ಕಾರ್ತಿಕ್ ಮಹೇಶ್ Bigg Boss ಟ್ರೋಫಿ ಗೆದ್ದಿರಬಹುದು, ಆದರೆ, ಡ್ರೋನ್ ಪ್ರತಾಪ್ ಜನರ ಮನಸ್ಸು ಗೆಲ್ತಿದ್ದಾರೆ; ಹೇಗೆ? ಇಲ್ಲಿದೆ ನೋಡಿ ಸಾಕ್ಷಿ
ಡ್ರೋನ್ ಪ್ರತಾಪ್ ಆಡಿದ ಮಾತಂತೆ ನಡೆದುಕೊಂಡು ಮಾದರಿಯಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ, ಬರ್ತ್‌ಡೇ ದಿನ ವಿಶೇಷ ಕೆಲಸ ಮಾಡಬೇಕು ಎಂದಿದ್ದ ಅವರು, ಆವತ್ತು ಹೇಳಿದಂತೆ ಆ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹಿರಿಯ ವೃದ್ಧೆಯೊಬ್ಬರಿಗೆ ಕಣ್ಣಿನ ಆಪರೇಷನ್‌ಗೆ ನೆರವಾಗಿದ್ದಾರೆ ಪ್ರತಾಪ್.
Drone Prathap: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಫಿನಾಲೆವರೆಗೂ ಬಂದು ಎಲ್ಲರ ಮನಸ್ಸು ಗೆದ್ದವರು ಡ್ರೋನ್ ಪ್ರತಾಪ್. ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುನ್ನ ಒಂದಷ್ಟು ಕಳಂಕ ಹೊತ್ತುಕೊಂಡೇ ಬಿಗ್ ಮನೆ ಪ್ರವೇಶಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹೊಗಳಿಕೆ ಬದಲು ತೆಗಳಿಕೆಯಿಂದಲೇ ವಿವಾದದ ಕೇಂದ್ರ ಬಿಂದುವಾಗಿದ್ದರು. ಆದರೆ, ಬಿಗ್ ಮನೆಯೊಳಗೆ ಹೋದ ಮೇಲೆ ತಮ್ಮ ಮೇಲಿನ ಅಪವಾದಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದರು. ಮಾತು, ನಡವಳಿಕೆಯಿಂದ ಹಿಡಿದು ನಾಡಿನ ಜನರ ಗಮನ ಸೆಳೆದರು. ಆವತ್ತು ದೊಡ್ಮನೆಯಲ್ಲಿ ಹೇಳಿದಂತೆಯೂ ನಡೆದುಕೊಳ್ಳುತ್ತಿದ್ದಾರೆ ಡ್ರೋನ್ ಪ್ರತಾಪ್.
ಹೌದು, ಬಿಗ್‌ಬಾಸ್‌ನಲ್ಲಿದ್ದಾಗ, ಈ ಸಲದ ಬರ್ತ್‌ಡೇಯನ್ನು ವಿಶೇಷವಾಗಿ ಆಚರಿಸಿಕೊಳ್ಳುವುದಾಗಿ ಡ್ರೋನ್ ಪ್ರತಾಪ್ ಹೇಳಿದ್ದರು. ರಾಜ್‌ಕುಮಾರ್ ಅವರ ನೇತ್ರದಾನದ ಆಶಯದಂತೆ, ಕೈಲಾದ ಮಟ್ಟಿಗೆ ಒಂದಷ್ಟು ಜನ ಬಡವರ ಕಣ್ಣಿನ ಆಪರೇಷನ್ ಮಾಡಿಸುವುದಾಗಿ ಎಂದು ಪ್ರತಾಪ್ ಮನದಾಳವನ್ನು ಬಿಚ್ಚಿಟ್ಟಿದ್ದರು. ಇದೀಗ ಆವತ್ತು ಹೇಳಿದಂತೆಯೇ ನಡೆದುಕೊಂಡಿದ್ದಾರೆ ಡ್ರೋನ್ ಪ್ರತಾಪ್. ಇತ್ತೀಚೆಗಷ್ಟೇ ಅಂದರೆ ಜೂನ್ 11ರಂದು ಬರ್ತ್‌ಡೇ ಆಚರಿಸಿಕೊಂಡಿರುವ ಪ್ರತಾಪ್, ಅಜ್ಜಿಯೊಬ್ಬರ ಕಣ್ಣಿನ ಆಪರೇಷನ್ ಮಾಡಿಸಿ, ಆಸರೆಯಾಗಿದ್ದಾರೆ. ಈ ವಿಡಿಯೋವನ್ನೂ ಶೇರ್ ಮಾಡಿದ್ದಾರೆ.
ಇನ್ನೊಬ್ಬ ಮೊಮ್ಮಗ ಸಿಕ್ಕ ಎಂದ ಅಜ್ಜಿ..
"ಹುಟ್ಟು ಹಬ್ಬದ ದಿನ ದುಡ್ಡನ್ನು ಎಲ್ಲೆಲ್ಲೋ ಖರ್ಚು ಮಾಡೋದಕ್ಕಿಂತ, ಕಣ್ಣು ಆಪರೇಷನ್ ಮಾಡಿಸ್ತೀನಿ ಅಂತ ಹೇಳಿದ್ದೆ. ಅದೇ ರೀತಿ ಮೊದಲನೇದಾಗಿ ಈ ಅಜ್ಜಿಯ ಕಣ್ಣಿನ ಆಪರೇಷನ್ ಮಾಡಿಸಿದ್ದೇನೆ. ಅಜ್ಜಿ ಕಣ್ಣಿನ ಆಪರೇಷನ್ ಆದಮೇಲೆ ಮನೆಗೆ ಕರೆದಿದ್ರು. ತುಂಬ ಪ್ರೀತಿಯಿಂದ ಒಳಗಡೆ ಕರೆದುಕೊಂಡು ಹೋದ್ರು. ಓಡಿಹೋಗಿ ಜ್ಯೂಸ್ ತಂದು ಕೊಟ್ಟರು" ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. "ಅಜ್ಜಿ ಈಗ ಕಣ್ಣು ಕಾಣಿಸ್ತಿದೆಯಾ? ಓಹ್.. ತುಂಬ ಚೆನ್ನಾಗಿ ಕಾಣಿಸ್ತಿದೆ. ಕ್ಲೀನಾಗಿ ಕಾಣಿಸ್ತಿದೆ. ಇದೇ ನನಗೆ ಸಿಕ್ಕ ದೊಡ್ಡ ಐಶ್ವರ್ಯಾ. ಇವತ್ತು ನಾನು ಕೋಟ್ಯಾಧಿಪತಿಯಾಗಿದ್ದೇನೆ. ನಾನು ಹೇಳಿದ್ನಲ್ಲ, ನನಗೆ ಒಬ್ಬ ಮೊಮ್ಮಗ ಇದ್ದಾನೆ. ಇದೀಗ ದೇವರು ಇನ್ನೊಬ್ಬ ಮೊಮ್ಮಗನನ್ನು ಕರುಣಿಸಿದ್ದಾನೆ" ಎಂದಿದ್ದಾರೆ ಅಜ್ಜಿ.
ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ..
"ಅಜ್ಜಿ ಕಥೆ ಕೇಳಿದೆ. ಒಬ್ಬಂಟಿಯಾಗಿಯೇ ಎಲ್ಲವನ್ನು ಮಾಡಿಕೊಂಡು ಹೋಗ್ತಿದ್ದಾರೆ. ನನಗೆ ಸಾಧ್ಯ ಆದ್ರೆ ಒಂದು ಮನೆ ಮಾಡಿಕೊಡ್ತಿನಿ. ಈ ಪರಿಸ್ಥಿತಿಯಲ್ಲಿ ನೀವಿರುವುದನ್ನು ನೋಡಲು ಆಗ್ತಿಲ್ಲ" ಎಂದೂ ಪ್ರತಾಪ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಅಜ್ಜಿ ದೇವರ ಮೇಲಿನ ಹೂವಿನ ಹಾರ ತೆಗೆದು ಪ್ರತಾಪ್‌ಗೆ ಕೊರಳಿಗೆ ಹಾಕಿ, ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಹಾರೈಸಿದ್ದಾರೆ. "ಹುಟ್ಟು ಹಬ್ಬದ ದಿನ ಎಲ್ಲೆಲ್ಲೋ ದುಡ್ಡನ್ನ ಖರ್ಚು ಮಾಡೋದಕ್ಕಿಂತ ಇಂಥ ಕೆಲಸ ಮಾಡಿ. ನನ್ನ ಹುಟ್ಟುಹಬ್ಬಕ್ಕೆ ನಾಣು ಮಾಡಿಸಿದ ಮೊದಲ ಕಣ್ಣಿನ ಆಪರೇಷನ್ ಇದು. ಈ ಆಪರೇಷನ್‌ಗೆ ಸಹಕಾರ ನೀಡಿದ ದೃಷ್ಟಿ ನೇತ್ರಾಲಯಕ್ಕೂ ಧನ್ಯವಾದಗಳು" ಎಂದಿದ್ದಾರೆ ಪ್ರತಾಪ್.
ಡ್ರೋನ್ ಕೆಲಸಕ್ಕೆ ಉಘೇ ಎಂದ ನೆಟ್ಟಿಗರು..
ಅಜ್ಜಿಯ ಕಣ್ಣಿನ ಆಪರೇಷನ್ ಮಾಡಿಸಿದ ವಿಡಿಯೋ ಶೇರ್ ಮಾಡುತ್ತಿದ್ದಂತೆ, ನೆಟ್ಟಿಗರು ಪ್ರತಾಪ್ ಕೆಲಸಕ್ಕೆ ಶಹಬ್ಬಾಷ್‌ಗಿರಿ ನೀಡುತ್ತಿದ್ದಾರೆ. ಮೆಚ್ಚುಗೆಯ ಸುರಿಮಳೆಯೇ ಸುರಿಸುತ್ತ ಬಗೆಬಗೆ ಕಾಮೆಂಟ್ ಹಾಕುತ್ತಿದ್ದಾರೆ. ಹೀಗಿವೆ ನೋಡಿ ಮೆಚ್ಚುಗೆ ಮಾತುಗಳು..
- ನಾವು ನಿಮಗೆ ವೋಟ್ ಹಾಕಿದ್ಕು ಸಾರ್ಥಕ ಅಯ್ತು ಪ್ರತಾಪ್..
- ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದಿರಬಹುದು ಆದರೆ ಡ್ರೋನ್ ಪ್ರತಾಪ್ ಕೋಟಿ ಜನರ ಮನಸನ್ನು ಗೆದ್ದಿದ್ದಾರೆ..
ಪ್ರತಾಪ್ ಜೊತೆ ಇದ್ದ ಎಲ್ಲಾ ಸೋ ಕಾಲ್ಡ್ ಸೆಲೆಬ್ರಿಟಿಗಳು ಒಂದೋ ಪಬ್ ಬಾರ್ ಅಂತ ಪಾರ್ಟಿ ಮಾಡ್ತಿದ್ದಾರೆ. ಇಲ್ಲಾ ರೀಲ್ ನಲ್ಲಿ ಡಾನ್ಸ್ ಮಾಡ್ಕೊಂಡು ಬೇಕಾ ಬಿಟ್ಟಿ ಇದ್ದಾರೆ.. ಆದ್ರೆ ನಿಜವಾದ ಮಾನವೀಯ ಸೆಲೆಬ್ರಿಟಿ ಆಗಿ ಬೆಳಿತಾರೋದು ಈ ಪ್ರತಾಪ್ ಮಾತ್ರಾ... ಬೆಳಿ ತಮ್ಮ.. ತುಂಬಾ ದೊಡ್ಡದ್ದಾಗಿ ಬೆಳಿ.. ಪ್ರೌಡ್ ಆಫ್ ಯೂ..
- ಆ ತಾಯಿ ಕಣ್ಣಲ್ಲಿ ಆನಂದ ಬಾಷ್ಪ ನೋಡಿ ಸಾಕು ಈ ಜೀವನ ಸಾರ್ಥಕ ಅನಿಸಿದೆ. ಒಳ್ಳೆದಾಗಲಿ
- ಬಿಗ್ ಬಾಸ್ ವೇದಿಕೆಯಲ್ಲಿ ನಿಮ್ಮಂತ ವ್ಯಕ್ತಿತ್ವಕ್ಕೆ ಗೆಲವು ಸಿಗಬೇಕಿತ್ತು
- ಪ್ರತಾಪ್.. ನೀವೇ ನಿಜವಾದ ಬಿಗ್ ಬಾಸ್.... ಕರ್ನಾಟಕದ ಜನತೆ ನಿಮಗೆ ವೋಟ್ ಮಾಡಿದ್ದು ಸಾರ್ಥಕ ಆಯ್ತು..
- ಒಬ್ಬ ಮನುಷ್ಯನ ಕೆಟ್ಟವರು ಅಂತ ಹೇಳೋದು ಸುಲಭ ಆದ್ರೆ ಅವರ ಒಳ್ಳೆತನನ ತಾಳ್ಮೆಯಿಂದ ನೋಡ್ಬೇಕು
ವಿಭಾಗ