತನ ಸಾಧಿಸುವ ನಿಟ್ಟಿನಲ್ಲಿ ಎದುರಾಳಿ ತಂಡವನ್ನು ಟಾರ್ಗೆಟ್‌ ಮಾಡಿದಂತೆ ಕಾಣಿಸಿದೆ. ವಾರದ ಕಿಚ್ಚನ ಪಂಚಾಯ್ತಿಯಲ್ಲಿ, ಸರಿ ತಪ್ಪಿನ ಪರಾಮರ್ಶೆಯೂ ನಡೆದಿದೆ.

ಇದೀಗ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಒಡೆದ ಮನಸ್ಸುಗಳನ್ನು ಮತ್ತೆ ಒಂದಾಗಿಸುವ ಕೆಲಸ ಮಾಡಿದ್ದಾರೆ ಕಿಚ್ಚ ಸುದೀಪ್.‌ ನಿಮ್ಮ ಕಡೆಯಿಂದ ತಪ್ಪಾಗಿರಬಹುದು, ನಮ್ಮ ಕಡೆಯಿಂದ ತಪ್ಪಾಗಿರಬಹುದು. ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಬಿಗ್‌ ಬಾಸ್‌ ಮನೆ ಮಂದಿಗೆ ಕಿಚ್ಚನಿಂದ ಸಲಹೆ ಸಂದಾಯವಾಗಿದೆ. ಸುದೀಪ್‌ ಹೇಗೆ ಹೇಳುತ್ತಿದ್ದಂತೆ, ಸ್ಪರ್ಧಿಗಳಿಗೆ ತಮ್ಮ ತಪ್ಪಿನ ಅರಿವಾಗಿದೆ.

ವರ್ತೂರು ಸಂತೋಷ್‌ ಕೈಯಲ್ಲಿ ಪಾಸಿಟಿವಿಟಿ ಬಿಂಬಿಸುವ ಬಿಳಿ ಹೂವು ಹಿಡಿದು, ಪ್ರತಾಪ್‌ಗೆ ನೀಡಿದ್ದಾರೆ. ಪ್ರತಾಪ್‌ ನಿನಗೆ ನೀರು ಹಾಕಿದ್ದು ತಪ್ಪಾಯ್ತು. ಮತ್ತೆ ಆ ರೀತಿ ಮಾಡಲ್ಲ. ಮೊದಲು ಹೇಗಿದ್ದೆವೋ ಅದೇ ರೀತಿಯಲ್ಲಿರೋಣ ಎಂದು ಬಿಳಿ ಹೂವು ನೀಡಿದ್ದಾರೆ. ಇದಕ್ಕೆ ನಗು ಮೊಗದಲ್ಲಿಯೇ ವರ್ತೂರು ಅವರನ್ನು ತಬ್ಬಿಕೊಂಡಿದ್ದಾರೆ ಪ್ರತಾಪ್‌. ಈ ಮೂಲಕ ಒಡೆದ ಮನಸುಗಳು ಮತ್ತೆ ಒಂದಾಗಿವೆ.

ಇದಷ್ಟೇ ಅಲ್ಲ, ಮನೆಯ ಬದ್ಧ ವೈರಿಗಳಾಗಿಯೇ ಇಲ್ಲಿಯವರೆಗೂ ಗುರುತಿಸಿಕೊಂಡು ಬಂದಿರುವ ವಿನಯ್‌ ಮತ್ತು ಕಾರ್ತಿಕ್‌ ನಡುವೆಯೂ ಸ್ನೇಹದ ಒರತೆ ಚಿಮ್ಮಿದೆ. ಕಾರ್ತಿನ್‌, ನಾನು ನೀನು ತುಂಬ ವರ್ಷಗಳಿಂದ ಫ್ರೆಂಡ್ಸ್‌. ಯಾರೋ ಮೂರನೇಯವರಿಂದ ನಮ್ಮಿಬ್ಬರ ನಡುವೆ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಯ್ತು. ಇದೆಲ್ಲ ಆದಮೇಲೇ ನೀನು ನನ್ನನ್ನು ಫ್ರೆಂಡ್‌ ಆಗಿ ಟ್ರೀಟ್‌ ಮಾಡುತ್ತಿಯೋ ಇಲ್ಲವೋ ಗೊತ್ತಿಲ್ಲ, ನೀನು ಯಾವತ್ತಿದ್ದರೂ ನನ್ನ ಫ್ರೆಂಡ್‌" ಎನ್ನುತ್ತಿದ್ದಂತೆ, ಕಾರ್ತಿಕ್‌ ಎದ್ದು ಬಂದು, ಸ್ನೇಹದ ಹಸ್ತ ಚಾಚಿದ್ದಾನೆ.

ಶನಿವಾರದ ಏಪಿಸೋಡ್‌ನಲ್ಲೇನಾಗಿತ್ತು?

ಶನಿವಾರದ ಪಂಚಾಯ್ತಿಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಡೆದ ಕಳ್ಳಾಟವನ್ನು ಕಿಚ್ಚ ಸುದೀಪ್‌ ಎಲ್ಲರ ಮುಂದೆಯೇ ಬಹಿರಂಗ ಮಾಡಿ, ಇಬ್ಬರು ಕಳ್ಳರನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ಮೇಲೆ ಬಿಗ್‌ ಬಾಸ್‌ನಲ್ಲಿ ಕ್ಯಾಪ್ಟನ್‌ ಆಯ್ಕೆ ಇರಲ್ಲ ಎಂದು ಹೇಳಿ, ಕ್ಯಾಪ್ಟನ್‌ ಕೋಣೆಗೆ ಶಾಶ್ವತವಾಗಿ ಬೀಗ ಹಾಕಿಸಿದ್ದಾರೆ. ಶುಕ್ರವಾರ ಒಂಭತ್ತನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಘಟ್ಟಕ್ಕೆ ಮೂವರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆ ಪೈಕಿ ಸಿರಿ, ವರ್ತೂರು ಸಂತೋಷ್‌, ಅವಿನಾಶ್‌ ಶೆಟ್ಟಿ ಮತ್ತು ಮೈಕಲ್.‌ ಈ ನಾಲ್ವರ ಪೈಕಿ ವರ್ತೂರು ಸಂತೋಷ್‌, ನಿಮಿಷಗಳನ್ನು ಎಣಿಸೋ ಟಾಸ್ಕ್‌ನಲ್ಲಿ ವಿನ್‌ ಆಗಿ, ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದರು. ವರ್ತೂರು ಕ್ಯಾಪ್ಟನ್‌ ಆಗುತ್ತಿದ್ದಂತೆ, ವಿನಯ್‌ ಮೊಗದಲ್ಲಿ ಗೆದ್ದ ನಗೆ ಕಾಣಿಸಿತ್ತು. ಆದರೆ, ಆ ಆಟದಲ್ಲಿ ವರ್ತೂರು ಕಳ್ಳಾಟವಾಡಿದ್ದರು. ಅದಕ್ಕೆ ಸಾಥ್‌ ನೀಡಿದವರು ವಿನಯ್.‌

Whats_app_banner