ಕನ್ನಡ ಸುದ್ದಿ  /  ಮನರಂಜನೆ  /  ಕೊಲೆ ಕೇಸ್‌ನಲ್ಲಿ ದರ್ಶನ್‌ ಲಾಕ್‌ ಆಗ್ತಿದ್ದಂತೆ, ಅತ್ಯಾಪ್ತರೇ ನಾಪತ್ತೆ! ಸುಮಲತಾ ಅಂಬರೀಶ್, ಅಭಿಷೇಕ್‌, ವಿನೋದ್‌ ಪ್ರಭಾಕರ್‌ ಎಲ್ಲೋದ್ರು?‌

ಕೊಲೆ ಕೇಸ್‌ನಲ್ಲಿ ದರ್ಶನ್‌ ಲಾಕ್‌ ಆಗ್ತಿದ್ದಂತೆ, ಅತ್ಯಾಪ್ತರೇ ನಾಪತ್ತೆ! ಸುಮಲತಾ ಅಂಬರೀಶ್, ಅಭಿಷೇಕ್‌, ವಿನೋದ್‌ ಪ್ರಭಾಕರ್‌ ಎಲ್ಲೋದ್ರು?‌

ದರ್ಶನ್‌ ಜತೆಗೆ ಸದಾ ನಿಲ್ಲುತ್ತಿದ್ದ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಸದ್ಯಕ್ಕೆ ನಾಪತ್ತೆಯಾದಂತಿದೆ. ಅಂದರೆ, ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಲು ಅವರ್ಯಾರೂ ಇವರೆಗೂ ಮುಂದೆ ಬಂದಿಲ್ಲ. ಹಾಗಾದರೆ, ಆ ಅತ್ಯಾಪ್ತ ಸ್ನೇಹಿತರು ಯಾರು. ಇಲ್ಲಿದೆ ನೋಡಿ ಅವರ ಬಗೆಗಿನ ವಿವರ

ಕೊಲೆ ಕೇಸ್‌ನಲ್ಲಿ ದರ್ಶನ್‌ ಲಾಕ್‌ ಆಗ್ತಿದ್ದಂತೆ, ಅತ್ಯಾಪ್ತರೇ ನಾಪತ್ತೆ! ಸುಮಲತಾ ಅಂಬರೀಶ್, ಅಭಿಷೇಕ್‌, ವಿನೋದ್‌ ಪ್ರಭಾಕರ್‌ ಎಲ್ಲೋದ್ರು?‌
ಕೊಲೆ ಕೇಸ್‌ನಲ್ಲಿ ದರ್ಶನ್‌ ಲಾಕ್‌ ಆಗ್ತಿದ್ದಂತೆ, ಅತ್ಯಾಪ್ತರೇ ನಾಪತ್ತೆ! ಸುಮಲತಾ ಅಂಬರೀಶ್, ಅಭಿಷೇಕ್‌, ವಿನೋದ್‌ ಪ್ರಭಾಕರ್‌ ಎಲ್ಲೋದ್ರು?‌

Darshan arrest in murder case: ನಟ ದರ್ಶನ್‌ ಮತ್ತವರ ಆಪ್ತ ಬಳಗ ಸಣ್ಣದೇನಲ್ಲ. ಅವರ ಅಭಿಮಾನಿ ಬಳಗದಷ್ಟೇ ಆಪ್ತ ಬಳಗವೂ ಇದೆ. ಆದರೆ, ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಜೈಲು ಸೇರಿದ್ದೇ ತಡ, ಅತ್ಯಾಪ್ತ ವಲಯದ ಯಾರೋಬ್ಬರೂ ಅವರ ಬಗ್ಗೆ ತುಟಿ ಬಿಚ್ಚಿಲ್ಲ. ದರ್ಶನ್‌ ಅವರನ್ನು ಹತ್ತಿರದಿಂದ ನೋಡಿದ ಅಲ್ಲೊಬ್ಬರು ಇಲ್ಲೊಬ್ಬರು ಸೆಲೆಬ್ರಿಟಿಗಳು ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ, ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿದ್ದಾರೆ. ಆದರೆ, ದರ್ಶನ್‌ ಅಂದರೆ, ಅವರ ಜತೆ ಗುರುತಿಸಿಕೊಳ್ಳುವ ನಾಲ್ಕು ಪಿಲ್ಲರ್‌ಗಳು ಮಾತ್ರ ಕಾಣಿಸದೇ ಇರುವುದು ವಿಪರ್ಯಾಸ!

ಚಿತ್ರದುರ್ಗದ ರೇಣುಕಾಸ್ವಾಮಿ, ದರ್ಶನ್‌ ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯ ಸಂದೇಶ ಕಳಿಸಿದ್ದಷ್ಟೇ ಅಲ್ಲದೆ, ತನ್ನ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಮ್ಮಿ ಎಂದೂ ಅಶ್ಲೀಲ ಸಂದೇಶ ರವಾನಿಸಿದ್ದರು. ಈ ವಿಚಾರ ತಿಳಿದ ಪವಿತ್ರಾ ಗೌಡ, ಮನೆ ಕೆಲಸದವನ ಗಮನಕ್ಕೂ ತಂದಿದ್ದರು. ಅದಾದ ಬಳಿಕ ಅದು ದರ್ಶನ್‌ ಕಿವಿಗೂ ಬಿದ್ದಿತ್ತು. ಅದಾದ ಮೇಲೆ ನಡೆದಿದ್ದೇ ಘೋರ ದುರಂತ. ರೇಣುಕಾಸ್ವಾಮಿಯನ್ನು ಸಿನಿಮೀಯ ಶೈಲಿಯಲ್ಲಿ ಚಿತ್ರದುರ್ಗದಿಂದ ಅಪಹರಿಸಿಕೊಂಡು, ಪಟ್ಟಣಗೆರೆ ಶೆಡ್‌ಗೆ ಕರೆತಂದು ಚಿತ್ರಹಿಂಸೆ ಮಾಡಿ ಕೊಲ್ಲಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ದರ್ಶನ್‌ ಮತ್ತು ಗ್ಯಾಂಗ್‌ಗೆ ರೌಡಿಗಳ ನಂಟು

ಕೊಲೆ ಪ್ರಕರಣ ತಮ್ಮ ಮೇಲೆ ಬರಬಾರದು ಎಂದು ನಾಲ್ಕವರಿಗೆ ಆರೋಪ ಹೊರುವಂತೆಯೂ, ಶವವನ್ನು ರವಾನಿಸುವ ಜವಾಬ್ದಾರಿಯನ್ನೂ ದರ್ಶನ್‌ ನೀಡಿದ್ದರು. ಪ್ರತಿಯಾಗಿ 30 ಲಕ್ಷ ಹಣವನ್ನೂ ಅವರಿಗೆ ನೀಡಿದ್ದರು. ಆದರೆ, ಆ ಪ್ಲಾನ್‌ ಪ್ಲಾಪ್‌ ಆಯ್ತು! ಎಲ್ಲ 17 ಮಂದಿಯೂ ಆರೋಪಿ ಸ್ಥಾನದಲ್ಲಿ ಕಸ್ಟಡಿ ಸೇರಬೇಕಾಯ್ತು. ಇದೀಗ ವಿಚಾರಣೆ ಹಂತದಲ್ಲಿ ಸಾಕಷ್ಟು ಸಂಗತಿಗಳು ಬಯಲಿಗೆ ಬರುತ್ತಿವೆ. ಶಾಕ್‌ ಟ್ರೀಟ್‌ಮೆಂಟ್‌ ಕೊಟ್ಟು ಸಾಯಿಸಿದ ವಿಚಾರವೂ ಮುನ್ನೆಲೆಗೆ ಬಂದಿದೆ. ಆರೋಪಿಗಳ ಮೊಬೈಲ್‌ನಲ್ಲಿನ ಕಾಂಟಾಕ್ಟ್‌ ಡಿಟೇಲ್ಸ್‌ ಪರೀಕ್ಷಿಸಿದಾಗ ರೌಡಿಗಳ ನಂಟು ಇರುವ ವಿಚಾರವೂ ಪೊಲೀಸರಿಗೆ ಗೊತ್ತಾಗಿದೆ.

ತುಟಿ ಬಿಚ್ಚದ ಆಪ್ತ ಬಳಗ

ಇಷ್ಟೆಲ್ಲ ಬೆಳವಣಿಗೆಗಳಾದರೂ ದರ್ಶನ್‌ ಜತೆಗೆ ಸದಾ ನಿಲ್ಲುತ್ತಿದ್ದ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಸದ್ಯಕ್ಕೆ ನಾಪತ್ತೆಯಾದಂತಿದೆ. ಅಂದರೆ, ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಲು ಅವರ್ಯಾರೂ ಇವರೆಗೂ ಮುಂದೆ ಬಂದಿಲ್ಲ. ಹಾಗಾದರೆ, ಆ ಅತ್ಯಾಪ್ತ ಸ್ನೇಹಿತರು ಯಾರು. ಇಲ್ಲಿದೆ ನೋಡಿ ಅವರ ಬಗೆಗಿನ ವಿವರ

ಮದರ್‌ ಇಂಡಿಯಾ, ಬ್ರದರ್‌ ಎನಿಸಿಕೊಂಡವರು ಎಲ್ಲೋದ್ರು?

  • ಸುಮಲತಾ ಅಂಬರೀಶ್;‌ ನಟ ದರ್ಶನ್‌ ಸುಮಲತಾ ಅವರನ್ನು ಮದರ್‌ ಇಂಡಿಯಾ ಎಂದೇ ಕರೆಯುತ್ತಾರೆ. ಅವರೇ ನಮ್ಮ ಎರಡನೇ ತಾಯಿ ಎಂದೂ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇವನೇ ನಮ್ಮ ಮನೆಯ ಹಿರಿ ಮಗ ಎಂದೂ ಸುಮಲತಾ ಮಾತನಾಡಿದ್ದಾರೆ. ಆದರೆ, ಈ ಪ್ರಕರಣದ ಬಳಿಕ ಸುಮಲತಾ ತುಟಿ ಬಿಚ್ಚಿಲ್ಲ.
  • ಅಭಿಷೇಕ್‌ ಅಂಬರೀಶ್;‌ ದರ್ಶನ್‌ ಹಿಂದೆ ಸದಾ ಅಣ್ಣ ಅಣ್ಣ ಎಂದು ತಿರುಗುತ್ತಿದ್ದ ನಟ ಅಭಿಷೇಕ್‌ ಅಂಬರೀಶ್‌ ಸಹ ಮೌನಕ್ಕೆ ಜಾರಿದ್ದಾರೆ. ಸಿನಿಮಾ ಸೇರಿ ಏನೇ ಕಾರ್ಯಕ್ರಮ ಇದ್ದರೂ ದರ್ಶನ್‌ ಜತೆ ನಿಲ್ಲುತ್ತಿದ್ದ ಅಂಬಿ ಪುತ್ರ ಅಣ್ಣನ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದಾರೆ.
  • ವಿನೋದ್‌ ಪ್ರಭಾಕರ್:‌ ನಟ ವಿನೋದ್‌ ಪ್ರಭಾಕರ್‌ಗೂ ದರ್ಶನ್‌ಗೂ ಅವಿನಾಭಾವ ನಂಟು, ಖಳನಾಯಕರ ಮಕ್ಕಳು ಎಂಬ ವಿಶೇಷ ಬಾಂಡಿಂಗ್‌ ಈ ಜೋಡಿ ನಡುವೆ ಇದೆ. ಬ್ರದರ್‌ ಫ್ರಂ ಅನದರ್‌ ಮದರ್‌ ಎಂದು ಹಾಡು ಹೇಳಿ ಕೊಂಡಾಡುತ್ತಿದ್ದ ವಿನೋದ್‌, ಅದೇ ಬ್ರದರ್‌ ಬಗ್ಗೆ ಇನ್ನೂ ಮಾತನಾಡಿಲ್ಲ.
  • ಧನ್ವೀರ್‌ ಗೌಡ, ಯಶಸ್‌ ಸೂರ್ಯ: ನಟರಾದ ಧನ್ವೀರ್‌ ಗೌಡ ಮತ್ತು ಯಶಸ್‌ ಸೂರ್ಯ ಸಹ ಸದಾ ದರ್ಶನ್‌ ಜತೆಗೆ ಹೆಚ್ಚು ಗುರುತಿಸಿಕೊಂಡವರು. ಅವರ ಸಿನಿಮಾಗಳಿಗೆ ದರ್ಶನೇ ಮುಖ್ಯ ಅತಿಥಿ. ಪ್ರವಾಸ ಸುತ್ತಾಟದಲ್ಲೂ ಇವರುಗಳೇ ದರ್ಶನ್‌ಗೆ ಎಡಗೈ ಬಲಗೈ. ಆದರೆ, ಇದೀಗ ಅದೇ ದರ್ಶನ್‌ ಜೈಲು ಸೇರುತ್ತಿದ್ದಂತೆ, ಏನೂ ಮಾತನಾಡಿಲ್ಲ.