ನನ್ನ ಹೆಸರಿನಲ್ಲಿ ವಂಚನೆ ಜಾಲ ಸಕ್ರಿಯವಾಗಿದೆ, ಬಿ ಅಲರ್ಟ್! ಸೀತಾ ರಾಮ ನಟ ಗಗನ್ ಚಿನ್ನಪ್ಪ ಮನವಿ
ಸೀತಾ ರಾಮ ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಗಗನ್ ಚಿನ್ನಪ್ಪ ಹೆಸರಲ್ಲಿ ಹಣ ವಂಚಿಸುವ ಜಾಲ ಪತ್ತೆಯಾಗಿದೆ. ಈ ವಿಚಾರವನ್ನು ಸ್ವತಃ ಗಗನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Gagan Chinnappa: ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಸೀರಿಯಲ್ ಮೂಲಕ ನಾಡಿನ ಜನರ ಮನಗೆದ್ದ ನಟ ಗಗನ್ ಚಿನ್ನಪ್ಪ ಅಲಿಯಾಸ್ ಶ್ರೀರಾಮ. ಶ್ರೀಮಂತ ದೇಸಾಯಿ ಕುಟುಂಬದ ಮೊಮ್ಮಗನಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಗಗನ್ ಚಿನ್ನಪ್ಪ, ಈಗ ತಮ್ಮ ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗೆ ವಿಶೇಷ ಮನವಿ ಮಾಡಿದ್ದಾರೆ. ತಮ್ಮ ಹೆಸರಲ್ಲಿ ಹಣ ಹೇಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದರಲ್ಲೂ ಖ್ಯಾತನಾಮರ ಹೆಸರಲ್ಲಿ ಅದು ತುಸು ಜಾಸ್ತಿನೇ. ಇದೀಗ ನಟ ಗಗನ್ ಚಿನ್ನಪ್ಪ ಹೆಸರಿನಲ್ಲಿಯೂ ಜನರಿಂದ ಹಣ ಪೀಕಲು ಪ್ಲಾನ್ ಮಾಡಿದ್ದಾರೆ. ವಂಚಕರ ಆ ಪ್ಲಾನ್ ಗಗನ್ ಗಮನಕ್ಕೂ ಬಂದಿದ್ದು, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಗಗನ್ ಹೇಳಿದ್ದೇನು?
"ಹೆಲೋ ಎಲ್ಲರಿಗೂ.. ಯಾರೋ ಒಬ್ಬರು ನನ್ನ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಆ ಮೂಲಕ ನನ್ನ ಫಾಲೋವರ್ಸ್ ಬಳಿಯಿಂದ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ದಯಮಾಡಿ, ಆ ಐಡಿಯನ್ನು ರಿಪೋರ್ಟ್ ಮಾಡಿ. ಗೂಗಲ್ ಪೇ ನಂಬರ್ (09650889811) ಸಹ ನೀಡಿ ಹಣ ಹಾಕುವಂತೆ ಕೇಳುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಬಬ್ಬು ಖಾನ್, ಈತನ ವಂಚನೆ ನಿಮ್ಮ ಗಮನಕ್ಕೂ ಬಂದರೆ ಕೂಡಲೇ ರಿಪೋರ್ಟ್ ಮಾಡಿ" ಎಂದು ಮನವಿ ಮಾಡಿದ್ದಾರೆ.
ಕ್ಲಿಕ್ ಆಯ್ತು ಸೀತಾ ರಾಮ ಸೀರಿಯಲ್
ಜೀ ಕನ್ನಡದಲ್ಲಿ ರಾತ್ರಿ 9;30ಕ್ಕೆ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿ ಸದ್ಯ ಎಲ್ಲರ ಮೆಚ್ಚಿನ ಸೀರಿಯಲ್‌ಗಳಲ್ಲೊಂದು. ಸೀರಿಯಲ್‌ನ ಮುಖ್ಯ ಪಾತ್ರಧಾರಿಗಳಾದ ಸೀತಾ, ರಾಮ ಮತ್ತು ಸಿಹಿ ಸದ್ಯ ಎಲ್ಲರಿಗೂ ಇಷ್ಟವಾಗಿದ್ದಾರೆ. ವಾರದಿಂದ ವಾರಕ್ಕೆ ಟಿಆರ್‌ಪಿಯಲ್ಲಿಯೂ ಮುಂದಡಿ ಇಡುತ್ತಿದೆ ಈ ಧಾರಾವಾಹಿ. ಮೊನ್ನೆಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಇದ್ದರೆ, ಎರಡನೇ ಸ್ಥಾನದಲ್ಲಿ ಸೀತಾ ರಾಮ ಬಂದು ನಿಂತಿದ್ದಾನೆ. ಈ ಮೂಲಕ ಇನ್ನು ಕೆಲವೇ ವಾರಗಳಲ್ಲಿ ಮೊದಲ ಸ್ಥಾನವೂ ಖಚಿತ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ