Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್ ವಿಡಿಯೋ ವೈರಲ್, ಅಸಲಿ- ನಕಲಿ ವಿಡಿಯೋ ನೋಡಿ
Alia Bhatt deepfake video: ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಐ ತಂತ್ರಜ್ಞಾನದ ನೆರವಿನಿಂದ ಪಂಜಾಬಿ ನಟಿ ವಾಮಿಕಾ ಗಬ್ಬಿ ಅವರ ಮುಖವನ್ನು ತೆಗೆದು ಅದಕ್ಕೆ ಆಲಿಯಾ ಭಟ್‌ರ ಮುಖವನ್ನು ಜೋಡಿಸಲಾಗಿದೆ
ಬೆಂಗಳೂರು: ಇದು ಡೀಪ್‌ಫೇಕ್ ಕಾಲ. ಇದೀಗ ಆಲಿಯಾ ಭಟ್ ಅಭಿಮಾನಿಯೊಬ್ಬರು ವಿಡಿಯೋವೊಂದರಲ್ಲಿ ಪಂಜಾಬಿ ನಟಿ ವಾಮಿಕಾ ಗಬ್ಬಿ ಅವರ ಮುಖವನ್ನು ತೆಗೆದು ಅದಕ್ಕೆ ಆಲಿಯಾ ಭಟ್‌ರ ಮುಖವನ್ನು ಜೋಡಿಸಿದ್ದಾರೆ. ಇತ್ತೀಚೆಗೆ, ಇನ್ಸ್ಟಾಗ್ರಾಮ್ ಬಳಕೆದಾರ ಅನ್ಫಿಕ್ಸ್ಫೇಸ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ವಾಮಿಕಾ ಗಬ್ಬಿ ಅವರ ವೀಡಿಯೊಗೆ ಆಲಿಯಾ ಭಟ್ ಅವರ ಮುಖವನ್ನು ಜೋಡಿಸಲಾಗಿದೆ.
ವಾಮಿಕಾ ಅವರ ವೀಡಿಯೊದಲ್ಲಿ ವಾಮಿಕಾ ಬದಲು ಆಲಿಯಾ ಅವರ ಮುಖವನ್ನು ಎಡಿಟ್ ಮಾಡಿ ಜೋಡಿಸಲಾಗಿದೆ. ವೀಡಿಯೊದಲ್ಲಿ ನಟಿ ಕೆಂಪು ಸೀರೆ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಆಲಿಯಾ ಭಟ್ ಆಫ್ ಸ್ಕ್ರೀನ್ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. "ಈ ರೀತಿ ಮಾಡುವುದು ಕಾನೂನುಬದ್ಧವೇ? ನೀವು ಆಲಿಯಾ ಮುಖವನ್ನು ಬಳಸಿದ್ದೀರಿ" ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಕೆಲವರು ವಾಮಿಕಾ ಗಬ್ಬಿಯ ನಿಜವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನೋಡಿ ಇದೇ ವಿಡಿಯೋಗೆ ಆಲಿಯಾ ಮುಖವನ್ನು ಎಐ ತಂತ್ರಜ್ಞಾನದಿಂದ ಜೋಡಿಸಲಾಗಿದೆ" ಎಂದು ತಿಳಿಸಿದ್ದಾರೆ.
ನಟಿ ವಾಮಿಕಾ ಕೆಲವು ದಿನಗಳ ಹಿಂದೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ವಾಮಿಕಾ ಕೂಡ ಇದ್ದರು. "ನಿಮ್ಮ ಪ್ರೇಮಿಕಾ ನಿಜವಾಗಿಯೂ ಚಮ್ಕಿಲಾ ಅಭಿಮಾನಿ" ಎಂದು ಕ್ಯಾಪ್ಷನ್ ನೀಡಿದ್ದರು. ಅಮರ್ ಸಿಂಗ್ ಚಮಿಲಾ ಅವರ ಪೆಹ್ಲೆ ಲಾಲ್ಕರೆ ನಾಲ್ ಮೈ ದಾರ್ ಗೈ ಹಾಡನ್ನುಅಮರ್ ಸಿಂಗ್ ಚಮಿಲಾ ಅವರ ಪೆಹ್ಲೆ ಲಾಲ್ಕರೆ ನಾಲ್ ಮೈ ದಾರ್ ಗೈ ಹಾಡನ್ನು ಈ ವಿಡಿಯೋಗೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಬಳಸಿಕೊಂಡಿದ್ದರು. ಮೂಲ ವಿಡಿಯೋ ಕೆಳಗೆ ಇದೆ ನೋಡಿ.
ವಾಮಿಕಾ ಅವರು ವಿಡಿ 18, ಕಾಳಿ ಜೋಟ್ಟಾ ಮತ್ತು 83 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಅವರು ಮುಂದಿನ ಚಿತ್ರದಲ್ಲಿ ವರುಣ್ ಧವನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಚಲನಚಿತ್ರ ನಿರ್ಮಾಪಕ ಕಲೀಸ್ ನಿರ್ದೇಶನದ ಈ ಚಿತ್ರಕ್ಕೆ ಬೇಬಿ ಜಾನ್ ಎಂದು ಹೆಸರಿಡಲಾಗಿದೆ. ಕೀರ್ತಿ ಸುರೇಶ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಬೇಬಿ ಜಾನ್ ಸಿನಿಮಾ ಮೇ 31ರಂದು ರಿಲೀಸ್ ಆಗಬೇಕಿತ್ತು. ಆದರೆ, ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಕರಣ್ ಜೋಹರ್ ಸಹ-ನಿರ್ಮಾಪಕರಾಗಿರುವ ವಾಸನ್ ಬಾಲಾ ಅವರ ಜಿಗ್ರಾ ಚಿತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 27, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಲಿಯಾ ಸ್ಪೈ ಯೂನಿವರ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಸಜ್ಜಾಗಿದ್ದಾರೆ, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಟಿ ಆಲಿಯಾ ಈಗ ನ್ಯೂಯಾರ್ಕ್‌ನಲ್ಲಿದ್ದಾರೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಎಐ ಡೀಪ್‌ಫೇಕ್ ವೀಡಿಯೊವನ್ನು ಪ್ರಚಾರ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ವಿರುದ್ಧ ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈ ಡೀಪ್‌ಫೇಕ್ ವಿಡಿಯದಲ್ಲಿ ರಣವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿರುದ್ಯೋಗ ಮತ್ತು ಹಣದುಬ್ಬರದ ಕಾರಣಕ್ಕಾಗಿ ಟೀಕಿಸುವಂತೆ ತೋರಿಸಲಾಗಿತ್ತು.
ನವೆಂಬರ್ 6ರಂದು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜಾರಾ ಪಟೇಲ್ ಎಂಬ ಯುವತಿಯ ದೇಹಕ್ಕೆ ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಹಲವು ನಟಿಯರ ಡೀಪ್‌ಫೇಕ್ ವಿಡಿಯೋ, ಫೋಟೋಗಳು ವೈರಲ್ ಆಗಿದ್ದವು.