ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಎಂಜಾಯ್ ಮಾಡ್ಬಹುದಾ? ಸಿಗ್ನಲ್ ಬಿದ್ದಾಗ ಡ್ಯಾನ್ಸ್ ಮಾಡಿದ ಯುವತಿ - ವೈರಲ್ ವಿಡಿಯೋ
ನೀವು ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಬೋರಾಗಿ ಬೈದುಕೊಳ್ಳುವವರೇ ಜಾಸ್ತಿ. ಆದರೆ ಈ ಯುವತಿ ಹೇಗೆ ಎಂಜಾಯ್ ಮಾಡಿದ್ದಾರೆ ನೋಡಿ. ನೆಟ್ಟಿಗರಂತು ಈಕೆಯ ವಿಡಿಯೋ ನೋಡಿ, ಬೆಂಗಳೂರು ಟ್ರಾಫಿಕ್‌ನಲ್ಲಿ ಹೀಗೂ ಎಂಜಾಯ್ ಮಾಡ್ಬಹುದಾ? ಎಂದಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಹೇಗಿರುತ್ತೆ ಎಂಬುದು ಎಲ್ಲ ಊರಿನ ಜನರಿಗೂ ಗೊತ್ತು. ಆದರೆ ಈ ಟ್ರಾಫಿಕ್‌ನಲ್ಲಿ ಯುವತಿಯೊಬ್ಬಳು ಎಂಜಾಯ್ ಮಾಡಿದ್ದಾಳೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಅಲ್ಲೇ ಪಕ್ಕದಲ್ಲಿ ಕುಣಿಯುತ್ತಿರುವ ಒಂದು ಗಂಡಸರ ಗುಂಪು ಕಾಣಿಸುತ್ತದೆ. ಅವಳ ಫ್ರೆಂಡ್ ಅಥವಾ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕರ ಬಳಿ ನಾನು ಹೋಗಿ ಡಾನ್ಸ್ ಮಾಡಿ ಬರುತ್ತೇನೆ ಎನ್ನುವ ರೀತಿಯಲ್ಲಿ ನಗುತ್ತಾ ಹೊರಟೇ ಹೋಗುತ್ತಾಳೆ. ಅವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ರಸ್ತೆ ಪಕ್ಕದಲ್ಲಿ ಕುಣಿಯುತ್ತಿರುವ ಗುಂಪನ್ನು ನೋಡಿ, ತಾನೂ ಎದ್ದು ಓಡಿ ಹೋಗಿ ಅವರ ಜೊತೆ ನಾಲ್ಕು ಸ್ಟೆಪ್ ಹಾಕ್ತಾಳೆ. ಅಷ್ಟೊತ್ತು ನಿಧಾನವಾಗಿ ಡ್ಯಾನ್ಸ್ ಮಾಡುತ್ತಿದ್ದ ಗುಂಪಿನ ಎಲ್ಲರೂ ಸೇರಿ ನಾಲ್ಕು ಸ್ಟೆಪ್ ಹಾಕುತ್ತಾರೆ. ಸಿಗ್ನಲ್ ಬಿಟ್ಟ ನಂತರ ಅವಳನ್ನು ಒಳಗೆ ಬಾ ಎನ್ನುವ ರೀತಿಯಲ್ಲಿ ಕರೆಯುತ್ತಾರೆ. ಆಗ ಅವಳು ಓಡಿಕೊಂಡು ಬಂದು ಆಟೋ ಏರುತ್ತಾಳೆ. ಈ ರೀತಿ ಯಾಕೆ ಟ್ರಾಫಿಕ್ ಜಾಮ್‌ನಲ್ಲೂ ಕೂಡ ಎಂಜಾಯ್ ಮಾಡಬಾರದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಎಷ್ಟೇ ಬೋರಾಗಿದ್ದರೂ ಅದರಲ್ಲೇ ನಾವು ಏನಾದರೊಂದು ಹೊಸತನ್ನು ಮಾಡಬಹುದು ಎಂದು ಆ ಹುಡುಗಿ ತೋರಿಸಿಕೊಟ್ಟಿದ್ದಾಳೆ. ಇನ್ನು ಅಲ್ಲಿ ಸುತ್ತಮುತ್ತ ನಿಂತ ಜನರೆಲ್ಲ ಅವರನ್ನೇ ನೋಡಿ ನಕ್ಕಿದ್ದಾರೆ. ಅವಳ ಗೆಳತಿ ಗೋ, ಗೋ ಎಂದು ಹೇಳಿರುವ ಧ್ವನಿ ವಿಡಿಯೋದಲ್ಲಿ ಕೇಳಿಸುತ್ತದೆ. ಹೋಗಲು ಮೊದಲು ಚೂರು ಅನುಮಾನ ಮಾಡಿದರೂ ನಂತರ ಎದ್ದು ಹೋಗಿ ಕುಣಿದು ಬಂದಿರುವ ವಿಡಿಯೋ ವೈರಲ್ ಆಗಿದೆ.
ಟೈಮ್ ವೇಸ್ಟ್ ಮಾಡದೆ ಲೈಫನ್ನು ಎಂಜಾಯ್ ಮಾಡಬಹುದು ಎನ್ನುವ ರೀತಿಯಲ್ಲಿ ಈ ವಿಡಿಯೋ ಬಿಂಬಿತವಾಗಿದೆ. ಈ ಹುಡುಗಿಯ ವಿಡಿಯೋ ಶರಣ್ಯ ಮೋಹನ್ ಎಂಬ ಇನಸ್ಟಾಗ್ರಾಂ ಖಾತೆಯಿಂದ ಶೇರ್ ಆಗಿದೆ. ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ನೀವು ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಎಂಬ ಸಾಲನ್ನು ವಿಡಿಯೋ ಮೇಲೆ ಬರೆದು ಪೋಸ್ಟ್ ಮಾಡಿದ್ದಾರೆ.
ಇಲ್ಲೇ ಇದೆ ನೋಡಿ ವಿಡಿಯೋ
ಬೆಂಗಳೂರು ಯಾವಾಗಲೂ ನನಗೆ ಹೊಸ ಆವಿಷ್ಕಾರ ಮಾಡಲು ಮಜ ನೀಡುತ್ತಿದೆ. ಎಂದಿಗೂ ನಾನು ಇಲ್ಲಿ ಬೋರ್ ಆಗಿಲ್ಲ. ಊರಿಂದ ದೂರ ಇದ್ದರೂ ಬೆಂಗಳೂರು ನನ್ನನ್ನು ಬೇಸರಪಡಿಸಿಲ್ಲ ಎಂಬ ಅರ್ಥ ಬರುವ ಸಾಲಿನೊಂದಿಗೆ ಅವರು ಈ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಜನರು ತುಂಬಾ ವೈಬ್ ಆಗಿದ್ದರು ಎಂದು ಬರೆದುಕೊಂಡಿದ್ದಾರೆ.
ಹೀಗಿತ್ತು ಕಾಮೆಂಟ್ಸ್
ಸೋ ಕಾಲ್ಡ್ ಸೀರಿಯಸ್ ಎಂಬುವವರು “ನಾನು ಅವಳ ಗೆಳತಿಯನ್ನು ಪ್ರಶಂಸಿಸುತ್ತೇನೆ. ಅವರು ತುಂಬಾ ಪ್ರೋತ್ಸಾಹಿಸಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಹಲವರು ತುಂಬಾ ಟ್ರಾಫಿಕ್‌ನಲ್ಲಿ ಮೊದಲ ಬಾರಿ ನಾನು ಹೀಗೂ ಖುಷಿಪಡಬಹುದು ಎಂಬುದನ್ನು ಕಂಡೆ ಎಂದಿದ್ದಾರೆ.
ಆ ಹುಡುಗಿಯ ಧೈರ್ಯಕ್ಕೆ ನನ್ನ ಮೆಚ್ಚುಗೆ ಇದೆ ಎಂದಿದ್ದಾರೆ. ಈ ರೀತಿ ಹಲವಾರು ಪಾಸಿಟಿವ್ ಕಾಮೆಂಟ್ಸ್ ಬಂದಿದೆ.
ವಿಭಾಗ