Box Office Collection: ಮೊದಲ ದಿನ ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು-box office collection day 1 krishnam pranaya sakhi thangalaan stree 2 double ismart movies mints multi cr india pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Box Office Collection: ಮೊದಲ ದಿನ ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು

Box Office Collection: ಮೊದಲ ದಿನ ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು

Box Office Collection: ಸ್ವಾತಂತ್ರ್ಯ ದಿನಾಚರಣೆಯಂದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೊದಲ ದಿನ 1.25 ಕೋಟಿ ಗಳಿಕೆ ಮಾಡಿದೆ. ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಮುಂತಾದ ಸಿನಿಮಾಗಳು ಎಷ್ಟು ಗಳಿಕೆ ಮಾಡಿವೆ ಎಂದು ತಿಳಿಯೋಣ.

Box Office Collection  Day 1: ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ ವರದಿ
Box Office Collection Day 1: ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ ವರದಿ

Box Office Collection: ಸ್ಯಾಂಡಲ್‌ವುಡ್‌ ಸೇರಿದಂತೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ನಿನ್ನೆಯಿಂದ ಜನದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು. ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾದ ಕಾರಣ ಸಾಕಷ್ಟು ಜನರು ಚಿತ್ರಮಂದಿರಗಳತ್ತ ಆಗಮಿಸಿದ್ದಾರೆ. ಇವುಗಳಲ್ಲಿ ಕೆಲವು ಸಿನಿಮಾಗಳು ಪ್ರೇಕ್ಷಕರಿಗೆ ತುಸು ನಿರಾಶೆ ಮೂಡಿಸಿವೆ. ಕೆಲವು ಉತ್ತಮ ಸಿನಿಮಾಗಳು ಪ್ರೇಕ್ಷಕರಿಗೆ ಅಚ್ಚರಿಯ ಖುಷಿ ನೀಡಿವೆ. ಕೆಲವು ಸಿನಿಮಾಗಳು ವಿಮರ್ಶಕರಿಂದ ಉತ್ತಮ ರಿವ್ಯೂ ಪಡೆದಿವೆ. ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ಸಿನಿಮಾಗಳ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಕಾರ್ಡ್‌ ನೋಡೋಣ. ಸಕ್‌ನಿಲ್ಕ್‌.ಕಾಂ ಪೋರ್ಟಲ್‌ ನೀಡಿರುವ ಬಾಕ್ಸ್‌ ಆಫೀಸ್‌ ವರದಿಯನ್ನು ಆಧರಿಸಿ ಕಲೆಕ್ಷನ್‌ ವಿವರ ನೀಡಲಾಗಿದೆ. ಪ್ರಮುಖವಾಗಿ ಸಿನಿಮಾ ಟಿಕೆಟ್‌ಗಳ ಆನ್‌ಲೈನ್‌ ಬುಕ್ಕಿಂಗ್‌ ಆಧರಿಸಿ ಈ ತಾಣವು ಬಾಕ್ಸ್‌ ಆಫೀಸ್‌ ವರದಿ ನೀಡುತ್ತದೆ.

ಕೃಷ್ಣಂ ಪ್ರಣಯ ಸಖಿ: ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ತನ್ನ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ದ್ವಾಪರ ದಾಟುತ ಸೇರಿದಂತೆ ಹಲವು ಹಾಡುಗಳ ಮೋಡಿಗೆ ಒಳಗಾದ ಕನ್ನಡ ಪ್ರೇಕ್ಷಕರು ನಿನ್ನೆ ಚಿತ್ರಮಂದಿರಗಳತ್ತ ಆಗಮಿಸಿದ್ದಾರೆ. ಸಕ್‌ನಿಲ್ಕ್.ಕಾಂ ಪ್ರಕಾರ ಮೊದಲ ದಿನ ಕೃಷ್ಣಂ ಪ್ರಣಯ ಸಖಿ ಸಿನಿಮಾ 1.25 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ತಂಗಲಾನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌: ದಿನ 1

ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ ನಿನ್ನೆ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಕೆಜಿಎಫ್‌ ಪೂರ್ವಿಕರ ಕಾಲ್ಪನಿಕ ಕಥೆಯನ್ನು ಹೊಂದಿರುವ ಈ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ (ಕನ್ನಡದಲ್ಲಿ ಬಿಡುಗಡೆಯಾಗಿಲ್ಲ) ಸುಮಾರು 12.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಂದರೆ, ತಮಿಳಿನಲ್ಲಿ 12.6 ಕೋಟಿ ರೂಪಾಯಿ, ತೆಲುಗಿನಲ್ಲಿ 1.5 ಕಕೋಟಿ ರೂಪಾಯಿ, ಮಲಯಳಂನಲ್ಲಿ 0.1 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸಕ್‌ನಿಲ್ಕ್‌ ತಾಣವು ಆರಂಭಿಕ ಅಂದಾಜು ಗಳಿಕೆ ವರದಿ ಪ್ರಕಟಿಸಿದೆ.

ಸ್ತ್ರೀ 2 ಬಾಕ್ಸ್‌ ಆಫೀಸ್‌ ಕಲೆಕ್ಷನ್‌: ದಿನ 1

ಶ್ರದ್ಧಾ ಕಪೂರ್‌, ರಾಜ್‌ಕುಮಾರ್‌ ರಾವ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ತ್ರೀ 2 ಎಂಬ ಹಾರರ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಸಕ್‌ನಿಲ್ಕ್‌ ತಾಣದ ಪ್ರಕಾರ ಸ್ತ್ರೀ 2 ಸಿನಿಮಾವು ಮೊದಲ ದಿನ (ಪ್ರೀಮಿಯರ್‌ ಶೋ ಸೇರಿದಂತೆ) ಸುಮಾರು 54.35 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ.

ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌: ದಿನ 1

ರಾಮ್‌ ಪೊತ್ತಿನೇನಿ, ಕಾವ್ಯ ತಾಪರ್‌, ಸಂಜಯ್‌ ದತ್‌ ಮುಂತಾದವರು ನಟಿಸಿರುವ ಟಾಲಿವುಡ್‌ ಸಿನಿಮಾ ಡಬಲ್‌ ಐಸ್ಮಾರ್ಟ್‌ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ಸಕ್‌ನಿಲ್ಕ್‌ ತಾಣದ ಪ್ರಕಾರ ಗುರುವಾರ ಈ ಸಿನಿಮಾ 7.5 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಭೀಮ ಬಾಕ್ಸ್‌ ಆಫೀಸ್‌ ಕಲೆಕ್ಷನ್: ದಿನ 7

ಹೀಗೆ ಈ ವಾರ ಬಿಡುಗಡೆಯಾದ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿವೆ. ಇದೇ ಸಮಯದಲ್ಲಿ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾವು ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುವುದನ್ನು ಮುಂದುವರೆಸಿದೆ. ಯುವ ಜನ ಡ್ರಗ್ಸ್‌ ದಾಸರಾಗುವುದನ್ನು ವಿರೋಧಿಸುವ ಕಥೆ ಹೊಂದಿರುವ ಭೀಮ ಸಿನಿಮಾವು ಏಳನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ 1.38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ 3.95 ಕೋಟಿ ರೂ., ಎರಡನೇ ದಿನ 3.4 ಕೋಟಿ ರೂಪಾಯಿ, ಮೂರನೇ ದಿನ 4 ಕೋಟಿ ರೂ., 5ನೇ ದಿನ 1.25 ಕೋಟಿ ರೂ., 6ನೇ ದಿನ 0.95 ಕೋಟಿ ರೂ., 7ನೇ ದಿನ 1.38 ಕೋಟಿ ರೂ ಗಳಿಕೆ ಮಾಡಿದೆ. ಭೀಮ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಒಟ್ಟಾರೆ 16.58 ಕೋಟಿ ರೂಪಾಯಿ ಗಳಿಕೆ ಮಾಡಿದೆ.