1 ಸಿನಿಮಾಕ್ಕೆ 300 ಕೋಟಿ ರೂ ಸಂಭಾವನೆ ಪಡೆದ ಭಾರತದ ದುಬಾರಿ ನಟ; ಶಾರೂಖ್, ಸಲ್ಮಾನ್, ಪ್ರಭಾಸ್, ರಜನಿಕಾಂತ್ ಅಲ್ಲ! ಸುಳಿವು- ಹೂವು
Highest-paid actor: ದಕ್ಷಿಣ ಭಾರತದ ಈ ನಟ ಒಂದೇ ಒಂದು ಸಿನಿಮಾದಲ್ಲಿ ನಟಿಸಿ 300 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಈ ಮೂಲಕ ಭಾರತದ ಸದ್ಯದ ಅತ್ಯಂತ ದುಬಾರಿ ನಟರಾಗಿ ಹೊರಹೊಮ್ಮಿದ್ದಾರೆ. ಇವರ ಹೆಸರು ಶಾರೂಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್, ರಜನಿಕಾಂತ್ ಅಲ್ಲ.
Highest paid actor in India: ಕೆಲವು ವರ್ಷಗಳ ಹಿಂದೆ ಸಿನಿಮಾವೊಂದು ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದರೆ ಅದು ದೊಡ್ಡ ಸಾಧನೆಯಾಗುತ್ತಿತ್ತು. ಆದರೆ, ಇದಾದ ಬಳಿಕ ಸಿನಿಮಾಗಳ ಬಜೆಟ್ 100 ಕೋಟಿ ರೂಪಾಯಿ ತಲುಪಿತು. ಇದಾದ ಬಳಿಕ ಸಿನಿಮಾದ ಬಜೆಟ್ ಇನ್ನಷ್ಟು ಹೆಚ್ಚಾಯಿತು. ಈಗ ಈ ಬಜೆಟ್ ಮೊತ್ತವನ್ನು ಸಿನಿಮಾದ ನಾಯಕನೇ ಸಂಭಾವನೆ ಪಡೆದರೆ ಅಚ್ಚರಿಯಾಗದು. ಭಾರತೀಯ ಸಿನಿಮಾ ನಟರ ಸಂಭಾವನೆ ಗಮನಾರ್ಹ, ಘಾತೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ ಲಭ್ಯವಿರುವ ವರದಿಗಳನ್ನು ನಂಬುವುದಾದರೆ ದಕ್ಷಿಣ ಭಾರತದ ನಟನೊಬ್ಬ ತನ್ನ ಒಂದೇ ಒಂದು ಚಿತ್ರಕ್ಕೆ 300 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರು ಯಾರೆಂದು ಗೊತ್ತಾಯ್ತ? ಸುಳಿವು- ಹೂವು. ಹೂವು ಅಂದರೆ ಪುಷ್ಪ. ಪುಷ್ಪ ಅಂದರೆ ಯಾರೆಂದು ಗೊತ್ತಾಯ್ತ?
1 ಸಿನಿಮಾಕ್ಕೆ 300 ಕೋಟಿ ಪಡೆದ ನಟ
ಟ್ರ್ಯಾಕ್ ಟಾಲಿವುಡ್ ವರದಿ ಪ್ರಕಾರ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಪುಷ್ 2 ದಿ ರೂಲ್ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 300 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಪುಷ್ಪ 2 ಸಿನಿಮಾ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ಪಡೆದ/ಪಡೆಯುವ ಸಂಭಾವನೆಯು ಜವಾನ್, ಕಂಗುವಾದಂತಹ ಬಿಗ್‌ಬಜೆಟ್ ಸಿನಿಮಾಗಳ ಬಜೆಟ್‌ನಷ್ಟೇ ಇರುವುದು ವಿಶೇಷ. ಈ ಮೂಲಕ ಅಲ್ಲು ಅರ್ಜುನ್ ಭಾರತದ ಅತ್ಯಧಿಕ ಸಂಭಾವನೆ ಪಡೆಯುವ ನಟರಾಗಿ ಹೊರಹೊಮ್ಮಿದ್ದಾರೆ.
ಅಂದಹಾಗೆ ಈ ತೆಲುಗು ನಟ ಗಳಿಕೆಯಲ್ಲಿ ರಜನಿಕಾಂತ್ ಅವರನ್ನೇ ಹಿಂದಿಕ್ಕಿದ್ದಾರೆ. ಜೈಲರ್ ಸಿನಿಮಾದಲ್ಲಿ ನಟಿಸಲು ರಜನಿಕಾಂತ್ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ವಿಜಯ್ ಕೂಡ ಲಿಯೋ ಸಿನಿಮಾಕ್ಕೆ ಸರಿಸುಮಾರು ಇಷ್ಟೇ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಬಾಲಿವುಡ್‌ನ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ತಮ್ಮ ಪ್ರಮುಖ ಸಿನಿಮಾಗಳಿಗೆ 150-250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇವೆಲ್ಲ ಪೂರ್ಣ ಪ್ರಮಾಣದ ಸಂಭಾವನೆ ಎನ್ನಲಾಗುವುದಿಲ್ಲ, ಸಿನಿಮಾದ ಪ್ರಾಫಿಟ್ ಸೇಲ್ ಅಗ್ರಿಮೆಂಟ್ ಪ್ರಕಾರ ಹೆಚ್ಚಿನ ಮೊತ್ತ ಪಡೆದಿರುತ್ತಾರೆ. ಸಿನಿಮಾ ಸೂಪರ್‌ಹಿಟ್ ಆದಾಗ ಪ್ರಾಫಿಟ್ ಸೇಲ್‌ನಲ್ಲಿ ಹೆಚ್ಚು ಮೊತ್ತ ಪಡೆದಿದ್ದರು. ವರದಿಗಳ ಪ್ರಕಾರ ದಂಗಲ್ ಸಿನಿಮಾದ ನಟನೆಯಿಂದ 2017ರಲ್ಲಿ ಅಮೀರ್ ಖಾನ್ ಅವರು 230 ಕೋಟಿ ರೂಪಾಯಿ ಗಳಿಕೆ ಮಾಡಿದ್ರಂತೆ.
ಅಲ್ಲು ಅರ್ಜನ್ ಇಷ್ಟು ಗಳಿಕೆ ಮಾಡಿರುವುದು ನಿಜವೇ?
ಅಲ್ಲು ಅರ್ಜುನ್ ಅವರು ಪುಷ್ಪ 2 ಸಿನಿಮಾದಲ್ಲಿ ನಟನೆಯಿಂದ ಇಷ್ಟು ಗಳಿಸಿದ್ದಾರೆ ಎನ್ನುವುದನ್ನು ನಂಬಲು ಸಾಕಷ್ಟು ಜನರು ರೆಡಿ ಇಲ್ಲ. ಆದರೆ, ಇಷ್ಟು ಗಳಿಕೆ ಮಾಡಬಹುದು ಎನ್ನುವವರೂ ಇದ್ದಾರೆ. ಪ್ರಭಾಸ್‌ನಂತೆ ಸಾಕಷ್ಟು ನಾಯಕರು ಈಗ ಹಲವು ಒಪ್ಪಂದಗಳನ್ನು ಮಾಡಿಕೊಂಡು ಹೆಚ್ಚು ಗಳಿಕೆ ಮಾಡುತ್ತಾರೆ. ಈ ರೀತಿ ಸಿನಿಮಾಕ್ಕೆ ಸಹಿ ಹಾಕುವಾಗ ವಿತರಣೆ ಹಕ್ಕಿನಲ್ಲಿ ಪಾಲು, ಸಿನಿಮಾದ ಲಾಭದಲ್ಲಿ ಪಾಲು... ಈ ರೀತಿಯ ಅಗ್ರಿಮೆಂಟ್ ಹಾಕಿಕೊಳ್ಳುತ್ತಾರೆ. ಇದೇ ರೀತಿಯಿಂದ ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ 230 ಕೋಟಿ ರೂಪಾಯಿ ಗಳಿಸಿದ್ದರು. ಈ ಸಿನಿಮಾ ಚೀನಾದಲ್ಲಿ ಸಖತ್ ಹಿಟ್ ಆಗಿತ್ತು.
ಪುಷ್ಪ 2 ಸಿನಿಮಾದ ಕುರಿತು
ಇದು ಸುಕುಮಾರ್ ನಿರ್ದೇಶನದ ಸಿನಿಮಾ. 2021ರ ಪ್ಯಾನ್ ಇಂಡಿಯಾ ಸೂಪರ್‌ಹಿಟ್ ಸಿನಿಮಾ ಪುಷ್ಪ ದಿ ರೈಸ್‌ನ ಮುಂದುವರೆದ ಭಾಗ. ಪುಷ್ಪ 2 ಸಿನಿಮಾವು ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.