ಕನ್ನಡ ಸುದ್ದಿ  /  ಮನರಂಜನೆ  /  ಅಡುಗೆ ಕೆಲಸದ ಇಂಟರ್‌ವ್ಯೂಗಾಗಿ ಸ್ಟಾರ್‌ ಹೋಟೆಲ್‌ಗೆ ಹೊರಟ ಭಾಗ್ಯಾ, ಅಮ್ಮನನ್ನು ಹಿಂಬಾಲಿಸಿದ ಮಕ್ಕಳು; ಭಾಗ್ಯಲಕ್ಷ್ಮೀ ಧಾರಾವಾಹಿ

ಅಡುಗೆ ಕೆಲಸದ ಇಂಟರ್‌ವ್ಯೂಗಾಗಿ ಸ್ಟಾರ್‌ ಹೋಟೆಲ್‌ಗೆ ಹೊರಟ ಭಾಗ್ಯಾ, ಅಮ್ಮನನ್ನು ಹಿಂಬಾಲಿಸಿದ ಮಕ್ಕಳು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 5ರ ಎಪಿಸೋಡ್‌; ಬ್ರೋಕರ್‌ ಸೂಚನೆಯಂತೆ ಭಾಗ್ಯಾ ಅಡುಗೆ ಕೆಲಸದ ಇಂಟರ್‌ವ್ಯೂಗೆ ಸ್ಟಾರ್‌ ಹೋಟೆಲ್‌ಗೆ ಇಂಟರ್‌ವ್ಯೂ ಹೋಗುತ್ತಾಳೆ. ತನ್ವಿ ಹಾಗೂ ತನ್ಮಯ್‌ ಅಮ್ಮನನ್ನು ಹಿಂಬಾಲಿಸುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಕೆಲಸದ ಬ್ರೋಕರ್‌ ಸೂಚನೆಯಂತೆ ಭಾಗ್ಯಾ ಹೋಟೆಲ್‌ವೊಂದಕ್ಕೆ ಅಡುಗೆ ಕೆಲಸಕ್ಕೆ ಇಂಟರ್‌ವ್ಯೂ ಹೊರಡುತ್ತಾಳೆ. ತಾನೂ ಕೆಲಸ ಹುಡುಕಲು ನಿರ್ಧರಿಸಿದ ಕುಸುಮಾ ಬ್ರೋಕರ್‌ ನಂಬರ್‌ ಪಡೆಯಲು ಭಾಗ್ಯಾ ಬಳಿ ಫೋನ್‌ ಕೊಡುವಂತೆ ಕೇಳುತ್ತಾಳೆ. ಅತ್ತೆಗೆ ತಿಳಿಯದಂತೆ ಇಂಟರ್‌ವ್ಯೂಗೆ ಹೋಗುತ್ತಿರುವ ಭಾಗ್ಯಾ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳುತ್ತಾಳೆ. ಆದರೆ ಆಕೆ ಫೋನ್‌ ನಂಬರ್‌ ಕೇಳಿದಾಗ ಎಲ್ಲಾ ಗೊತ್ತಾಗಿಬಿಡ್ತಾ ಎಂದು ಗಾಬರಿ ಆಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ದುಡ್ಡು ದೋಚುವ ಕಳ್ಳರು ಹೆಚ್ಚಾಗಿದ್ಧಾರೆ. ಒಮ್ಮೆ ಯಾರೋ ನಿಮ್ಮ ಮಾವನಿಗೆ ಕರೆ ಮಾಡಿ ಹಣ ಲಪಟಾಯಿಸಿದ್ದರು ನೆನಪಿದ್ಯಾ? ನಿನ್ನೆ ಕರೆ ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಬೇಕು ಅವನ ನಂಬರ್‌ ಕೊಡು ಎಂದು ಕುಸುಮಾ ಕೇಳುತ್ತಾಳೆ. ಭಾಗ್ಯಾ ವಿಧಿ ಇಲ್ಲದೆ ಅತ್ತೆಗೆ ಬ್ರೋಕರ್‌ ನಂಬರ್‌ ಕೊಡುತ್ತಾಳೆ. ಭಾಗ್ಯಾ ಗಡಿಬಿಡಿಯಿಂದ ಹೊರಗೆ ಹೋಗುವುದನ್ನು ನೋಡುವ ಮಕ್ಕಳು, ಅಮ್ಮ ನಮ್ಮಿಂದ ಏನೋ ಮುಚ್ಚಿಡುತ್ತಿದ್ದಾಳೆ. ಅವಳನ್ನು ಹಿಂಬಾಲಿಸಿದರೆ ಸತ್ಯ ಏನು ಗೊತ್ತಾಗುತ್ತದೆ, ನಡಿ ಅವಳ ಹಿಂದೆ ಹೋಗೋಣ ಎಂದು ಮಾತನಾಡಿಕೊಳ್ಳುತ್ತಾರೆ. ಅರ್ಧ ದಾರಿಗೆ ಬರುವ ಭಾಗ್ಯಾ ನಂತರ ಒಂದು ಆಟೋ ಹತ್ತುತ್ತಾಳೆ. ತನ್ವಿ ಹಾಗೂ ತನ್ಮಯ್‌ ಕೂಡಾ ಬಾಡಿಗೆ ಕೊಡಲು ದುಡ್ಡು ಇಲ್ಲದಿದ್ದರೂ ಆಟೋ ಹತ್ತಿ ಅಮ್ಮನನ್ನು ಹಿಂಬಾಲಿಸುತ್ತಾರೆ.

ಭಯ, ಮುಜುಗರದಿಂದಲೇ ಹೋಟೆಲ್‌ ಒಳಗೆ ಹೋಗುವ ಭಾಗ್ಯಾ

ಸ್ಟಾರ್‌ ಹೋಟೆಲ್‌ವೊಂದರ ಮುಂದೆ ಆಟೋ ನಿಲ್ಲುತ್ತದೆ. ಅಮ್ಮ ಇಲ್ಲಿಗೆ ಏಕೆ ಬಂದಿದ್ದಾಳೆ ಎಂದು ಮಕ್ಕಳಿಗೆ ಇನ್ನಷ್ಟು ಅನುಮಾನ ಕಾಡುತ್ತದೆ. ಆಟೋ ನಿಲ್ಲಿಸುತ್ತಿದ್ದಂತೆ ದುಡ್ಡೂ ಕೊಡದೇ ಒಳಗೆ ಓಡಿ ಹೋಗುತ್ತಾರೆ. ಅವರನ್ನು ಹಿಂಬಾಲಿಸುತ್ತಾ ಆಟೋ ಚಾಲಕ ಕೂಡಾ ಓಡಿ ಬರುತ್ತಾನೆ. ಭಾಗ್ಯಾ ಬ್ರೋಕರ್‌ಗೆ ಕರೆ ಮಾಡುತ್ತಾಳೆ. ನಾನು ಬರುವವರೆಗೂ ಅಲ್ಲೇ ಇರು ಎಂದು ಆತ ಹೇಳುತ್ತಾನೆ. ಸ್ಟಾರ್‌ ಹೋಟೆಲ್‌ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಭಾಗ್ಯಾಗೆ ಅರ್ಥವಾಗುವುದಿಲ್ಲ. ಆಕೆಯ ಪೆದ್ದುತನ ನೋಡಿ ಅಲ್ಲಿದ್ದವರೆಲ್ಲಾ ನಗುತ್ತಾರೆ. ಭಾಗ್ಯಾ ಮುಜುಗರದಿಂದಲೇ ಹೋಟೆಲ್‌ ಒಳಗೆ ಹೋಗುತ್ತಾಳೆ. ಇತ್ತ ಭಾಗ್ಯಾ ಮನೆಯಿಂದ ಹೊರಗೆ ಬರುತ್ತಿದ್ದಂತೆ ಯಾರಿಗೂ ತಿಳಿಯದಂತೆ ರೂಮ್‌ಗೆ ಬರುವ ಕುಸುಮಾ ಬ್ರೋಕರ್‌ಗೆ ಕರೆ ಮಾಡುತ್ತಾಳೆ.

ಆ ಧ್ವನಿ ಎಲ್ಲೋ ಕೇಳಿದ್ದೇನೆ ಎಂದು ಬ್ರೋಕರ್‌ಗೆ ಅನುಮಾನ ಉಂಟಾಗುತ್ತದೆ. ಆತನಿಗೆ ಬೈದದ್ದು ತಾನೇ ಎಂದು ತೋರಿಸಿಕೊಡದ ಕುಸುಮಾ, ನಾನು ಇದೇ ಮೊದಲ ಬಾರಿಗೆ ನಿಮಗೆ ಕರೆ ಮಾಡಿದ್ದು, ನನ್ನ ಧ್ವನಿ ಕೇಳಿರಲು ಸಾಧ್ಯವೇ ಇಲ್ಲ. ನನಗೆ ಚೆನ್ನಾಗಿ ಅಡುಗೆ ಮಾಡಲು ಬರುತ್ತದೆ, ನನಗೆ ಒಂದು ಕೆಲಸ ಕೊಡಿಸಿ ಎಂದು ಮನವಿ ಮಾಡುತ್ತಾಳೆ. ಇವತ್ತು ಎಲ್ಲರೂ ಅಡುಗೆ ಕೆಲಸ ಕೇಳಿಕೊಂಡೇ ಕರೆ ಮಾಡುತ್ತಿದ್ದಾರೆ. ವಿಚಾರಿಸಿ ಹೇಳುತ್ತೇನೆ ಎನ್ನುತ್ತಾನೆ. ಕುಸುಮಾಗೆ ಸ್ವಲ್ಪ ಸಮಾಧಾನವಾಗುತ್ತದೆ.

ಶ್ರೇಷ್ಠಾ ಮನೆಯಿಂದ ಬರುವಂತೆ ತಾಂಡವ್‌ ಪೂಜಾಗೆ ಆರ್ಡರ್‌

ಮತ್ತೊಂದೆಡೆ ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡಿ ಪೂಜಾ ನನ್ನ ಮನೆಗೆ ಬಂದಿರುವ ವಿಚಾರ ತಿಳಿಸುತ್ತಾಳೆ. ಶ್ರೇಷ್ಠಾಳಿಂದ ಫೋನ್‌ ಕಸಿದುಕೊಳ್ಳುವ ಪೂಜಾ ನಿನ್ನ ಕೈಲಿ ಏನು ಮಾಡೋಕೆ ಆಗುತ್ತೆ ಎಂದು ನನಗೆ ಚಾಲೆಂಜ್‌ ಮಾಡಿದ್ದೀರಿ, ಅದಕ್ಕೆ ಇಲ್ಲಿಗೆ ಬಂದಿದ್ದೇನೆ, ಈಗಾಗಲೇ ನಾನು ನಿಮ್ಮಿಬ್ಬರ ಹೆಸರಿನಲ್ಲಿ ಕಂಪ್ಲೇಂಟ್‌ ಬರೆದು ಇಟ್ಟಿದ್ದೇನೆ. ಒಂದು ವೇಳೆ ನೀವು ಮದುವೆ ಆದರೆ ನೀವು ಜೈಲಿಗೆ ಹೋಗುವುದು ಗ್ಯಾರಂಟಿ ಎನ್ನುತ್ತಾಳೆ. ಕೂಡಲೇ ಅಲ್ಲಿಂದ ಹೊರಟು ಬಾ ಎಂದು ತಾಂಡವ್‌ ಹೇಳುತ್ತಾನೆ. ನೀವು ಇವಳನ್ನು ಬಿಟ್ಟು, ನನ್ನ ಅಕ್ಕನೊಂದಿಗೆ ಇದ್ದರೆ ಬರುತ್ತೇನೆ ಎನ್ನುತ್ತಾಳೆ. ತಾಂಡವ್‌ ಪರಿಸ್ಥಿತಿ ಸದ್ಯಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಗಿದೆ.

ಬ್ರೋಕರ್‌ ತಾನು ಮಾತು ಕೊಟ್ಟಂತೆ ನಿಜವಾಗಿಯೂ ಭಾಗ್ಯಾಗೆ ಕೆಲಸ ಕೊಡಿಸುತ್ತಾನಾ? ಅಥವಾ ಬೇರೆ ಉದ್ದೇಶವಿದ್ಯಾ? ಕುಸುಮಾ ಕೂಡಾ ಇಂಟರ್‌ವ್ಯೂಗೆ ಹೋಗುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

IPL_Entry_Point