Payal Ghosh: ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ; ಬಾಂಬ್‌ ಸಿಡಿಸಿದ ನಟಿ ಪಾಯಲ್‌ ಘೋಷ್‌
ಕನ್ನಡ ಸುದ್ದಿ  /  ಮನರಂಜನೆ  /  Payal Ghosh: ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ; ಬಾಂಬ್‌ ಸಿಡಿಸಿದ ನಟಿ ಪಾಯಲ್‌ ಘೋಷ್‌

Payal Ghosh: ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ; ಬಾಂಬ್‌ ಸಿಡಿಸಿದ ನಟಿ ಪಾಯಲ್‌ ಘೋಷ್‌

ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಬಿಟೌನ್‌ನ ಮತ್ತೊಂದು ಮುಖವನ್ನು ಬಹಿರಂಗಪಡಿಸಿದ್ದಾರೆ. ಕರೆದವರೊಡನೆ ಹಾಸಿಗೆ ಹಂಚಿಕೊಂಡಿದ್ದರೆ ನಾನು ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದಿದ್ದಾರೆ.

ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ; ಬಾಂಬ್‌ ಸಿಡಿಸಿದ ನಟಿ ಪಾಯಲ್‌ ಘೋಷ್‌
ದೇಹ ಹಂಚಿಕೊಂಡಿದ್ದರೆ ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ; ಬಾಂಬ್‌ ಸಿಡಿಸಿದ ನಟಿ ಪಾಯಲ್‌ ಘೋಷ್‌ (Instagram\ payal ghosh)

Payal Ghosh: ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ನಟಿ ಪಾಯಲ್‌ ಘೋಷ್‌ ತಮ್ಮ ಬೋಲ್ಡ್‌ ಲುಕ್‌ ಮೂಲಕವೇ ಫೇಮಸ್‌. ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಹೇಳಿಕೆ ಅಥವಾ ಪೋಸ್ಟ್‌ಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಮೀಟೂ ಆರೋಪದ ವಿಚಾರದಲ್ಲಿಯೂ ಪಾಯಲ್‌ ಮುನ್ನೆಲೆಗೆ ಬಂದಿದ್ದರು. ಇದೀಗ ಅಂಥದ್ದೇ ಮತ್ತೊಂದು ಹೇಳಿಕೆ ನೀಡಿದ್ದಾರೆ.

ಬಾಲಿವುಡ್‌ನಲ್ಲಿ ಸ್ಟಾರ್‌ಡಮ್‌ ಗಿಟ್ಟಿಸಿಕೊಳ್ಳದಿದ್ದರೂ ಪಾಯಲ್‌ಗೆ ಸಿನಿಮಾ ಅವಕಾಶಗಳು ಕಡಿಮೆ ಏನಿಲ್ಲ. ಇದೂವರೆಗೂ 11 ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ. ಹೀಗೆ 11 ಸಿನಿಮಾ ನಟಿಸಿದ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಮಾತೊಂದನ್ನು ಹೇಳಿಕೊಂಡಿದ್ದಾರೆ. ಆ ಪೋಸ್ಟ್‌ ಇದೀಗ ಹಲವರ ಕಣ್ಣರಳಿಸಿದೆ. ಈ ಮೂಲಕ ವಿವಾದವೊಂದಕ್ಕೆ ತುಪ್ಪ ಸುರಿದಿದ್ದಾರೆ.

ಇದನ್ನೂ ಓದಿ: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ

ತನ್ನ 11ನೇ ಸಿನಿಮಾ ಮುಗಿದ ಬೆನ್ನಲ್ಲೇ, ಒಂದು ವೇಳೆ ನಾನು ಎಲ್ಲವನ್ನೂ ಒಪ್ಪಿಕೊಂಡು, ಇತರರೊಡನೆ ಹಾಸಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗಾಗಲೇ ನಾನು 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎನ್ನುವ ಮೂಲಕ ಬಾಲಿವುಡ್‌ ಸಿನಿಮಾರಂಗದ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ದೊಡ್ಡ ದೊಡ್ಡ ಸಿನಿಮಾ ಆಫರ್‌ಗಳು ಸಗಬೇಕೆಂದರೆ ನೀನು ಇತರರೊಡನೆ ಮಲಗಲೇ ಬೇಕು. ದೇಹ ಹಂಚಿಕೊಳ್ಳದೇ ಇದ್ದರೆ ಇದು ಅಸಾಧ್ಯ ಎಂದಿದ್ದಾರೆ.

ಈ ಹಿಂದೆ ಅಂದರೆ 2020ರಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು ಪಾಯಲ್‌ ಘೋಷ್.‌ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದ ಪಾಯಲ್‌, ಅನುರಾಗ್‌ ಕಶ್ಯಪ್‌ ತನ್ನ ಜೀಪ್‌ ತೆರೆದು ನನ್ನ ಮೇಲೆ ಬಲವಂತವಾಗಿ ಒತ್ತಾಯಿಸುತ್ತಿದ್ದ ಎಂದು ಆರೋಪ ಮಾಡಿದ್ದರು. ಈ ಆರೋಪದ ಬಳಿಕ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಟಾಲಿವುಡ್‌ ನಟ ಕಲ್ಯಾಣ್‌ ರಾಮ್‌ ಡೆವಿಲ್‌ ಸಿನಿಮಾ ಗ್ಲಿಂಪ್ಸ್‌ ರಿಲೀಸ್‌;ಇದು ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಏಜೆಂಟ್‌ ಕಥೆ

ಇದೀಗ ಅವರ ಹೊಸ ಸಿನಿಮಾವೊಂದು ಬಿಡುಗಡೆಗೆ ಬಂದು ನಿಂತಿದೆ. ಫೈರ್‌ ಆಫ್‌ ಲವ್‌ ಸಿನಿಮಾ ಇನ್ನೇನು ರಿಲೀಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕೆಲಸದಲ್ಲಿಯೂ ಪಾಯಲ್‌ ಬಿಜಿಯಾಗಿದ್ದಾರೆ. ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಈ ರೀತಿ ಪೋಸ್ಟ್‌ ಹಾಕಿರಬಹುದೇ ಎಂದೂ ನಟಿಯನ್ನೂ ದೂರುತ್ತಿದ್ದಾರೆ. ಇನ್ನು ಕೆಲವರು ನಿಮಗೆ ಗೊತ್ತಿರುವ ಇನ್ನುಳಿದ ನಟಿಯರನ್ನೂ ಹೆಸರಿಸಿ ಎಂದೂ ಹೇಳುತ್ತಿದ್ದಾರೆ ನೆಟ್ಟಿಗರು.

Whats_app_banner