ಬಿಗ್‌ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ ಶಿಶಿರ್‌ ಶಾಸ್ತ್ರಿ-ತ್ರಿವಿಕ್ರಮ್; ಒಬ್ಬರಿಗೆ ಸ್ವರ್ಗ, ಮತ್ತೊಬ್ಬರಿಗೆ ನರಕ-bigg boss kannada season 11 contestants list shishir shastry thrivikram enters bbk 11 colors kannada reality show jra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ ಶಿಶಿರ್‌ ಶಾಸ್ತ್ರಿ-ತ್ರಿವಿಕ್ರಮ್; ಒಬ್ಬರಿಗೆ ಸ್ವರ್ಗ, ಮತ್ತೊಬ್ಬರಿಗೆ ನರಕ

ಬಿಗ್‌ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ ಶಿಶಿರ್‌ ಶಾಸ್ತ್ರಿ-ತ್ರಿವಿಕ್ರಮ್; ಒಬ್ಬರಿಗೆ ಸ್ವರ್ಗ, ಮತ್ತೊಬ್ಬರಿಗೆ ನರಕ

Bigg boss Kannada Season 11 contestants List: ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ. ಶಿಶಿರ್ ಎಂಟನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ ಮತ್ತೊಬ್ಬ ನಟ ತ್ರಿವಿಕ್ರಮ್‌ ಒಂಬತ್ತನೇ ಕಂಟೆಸ್ಟೆಂಟ್‌ ಆಗಿ ಮನೆಗೆ ಪ್ರವೇಶಿಸಿದ್ದಾರೆ.

ಬಿಗ್‌ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ‌ ಶಿಶಿರ್‌ ಶಾಸ್ತ್ರಿ-ತ್ರಿವಿಕ್ರಮ್
ಬಿಗ್‌ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಪ್ರವೇಶಿಸಿದ‌ ಶಿಶಿರ್‌ ಶಾಸ್ತ್ರಿ-ತ್ರಿವಿಕ್ರಮ್

ಶಿಶಿರ್ ಶಾಸ್ತ್ರಿ: ಕಿರುತೆರೆ ನಟ ಶಿಶಿರ್ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿದೆ. ಕಳೆದ ಬಾರಿಯ ಸೀಸನ್‌ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್‌ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಇಂದು ಉತ್ತರ ಸಿಗುತ್ತಿದೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ ಶನಿವಾರ (ಸೆ 28) ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಿವೀಲ್‌ ಮಾಡಲಾಗಿತ್ತು. ಅವರಲ್ಲಿ ಸತ್ಯ ಸೀರಿಯಲ್‌ ನಾಯಕಿ ನಟಿ ಗೌತಮಿ ಜಾಧವ್‌, ಲಾಯರ್‌ ಕೆಎನ್‌ ಜಗದೀಶ್‌, ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಮತ್ತು ಗೋಲ್ಡ್‌ ಸುರೇಶ್‌ ಮನೆಗೆ ಕಾಲಿಡುವುದು ಖಚಿತವಾಗಿದೆ. ಅವರೊಂದಿಗೆ ಇಂದಿನ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಹೊಸ ಸ್ಪರ್ಧಿಗಳು ಯಾರೆಂಬುದು ಬಹಿರಂಗವಾಗಿದೆ.

ಬಿಗ್‌ಬಾಸ್‌ ಮನೆಗೆ ಎಂಟನೇ ಸ್ಪರ್ಧಿಯಾಗಿ ವಿವಿಧ ಧಾರಾವಾಹಿಗಳಲ್ಲಿ ನಟಿಸಿರುವ ಶಿಶಿರ್‌ ಪ್ರವೇಶ ಮಾಡಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವೇದ್‌ ಆಗಿ ಗುರುತಿಸಿಕೊಂಡಿದ್ದ ಶಿಶಿರ್‌, ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲೂ ನಟಿಸಿದ್ದರು. ದಶಕದ ಹಿಂದೆ ಪ್ರಸಾರವಾಗುತ್ತದ್ದ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ನಿರೂಪಕಿ ಸುಷ್ಮಾ ಅವರು ನಾಯಕಿಯಾಗಿದ್ದ ಧಾರಾವಾಹಿಯಲ್ಲಿ ಶಿಶಿರ್‌ ಅವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ವವಾಗಿತ್ತು. ಇದೀಗ ಇವರು ಬಿಗ್ ಬಾಸ್‌ ಮನೆಯಲ್ಲಿ ಗೆಲ್ಲುವ ಗುರಿಯೊಂದಿಗೆ ಬಂದಿದ್ದಾರೆ.

ಇವರೊಂದಿಗೆ ಪದ್ಮಾವತಿ ಧಾರಾವಾಹಿ ನಟ ತ್ರಿವಿಕ್ರಮ್‌ ಒಂಬತ್ತನೇ ಸ್ಪರ್ಧಿಯಾಗಿ ಬಿಗ್‌ ಮನೆಗೆ ಕಾಲಿಟ್ಟಿದ್ದಾರೆ. ಶಿಶಿರ್‌ ಹಾಗೂ ತ್ರಿವಿಕ್ರಮ್‌ ಅವರನ್ನು ಸ್ವರ್ಗ ಹಾಗೂ ನರಕಕ್ಕೆ ಕಳುಹಿಸಲು ಪುಶ್‌ ಅಪ್ಸ್‌ ಹಾಗೂ ಡಾನ್ಸ್‌ ಮಾಡುವ ಟಾಸ್ಕ್‌ ಕೊಡಲಾಯ್ತು. ಆ ಬಳಿಕ ಮನೆಯೊಳಗಿದ್ದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರ ಪ್ರಕಾರ ಶಿಶಿರ್‌ ನರಕಕ್ಕೆ ಪ್ರವೇಶಿಸಿದರೆ, ತ್ರಿವಿಕ್ರಮ್‌ ಸ್ವರ್ಗದ ಬಾಗಿಲು ತಟ್ಟಿದ್ದಾರೆ.

ಸ್ವರ್ಗ - ನರಕಕ್ಕೆ ಸ್ಪರ್ಧಿಗಳು

ಈ ಬಾರಿ ಬಿಗ್‌ ಬಾಸ್‌ ಮನೆಗೆ ಗೀತಾ ಧಾರಾವಾಹಿ ನಟಿ ಭವ್ಯಾ ಗೌಡ ಮೊದಲ ಸ್ಪರ್ಧಿಯಾಗಿ ಕಾಲಿಟ್ಟರು. ಆ ಬಳಿಕ ಹಿರಿಯ ನಟಿ ಯಮುನಾ ಶ್ರೀನಿಧಿ ಅವರು ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಸ್ವರ್ಗಕ್ಕೆ ಕಾಲಿಟ್ಟ ಈ ಇಬ್ಬರಿಗೆ, ನಂತರ ಬರುವ ಸ್ಪರ್ಧಿಗಳನ್ನು ಸ್ವರ್ಗ-ಅಥವಾ ನರಕಕ್ಕೆ ಕಳುಹಿಸುವ ವಿಶೇಷ ಅಧಿಕಾರ ನೀಡಲಾಗಿದೆ. ಆ ಪೈಕಿ ಮೂರನೇ ಸ್ಪರ್ಧಿಯಾಗಿ ಬಂದ ಧನರಾಜ್‌ ಆಚಾರ್ ಅವರನ್ನು ಸ್ವರ್ಗಕ್ಕೆ ಕರೆಸಿಕೊಂಡಿದ್ದಾರೆ. ಆ ಬಳಿಕ ನಟಿ ಗೌತಮಿ ಜಾಧವ್‌ ಅವರು ಜನರ ವೋಟಿಂಗ್‌ ಆಧಾರದ ಮೇಲೆ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ. ಅವರ ಬೆನ್ನಲ್ಲೇ ಐದು ಹಾಗೂ ಆರನೇ ಸ್ಪರ್ಧಿಯಾಗಿ ನಟಿ ಅನುಷಾ ಹಾಗೂ ಧರ್ಮ ಕೀರ್ತಿರಾಜ್ ಕಾಲಿಟಿದ್ದಾರೆ.‌ ಇವರಲ್ಲಿ ಅನುಷಾ ನರಕಕ್ಕೆ ಎಂಟ್ರಿ ಕೊಟ್ಟರೆ, ಧರ್ಮ ಅವರಿಗೆ ಸ್ವರ್ಗದ ಬಾಗಿಲು ತೆರೆದಿದೆ. ಅವರ ಬಳಿಕ ಲಾಯರ್‌ ಜಗದೀಶ್‌ ಏಳನೇ ಸ್ಪರ್ಧಿಯಾಗಿ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.

ಈ ಬಾರಿಯ ಬಿಗ್‌ ಬಾಸ್‌ ಸೀಸನ್‌ ಸ್ವರ್ಗ ಮತ್ತು ನರಕ ಎಂಬ ಥೀಮ್‌ನಲ್ಲಿ ನಡೆಯುತ್ತಿದೆ. ಸ್ಪರ್ಧಿಗಳು ವಿವಿಧ ಮಾನದಂಡಗಳ ಮೇಲೆ ಈ ಎರಡರಲ್ಲಿ ಒಂದು ಕಡೆಗೆ ಪ್ರವೇಶಿಸುತ್ತಾರೆ.

ಬಿಗ್‌ ಬಾಸ್‌ ಕನ್ನಡ11ನೇ ಸೀಸನ್‌ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?

ಕಲರ್ಸ್‌ ಕನ್ನಡ ನಡೆಸುತ್ತಿರುವ 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು ಇಲ್ಲಿ ಕ್ಕಿಕ್‌ ಮಾಡಿ.

mysore-dasara_Entry_Point