Kannada Serial TRP: ಮೊದಲ ಸ್ಥಾನ ಬಿಟ್ಟು ಕೊಡದ ಪುಟ್ಟಕ್ಕನ ಮಕ್ಕಳು, 3ನೇ ಸ್ಥಾನಕ್ಕೆ ಇಳಿದ ಅಮೃತಧಾರೆ; ಈ ವಾರದ ಟಾಪ್‌ 10 ಸೀರಿಯಲ್‌ಗಳು
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಮೊದಲ ಸ್ಥಾನ ಬಿಟ್ಟು ಕೊಡದ ಪುಟ್ಟಕ್ಕನ ಮಕ್ಕಳು, 3ನೇ ಸ್ಥಾನಕ್ಕೆ ಇಳಿದ ಅಮೃತಧಾರೆ; ಈ ವಾರದ ಟಾಪ್‌ 10 ಸೀರಿಯಲ್‌ಗಳು

Kannada Serial TRP: ಮೊದಲ ಸ್ಥಾನ ಬಿಟ್ಟು ಕೊಡದ ಪುಟ್ಟಕ್ಕನ ಮಕ್ಕಳು, 3ನೇ ಸ್ಥಾನಕ್ಕೆ ಇಳಿದ ಅಮೃತಧಾರೆ; ಈ ವಾರದ ಟಾಪ್‌ 10 ಸೀರಿಯಲ್‌ಗಳು

Kannada Serial TRP Ratings: 44ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ಈ ವಾರ ಎಂದಿನಂತೆ ಪುಟ್ಟಕ್ಕನ ಮಕ್ಕಳು ಯಾರಿಗೂ ಸ್ಥಾನ ಬಿಟ್ಟುಕೊಡದೆ ಮೊದಲ ಸ್ಥಾನದಲ್ಲಿದೆ. ಕಳೆದ ವಾರ 2ನೇ ಸ್ಥಾನದಲ್ಲಿದ್ದ ಅಮೃತಧಾರೆ ಈ ವಾರ ಮೂರನೇ ಸ್ಥಾನಕ್ಕೆ ಕುಸಿದಿದೆ.

44ನೇ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್‌
44ನೇ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್‌ (PC: Zee Kannada)

Kannada Serial TRP: ಕಳೆದ ವಾರ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರಾವಾಹಿಗಳು ಆರಂಭವಾಗಿಲ್ಲ. ಕೆಲವೊಂದು ಧಾರಾವಾಹಿಗಳು ಆರಂಭದಿಂದ ಇಲ್ಲಿವರೆಗೂ ಒಂದೇ ಕುತೂಹಲ ಕಾಯ್ದುಕೊಂಡು ಬಂದರೆ ಕೆಲವು ಕಥೆಗೆ ಅನುಗುಣವಾಗಿ ಹೆಚ್ಚು ಟಿಆರ್‌ಪಿ ಪಡೆಯುತ್ತಿವೆ. 44ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ನನ್ನ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವಂತೆ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ. ಯಾವ ವಾಹಿನಿಯ, ಯಾವ ಧಾರಾವಾಹಿಗಳು ಈ ವಾರ ಯಾವ ಸ್ಥಾನದಲ್ಲಿವೆ ನೋಡೋಣ.

ಪುಟ್ಟಕ್ಕನ ಮಕ್ಕಳು

ಈ ವಾರವೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇತರ ಧಾರಾವಾಹಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ. ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 8.5 ಟಿಆರ್‌ಪಿ ಸಿಕ್ಕಿದೆ. ಸ್ನೇಹ ಸಾವಿನ ನೋವನ್ನು ಕಂಠಿ, ಪುಟ್ಟಕ್ಕ ಸೇರಿದಂತೆ ಯಾರಿಗೂ ಅರಗಿಸಲು ಕೊಳ್ಳಲು ಆಗುತ್ತಿಲ್ಲ. ಸ್ನೇಹ ಸಾಯುತ್ತಿದ್ದಂತೆ ಸಹನಾ, ಮನೆಗೆ ಬಂದು ಪುಟ್ಟಕ್ಕನ ಎದುರು ನಿಲ್ಲುತ್ತಾಳೆ. ಮಗಳು ಬದುಕಿದ್ದಾಳೆ ಎಂಬ ಖುಷಿ, ಅವಳು ಇಷ್ಟು ದಿನ ಬಿಟ್ಟು ಇದ್ದಳು ಎಂಬ ಕೋಪ, ಮತ್ತೊಬ್ಬ ಮಗಳು ಸತ್ತಳೆಂಬ ದುಃಖ ಎಲ್ಲಾ ಭಾವನೆಗಳನ್ನೂ ಒಟ್ಟೊಟ್ಟಿಗೆ ಪುಟ್ಟಕ್ಕ ಅನುಭವಿಸುತ್ತಾಳೆ. ಮುಂದಿನ ವಾರ ಈ ಧಾರಾವಾಹಿಗೆ ಟಿಆರ್‌ಪಿ ಹೇಗಿರಲಿದೆ ನೋಡಬೇಕು.

ಲಕ್ಷ್ಮೀ ನಿವಾಸ

ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಈ ವಾರ 7.5 ಟಿಆರ್‌ಪಿ ಪಡೆಯುವ ಮೂಲಕ ಎಡರನೇ ಸ್ಥಾನಕ್ಕೆ ಏರಿದೆ. ಒಂದು ಕಡೆ ಭಾವನಾಳನ್ನು ಮದುವೆ ಅಗಿ ಮನೆವರಿಂದಲೇ ಕಡೆಗಡನೆಗೆ ಒಳಗಾಗುವ ಸಿದ್ದೇಗೌಡ, ಸೊಸೆಯನ್ನು ಅನಿಷ್ಟ ಎಂದು ಬೈಯ್ಯುವ ಜವರೇಗೌಡ, ಅಪ್ಪನ ಪಿಎಫ್‌ ಹಣ ಕಬಳಿಸಲು ಸಂತೋಷ್‌ ಹೂಡುವ ಸಂಚು, ಜಾಹ್ನವಿಗೆ ಮೊದಲ ಮರಿ ತಂದುಕೊಟ್ಟು ಮತ್ತೆ ಅದನ್ನು ಮರೆ ಮಾಡುವ ಜಯಂತ್‌ ಎಲ್ಲಾ ಕಥೆಗಳೂ ಈ ವಾರ ಲಕ್ಷ್ಮೀ ನಿವಾಸ ಧಾರಾವಾಹಿಯನ್ನು 2ನೇ ಸ್ಥಾನಕ್ಕೆ ತಂದು ಕೂರಿಸಿದೆ.

ಅಮೃತಧಾರೆ

ಕಳೆದ ವಾರ ಎರಡನೇ ಸ್ಥಾನದಲ್ಲಿದ್ದ ಅಮೃತಧಾರೆ ಈ ವಾರ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಧಾರಾವಾಹಿ 7.3 ಟಿಆರ್‌ಪಿ ಪಡೆದಿದೆ. ಗೌತಮ್‌, ತನ್ನ ಸ್ವಂತ ತಂಗಿ, ಕುಟುಂಬವನ್ನು ಭೇಟಿ ಮಾಡುವ ಸಮಯ ಬಂದಿದೆ. ಮುಂದಿನ ವಾರ ಈ ಧಾರಾವಾಹಿಗೆ ಯಾವ ರೀತಿ ಟಿಆರ್‌ಪಿ ಸಿಗಲಿದೆ ಕಾದು ನೋಡಬೇಕು.

ಅಣ್ಣಯ್ಯ

ನಾಲ್ಕನೇ ಸ್ಥಾನ ಕೂಡಾ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಪಾಲಾಗಿದೆ. ಕಳೆದ ವಾರ ಕೂಡಾ ಅಣ್ಣಯ್ಯ ಇದೇ ಸ್ಥಾನದಲ್ಲಿದ್ದ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ.

ಲಕ್ಷ್ಮೀ ಬಾರಮ್ಮ

ಈ ವಾರದ ಟಿಆರ್‌ಪಿ ಟಾಪ್‌ 5ರ ಸ್ಥಾನದಲ್ಲಿ ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇದೆ. ಸೀರಿಯಲ್‌ಗೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಕೀರ್ತಿಯನ್ನು ಕೊಲ್ಲುವ ಕಾವೇರಿ, ಸೊಸೆ ಲಕ್ಷ್ಮೀಗೆ ಸಮಸ್ಯೆ ತಂದೊಡ್ಡುತ್ತಾಳೆ. ಆದರೆ ಅಮ್ಮನ ಅಸಲಿ ಮುಖ ತಿಳಿಯದ ಮಗ ಅವಳ ಮಾತಿಗೆ ಬೆಲೆ ಕೊಟ್ಟು ಲಕ್ಷ್ಮೀಯನ್ನು ಮಾನಸಿಕ ಚಿಕತ್ಸಾ ಕೇಂದ್ರಕ್ಕೆ ಕಳಿಸುತ್ತಾನೆ. ಲಕ್ಷ್ಮೀಗೆ ಅತ್ತೆ ವಿರುದ್ದ ಕ್ಲೂ ಸಿಕ್ಕಿದೆ. ಮುಂದೆ ಕಥೆ ಯಾವ ರೀತಿ ತಿರುವು ಪಡೆಯಲಿದೆ ಕಾದು ನೋಡಬೇಕು.

ಭಾಗ್ಯಲಕ್ಷ್ಮೀ

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಈ ವಾರ 6ನೇ ಸ್ಥಾನದಲ್ಲಿದ್ದು 6.6 ಟಿಆರ್‌ಪಿ ಪಡೆದಿದೆ. ಭಾಗ್ಯ ನಾಲ್ಕು ಗೋಡೆ ಬಿಟ್ಟು ಹೋಟೆಲ್‌ ಕೆಲಸಕ್ಕೆ ಸೇರಿದ್ದಾರೆ. ತಂಡ ತಾಂಡವ್‌ ಎರಡನೇ ಮದುವೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದನ್ನು ತಡೆಯಲು ಕುಸುಮಾ ಪ್ರಯತ್ನಿಸುತ್ತಿದ್ದಾಳೆ. ಭಾಗ್ಯಾಗೆ ದೊರೆತ ಲಕ್ಕಿ ಡಿಪ್‌ ಕದ್ದು ಪ್ರೇಯಸಿ ಜೊತೆ ಟ್ರಿಪ್‌ಗೆ ಹೊರಟಿದ್ದಾನೆ. ಭಾಗ್ಯಾಗೆ ಈಗ ಸತ್ಯ ಗೊತ್ತಾಗುವ ಸಮಯ ಬಂದಿದೆ. ಮುಂದೆ ಸೀರಿಯಲ್‌ ಕಥೆ ಯಾವ ರೀತಿ ತಿರುವು ಪಡೆಯಲಿದೆ ಕಾದು ನೋಡಬೇಕು.

ನಿನಗಾಗಿ, ಶ್ರಾವಣಿ ಸುಬ್ರಹ್ಮಣ್ಯ

ಈ ಟಿವಿ ಕನ್ನಡದ ನಿನಗಾಗಿ ಹಾಗೂ ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ಎರಡೂ ಧಾರಾವಾಹಿಗಳು ಈ ಬಾರಿ ಟಾಪ್‌ 7 ಸ್ಥಾನವನ್ನು ಸಮನಾಗಿ ಹಂಚಿಕೊಂಡಿವೆ. ಎರಡಕ್ಕೂ ಈ ವಾರ 6.1 ಟಿಆರ್‌ಪಿ ಸಿಕ್ಕಿದೆ. ಒಂದು ಕಡೆ ರಚನಾ, ಮದುವೆ ಮನೆಯಿಂದ ತಪ್ಪಿಸಿಕೊಂಡು ಜೀವಾ ಜೊತೆಯಲ್ಲಿದ್ದಾಳೆ. ಇತ್ತ ಶ್ರಾವಣಿ ತನ್ನ ಪ್ರೀತಿಯನ್ನು ಸುಬ್ಬು ಮುಂದೆ ಹೇಳಲು ಕಾಯುತ್ತಿದ್ದಾಳೆ.

ರಾಮಾಚಾರಿ

ಜೀ ಕನ್ನಡದ ರಾಮಾಚಾರಿ 5.9 ರೇಟಿಂಗ್‌ ಪಡೆಯುವ ಮೂಲಕ ಈ ವಾರ 8ನೇ ಸ್ಥಾನದಲ್ಲಿದೆ. ವೈಶಾಖ ಹಾಗೂ ಚಾರು ತಾಯಿ ಅರೆಸ್ಟ್‌ ಆದಾಗಿನಿಂದ ಧಾರಾವಾಹಿ ಕಥೆಯನ್ನು ನಾನಾ ತಿರುವುಗಳನ್ನು ಪಡೆದುಕೊಂಡಿದೆ.

ಸೀತಾರಾಮ

ಆರಂಭದಲ್ಲಿ ಟಾಪ್‌ 1,2 ಸ್ತಾನದಲ್ಲಿ ಇರುತ್ತಿದ್ದ ಸೀತಾರಾಮಾ ಟಿಆರ್‌ಪಿ ಈಗ ಸ್ವಲ್ಪ ಇಳಿದಿದೆ. ಈ ವಾರ ಈ ಸೀರಿಯಲ್‌ಗೆ 5.1 ರೇಟಿಂಗ್‌ ಸಿಕ್ಕಿದೆ. ಸಿಹಿಯನ್ನು ಸೀತಾ ಹಾಗೂ ರಾಮ ಸ್ವಂತ ಅಪ್ಪ-ಅಮ್ಮನ ಬಳಿ ಬಿಡಲಾಗಿದೆ. ಪ್ರತಿ ಶನಿವಾರ ಸೀತಾ ರಾಮ ಇಬ್ಬರೂ ಸಿಹಿಯನ್ನು ನೋಡಲು ಬರುತ್ತಿದ್ದಾರೆ. ಇದನ್ನೂ ಹೇಗಾದರೂ ಮಾಡಿ ತಪ್ಪಿಸಬೇಕೆಂದು ಸಿಹಿ ತಾಯಿ ಪ್ಲ್ಯಾನ್‌ ಮಾಡುತ್ತಿದ್ದಾಳೆ.

ಶ್ರೀಗೌರಿ

ಈಟಿವಿಯ ಶ್ರೀಗೌರಿ ಧಾರಾವಾಹಿಈ ವಾರ 4.8 ರೇಟಿಂಗ್‌ ಪಡೆಯುವ ಮೂಲಕ ಟಾಪ್‌ 10ನೇ ಸ್ಥಾನದಲ್ಲಿದೆ.

ಮುಂದಿನ ವಾರ ಯಾವ ಧಾರಾವಾಹಿಗಳ ಸ್ಥಾನ ಅದಲು ಬದಲಾಗಲಿದೆ ಕಾದು ನೋಡಬೇಕು.

Whats_app_banner