ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಜಯಂತನಿಗೆ ಮರುಕಳಿಸಿತೆ ಹಳೇ ನೆನಪು?; ಅನಾಥ ವೆಂಕಿಗೂ ಸೈಕೋಗೂ ಇದೆ ಬಾಲ್ಯದ ಸಂಬಂಧ!

Lakshmi nivasa Serial: ಜಯಂತನಿಗೆ ಮರುಕಳಿಸಿತೆ ಹಳೇ ನೆನಪು?; ಅನಾಥ ವೆಂಕಿಗೂ ಸೈಕೋಗೂ ಇದೆ ಬಾಲ್ಯದ ಸಂಬಂಧ!

ಸೈಕೋ ಜಯಂತ ಮತ್ತು ಅನಾಥ ವೆಂಕಿಗೂ ಹಳೇ ಸಂಬಂಧ ಇದೆಯಾ? ಹೀಗೊಂದು ಪ್ರಶ್ನೆ ಹುಟ್ಟುಹಾಕಿದೆ, ಶುಕ್ರವಾರದ ಸಂಚಿಕೆ. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

Lakshmi nivasa Serial: ಜಯಂತನಿಗೆ ಮರುಕಳಿಸಿತೆ ಹಳೇ ನೆನಪು?; ಅನಾಥ ವೆಂಕಿಗೂ ಸೈಕೋಗೂ ಇದೆ ಬಾಲ್ಯದ ಸಂಬಂಧ!
Lakshmi nivasa Serial: ಜಯಂತನಿಗೆ ಮರುಕಳಿಸಿತೆ ಹಳೇ ನೆನಪು?; ಅನಾಥ ವೆಂಕಿಗೂ ಸೈಕೋಗೂ ಇದೆ ಬಾಲ್ಯದ ಸಂಬಂಧ!

Lakshmi nivasa Serial: ಯುಗಾದಿ ಸಂಭ್ರಮದಲ್ಲಿ ಅತ್ತೆ ಮನೆಯಲ್ಲಿಯೇ ಒಂದು ದಿನ ಕಳೆದಿದ್ದಾನೆ ಜಯಂತ್.‌ ಮನೆ ಮಂದಿಗೆಲ್ಲ ಹೊಸ ಬಟ್ಟೆಯನ್ನು ಉಡುಗೊರೆಯಾಗಿಯೂ ನೀಡಿದ್ದಾನೆ ಜಯಂತ್.‌ ಈ ನಡುವೆ ಯುಗಾದಿ ನಿಮಿತ್ತ ಪತಿ ಜಯಂತನಿಗೆ ಎಣ್ಣೆ ಸ್ನಾನ ಮಾಡಿಸಿದ್ದಾಳೆ ಜಾಹ್ನವಿ. ಹಬ್ಬದೂಟವನ್ನೂ ಮಾಡಿ, ಕೂಡು ಕುಟುಂಬದಲ್ಲಿ ಮೊದಲ ಯುಗಾದಿ ಆಚರಿಸಿದ್ದಾನೆ ಜಯಂತ್.‌ ಅಷ್ಟೇ ಅಲ್ಲ ತನ್ನ ಮನೆಯಲ್ಲಷ್ಟೇ ಅಲ್ಲ, ಅತ್ತೆ ಮನೆಯಲ್ಲೂ ತನ್ನ ಸೈಕೋ ಬುದ್ಧಿ ತೋರಿಸಿದ್ದಾನೆ. ಈ ನಡುವೆ ಯುಗಾದಿ ದಿನವೇ ಹೊಸ ಹೊಸ ಟ್ವಿಸ್ಟ್‌ಗಳೂ ಈ ಸೀರಿಯಲ್‌ನಲ್ಲಿ ನೋಡುಗನ ಕಣ್ಣೀಗೆ ಬೀಳುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಪತ್ನಿ ಮಾತಿಗೆ ಜಯಂತನ ಕಳ್ಳಗಿವಿ

ಅಕ್ಕನ ಬಳಿ ಮಲಗ್ತೀನಿ ಎಂದು ಜಾಹ್ನವಿ, ಜಯಂತ್‌ ಬಳಿ ಕೇಳಿದ್ದಾಳೆ. ಅದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ್ದಾನೆ. ಜಾಹ್ನವಿ ಅಕ್ಕನ ಕೋಣೆಗೆ ಹೋಗುತ್ತಿದ್ದಂತೆ, ಇವಳು ಅತ್ತೆ ಮಾವನ ಹತ್ತಿರವೋ ಅಥವಾ ಇವರ ಅಕ್ಕನ ಹತ್ತಿರವೋ ನಮ್ಮ ಮನೆಯ ವಿಷ್ಯಾ ಹೇಳಿಬಿಟ್ರೆ? ಆ ಮನೆಯಲ್ಲಿ ಒಂಟಿಯಾಗಿ ನಾನೊಬ್ಬಳೇ ಇರ್ತಿನಿ, ಬಾಗಿಲು ಕ್ಲೋಸ್‌ ಮಾಡಿಕೊಂಡೇ ಹೋಗ್ತಾರೆ. ಆ ಮನೆಯಲ್ಲಿ ಬೇರೆ ಯಾರೂ ಇರೋದೇ ಇಲ್ಲ ಎಂದರೆ ಖಂಡಿತ ಎಲ್ಲರೊಗೂ ಅನುಮಾನ ಬರುತ್ತೆ ಎಂದು ತನ್ನನ್ನು ತಾನೇ ಪ್ರಶ್ನೆಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಬಾಗಿಲು ಬಳಿ ನಿಂತು ಜಾಹ್ನವಿಯ ಮಾತುಗಳನ್ನು ಕಳ್ಳಗಿವಿಯಿಂದ ಕೇಳಿಸಿಕೊಂಡಿದ್ದಾನೆ.

ಅಮ್ಮನಿಗೆ ಮೊದಲ ಸಂಬಳ ನೀಡಿದ ವೆಂಕಿ

ಬೆಳಗಾಗಿದೆ. ಮರಳಿ ಮನೆಯತ್ತ ಹೊರಡಲು ಜಯಂತ್‌ ರೆಡಿಯಾಗಿದ್ದಾನೆ. ಜಾಹ್ನವಿಯೂ ಹೊರಟು ನಿಂತಿದ್ದಾಳೆ. ಇತ್ತ ಎಲ್ಲರೆದುರು ತನ್ನ ಮೊದಲ ಸಂಬಳವನ್ನು ಅಮ್ಮ ಲಕ್ಷ್ಮೀ ಕೈಗೆ ನೀಡಿದ್ದಾನೆ ವೆಂಕಿ. 12 ಸಾವಿರ ನೀಡಿ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾನೆ. ಇದಾದ ಬಳಿಕ ಜಯಂತ್‌ ಮತ್ತು ಜಾಹ್ನವಿ ಮನೆಯತ್ತ ಹೊರಟು ನಿಂತಿದ್ದಾರೆ. ಹಬ್ಬಕ್ಕಷ್ಟೇ ಅಲ್ಲದೇ ಇದ್ದರೂ ಆಗಾಗ ಮನೆಗೆ ಬರ್ತಿರಿ ಎಂದು ಅಳಿಯಂದಿರಿಗೆ ಹೇಳಿದ್ದಾಳೆ ಲಕ್ಷ್ಮೀ. ಖಂಡಿತ ಬರ್ತೀವಿ ಎಂದು ಹೇಳಿ ಕಾರ್‌ ಏರಿ ಹೊರಟಿದ್ದಾರೆ.

ಮರಳಿ ಗಂಡನ ಮನೆಗೆ ಜಾಹ್ನವಿ

ಇನ್ನೊಂದು ಕಡೆ ಇವರು ಹೋಗುತ್ತಿದ್ದಂತೆ, ಜಾಹ್ನವಿಗೆ ಏನೋ ಕೊಡಲೆಂದು ಡಬ್ಬ ಹಿಡಿದು ಓಡಿ ಬಂದಿದ್ದಾನೆ. ಅಷ್ಟರಲ್ಲಿ ಜಾಹ್ನವಿ ಕಾರ್‌ ಏರಿ ಹೊರಟಿದ್ದಾಳೆ. ಅದನ್ನೇ ಹಿಂಬಾಲಿಸಿ ಓಡೋಡಿ ಬಂದಿದ್ದಾನೆ ವೆಂಕಿ. ಅಷ್ಟೇ ಅಲ್ಲ ಕಾರ್‌ ಅಡ್ಡಗಟ್ಟಿ, ಜಯಂತನಿಗೂ ಗಾಬರಿ ತರಿಸಿದ್ದಾನೆ. ಕಾರ್‌ ಕಿಟಕಿ ಬಳಿ ಬಂದು ಜಾಹ್ನವಿ ಕೈಗೆ ಡಬ್ಬ ಕೊಟ್ಟಿದ್ದಾನೆ. ಏನಿದು ಎಂದು ಜಾಹ್ನವಿ ಪ್ರಶ್ನೆ ಮಾಡಿದ್ದಾಳೆ. ಡಬ್ಬ ತೆರೆದು ನೋಡಿದರೆ ಅದರಲ್ಲಿ ಗಿಣ್ಣು ಇದೆ. ನಿನಗೆ ಇಷ್ಟ ಅಂತ ತಂದೆ ಎಂದು ಸನ್ನೆಯಲ್ಲಿಯೇ ಹೇಳಿ ಖುಷಿಪಟ್ಟಿದ್ದಾನೆ ವೆಂಕಿ.

ಪ್ಲಾಷ್‌ಬ್ಯಾಕ್‌ಗೆ ಮರಳಿದ ಜಯಂತ್

ವೆಂಕಿ ಹೀಗೆ ಕಾರ್‌ ಅಡ್ಡಗಟ್ಟಿದ್ದಕ್ಕೆ ಜಯಂತ್‌ಗೆ ಕೊಂಚ ಟೆನ್ಷನ್‌ ಆಗಿದೆ. ತಂಗಿಗೆ ಗಿಣ್ಣು ಕೊಟ್ಟಿದ್ದೇ ತಡ, ಜಯಂತ್‌ನ ತಲೆಯಲ್ಲಿ ನೂರೆಂಟು ವಿಚಾರಗಳು ಓಡಾಡಲು ಶುರುವಾಗಿದೆ. ಹಳೇ ನೆನಪುಗಳಿಗೆ ಜಾರಿದ್ದಾನೆ. ಬಾಲ್ಯದ ದಿನಗಳತ್ತ ಹೊರಳಿದ್ದಾನೆ. ಬಾಲ್ಯದಲ್ಲಿ ತಾನೂ ಅಣ್ಣನೋ ಸ್ನೇಹಿತನೋ ಗಿಣ್ಣು ತಿನಿಸಿದ ನೆನಪಾಗಿದೆ. ಹಾಗಾದ್ರೆ, ವೆಂಕಿಗೂ ಜಯಂತನಿಗೂ ಸಂಬಂಧ ಇದೆಯಾ? ಇಬ್ಬರೂ ಅಣ್ಣ ತಮ್ಮಂದಿರಾ ಅಥವಾ ಸ್ನೇಹಿತರಾ? ಯುಗಾದಿ ಹಬ್ಬಕ್ಕೆ ನೋಡುಗನ ತಲೆಗೆ ಹುಳ ಬಿಟ್ಟಿದ್ದಾರೆ ನಿರ್ದೇಶಕರು.

ವೀಕ್ಷಕರ ಊಹೆ ಏನು?

- ಜಯಂತ್‌ ಮತ್ತು ವೆಂಕಿ ಇಬ್ಬರೂ ಅಣ್ಣ ತಮ್ಮ ಇರಬೇಕು

- ಜಯಂತ ಮತ್ತು ವೆಂಕಿಗೆ ಏನಾದ್ರು ಸಂಬಂಧ ಇದೆಯಾ?? ಕಣ್ಣಿಗೆ ಕಣ್ಣೋ ಅಷ್ಟು ಒಳ್ಳೆಯನಂತೂ ಅಲ್ಲ

- ವೆಂಕಿ ಮತ್ತೆ ಸೈಕೊ ಜಯಂತ್ ನಡುವೆ ಏನೋ ಸಂಬಂಧ ಇದೆ

- ಅಂತೂ ಇಂತೂ ಫ್ಲಾಷ್ ಬ್ಯಾಕ್ ಓಪನ್ ಆಯ್ತು

ವೆಂಕಿ ಏನು ಆಗಬೇಕು ಜಯಂತ್ ಸರ್ ಗೆ? ಹಬ್ಬದ ನಡುವೆ ಒಳ್ಳೆ ಟ್ವಿಸ್ಟ್‌

IPL_Entry_Point