ಆಯುರ್ವೇದದ ಪ್ರಕಾರ ಈ ಆಹಾರಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು, ಕರುಳಿನ ಸಮಸ್ಯೆಗಳು ಕಾಡಬಹುದು
ಆಯುರ್ವೇದದ ಪ್ರಕಾರ ನೀರು ಕುಡಿಯಲು ಕೆಲವು ವಿಶೇಷ ನಿಯಮಗಳಿವೆ. ಈ ನಿಯಮಗಳ ಪ್ರಕಾರ ಕೆಲವು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು. ಹಾಗೆ ಕುಡಿದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುವುದು ಖಂಡಿತ. ಹಾಗಾದರೆ ಯಾವ ಆಹಾರಗಳನ್ನು ತಿಂದ ನಂತರ ನೀರು ಕುಡಿಯಬಾರದು ನೋಡಿ, ಕುಡಿದರೆ ಏನಾಗುತ್ತೆ ಎಂಬ ವಿವರ ಇಲ್ಲಿದೆ.
ನೀರು ನಮ್ಮ ದೇಹಕ್ಕೆ ಅತಿ ಅವಶ್ಯ, ಒಂದು ದಿನದಲ್ಲಿ ಇಂತಿಷ್ಟು ಪ್ರಮಾಣದ ನೀರು ಕುಡಿಯಲೇಬೇಕು. ನೀರು ಕಡಿಮೆ ಕುಡಿಯುವುದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಕಾಡಬಹುದು. ದಿನಕ್ಕೆ ಕನಿಷ್ಠ 2.7 ಲೀಟರ್ ನೀರು ಕುಡಿಯಬೇಕು ವೈದ್ಯರು ಸಲಹೆ ನೀಡುತ್ತಾರೆ. ನೀರು ಕಡಿಮೆ ಕುಡಿಯುವುದರಿಂದ ನಿರ್ಜಲೀಕರಣ ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಬಾಧಿಸಬಹುದು.
ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿದ್ದರೂ, ಆಯುರ್ವೇದದ ಪ್ರಕಾರ ನೀರು ಕುಡಿಯಲು ಕೆಲವು ವಿಶೇಷ ನಿಯಮಗಳಿವೆ. ಈ ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ನೀರು ಕುಡಿದ ನಂತರ ಯಾವ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನೋಡೋಣ.
ಬಾಳೆಹಣ್ಣು
ಬಾಳೆಹಣ್ಣು ತಿಂದ ನಂತರ ನೀರು ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಅದರಲ್ಲೂ ಮಕ್ಕಳು ಸಾಮಾನ್ಯವಾಗಿ ಬಾಳೆಹಣ್ಣು ತಿಂದ ನಂತರ ನೀರು ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ, ಬಾಳೆಹಣ್ಣು ತಿಂದ ನಂತರ ಕನಿಷ್ಠ ಅರ್ಧ ಗಂಟೆ ನೀರು ಕುಡಿಯುವುದನ್ನು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಸಾಕಷ್ಟು ಪಿಷ್ಟವಿದೆ, ಈ ಪಿಷ್ಟವನ್ನು ನೀರಿನೊಂದಿಗೆ ಬೆರೆಸಿದರೆ, ಅದು ಹೊಟ್ಟೆ ಭಾರವಾಗಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ಕಿವಿಯಂತಹ ಸಿಟ್ರಸ್ ಅಂಶ ಇರುವ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬಾರದು. ಈ ಸಿಟ್ರಸ್ ಹಣ್ಣುಗಳಲ್ಲಿ ಇರುವ ಆಮ್ಲವು ಹೊಟ್ಟೆಯಲ್ಲಿರುವ ಆಮ್ಲದೊಂದಿಗೆ ಸೇರಿಕೊಳ್ಳುವ ಮೂಲಕ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಪಡಿಸಿ, ಅಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಹಾಲು
ಹಾಲು ಕುಡಿದ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಏಕೆಂದರೆ ಹಾಲು ಕುಡಿಯುವ ಮೊದಲು ಅಥವಾ ನಂತರ ತಕ್ಷಣವೇ ನೀರು ಕುಡಿಯುವುದು ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ಭಾರ, ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ.
ತಂಪು ಪಾನೀಯಗಳು
ತಂಪು ಪಾನೀಯಗಳಾದ ಐಸ್‌ಕ್ರೀಮ್, ಕೂಲ್ ಡ್ರಿಂಕ್ಸ್ ತಿಂದ ತಕ್ಷಣ ನೀರು ಕುಡಿಯಬೇಡಿ. ಈ ಪದಾರ್ಥಗಳನ್ನು ತಿಂದ ನಂತರ ನೀರು ಕುಡಿದರೆ ದೇಹ ಜುಮ್ಮೆನ್ನುವುದು, ನೋವು, ಹಲ್ಲುಗಳಲ್ಲಿ ಚುಚ್ಚುವ ಅನುಭವವಾಗುತ್ತದೆ.
ಎಣ್ಣೆ, ತುಪ್ಪ
ತುಪ್ಪದಲ್ಲಿ ತಯಾರಿಸಿದ ಆಹಾರಗಳು, ಹಾಗೆಯೇ ಎಣ್ಣೆಯಲ್ಲಿ ಕರಿದ ಆಹಾರಗಳು, ಕಡಲೆಕಾಳುಗಳು, ಕರಿದ ಒಣ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಬೇಡಿ. ಈ ಆಹಾರವನ್ನು ಸೇವಿಸಿದ ನಂತರ ನೀರು ಕುಡಿಯುವುದರಿಂದ ಕೆಮ್ಮು ಸಮಸ್ಯೆ ಉಂಟಾಗುತ್ತದೆ. ವಾಸ್ತವವಾಗಿ, ಇವೆಲ್ಲವೂ ಹೆಚ್ಚಿನ ಪ್ರಮಾಣದ ತೈಲವನ್ನು ಹೊಂದಿರುತ್ತವೆ, ಇದು ನೀರನ್ನು ಸೇವಿಸಿದಾಗ ಅಲಿಮೆಂಟರಿ ಕಾಲುವೆಯಲ್ಲಿ ಕೊಬ್ಬಿನಂತೆ ಸಂಗ್ರಹವಾಗುತ್ತದೆ. ಇದರಿಂದ ಅಜೀರ್ಣದಂತಹ ಸಮಸ್ಯೆಗಳು ಕೂಡ ಉಂಟಾಗುತ್ತದೆ.
ವಿಭಾಗ