Bigg Boss Kannada 10: ಅಕ್ಕನ ಬಟ್ಟೆ ಹಾಕ್ತಿದ್ದೆ, ಕಾಜಲ್‌ ಹಚ್ಚಿಕೊಳ್ತಿದ್ದೆ; ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೀತು ವನಜಾಕ್ಷಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 10: ಅಕ್ಕನ ಬಟ್ಟೆ ಹಾಕ್ತಿದ್ದೆ, ಕಾಜಲ್‌ ಹಚ್ಚಿಕೊಳ್ತಿದ್ದೆ; ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೀತು ವನಜಾಕ್ಷಿ

Bigg Boss Kannada 10: ಅಕ್ಕನ ಬಟ್ಟೆ ಹಾಕ್ತಿದ್ದೆ, ಕಾಜಲ್‌ ಹಚ್ಚಿಕೊಳ್ತಿದ್ದೆ; ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೀತು ವನಜಾಕ್ಷಿ

Bigg Boss Kannada 10: ತನ್ನಲ್ಲಿ ಹೆಣ್ಣಿನ ಭಾವನೆ ಬರುತ್ತಿದ್ದಂತೆ ನನಗೆ ಅಕ್ಕನ ಡ್ರೆಸ್‌ ಹಾಕಿಕೊಳ್ಳುತ್ತಿದ್ದೆ, ಕಾಜಲ್‌ ಹಚ್ಚಿಕೊಳ್ಳುತ್ತಿದ್ದೆ. ಪ್ಯಾಂಟ್‌ ಶರ್ಟ್‌ ಹಾಕಿಕೊಂಡರೆ ನಾನು ನಾನೇ ಅಲ್ಲ ಎನಿಸುತ್ತಿತ್ತು ಎಂದು ನೀತು ವನಜಾಕ್ಷಿ ಬಾಲ್ಯದ ದಿನಗಳನ್ನು ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ಬಿಗ್‌ ಬಾಸ್‌ ಸ್ಪರ್ಧಿ ನೀತು ವನಜಾಕ್ಷಿ
ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ಬಿಗ್‌ ಬಾಸ್‌ ಸ್ಪರ್ಧಿ ನೀತು ವನಜಾಕ್ಷಿ (PC: Colors Kannada)

Bigg Boss Kannada 10: ಬಿಗ್‌ಬಾಸ್‌ ಸೀಸನ್‌ 10 ಆರಂಭವಾಗಿ ಮೂರು ದಿನಗಳು ಕಳೆದಿವೆ. 2ನೇ ದಿನ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕೋಲ್ಡ್‌ ವಾರ್‌ ಶುರುವಾಗಿದೆ. ಒಬ್ಬರ ಬೆನ್ನ ಹಿಂದೆ ಮತ್ತೊಬ್ಬರು ಕಾಮೆಂಟ್‌ ಮಾಡುತ್ತಿದ್ದಾರೆ. ಮೊದಲ ವಾರದ ನಾಮಿನೇಶನ್‌ ಪ್ರಕ್ರಿಯೆ ಕೂಡಾ ಆರಂಭವಾಗಿದೆ. ಇದೇ ವಿಚಾರಕ್ಕೆ ಸಂಗೀತಾ ಶೃಂಗೇರಿ ಹಾಗೂ ವಿನಯ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ನೋವಿನ ದಿನಗಳನ್ನು ನೆನೆದ ನೀತು ವನಜಾಕ್ಷಿ

ಅನಾರೋಗ್ಯದ ಕಾರಣ ಹೇಳಿ ಬಹುತೇಕ ಎಲ್ಲಾ ಸ್ಪರ್ಧಿಗಳು ಸ್ನೇಕ್‌ ಶ್ಯಾಮ್‌ ಅವರನ್ನು ನಾಮಿನೇಟ್‌ ಮಾಡಿದರೆ, ಮನೆಗೆ ಬಂದಾಗಿನಿಂದ ನಮ್ಮೊಂದಿಗೆ ಬೆರೆತಿಲ್ಲ ಎಂಬ ಕಾರಣಕ್ಕೆ ನೀತು, ಮೈಕಲ್‌ನನ್ನು ಕೂಡಾ ಕೆಲವು ಸ್ಪರ್ಧಿಗಳು ನಾಮಿನೇಟ್‌ ಮಾಡಿದ್ದಾರೆ. ಲೇಡಿಸ್‌ ಟಾಯ್ಲೆಟ್‌ ಬಳಸಿ ಹಾಳು ಮಾಡಿದ ಶ್ಯಾಮ್‌ ಬಗ್ಗೆ ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆ ಟಾನ್ಸ್‌ಜೆಂಡರ್‌ ನೀತು ವನಜಾಕ್ಷಿ ಭಾಗ್ಯಶ್ರೀ ಹಾಗೂ ಸಿರಿ ಜೊತೆಗೆ ತಾವು ಬಾಲ್ಯದಲ್ಲಿ ಅನುಭವಿಸಿದ ಮಾನಸಿಕ ಹಿಂಸೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

7ನೇ ತರಗತಿಯಲ್ಲಿರುವಾಗಲೇ ಫೀಲಿಂಗ್ಸ್‌ ಇತ್ತು

ಡ್ರೆಸಿಂಗ್‌ ರೂಮ್‌ನಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿದ್ದ ನೀತು ಕುರಿತು ಸಿರಿ, ನಿಮ್ಮ ಬಗ್ಗೆ ಯಾವಾಗ ತಿಳಿಯಿತು ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ನೀತು, ನನಗೆ 7ನೇ ತರಗತಿಯಲ್ಲಿರುವಾಗಲೇ ಈ ಫೀಲಿಂಗ್ಸ್‌ ಇತ್ತು. ನಾನು ಹುಡುಗರಿಗಿಂತ ಹುಡುಗಿಯರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡುತ್ತಿದ್ದೆ. ಹಾಗೇ ಹುಡುಗರೆಡೆಗೆ ಬಹಳ ಆಕರ್ಷಿತಳಾಗುತ್ತಿದ್ದೆ. ನಾನು ಆಗ ನೋಡಲು ಬಹಳ ಸುಂದರವಾಗಿದ್ದೆ, ಎಷ್ಟೋ ಹುಡುಗಿಯರು ನನಗೆ ಸ್ಕೂಲ್‌, ಕಾಲೇಜು ದಿನಗಳಲ್ಲಿ ಪ್ರಪೋಸ್‌ ಮಾಡಿದ್ದರು. ಮೊದಲು ನಾನು ಗೇ ಎಂದುಕೊಂಡಿದ್ದೆ.

ಅಕ್ಕನ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ

ನನಗೆ ಅಕ್ಕ ಇದ್ದಾಳೆ. ನನ್ನಲ್ಲಿ ಹೆಣ್ಣಿನ ಭಾವನೆ ಆರಂಭವಾಗುತ್ತಿದ್ದಂತೆ ಅಕ್ಕನ ಡ್ರೆಸ್‌ ಹಾಕಿಕೊಳ್ಳುತ್ತಿದ್ದೆ, ಕಾಜಲ್‌ ಹಚ್ಚಿಕೊಳ್ಳುತ್ತಿದ್ದೆ. ಪ್ಯಾಂಟ್‌ ಶರ್ಟ್‌ ಹಾಕಿಕೊಂಡರೆ ನಾನು ನಾನೇ ಅಲ್ಲ ಎನಿಸುತ್ತಿತ್ತು. ನಾನು ನೋಡಲು ಆಕರ್ಷಕವಾಗಿ ಕಾಣಬೇಕೆಂದು ಬಯಸುತ್ತಿದ್ದೆ, ನನ್ನ ಭಾವನೆಗಳನ್ನು ಯಾರಿಗೂ ಹೇಳಿಕೊಳ್ಳಲು ಆಗದೆ ಬಹಳ ಅಳುತ್ತಿದ್ದೆ. ಎಂದು ನೀತು ಸಹ ಸ್ಪರ್ಧಿಗಳೊಂದಿಗೆ ಅಂದಿನ ದಿನವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಮುಖದ ಮೇಲಿನ ಕೂದಲನ್ನು ತೆಗೆಯಲು ಲೇಸರ್‌ ಟ್ರೀಟ್‌ಮೆಂಟ್‌ ಮಾಡಿಕೊಂಡಿರುವುದಾಗಿ ಕೂಡಾ ನೀತು ಹೇಳಿಕೊಂಡಿದ್ದಾರೆ.

ನೀತು , ಸ್ನೇಕ್‌ ಶ್ಯಾಮ್‌, ಸಿರಿ, ಮೈಕಲ್‌ ಅಜಯ್‌, ಸಂಗೀತಾ ಶೃಂಗೇರಿ, ತನಿಷಾ, ಡ್ರೋನ್‌ ಪ್ರತಾಪ್‌ ಈ ವಾರ ನಾಮಿನೇಟ್‌ ಆಗಿದ್ದು ಮೊದಲ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಕಾದು ನೋಡಬೇಕು.

ಬಿಗ್‌ ಬಾಸ್‌ ಕುರಿತ ಇನ್ನಷ್ಟು ಸ್ಟೋರಿಗಳಿದಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner