Kannada News  /  Entertainment  /  Daali Dhananjaya Starrer Hoysala Movie Glimpse Released
ಉತ್ತರ ಕರ್ನಾಟಕದ ಗತ್ತು, ಧನಂಜಯ್‌ ಗಮ್ಮತ್ತು; ಇದು ‘ಹೊಯ್ಸಳ’ ಗುರುದೇವನ ತಾಕತ್ತು.. ಹೀಗಿದೆ ಟೀಸರ್
ಉತ್ತರ ಕರ್ನಾಟಕದ ಗತ್ತು, ಧನಂಜಯ್‌ ಗಮ್ಮತ್ತು; ಇದು ‘ಹೊಯ್ಸಳ’ ಗುರುದೇವನ ತಾಕತ್ತು.. ಹೀಗಿದೆ ಟೀಸರ್

Dhananjaya Hoysala Glimpse: ಉತ್ತರ ಕರ್ನಾಟಕದ ಗತ್ತು, ಧನಂಜಯ್‌ ಗಮ್ಮತ್ತು; ಇದು ‘ಹೊಯ್ಸಳ’ ಗುರುದೇವನ ತಾಕತ್ತು.. ಹೀಗಿದೆ ಟೀಸರ್

05 February 2023, 12:35 ISTHT Kannada Desk
05 February 2023, 12:35 IST

ಡಾಲಿ ಧನಂಜಯ್‌ ನಟನೆಯ ಹೊಯ್ಸಳ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ. ಈ ಚಿತ್ರ ಮಾರ್ಚ್‌ 30ಕ್ಕೆ ಬಿಡುಗಡೆ ಆಗಲಿದೆ. 

Dhananjaya Hoysala Glimpse: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ‘ಹೊಯ್ಸಳ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಮೊದಲಾರ್ಥವಾಗಿ ಚಿತ್ರದ ಕಿರು ವಿಡಿಯೋ ಗ್ಲಿಂಪ್ಸ್‌ ರಿಲೀಸ್‌ ಆಗಿದೆ. ಖಡಕ್‌ ಖಾಕಿ ತೊಟ್ಟು ಧನಂಜಯ್‌ ಅಬ್ಬರಿಸಿದ್ದಾರೆ. ಮಾಸ್‌ ಸೀನ್‌ಗಳ ಜತೆಗೆ ಉತ್ತರ ಕರ್ನಾಟಕದ ಝಲಕ್‌ ಕೂಡ ಗ್ಲಿಂಪ್ಸ್‌ನಲ್ಲಿ ಕಾಣಿಸುತ್ತಿದೆ. ವಿಶೇಷ ಏನೆಂದರೆ ಆ ಕಿರು ವಿಡಿಯೋವನ್ನು ದಕ್ಷಿಣದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌ ರಿಲೀಸ್‌ ಮಾಡಿ ಕೈ ಜೋಡಿಸಿದ್ದಾರೆ!

ಟ್ರೆಂಡಿಂಗ್​ ಸುದ್ದಿ

ಅಂದಹಾಗೆ, ಕೆಆರ್‌ಜಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಿರುವ ಧನಂಜಯ ಅಭಿನಯದ ‘ಹೊಯ್ಸಳ’ ಚಿತ್ರದಲ್ಲಿ ತಪ್ಪು ಮಾಡಿದವರ ಪಾಲಿಗೆ ಖಾಕಿ ತೊಟ್ಟ ಯಮನಾಗಿ ಕಾಣಿಸಿಕೊಂಡಿದ್ದಾರೆ. ಸೌತ್‌ ಸಿನಿಮಾ ಇಂಡಸ್ಟ್ರಿಯ ಸಿನಿಮಾಗಳಲ್ಲಿ ರಫ್ ಅಂಡ್ ಟಫ್ ಪೊಲೀಸ್ ಆಫೀಸರ್‌ಗಳಾಗಿ ಕಾಣಿಸಿಕೊಂಡಿದ್ದ ಕನ್ನಡದ ಕಿಚ್ಚ ಸುದೀಪ್, ತೆಲುಗು ನಟ ಅಡಿವಿ ಶೇಷ್, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಕಾರ್ತಿ ರವರು 'ಗ್ಲಿಂಪ್ಸ್‌ ಆಫ್ ಗುರುದೇವ್' ಟೀಸರ್‌ ಬಿಡುಗಡೆ ಮಾಡಿದ್ದಾರೆ. ಆಫೀಸರ್ ಗುರುದೇವ್ ಅಲಿಯಾಸ್ ಧನಂಜಯ್‌ ಅವರನ್ನು ಅಭಿನಂದಿಸಿ ತಮ್ಮ ಪೊಲೀಸ್ ಗ್ಯಾಂಗ್‌ಗೆ ಬರಮಾಡಿಕೊಂಡಿದ್ದಾರೆ.

ಆನಂದ್ ಆಡಿಯೋ ಚಾನೆಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಇದೇ ಮಾರ್ಚ್‌ 30ರಂದು ಬಿಡುಗಡೆ ಆಗಲಿದೆ. ನಟ ಧನಂಜಯ್‌ ಅವರ 25ನೇ ಸಿನಿಮಾ ಎಂಬ ವಿಶೇಷಣವೂ ಇದರ ಜತೆ ಕೂಡಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ನಟಿಸಿದರೆ, ಅಚ್ಯುತ್‌ ಕುಮಾರ್‌, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜಯ್.ಎನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ಛಾಯಾಗ್ರಾಹಕರಾಗಿದ್ಡಾರೆ. ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದ್ದು.

ಈ ಸಿನಿಮಾ ಸಂಬಂಧಿ ಸುದ್ದಿಗಳನ್ನೂ ಓದಿ..

Vani Jayaram: ವಾಣಿ ಜಯರಾಮ್‌ ಸಾವು ಸಹಜ ಸಾವಲ್ಲ!; ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಖಾಕಿ ಪಡೆ..

Singer Vani Jayaram Death: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಚೆನ್ನೈನ ತಮ್ಮ ನಿವಾಸದಲ್ಲಿ ಫೆ. 4ರಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಾಣಿ ಅವರ ತಲೆಗೆ ಗಾಯವಾಗಿತ್ತು. ಆ ಗಾಯದ ನೋವಿನಿಂದಲೇ ಅವರು ಸಾವನ್ನಪ್ಪಿರಬಹುದೇ ಎಂದು ಶಂಕಿಸಲಾಗಿದ್ದು, ಅಸಲಿ ಕಾರಣ ಇನ್ನೂ ಹೊರಬಿದ್ದಿಲ್ಲ. ಆದರೆ, ಈ ಸಾವಿನ ಕುರಿತು ಇದೀಗ ಬಗೆಬಗೆ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

100 Days of Gandhada Gudi: ಅಪ್ಪು ‘ಗಂಧದ ಗುಡಿ’ಗೆ ನೂರು ದಿನ; ಒಟಿಟಿ ರಿಲೀಸ್‌ ಯಾವಾಗ? ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹೊಸ ಪೋಸ್ಟ್‌..

100 Days of Gandhada Gudi: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪುನೀತ್‌ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ‘ಗಂಧದ ಗುಡಿ’ (Gandhada Gudi) ಬಿಡುಗಡೆ ಆಗಿ ನೂರು ದಿನವಾಯಿತು. ಅಕ್ಟೋಬರ್‌ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. ಈ ಕನಸಿನ ಪ್ರಾಜೆಕ್ಟ್‌ಅನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ನಿರ್ಮಿಸಿದ್ದರು. ಈಗ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ