OTT Releases This Week: ಒಟಿಟಿಯಲ್ಲಿ ಬ್ಲಾಕ್‌ ಬಸ್ಟರ್‌ ಶುಕ್ರವಾರ! ದೇವರ, ವೆಟ್ಟೈಯನ್‌, ಎಆರ್‌ಎಂ ಸಿನಿಮಾಗಳ ಎಂಟ್ರಿಗೆ ಅಖಾಡ ಸಿದ್ಧ
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಒಟಿಟಿಯಲ್ಲಿ ಬ್ಲಾಕ್‌ ಬಸ್ಟರ್‌ ಶುಕ್ರವಾರ! ದೇವರ, ವೆಟ್ಟೈಯನ್‌, ಎಆರ್‌ಎಂ ಸಿನಿಮಾಗಳ ಎಂಟ್ರಿಗೆ ಅಖಾಡ ಸಿದ್ಧ

OTT Releases This Week: ಒಟಿಟಿಯಲ್ಲಿ ಬ್ಲಾಕ್‌ ಬಸ್ಟರ್‌ ಶುಕ್ರವಾರ! ದೇವರ, ವೆಟ್ಟೈಯನ್‌, ಎಆರ್‌ಎಂ ಸಿನಿಮಾಗಳ ಎಂಟ್ರಿಗೆ ಅಖಾಡ ಸಿದ್ಧ

OTT Releases This Week: ಥಿಯೇಟರ್‌ಗಳಲ್ಲಿ ಸೂಪರ್‌ ಹಿಟ್‌ ಆದ ಸಿನಿಮಾಗಳೀಗ ಒಟಿಟಿಯತ್ತ ಮುಖ ಮಾಡಿವೆ. ಆ ಪೈಕಿ ಒಟಿಟಿ ವೀಕ್ಷಕರ ಕಣ್ಣಿದ್ದಿದ್ದು ದೇವರ, ವೆಟ್ಟೈಯನ್‌ ಮತ್ತು ಎಆರ್‌ಎಂ ಸಿನಿಮಾಗಳ ಮೇಲೆ. ಈಗ ಅದೇ ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ.

ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್‌ ಮೂರು ಸಿನಿಮಾಗಳು
ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್‌ ಮೂರು ಸಿನಿಮಾಗಳು

OTT Releases This Week: ಚಿತ್ರಮಂದಿರದಲ್ಲಿ ಸೂಪರ್‌ ಹಿಟ್‌ ಆದ ಸಿನಿಮಾಗಳೀಗ ಒಟಿಟಿಯತ್ತ ಮುಖ ಮಾಡಿವೆ. ಆ ಪೈಕಿ ಒಟಿಟಿ ವೀಕ್ಷಕರ ಕಣ್ಣಿದ್ದಿದ್ದು ಒಂದಷ್ಟು ಸಿನಿಮಾಗಳ ಮೇಲೆ. ಈಗ ಅದೇ ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ಹಾಗಾದರೆ ಆ ಸಿನಿಮಾಗಳು ಯಾವವು, ಯಾವ ಒಟಿಟಿಯಲ್ಲಿ ಆ ಚಿತ್ರಗಳನ್ನು ನೋಡಬಹುದು? ಇಲ್ಲಿದೆ ಮಾಹಿತಿ.

ಈ ವಾರ (ನವೆಂಬರ್‌ 8) ಒಂದಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಆ ಪೈಕಿ ಎಲ್ಲರ ನಿರೀಕ್ಷೆ ಇರುವುದು ಈ ಮೂರು ಸಿನಿಮಾಗಳ ಮೇಲೆ. ಜೂನಿಯರ್‌ ಎನ್‌ಟಿಆರ್‌ ನಟನೆಯ ದೇವರ, ರಜನಿಕಾಂತ್‌ ಅಮಿತಾಬ್‌ ಬಚ್ಚನ್‌ ಜೋಡಿಯ ವೆಟ್ಟೈಯನ್‌ ಮತ್ತು ಮಲಯಾಳಂ ಬ್ಲಾಕ್‌ ಬಸ್ಟರ್‌ ಅಜಯಂಟೆ ರಂಧಮ್‌ ಮೋಷನಂ (ಎಆರ್‌ಎಂ) ಚಿತ್ರಗಳು. ಈ ಮೂರು ಸಿನಿಮಾಗಳು ಈ ವಾರ ಬೇರೆ ಬೇರೆ ಒಟಿಟಿಗೆ ಅಪ್ಪಳಿಸಲಿವೆ. ಅಧಿಕೃತವಾಗಿ ಈ ಚಿತ್ರಗಳ ಒಟಿಟಿ ಸ್ಟ್ರೀಮಿಂಗ್‌ ದಿನಾಂಕ ಘೋಷಣೆ ಆದ ಬಳಿಕ ವೀಕ್ಷಕರು ಈ ಚಿತ್ರಗಳಿಗಾಗಿ ಕಾಯುತ್ತಿದ್ದಾರೆ.

ದೇವರ ವೀಕ್ಷಣೆ ಯಾವ ಒಟಿಟಿಯಲ್ಲಿ?

ಟಾಲಿವುಡ್‌ನ ಬಹು ನಿರೀಕ್ಷಿತ ದೇವರ ಸಿನಿಮಾ ಸೆಪ್ಟೆಂಬರ್‌ 27ರಂದು ತೆರೆಕಂಡಿತ್ತು. ಜೂನಿಯರ್‌ ಎನ್‌ಟಿಆರ್‌, ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ಮತ್ತು ಜಾಹ್ನವಿ ಕಪೂರ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ದೊಡ್ಡ ಮಟ್ಟದ ಹೈಪ್‌ ಜತೆಗೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿತ್ತು. ಮುಂಗಡ ಬುಕಿಂಗ್‌ ವಿಚಾರದಲ್ಲಿಯೂ ದಾಖಲೆ ಬರೆದಿತ್ತು, ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ರಿಲೀಸ್‌ ಆಗಿತ್ತು ದೇವರ. ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿಗೂ ಅಧಿಕ ಕಮಾಯಿ ಮಾಡಿದ ಈ ಸಿನಿಮಾ, ಈಗ ಒಟಿಟಿಗೆ ಆಗಮಿಸುತ್ತಿದೆ. ನವೆಂಬರ್‌ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ವೆಟ್ಟೈಯನ್‌ ಎಲ್ಲಿ ನೋಡಬಹುದು?

ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ 'ವೆಟ್ಟೈಯನ್- ದಿ ಹಂಟರ್' ಚಿತ್ರ, ಈಗಾಗಲೇ ಚಿತ್ರಮಂದಿರದಲ್ಲಿ (ಅಕ್ಟೋಬರ್‌ 10) ಬಿಡುಗಡೆ ಆಗಿ, ಸೂಪರ್‌ ಹಿಟ್‌ ಎನಿಸಿಕೊಂಡಿದೆ. ತಮಿಳಿನ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿಯಲ್ಲಿ ವೆಟ್ಟೈಯನ್‌ ಸಿನಿಮಾಕ್ಕೆ ಸುಭಾಸ್ಕರನ್ ಬಂಡವಾಳ ಹೂಡಿದ್ದಾರೆ. ಟಿಜೆ ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ತೆಲುಗಿನ ರಾಣಾ ದಗ್ಗುಬಾಟಿ, ಮಲಯಾಳಂನ ಫಹಾದ್‌ ಫಾಸಿಲ್‌ ಸೇರಿ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಈಗ ಇದೇ ಸಿನಿಮಾ ತನ್ನ ಒಟಿಟಿ ಬಿಡುಗಡೆಯ ಸನಿಹ ಬಂದಿದೆ. ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಇದೇ ನವೆಂಬರ್‌ 8ರಿಂದ ಕನ್ನಡದಲ್ಲಿಯೂ ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದು.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಎಆರ್‌ಎಂ

ಸೆಪ್ಟೆಂಬರ್‌ 12ರಂದು ಮಲಯಾಳಂನಲ್ಲಿ ಅಜೆಯಂದೆ ರಂಡಾಂ ಮೋಷಣಂ (ARM) ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ 1900, 1950 ಮತ್ತು 1990.. ಈ ಮೂರು ಕಾಲಘಟ್ಟದಲ್ಲಿ ನಡೆದ ಕಥೆಯಾಗಿತ್ತು. ಕೇರಳದ ಕಲೆ, ಸಂಸ್ಕೃತಿ ಬಗ್ಗೆಯೂ ಈ ಚಿತ್ರ ಮಾತನಾಡಿತ್ತು. ಈ ಮೂರು ಕಾಲಘಟ್ಟದ ನಾಯಕರು ಭೂಮಿಯ ಪ್ರಮುಖ ನಿಧಿಯನ್ನು ರಕ್ಷಿಸಲು ಹೇಗೆಲ್ಲ ಹೋರಾಟ ನಡೆಸಿದ್ದರು ಎಂಬುದು ಈ ಸಿನಿಮಾದ ಒಂದೆಳೆ. ಚಿತ್ರದಲ್ಲಿ ಟೊವಿನೋ ಥಾಮಸ್, ಕೃತಿ ಶೆಟ್ಟಿ, ಸುರಭಿ ಲಕ್ಷ್ಮಿ, ಐಶ್ವರ್ಯ ರಾಜೇಶ್ ಮತ್ತು ಬಾಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್ 8 ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Whats_app_banner