ಕಿರುತೆರೆಗೆ ಎಂಟ್ರಿ ಕೊಟ್ಟ ಲೀಲಮ್ಮನ ಮಗ ವಿನೋದ್‌ ರಾಜ್‌! DKD ಶೋಗೆ ಇವರೇ ಜಡ್ಜ್‌ ಆಗಬೇಕೆಂಬ ಒತ್ತಾಯ ಮತ್ತೆ ಶುರು
ಕನ್ನಡ ಸುದ್ದಿ  /  ಮನರಂಜನೆ  /  ಕಿರುತೆರೆಗೆ ಎಂಟ್ರಿ ಕೊಟ್ಟ ಲೀಲಮ್ಮನ ಮಗ ವಿನೋದ್‌ ರಾಜ್‌! Dkd ಶೋಗೆ ಇವರೇ ಜಡ್ಜ್‌ ಆಗಬೇಕೆಂಬ ಒತ್ತಾಯ ಮತ್ತೆ ಶುರು

ಕಿರುತೆರೆಗೆ ಎಂಟ್ರಿ ಕೊಟ್ಟ ಲೀಲಮ್ಮನ ಮಗ ವಿನೋದ್‌ ರಾಜ್‌! DKD ಶೋಗೆ ಇವರೇ ಜಡ್ಜ್‌ ಆಗಬೇಕೆಂಬ ಒತ್ತಾಯ ಮತ್ತೆ ಶುರು

ಜೀ ಕನ್ನಡದಲ್ಲಿ ಪ್ರಸಾರವಾಗುವ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ತೀರ್ಪುಗಾರರ ಸ್ಥಾನದಲ್ಲಿ ವಿನೋದ್‌ ರಾಜ್‌ ಬೇಕೇ ಬೇಕು ಎಂಬ ವೀಕ್ಷಕರ ಬೇಡಿಕೆ ನಿನ್ನೆ ಮೊನ್ನೆಯದಲ್ಲ. ಈಗ ಮಹಾನಟಿ ವೇದಿಕೆಗೆ ಅತಿಥಿಯಾಗಿ ವಿನೋದ್‌ ರಾಜ್‌ ಆಗಮಿಸಿದ್ದಾರೆ. ಹಾಗೆ ಅವರ ಎಂಟ್ರಿ ಆಗುತ್ತಿದ್ದಂತೆ, ಡಿಕೆಡಿ ಜಡ್ಜ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಕಿರುತೆರೆಗೆ ಎಂಟ್ರಿ ಕೊಟ್ಟ ಲೀಲಮ್ಮನ ಮಗ ವಿನೋದ್‌ ರಾಜ್‌! DKD ಶೋಗೆ ಇವರೇ ಜಡ್ಜ್‌ ಆಗಬೇಕೆಂಬ ಒತ್ತಾಯ ಮತ್ತೆ ಶುರು
ಕಿರುತೆರೆಗೆ ಎಂಟ್ರಿ ಕೊಟ್ಟ ಲೀಲಮ್ಮನ ಮಗ ವಿನೋದ್‌ ರಾಜ್‌! DKD ಶೋಗೆ ಇವರೇ ಜಡ್ಜ್‌ ಆಗಬೇಕೆಂಬ ಒತ್ತಾಯ ಮತ್ತೆ ಶುರು

Vinod Raj on Mahanati show: ಸ್ಯಾಂಡಲ್‌ವುಡ್‌ನ ಮೇರು ಕಲಾವಿದೆ ದಿ. ಲೀಲಾವತಿ ಅವರ ಪುತ್ರ ವಿನೋದ್‌ ರಾಜ್‌ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಇಷ್ಟು ದಿನ ಅಮ್ಮನ ಆರೈಕೆಯಲ್ಲಿಯೇ ಮುಳುಗಿದ್ದ ವಿನೋದ್‌ ರಾಜ್‌, ಅಮ್ಮನ ಅಗಲಿಕೆ ಬಳಿಕ ವಿಚಲಿತರಾಗಿದ್ದರು. ತಮ್ಮ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿಯೇ ಅಮ್ಮನ ಸಮಾಧಿಯನ್ನೂ ನಿರ್ಮಿಸಿ, ತಾಯಿಯ ಮಡಿಲಲ್ಲಿಯೇ ಕೃಷಿ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಜನ್ಮರಹಸ್ಯದ ವಿಚಾರವಾಗಿಯೂ ಸಾಕಷ್ಟು ಬಾರಿ ಸುದ್ದಿಯ ಮುನ್ನೆಲೆಗೆ ಬಂದಿದ್ದರು ವಿನೋದ್‌ ರಾಜ್.

ಈ ನಡುವೆ ಬಣ್ಣದ ಲೋಕದಿಂದ ದೂರ ಉಳಿದರೂ, ಇಲ್ಲಿನ ಆಪ್ತರ ಜತೆಗೆ ಅವರಿಗೆ ಒಡನಾಟವಿದೆ. ಇನ್ನೊಂದು ಕಡೆ, ನೀವ್ಯಾಕೆ ಮರಳಿ ಬಣ್ಣದ ಲೋಕಕ್ಕೆ ಬರಬಾರದು ಎಂದೂ ಸಾಕಷ್ಟು ಮಂದಿ ಕೋರಿದ್ದಾರೆ. ನಟನಾಗಿ ಮಾತ್ರವಲ್ಲದೆ, ಅತ್ಯುತ್ತಮ ಡಾನ್ಸರ್‌ ಆಗಿಯೂ ವಿನೋದ್‌ ರಾಜ್‌ ಗಮನ ಸೆಳೆದವರು. ಡಾನ್ಸ್‌ ರಾಜ ಡಾನ್ಸ್‌ ಸಿನಿಮಾ ಮೂಲಕ ತಮ್ಮ ನೃತ್ಯ ಪ್ರಾವಿಣ್ಯತೆ ತೋರಿದ್ದರು. ಇವರಲ್ಲೊಬ್ಬ ಅತ್ಯುತ್ತಮ ಡಾನ್ಸರ್‌ ಇದ್ದಾನೆ ಎಂಬ ವಿಚಾರವೂ ನಾಡಿಗೂ ಅಂದೇ ಪರಿಚಯವಾಗಿತ್ತು. ಆದರೆ, ಅದು ಮುಂದುವರಿಯದಿರುವುದು ಮಾತ್ರ ವಿಪರ್ಯಾಸ!

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಇದೇ ವಿನೋದ್‌ ರಾಜ್‌ ಅವರ ಬಗ್ಗೆ ಆಗಾಗ ಈ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ತೀರ್ಪುಗಾರರ ಸ್ಥಾನದಲ್ಲಿ ವಿನೋದ್‌ ರಾಜ್‌ ಅವರು ಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ವೀಕ್ಷಕರು. ಈ ಬೇಡಿಕೆ ಶುರುವಾಗಿಯೇ ಹಲವು ವರ್ಷಗಳೇ ಕಳೆದಿವೆ. ಇಂದಿಗೂ ಅದು ಈಡೇರಿಲ್ಲ. ಈಗ ಇದೇ ವಾಹಿನಿಯಲ್ಲಿ ಮಹಾನಟಿ ಶೋ ಶುರುವಾಗಿದೆ. ಈ ಶೋಗೆ ಅತಿಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ವಿನೋದ್‌ ರಾಜ್.‌

ಮಹಾನಟಿ ಶೋನಲ್ಲಿ ಈ ವಾರ ಕನ್ನಡ ಕಂಡ ಖ್ಯಾತ ನಟಿಯರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ನಡುವೆ ಲೀಲಾವತಿ ಅವರನ್ನೂ ಸ್ಮರಿಸಲಾಗಿದೆ. ಆ ನಿಮಿತ್ತ ವಿನೋದ್‌ ರಾಜ್‌ ಸಹ ಅತಿಥಿಯಾಗಿ ಆಗಮಿಸಿ ಮಹಾನಟಿ ವೇದಿಕೆ ಏರಿದ್ದಾರೆ. ನಿಮ್ಮ ಪಾಲಿನ ಮಹಾನಟಿ ಯಾರು ಎಂದು ಅನುಶ್ರೀ ಕೇಳುತ್ತಿದ್ದಂತೆ, ಜನ್ಮ ಕೊಟ್ಟವರು, ನನ್ನನ್ನು ಬೆಳೆಸಿದವರು ಆ ಮಹಾತಾಯಿಯೇ ನನ್ನ ಮಹಾನಟಿ ಎಂದಿದ್ದಾರೆ. ನಾನು ಹೊರಗಡೆ ಹೋದಾಗ, ಏ ವಿನು ಬಂದ್ನಾ ಎಂಬ ಮಾತು ಕೇಳುತ್ತಿತ್ತು. ಈಗ ಕೇಳೋಕೆ ಯಾರೂ ಇಲ್ಲ ಎಂದು ಕಣ್ಣೀರಾಗಿದ್ದಾರೆ.

ನನ್ನ ಡಾನ್ಸ್‌ ಕ್ಲಾಸ್‌ ಉದ್ಘಾಟಿಸಿದ್ದೇ ವಿನೋದ್‌ ಅಣ್ಣ

ಇದೇ ವೇಳೆ ಕಾಟೇರ ಸಿನಿಮಾ ಮೂಲಕ ಸದ್ಯ ಸುದ್ದಿಯಲ್ಲಿರುವ ನಿರ್ದೇಶಕ ತರುಣ್‌ ಸುಧೀರ್‌ ಸಹ ವಿನೋದ್‌ ರಾಜ್‌ ಜತೆಗಿನ ಹಳೇ ನಂಟು ಬಿಚ್ಚಿಟ್ಟಿದ್ದಾರೆ. ನಾನು ಆರಂಭದಲ್ಲಿ ಡಾನ್ಸ್‌ ಕ್ಲಾಸ್‌ ಓಪನ್‌ ಮಾಡಿದ್ದೆ. ಆ ಡಾನ್ಸ್‌ ಕ್ಲಾಸ್‌ ಉದ್ಘಾಟನೆ ಮಾಡಿದ್ದೇ ಅಣ್ಣ ವಿನೋದ್‌ ರಾಜ್‌ ಎಂದಿದ್ದಾರೆ. ಹೀಗೆ ವಿನೋದ್‌ ರಾಜ್‌ ಅವರ ಈ ಕಿರು ಝಲಕ್‌ನ ಪ್ರೋಮೋ ನೋಡಿದ ವೀಕ್ಷಕರು, ಬಗೆಬಗೆ ಕಾಮೆಂಟ್‌ ಮೂಲಕ ಅವರನ್ನು ಮರಳಿ ಕಿರುತೆರೆಗೆ ಕರೆತನ್ನಿ ಎಂದು ಬೇಡಿಕೆ ಇಡುತ್ತಿದ್ದಾರೆ. ಈ ಸಲದ DKDಗೆ ಅವರೇ ತೀರ್ಪುಗಾರರಾಗಬೇಕು ಎನ್ನುತ್ತಿದ್ದಾರೆ.

DKDಗೆ ವಿನೋದ್‌ ರಾಜ್‌ ಜಡ್ಜ್‌ ಆಗಬೇಕು..

ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ತೀರ್ಪುಗಾರರ ಸೀಟ್‌ನಲ್ಲಿ ವಿನೋದ್‌ ರಾಜ್‌ ಅವರನ್ನೂ ನೋಡಬೇಕು ಎಂದು ಸಾಕಷ್ಟು ಮಂದಿಯ ಆಸೆ. ಆದರೆ, ಅದಿನ್ನೂ ಈಡೇರಿಲ್ಲ. ಜೀ ಕನ್ನಡದ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಆಗಾಗ ಚರ್ಚೆ ನಡೆದರೂ ಅದು ಫಲಪ್ರದವಾಗಿಲ್ಲ. ಇದೀಗ ಮಹಾನಟಿ ಶೋನ ವಿನೋದ್‌ ರಾಜ್‌ ಅವರ ಪ್ರೋಮೋಕ್ಕೆ ನೂರಾರು ಕಾಮೆಂಟ್‌ಗಳು ಹರಿದುಬಂದಿವೆ.

ಕನ್ನಡ ಬರದೇ ಇರೋ ನಾನ್‌ಸೆನ್ಸ್‌ಗಳು ಬೇಡ..

"Dkdಗೆ ದಯವಿಟ್ಟು ಜಡ್ಜ್ ಆಗಿ ವಿನೋದ್ ರಾಜ್ ಅವರನ್ನ ಕರೆಸಿ" ಎನ್ನುತ್ತಿದ್ದಾರೆ. "ಫಿಲಂ ಇಂಡಸ್ಟ್ರಿಯಲ್ಲಿ ನಿಜವಾದ ಡಾನ್ಸರ್‌ ಅಂದ್ರೆ ವಿನೋದ್‌ ರಾಜ್‌ ಮತ್ತು ಶಶಿ ಕುಮಾರ್‌", "ದಯವಿಟ್ಟು ಡಿಕೆಡಿ ಮುಂದಿನ ಸೀಸನ್‌ಗೆ ಇವರನ್ನ ಮುಖ್ಯ ತೀರ್ಪುಗಾರರಾಗಿ ಮಾಡಿ ಇಂಥ ಮಹಾನ್ ಕಲಾವಿದನ ಕೈ ಬಿಡಬೇಡಿ", "ಇಷ್ಟು ವರ್ಷದಲ್ಲಿ ಇವಾಗಾದರೂ ವಿನೋದ್ ರಾಜ್ ಅಂತ ಒಬ್ಬ ನಟ ಇದ್ದಾರೆ ಅನ್ನೋದು ಈ ಟಿವಿ ಚಾನಲ್ ಅವರಿಗೆ ಗೊತ್ತಾಯಿತ್ತಲ್ಲ... ಅತಿಥಿ ಆಗಿ ಅಲ್ಲ ಜಡ್ಜ್ ಆಗಿ ಕರೆಯಿರಿ", "ಅಂತೂ ಇಂತೂ ಈಗಲಾದರೂ ಕರೆಸಿದ್ರಲ್ಲ ಸಾಕು, ಮುಂದೆ DKDಗೆ ಇವರನ್ನ ಜಡ್ಜ್‌ ಆಗಿ ಮಾಡ್ರಿ, ಅದನ್ನ ಬಿಟ್ಟು ಏನು ನಾಲೆಜ್ಡ್‌ ಇಲ್ದೆ ಇರೋ ಕನ್ನಡನೆ ಮಾತಾಡದೆ ಇರೋ ನಾನ್‌ಸೆನ್ಸ್‌ಗಳಿಗೆ ಕೊಡಬೇಡಿ" ಎಂದು ಬೇಡಿಕೆ ಇಡುತ್ತಿದ್ದಾರೆ.

Whats_app_banner