ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ಹಂಸಾ ಡುಯೆಟ್; ನಕ್ಕು ನಕ್ಕು ಸುಸ್ತಾದ ಸ್ಪರ್ಧಿಗಳಿಗೆ ಸುದೀಪ್ ಹೇಳಿದ್ದೇನು ನೋಡಿ
ಜಗದೀಶ್ ಅವರು ಹಿಂದಿನ ವಾರ ಕ್ಯಾಪ್ಟನ್ ಆದ ಹಂಸಾ ಅವರಿಗೆ ಐ ಲವ್ ಯೂ ಎಂದು ಹೇಳಿದ್ದರು. ಆದರೆ ಅದಾದ ನಂತರ ಡುಯೆಟ್ ಕೂಡ ಹಾಡಿದ್ದಾರೆ. ತಮಾಷೆಗಾಗಿ ಅವರು ಮಾಡಿದ ಎಲ್ಲವನ್ನೂ ಜನ ಇಷ್ಟಪಡುತ್ತಿದ್ದಾರೆ. ಈ ಬಗ್ಗೆ ಇಂದಿನ ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಏನು ಹೇಳಿದ್ದಾರೆ ನೋಡಿ.
ಜಗದೀಶ್ ಅವರು ಹಿಂದಿನ ವಾರ ಕ್ಯಾಪ್ಟನ್ ಆದ ಹಂಸಾ ಅವರಿಗೆ ಐ ಲವ್ ಯೂ ಎಂದು ಹೇಳಿದ್ದರು. ಆದರೆ ಅದಾದ ನಂತರ ಡುಯೆಟ್ ಕೂಡ ಹಾಡಿದ್ದಾರೆ. ತಮಾಷೆಗಾಗಿ ಅವರು ಮಾಡಿದ ಎಲ್ಲವನ್ನೂ ಜನ ಇಷ್ಟಪಡುತ್ತಿದ್ದಾರೆ. ಈ ಬಗ್ಗೆ ಇಂದಿನ ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದಾರೆ. ಎಷ್ಟೋ ಜನ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ನಮಗೆ ಜಗದೀಶ್ ಇಷ್ಟ ಆಗ್ತಾ ಇರ್ಲಿಲ್ಲ. ಆದ್ರೆ ಈಗ ಅವರನ್ನು ನೋಡದೆ ಇರೋಕೆ ಆಗ್ತಾ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಒಂದು ದಿನ ಜಗದೀಶ್ ಹಾಗೂ ಹಂಸಾ ಅವರು ಮುಂಗಾರು ಮಳೆಯ ಹಾಡನ್ನು ಬಿಗ್ ಬಾಸ್ ಮನೆಯಲ್ಲಿ ಮರು ಸೃಷ್ಟಿ ಮಾಡಿದ್ದರು. ಆದರೆ ಅದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಜೋಡಿ ತುಂಬಾ ಸದ್ದು ಮಾಡಿತ್ತು. ಇನ್ನು ಸುದೀಪ್ ಅವರೂ ಸಹ ತಮ್ಮ ಪಂಚಾಯ್ತಿಯಲ್ಲಿ ಈ ವಿಚಾರವನ್ನು ಮಾತನಾಡಿದ್ದಾರೆ. “ಕ್ಯಾಪ್ಟನ್‌ಸಿಯಲ್ಲಿ ಏನೇನೆಲ್ಲಾ ಫೆಸಿಲಿಟಿ ಇತ್ತು” ಎಂದು ಸುದೀಪ್ ಕೇಳುತ್ತಾರೆ. ಅದಕ್ಕೆ ಜಗದೀಶ್ ಅವರು ನಗುತ್ತಾರೆ. ಇನ್ನು ಹಂಸಾ ಅವರು ಕೂಡ ನಗುತ್ತಾರೆ.
ಮನೆಯಲ್ಲಿರುವ ಎಲ್ಲರಿಗೂ ಈಗ ಕಿಚ್ಚ ಸುದೀಪ್ ಅವರು ಏನು ಕೇಳುತ್ತಿದ್ದಾರೆ ಎಂಬ ಬಗ್ಗೆ ಅಂದಾಜಾಗುತ್ತದೆ. ಆಗ ಭವ್ಯಾ ಗೌಡ ಹೇಳುತ್ತಾರೆ, “ಹಂಸ್ ಅಂದ ತಕ್ಷಣ ಇವರು ಬರಬೇಕಾಗಿತ್ತು” ಎಂದು. ಆಗ ಕಿಚ್ಚ ಸುದೀಪ್ ಹೇಳುತ್ತಾರೆ “ಬರ್ಬೇಕು ಅಲ್ಲ, ಬರ್ತಾ ಇದ್ರೂ” ಎಂದು. ಆಗ ಮನೆಯವರೆಲ್ಲ ನಗುತ್ತಾರೆ. ಕ್ಯಾಪ್ಟನ್ ಏನೇ ಬೇಜಾರಾದ್ರೆ ನನ್ ಜೊತೆ ಡುಯೆಟ್ ಹಾಡ್ತಿದ್ರು ಎಂದು ಜಗದೀಶ್ ಹೇಳ್ತಾರೆ.
“ಅವರತ್ರ ಜಗಳ ಮಾಡಿ ಗೆಲ್ಲೋಕಂತು ಸಾಧ್ಯ ಇಲ್ಲ. ಮನಸರು ಗೆದ್ರೆ ನನಗೆ ಸುಲಭ ಆಗಬಹುದು” ಎಂದು ಹಂಸ ಹೇಳ್ತಾರೆ. ಆ ಮಾತನ್ನು ಮತ್ತೆ ರಿಪೀಟ್ ಮಾಡಲು ಸುದೀಪ್ ಹೇಳುತ್ತಾರೆ. ಆಗ ಮತ್ತೆ ಎಲ್ಲರೂ ನಗುತ್ತಾರೆ. “ರಾತ್ರಿ ಮಲಗುವಾಗ ನಂಗೆ ಫೀಲ್ ಆಗ್ತಿದೆ. ನಾನು ನನ್ನ ಹೆಂಡತಿಯ ಜೊತೆ ಒಂದು ದಿನವೂ ಈ ರೀತಿ ಡುಯೆಟ್ ಹಾಡಿಲ್ಲ” ಎಂದು ಜಗದೀಶ್ ಹೇಳ್ತಾರಂತೆ. ಈ ಬಗ್ಗೆ ಧನರಾಜ್ ಮಾತನಾಡಿದ್ದಾರೆ. ಮುಂಗಾರು ಮಳೆ ಹಾಡನ್ನು ರೀ ಕ್ರಿಯೇಟ್ ಮಾಡಿದ ಬಗ್ಗೆ ಅಲ್ಲಿ ಮಾತುಕತೆಯಾಗುತ್ತದೆ. ನಂತರ ಮತ್ತೊಮ್ಮೆ ಜಗದೀಶ್ ಹಾಗೂ ಹಂಸಾ ಡಾನ್ಸ್ ಮಾಡುತ್ತಾರೆ.
ಈ ರೀತಿ ಡಾನ್ಸ್ ಮಾಡುವ ಸಂದರ್ಭದಲ್ಲಿ ಜಗದೀಶ್ ಅವರು ತುಂಬಾ ನಾಚಿಕೊಂಡಂತೆ ಕಾಣುತ್ತದೆ. ಒಟ್ಟಿನಲ್ಲಿ ತಮಾಷೆಗಾಗಿ ಮತ್ತು ತಮಾಷೆಯಾಗಿ ಇಂದಿನ ಎಪಿಸೋಡ್ ಇರಲಿದೆ ಎಂದು ಪ್ರೋಮೋದಲ್ಲಿ ಅನಿಸುತ್ತದೆ. ಹಾಗೇ ಯಾರು ನಾಮಿನೇಟ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ. ನಾಮಿನೇಷನ್ ಇಲ್ಲ ಎಂಬ ಗಾಳಿ ಮಾತೂ ಇದೆ.