ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕಕ್ಕೆ ಹೋಗೋರ್ಯಾರು?-kannada television news chaitra kundapura to lawyer kn jagadish gold suresh bigg boss kannada season 11 contestants mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕಕ್ಕೆ ಹೋಗೋರ್ಯಾರು?

ಕಾಂಟ್ರವರ್ಸಿಗೆ ಕಿಚ್ಚು ಹಚ್ಚಿದ ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಇವರಿಬ್ಬರಲ್ಲಿ ಸ್ವರ್ಗಕ್ಕೆ ಯಾರು, ನರಕಕ್ಕೆ ಹೋಗೋರ್ಯಾರು?

Bigg boss Kannada Season 11 contestants: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕೆ ರಾಜಾ ರಾಣಿ ಗ್ರ್ಯಾಂಡ್‌ ಫಿನಾಲೆಯಲ್ಲಿ ತೆರೆಬಿದ್ದಿದೆ. ಈವರೆಗೂ ನಾಲ್ಕು ಹೆಸರುಗಳನ್ನು ಕಲರ್ಸ್‌ ಕನ್ನಡ ರಿವೀಲ್‌ ಮಾಡಿದೆ. ಹಾಗಾದರೆ, ಈ ನಾಲ್ವರು ಯಾರು? ಇಲ್ಲಿದೆ ನೋಡಿ.

ಈ ಮೂವರಲ್ಲಿ ಯಾರಿಗೆ ಸ್ವರ್ಗ, ಯಾರಿಗೆ ನರಕ?
ಈ ಮೂವರಲ್ಲಿ ಯಾರಿಗೆ ಸ್ವರ್ಗ, ಯಾರಿಗೆ ನರಕ?

Bigg Boss Kannada Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಶುರುವಿಗೆ ಇನ್ನೇನು ಹೆಚ್ಚು ಸಮಯ ಉಳಿದಿಲ್ಲ. ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಒಬ್ಬೊಬ್ಬ ಸ್ಪರ್ಧಿಯನ್ನು ಬಹಿರಂಗಗೊಳಿಸಲಾಗುತ್ತಿದೆ. ಆ ಪೈಕಿ ಈಗಾಗಲೇ ಸತ್ಯ ಸೀರಿಯಲ್‌ ನಟಿ ಗೌತಮಿ ಜಾಧವ್‌ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆ ಪ್ರವೇಶಿಸದಲಿದ್ದಾರೆ. ಆದರೆ, ಅವರು ಸ್ವರ್ಗಕ್ಕಾ? ಅಥವಾ ನರಕಕ್ಕಾ? ಎಂಬ ಕುತೂಹಲಕ್ಕೆ ಭಾನುವಾರ ಸಂಜೆ ವೇಳೆ ಗೊತ್ತಾಗಲಿದೆ. ಈಗ ಗೌತಮಿ ಬಳಿಕ ಇನ್ನೂ ಇಬ್ಬರು ಸ್ಪರ್ಧಿಗಳನ್ನು ರಿವೀಲ್‌ ಮಾಡಿದೆ ಕಲರ್ಸ್‌ ಕನ್ನಡ.

ಬಿಗ್‌ಬಾಸ್‌ಗೆ ಲಾಯರ್‌ ಜಗದೀಶ್‌

ಲಾಯರ್‌ ಕೆ. ಎನ್‌. ಜಗದೀಶ್‌ ತಮ್ಮ ಸೋಷಿಯಲ್‌ ಮೀಡಿಯಾ ಫೇಮ್‌ ಮೂಲಕವೇ ಬಿಗ್‌ ಬಾಸ್‌ ಮನೆಗೆ ಕಿಚ್ಚು ಹಚ್ಚಲಿದ್ದಾರೆ. ವಿವಾದಗಳ ಮೂಲಕವೇ ಇವರು ಹೆಚ್ಚು ಸದ್ದು ಮಾಡಿದವರು. ಕಳೆದ ವರ್ಷ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ್ರ ಯುವತಿ ಪರ ವಕಾಲತ್ತು ವಹಿಸಿದ್ದರು ಜಗದೀಶ್. ಹೀಗಿರುವಾಗಲೇ ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿದ್ದರು ಜಗದೀಶ್‌. ಈಗ ಅದೇ ಫೇಮ್‌ನೊಂದಿಗೆ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ.

ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ.. ಈ ಹೆಸರು ಕರಾವಳಿ ಭಾಗದವರಿಗೆ ಚೆನ್ನಾಗಿಯೇ ಗೊತ್ತು. ತಮ್ಮ ಖಡಕ್‌ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ತೆಕ್ಕಟ್ಟೆಯಲ್ಲಿ ಪಿಯುಸಿ ಮುಗಿಸಿ, ಕೊಣಾಜೆಯಲ್ಲಿ ಡಿಗ್ರಿ ಮುಗಿಸಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿ ಒಂದಷ್ಟು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದರು. ಅದಾದ ಬಳಿಕ ಉಡುಪಿಯ ಸ್ಪಂದನ ಟಿವಿಯಲ್ಲಿ ನಿರೂಪಕಿಯಾಗಿ, ಉದಯವಾಣಿ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ.

ಗೋಲ್ಡ್‌ ಸುರೇಶ್‌

ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಗೆ ಪ್ರವೇಶ ಪಡೆದಿದ್ದಾರೆ. ಉತ್ತರ ಕರ್ನಾಟಕ ಭಾಗದ ಗೋಲ್ಡ್‌ ಸುರೇಶ್‌, ಹೆಸರೇ ಹೇಳುವಂತೆ ಬಂಗಾರದ ಮನುಷ್ಯ! ಸದಾ ಮೈ ಮೇಲೆ 2 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್‌ ಧರಿಸಿ ಸುತ್ತಾಡುತ್ತಾರೆ. ಇವರ ಜತೆಗೆ ಸದಾ ಕಾಲ ನಾಲ್ಕೈದು ಜನ ಬೌನ್ಸರ್‌ಗಳು ಇದ್ದೇ ಇರುತ್ತಾರೆ. ಈಗ ಇದೇ ವ್ಯಕ್ತಿ ಬಿಗ್‌ಬಾಸ್‌ಗೆ ಆಗಮಿಸುತ್ತಿದ್ದಾರೆ. ಇವರು ಸ್ವರ್ಗಕ್ಕಾ, ನರಕಕ್ಕಾ? ಅದು ಭಾನುವಾರವೇ ಗೊತ್ತಾಗಲಿದೆ.

mysore-dasara_Entry_Point