ಸಂಜಯ್‌-ಮೇಘಾಗೆ ರಾಜಾ ರಾಣಿ 3 ವಿನ್ನರ್‌ ಪಟ್ಟ; ಗೆದ್ದ ಜೋಡಿಗೆ ಸಿಕ್ಕ ಬಹುಮಾನ ಏನು?-kannada television news sanjay megha won raja rani 3 best jodi crown what winner get as prize rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಂಜಯ್‌-ಮೇಘಾಗೆ ರಾಜಾ ರಾಣಿ 3 ವಿನ್ನರ್‌ ಪಟ್ಟ; ಗೆದ್ದ ಜೋಡಿಗೆ ಸಿಕ್ಕ ಬಹುಮಾನ ಏನು?

ಸಂಜಯ್‌-ಮೇಘಾಗೆ ರಾಜಾ ರಾಣಿ 3 ವಿನ್ನರ್‌ ಪಟ್ಟ; ಗೆದ್ದ ಜೋಡಿಗೆ ಸಿಕ್ಕ ಬಹುಮಾನ ಏನು?

ಶನಿವಾರ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ ರಾಜಾ ರಾಣಿ ರೀ ಲೋಡೆಡ್‌ ಕಾರ್ಯಕ್ರಮದಲ್ಲಿ ಸಂಜಯ್‌ ಹಾಗೂ ಮೇಘಾ ದಂಪತಿ ಈ ಬಾರಿಯ ವಿನ್ನರ್‌ ಆಗಿದ್ದಾರೆ. ಗೆದ್ದ ಜೋಡಿಗೆ 5 ಲಕ್ಷ ರೂ. ನಗದು ಹಣ ದೊರೆತಿದೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಸಂಜಯ್‌-ಮೇಘಾಗೆ ರಾಜಾ ರಾಣಿ 3 ವಿನ್ನರ್‌ ಪಟ್ಟ; ಗೆದ್ದ ಜೋಡಿಗೆ ಸಿಕ್ಕ ಬಹುಮಾನ ಏನು?
ಸಂಜಯ್‌-ಮೇಘಾಗೆ ರಾಜಾ ರಾಣಿ 3 ವಿನ್ನರ್‌ ಪಟ್ಟ; ಗೆದ್ದ ಜೋಡಿಗೆ ಸಿಕ್ಕ ಬಹುಮಾನ ಏನು? (PC: Jio Cinema)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಸೀಸನ್‌ 3ಶೋಗೆ ತೆರೆ ಬಿದ್ದಿದೆ. ಶನಿವಾರ ವಾಹಿನಿ ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆಯನ್ನು ಪ್ರಸಾರ ಮಾಡಿತ್ತು. ಫೈನಲ್‌ನಲ್ಲಿ 5 ಜೋಡಿ ಪರ್ಫಾಮ್‌ ಮಾಡಿದ್ದರು. ಕೊನೆಗೆ ಸಂಜಯ್‌ ಹಾಗೂ ಮೇಘಾ ಜೋಡಿ ಈ ಸೀಸನ್‌ ವಿನ್ನರ್‌ ಟ್ರೋಫಿ ಗೆದ್ದರು.

ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸಂಜಯ್

ಸಂಜಯ್‌ ಹಾಗೂ ಮೇಘಾ ಮೊದಲಿನಿಂದಲೂ ವೀಕ್ಷಕರ ಪ್ರೀತಿ ಗಳಿಸಿದ್ದರು. ಅದರಲ್ಲೂ ಸಂಜಯ್‌ಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ಈ ನಟ ರಾಣಿ ರಾಣಿ ಕಾರ್ಯಕ್ರಮದಲ್ಲಿ ಶರ್ಟ್‌ಲೆಟ್‌ ಸಂಜಯ್‌ ಅಂತಾನೇ ಫೇಮಸ್.‌ ಸಂಜಯ್‌ ಶರ್ಟ್‌ ಧರಿಸದೆ ಡ್ಯಾನ್ಸ್‌ ಮಾಡಿದಾಗಿನಿಂದ ಕೆಲವು ಹುಡುಗಿಯರು ಆತನಿಗೆ ಫಿದಾ ಅಗಿದ್ದರು. ಫೈನಲ್‌ ಕಾರ್ಯಕ್ರಮಕ್ಕೆ ಕೂಡಾ ಕೆಲವು ಯುವತಿಯರು ಬಂದು ಸಂಜಯ್‌ ಜೊತೆ ಡ್ಯಾನ್ಸ್‌ ಮಾಡಿ ಖುಷಿ ಪಟ್ಟರು. ಮೇಘಾ, ತನ್ನ ಪತಿಗೆ ಇದ್ದ ಅಭಿಮಾನ ಬಳಗ ಕಂಡು ಖುಷಿ ಆದರು. ಕಾರ್ಯಕ್ರಮದಲ್ಲಿ ಎಲ್ಲಾ ಜೋಡಿ ಓಪನಿಂಗ್‌ ಡ್ಯಾನ್ಸ್‌ ಫರ್ಮಾಮೆನ್ಸ್‌ ನೀಡಿದ್ದು ವೀಕ್ಷಕರಿಗೆ ಖುಷಿ ನೀಡಿತು. ಕೊನೆಗೆ ಇತರ ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಸಂಜಯ್‌ ಮೇಘ ಜೋಡಿ ಕಾರ್ಯಕ್ರಮದ ವಿನ್ನರ್‌ ಪಟ್ಟ ಗೆದ್ದರು.‌

ಅರ್ಜುನ್ ಯೋಗಿ ಹಾಗೂ ಸಾರಿಕಾ ರನ್ನರ್ ಅಪ್ ಸ್ಥಾನ

ಮೇಘ, ಇಷ್ಟ ದೇವತೆ, ನಾಗಿಣಿ 2, ಜೀವ ಹೂವಾಗಿದೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಂಜಯ್‌, ಮಹಾಕಾಳಿ, ವಾರಸ್ದಾರ, ಕ್ಷಮಾ, ಜೀವ ಹೂವಾಗಿದೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿನ್ನರ್‌ ಆದ ಈ ಜೋಡಿಗೆ 5 ಲಕ್ಷ ರೂ ನಗದು ಹಣ ಹಾಗೂ ವಿವಿಧ ಗಿಫ್ಟ್‌ ದೊರೆತಿದೆ. ಕಾರ್ಯಕ್ರಮದಲ್ಲಿ ಅರ್ಜುನ್ ಯೋಗಿ ಹಾಗೂ ಸಾರಿಕಾ ರನ್ನರ್ ಅಪ್ ಆಗಿದ್ದಾರೆ. ಪ್ರಿಯಾಂಕಾ ಕಾಮತ್ ಹಾಗೂ ಪತಿ ಅಮಿತ್‌ಗೆ 3ನೇ ಸ್ಥಾನ ದೊರೆತಿದೆ. ಸುಮಾರು 3 ತಿಂಗಳ ಹಿಂದೆ ಆರಂಭವಾಗಿದ್ದ ರಾಜಾ ರಾಣಿ ರೀ ಲೋಡೆಡ್‌ ಕಾರ್ಯಕ್ರಮ ವೀಕ್ಷಕರನ್ನು ರಂಜಿಸಿತ್ತು. ಈಗ ಫೈನಲ್‌ ಮುಗಿದಿದೆ. ಮುಂದಿನ ಸೀಸನ್‌ಗಾಗಿ ಕಿರುತೆರೆಪ್ರಿಯರು ಕಾಯುತ್ತಿದ್ದಾರೆ.

ಲೋಕೇಶ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮ

ಇದುವರೆಗೂ 3 ಸೀಸನ್‌ಗಳು ಯಶಸ್ಚಿಯಾಗಿದೆ. ಮೊದಲ ಸೀಸನ್‌ನಲ್ಲಿ ನೇಹಾಗೌಡ ಹಾಗೂ ಚಂದನ್‌ ಸೂಪರ್‌ ಜೋಡಿಯಾಗಿ ವಿನ್ನರ್‌ ಆಗಿದ್ದರು. ಇಶಿತಾ ವರ್ಷಾ, ಮುರುಗಾನಂದ ಮೊದಲ ರನ್ನರ್‌ ಅಪ್‌ ಆಗಿದ್ದರು. ಎರಡನೇ ಸೀಸನ್‌ನಲ್ಲಿ ಕಾವ್ಯಾ ಮಹಾದೇವ್‌ ಹಾಗೂ ಕುಮಾರ್‌ ಗೆದ್ದಿದ್ದರು. ಸುಂದರ್‌ ರಾಜ್‌ ಮತ್ತು ವೀಣಾ ಸುಂದರ್ ಮೊದಲ ರನ್ನರ್‌ ಅಪ್‌ ಆಗಿದ್ದರು. ಲೋಕೇಶ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಸೃಜನ್‌ ಲೋಕೇಶ್‌ ಹಾಗೂ ತಾರಾ ಅನುರಾಧಾ ಜಡ್ಜ್‌ಗಳಾಗಿದ್ದಾರೆ. ಈ ಬಾರಿ ಅದಿತಿ ಪ್ರಭುದೇವ ಹೊಸ ಜಡ್ಜ್‌‌ ಆಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅನುಪಮಾ ಗೌಡ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಶನಿವಾರದ ಫೈನಲ್‌ಗೆ ಅನು ಪ್ರಭಾಕರ್‌ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

mysore-dasara_Entry_Point