Adipurush Row: ಆದಿಪುರುಷ್‌ ತಂಡದವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು ಎಂದ ಶಕ್ತಿಮಾನ್‌ ಮುಖೇಶ್‌ ಖನ್ನಾ
ಕನ್ನಡ ಸುದ್ದಿ  /  ಮನರಂಜನೆ  /  Adipurush Row: ಆದಿಪುರುಷ್‌ ತಂಡದವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು ಎಂದ ಶಕ್ತಿಮಾನ್‌ ಮುಖೇಶ್‌ ಖನ್ನಾ

Adipurush Row: ಆದಿಪುರುಷ್‌ ತಂಡದವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು ಎಂದ ಶಕ್ತಿಮಾನ್‌ ಮುಖೇಶ್‌ ಖನ್ನಾ

ಎಲ್ಲೆಡೆಯಿಂದ ಟೀಕೆಗಳನ್ನು ಎದುರಿಸುತ್ತಿರುವ ಆದಿಪುರುಷ್‌ ಚಿತ್ರದ ವಿರುದ್ಧವೀಗ ಶಕ್ತಿಮಾನ್‌ ಧಾರಾವಾಹಿ ಖ್ಯಾತಿಯ ನಟ ಮುಖೇಶ್‌ ಖನ್ನಾ ಸಹ ಕೊಂಚ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಇವರನ್ನು ನಡುಬೀದಿಯಲ್ಲಿ ಸುಟ್ಟುಹಾಕಬೇಕು ಎಂದಿದ್ದಾರೆ.

ಆದಿಪುರುಷ್‌ ತಂಡದವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು ಎಂದ ಶಕ್ತಿಮಾನ್‌ ಮುಖೇಶ್‌ ಖನ್ನಾ
ಆದಿಪುರುಷ್‌ ತಂಡದವರನ್ನು 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು ಎಂದ ಶಕ್ತಿಮಾನ್‌ ಮುಖೇಶ್‌ ಖನ್ನಾ

Adipurush Row: ಆದಿಪುರುಷ್‌ ಸಿನಿಮಾ ಹಣ ಗಳಿಕೆಯಲ್ಲಿ ಮುಂದಡಿ ಇಡುತ್ತಿದ್ದರೂ, ತೆಗಳಿಕೆ ವಿಚಾರದಲ್ಲಿಯೂ ಅಷ್ಟೇ ಮುಂದಿದೆ. ಚಿತ್ರದ ಬಗ್ಗೆ ನೋಡುಗರು ಮನಬಂದಂತೆ ಟೀಕಾ ಪ್ರಹಾರ ಬಳಸುತ್ತಿದ್ದಾರೆ. ಇಡೀ ತಂಡವನ್ನು ಕೆಟ್ಟದಾಗಿ ಟ್ರೋಲ್‌ ಮಾಡುತ್ತಿದ್ದಾರೆ. ಹೀಗಿರುವಾಗಲೇ ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ ಶಕ್ತಿಮಾನ್ ಸೀರಿಯಲ್‌ ಖ್ಯಾತಿಯ, ಮುಖೇಶ್‌ ಖನ್ನಾ ಸಹ ಚಿತ್ರತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಧರ್ಮಗ್ರಂಥಗಳನ್ನು ಅವಮಾನಿಸುವ ಹಕ್ಕು ನಿಮಗೆ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

'ಆದಿಪುರುಷ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿದೆ. ಕೇವಲ ನಾಲ್ಕೇ ದಿನಗಳಲ್ಲಿ 400 ಕೋಟಿ ಸಮೀಪ ಗಳಿಕೆ ಮಾಡಿದೆ. ಇದರ ಜತೆಗೆ ಸಿನಿಮಾ ಮೂಡಿಬಂದ ರೀತಿ ಮತ್ತು ಚಿತ್ರದಲ್ಲಿನ ಡೈಲಾಗ್‌ಗಳು ತೀವ್ರ ಟೀಕೆಗೆ ಮತ್ತು ಆಕ್ಷೇಪಾರ್ಹವಾಗಿವೆ. ಪ್ರೇಕ್ಷಕರ ಟೀಕೆ ಒತ್ತಟ್ಟಿಗಿರಲಿ, ಸಿನಿಮಾ ಮಂದಿಯೇ ಈ ಚಿತ್ರತಂಡವನ್ನು ಬಯ್ಯುತ್ತಿದ್ದಾರೆ. ಈಗ ಇದೇ ಚಿತ್ರದಲ್ಲಿನ ರಾವಣನ ಪಾತ್ರವನ್ನು ಟಾರ್ಗೆಟ್‌ ಮಾಡಿರುವ ಮುಖೇಶ್‌ ಖನ್ನಾ ಗರಂ ಆಗಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, "ಇದು ರಾಮಾಯಣದ ಭಯಾನಕ ಹಾಸ್ಯ ಎಂದು ನಾನು ಭಾವಿಸುತ್ತೇನೆ. ನಮ್ಮ ಧರ್ಮಗ್ರಂಥಗಳನ್ನು ಅವಮಾನಿಸುವ ಹಕ್ಕನ್ನು ಇವರಿಗೆ ಕೊಟ್ಟಿದ್ಯಾರು? ಅವರಿಬ್ಬರೂ ರಾಮಾಯಣವನ್ನು ಓದಿಲ್ಲ ಎಂದು ನಾನು ಹೇಳಿದ್ದೇನೆ. ಈ ಸಿನಿಮಾ ಘೋಷಣೆ ಆದಾಗ ರಾವಣನ ಪಾತ್ರವನ್ನು ಸೈಫ್‌ ಅಲಿಖಾನ್‌ ಮಾಡುತ್ತಾನೆ ಎಂದಾಗಲೇ ನಾನು ಹೇಳಿದ್ದೆ. ರಾಮಾಯಣ ಓದಿದವರಿಗೆ ಪಾತ್ರ ನೀಡಿ ಎಂದು. ಹನುಮಂತನ ಸಂಭಾಷಣೆ ತೀರಾ ಕಳಪೆಯಾಗಿವೆ. ಗ್ಲಾಮರಸ್‌ ಮೂಲಕ ಕೆಲವು ಪಾತ್ರಗಳನ್ನು ತೋರಿಸುವ ಅವಶ್ಯಕತೆ ಏನಿತ್ತು? ಎಂದಿದ್ದಾರೆ.

"ಇಡೀ ಸಿನಿಮಾ ಕಳಪೆಯಿಂದ ಕೂಡಿದೆ. ಜ್ಞಾನ ಇಲ್ಲದವರು ಮಾಡಿದ ಸಿನಿಮಾ ಇದು. ಸಂಪೂರ್ಣ ಕಸ. ಇವರು ಕ್ಷಮೆಗೆ ಅರ್ಹರಲ್ಲ. ಈ ಬಗ್ಗೆ ನನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿಯೇ ಹೇಳಿದ್ದೇನೆ. ಇವರೆಲ್ಲರನ್ನೂ 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಡಬೇಕು. ಜನ ಇವರನ್ನು ಇಷ್ಟೆಲ್ಲ ಟೀಕೆ ಮಾಡುತ್ತಿದ್ದರೂ, ಇವರು ಮುಖ ಮುಚ್ಚಿಕೊಂಡು ಓಡಾಡಲಿದ್ದಾರೆ ಎಂದುಕೊಂಡಿದ್ದೆ. ಆದರೆ, ಜನರ ಮುಂದೆ ಬಂದು ನಿಂತಿದ್ದಾರೆ. ನಾವು ಸನಾತನ ಧರ್ಮವನ್ನು ಮರುಸೃಷ್ಟಿಸಿದ್ದೇವೆ ಎನ್ನುತ್ತಿದ್ದಾರೆ. ಹೇ.. ನಿಮ್ಮ ಸನಾತನ ಧರ್ಮ ನಮ್ಮ ಧರ್ಮಕ್ಕಿಂತ ಭಿನ್ನವಾಗಿದೆಯೇ? ಎಂದಿದ್ದಾರೆ.

"ನೀವು ನಿಮ್ಮ ಸ್ವಂತ ವರ್ಷನ್‌ ರಚಿಸಿ ಹಳೆಯ ಸಂಪ್ರದಾಯವನ್ನು ಮರೆತು ಮಕ್ಕಳಿಗೆ ಹೇಳುತ್ತಿದ್ದೀರಿ. ಹಾಗಾದರೆ ವಾಲ್ಮೀಕಿಗಿಂತ ನೀವು ಮೇಲಿದ್ದೀರಾ? ಹನುಮಾನ್‌ ವೇಷವೇ ಬೇರೆಯದನ್ನು ನಾವು ನೋಡಿ ಬೆಳೆದಿದ್ದೇವೆ. ಶ್ರೀರಾಮ, ಕೃಷ, ವಿಷ್ಣುವಿಗೆ ಮೀಸೆ ಇರಬಾರದು. ನಾವು ಅವರನ್ನು ಹಾಗೆಯೇ ನೋಡಿಕೊಂಡು ಬಂದಿದ್ದೇವೆ. ಈ ರೀತಿ ನೀವು ಬೇರೆ ಯಾವುದೇ ಧರ್ಮದಲ್ಲಿ ಮಾಡಬಹುದಿತ್ತೇ? ಹೀಗೆ ಹಿಂದೂ ಧರ್ಮವನ್ನು ಗೇಲಿ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

Whats_app_banner