ಕನ್ನಡ ಸುದ್ದಿ  /  Entertainment  /  Bigg Boss Season 6 Winner Shashi And Paavana Gowda Starrer Mehabooba Movie Ready To Release Promotion Work Begins Mnk

ಮಸೀದಿ, ಮಂದಿರದ ಮುಂದೆ ಬೋರ್ಡ್‌ ಹಿಡಿದು ಮೆಹಬೂಬ ಸಿನಿಮಾ ಪ್ರಚಾರ ಮಾಡಿದ ಮಾಡರ್ನ್‌ ರೈತ ಶಶಿ, ಪಾವನಾ

ನಾಯಕ ಶಶಿ ಹಿಂದೂ ಹುಡುಗನಂತೆ ಮತ್ತು ನಾಯಕಿ ಪಾವನಾ ಗೌಡ ಮುಸ್ಲಿಂ ಹುಡುಗಿಯಂತೆ ವೇಷ ತೊಟ್ಟು,ಕೈಯಲ್ಲಿ ಮೆಹಬೂಬ ಸಿನಿಮಾ ರಿಲೀಸ್ ಡೇಟ್‌ನ ಬೋರ್ಡ್ ಹಿಡಿದು, ವಿಧಾನಸೌಧ , ನ್ಯಾಯಾಲಯ, ಪೊಲೀಸ್ ಠಾಣೆ, ಮಸೀದಿ, ಮಾರ್ಕೆಟ್, ಮಂದಿರದ ಬಳಿ ಸರ್ವ ಧರ್ಮ ಸಮಾನತೆ ಸಾರೋ ವಿಚಾರ ಹೇಳುತ್ತಾ ಸಿನಿಮಾ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ.

ಮಸೀದಿ, ಮಂದಿರದ ಮುಂದೆ ಬೋರ್ಡ್‌ ಹಿಡಿದು ಮೆಹಬೂಬ ಸಿನಿಮಾ ಪ್ರಚಾರ ಮಾಡಿದ ಮಾಡರ್ನ್‌ ರೈತ ಶಶಿ, ಪಾವನಾ
ಮಸೀದಿ, ಮಂದಿರದ ಮುಂದೆ ಬೋರ್ಡ್‌ ಹಿಡಿದು ಮೆಹಬೂಬ ಸಿನಿಮಾ ಪ್ರಚಾರ ಮಾಡಿದ ಮಾಡರ್ನ್‌ ರೈತ ಶಶಿ, ಪಾವನಾ

Mehabooba Movie Release date: ಮಾಡರ್ನ್‌ ರೈತ ಶಶಿ ಹಾಗೂ ಪಾವನಾ ನಟನೆಯ ಮೆಹಬೂಬಾ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಎರಡು ಹಾಡುಗಳಿಂದ ಸದ್ದು ಸುದ್ದಿ ಮಾಡಿರೋ ಈ ಸಿನಿಮಾ. ಹಲವು ವಿಶೇಷ ಮತ್ತು ವಿಶಿಷ್ಠ ವಿಚಾರಗಳಿಂದ ತುಂಬಿರೋ ಈ ಸಿನಿಮಾ. ಇದೇ ಮಾರ್ಚ್ 15ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದ್ದು, ಈ ಚಿತ್ರದ ರಿಲೀಸ್ ಡೇಟ್ನ ಚಿತ್ರತಂಡ ವಿಶೇಷವಾಗಿ ಅನೌನ್ಸ್ ಮಾಡಿ ಗಮನ ಸೆಳೆದಿದೆ.

ನಾಯಕ ಶಶಿ ಹಿಂದೂ ಹುಡುಗನಂತೆ ಮತ್ತು ನಾಯಕಿ ಪಾವನಾ ಗೌಡ ಮುಸ್ಲಿಂ ಹುಡುಗಿಯಂತೆ ವೇಷ ತೊಟ್ಟು,ಕೈಯಲ್ಲಿ ರಿಲೀಸ್ ಡೇಟ್ ಬೋರ್ಡ್ ಇಟ್ಟುಕೊಂಡು, ವಿಧಾನಸೌಧ , ನ್ಯಾಯಾಲಯ, ಪೊಲೀಸ್ ಠಾಣೆ, ಮಸೀದಿ, ಮಾರ್ಕೆಟ್, ಮಂದಿರದ ಬಳಿ ಸರ್ವ ಧರ್ಮ ಸಮಾನತೆಯನು ಸಾರೋ ವಿಚಾರ ಹೇಳುತ್ತಾ ಸಿನಿಮಾ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿ ಥಿಯೇಟರ್‌ಗೆ ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಚರ್ಚೆಯಲ್ಲಿದೆ.

ನಿಮಗೆಲ್ಲಾ ಗೊತ್ತಿರೋ ಹಾಗೇ, ಕನ್ನಡ ಬಿಗ್ ಬಾಸ್ ಸೀಸನ್ 6ರಲ್ಲಿ ಸಕತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ, ಮಾಡರ್ನ್‌ ರೈತ ಎಂಬ ಹೆಸರಿನಿಂದ ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದಿದವರು ಯುವ ರೈತ ಶಶಿ ಕುಮಾರ್. 'ಮೆಹಬೂಬಾ' ಸಿನಿಮಾ ಮೂಲಕ ಮಾಡರ್ನ್ ರೈತ ಶಶಿ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

ದಕ್ಷ್ ಎಂಟರ್‌ಟೈನ್ಮೆಂಟ್ಸ್ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಶಶಿ ನಟನೆಯೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ 'ಮೆಹಬೂಬಾ' ಚಿತ್ರ ವನ್ನ ಮಾಡಲಾಗಿದೆ.

ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮಾರ್ಚ್ 15ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಶೀಘ್ರದಲ್ಲಿ ರಿಲೀಸ್ ಆಗಲಿದೆ.