OTT News: ಮಿರ್ಜಾಪುರ್‌ 3, ಫ್ಯಾಮಿಲಿ ಮ್ಯಾನ್‌ 3, ಪಂಚಾಯತ್‌ 3 ಸೇರಿ ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳ ಬಿಡುಗಡೆ ಯಾವಾಗ?-ott news panchayat 3 family man 3 mirzapur 3 these 6 most anticipated web series to look forward to in 2024 mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott News: ಮಿರ್ಜಾಪುರ್‌ 3, ಫ್ಯಾಮಿಲಿ ಮ್ಯಾನ್‌ 3, ಪಂಚಾಯತ್‌ 3 ಸೇರಿ ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳ ಬಿಡುಗಡೆ ಯಾವಾಗ?

OTT News: ಮಿರ್ಜಾಪುರ್‌ 3, ಫ್ಯಾಮಿಲಿ ಮ್ಯಾನ್‌ 3, ಪಂಚಾಯತ್‌ 3 ಸೇರಿ ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳ ಬಿಡುಗಡೆ ಯಾವಾಗ?

ಬಾಲಿವುಡ್‌ನಲ್ಲಿ ಈಗಾಗಲೇ ಹಿಟ್‌ ಪಟ್ಟಿ ಸೇರಿ, ಮುಂದುವರಿದ ಭಾಗವಾಗಿಯೂ ಬ್ಲಾಕ್‌ ಬಸ್ಟರ್‌ ಆದ ಹಲವು ವೆಬ್‌ ಸರಣಿಗಳಿವೆ. ಇದೀಗ ಆ ವೆಬ್‌ ಸಿರೀಸ್‌ಗಳ ಮೂರನೇ ಸೀಸನ್‌ಗೆ ನೋಡುಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಆ ವೆಬ್‌ಸಿರೀಸ್‌ಗಳು ಯಾವವು? ಅವುಗಳ ಸ್ಟ್ರೀಮಿಂಗ್‌ ದಿನಾಂಕ ಯಾವಾಗ? ಇಲ್ಲಿದೆ ಆ ಕುರಿತ ಮಾಹಿತಿ.

OTT News: ಮಿರ್ಜಾಪುರ್‌ 3, ಫ್ಯಾಮಿಲಿ ಮ್ಯಾನ್‌ 3, ಪಂಚಾಯತ್‌ 3 ಸೇರಿ ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳ ಬಿಡುಗಡೆ ಯಾವಾಗ?
OTT News: ಮಿರ್ಜಾಪುರ್‌ 3, ಫ್ಯಾಮಿಲಿ ಮ್ಯಾನ್‌ 3, ಪಂಚಾಯತ್‌ 3 ಸೇರಿ ಈ ವರ್ಷದ ಬಹುನಿರೀಕ್ಷಿತ 7 ವೆಬ್‌ಸಿರೀಸ್‌ಗಳ ಬಿಡುಗಡೆ ಯಾವಾಗ?

OTT Web Series Released Update: ಬಾಲಿವುಡ್‌ನಲ್ಲಿ ಈಗಾಗಲೇ ಹಿಟ್‌ ಪಟ್ಟಿ ಸೇರಿ, ಮುಂದುವರಿದ ಭಾಗವಾಗಿಯೂ ಬ್ಲಾಕ್‌ ಬಸ್ಟರ್‌ ಆದ ಹಲವು ವೆಬ್‌ ಸರಣಿಗಳಿವೆ. ಇದೀಗ ಆ ವೆಬ್‌ ಸಿರೀಸ್‌ಗಳ ಮೂರನೇ ಸೀಸನ್‌ಗೆ ನೋಡುಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಆ ವೆಬ್‌ಸಿರೀಸ್‌ಗಳು ಯಾವವು? ಅವುಗಳ ಸ್ಟ್ರೀಮಿಂಗ್‌ ದಿನಾಂಕ ಯಾವಾಗ? ಇಲ್ಲಿದೆ ಆ ಕುರಿತ ಮಾಹಿತಿ.

ಹಿಂದಿ ಚಿತ್ರೋದ್ಯಮದಲ್ಲಿ ಸಿನಿಮಾಗಳ ಜತೆಗೆ ಒಟಿಟಿ ಕಂಟೆಂಟ್‌ಗಳು ಹೇರಳವಾಗಿಯೇ ತಯಾರಾಗುತ್ತವೆ. ನೋಡುಗನನ್ನು ಸೆಳೆಯಲಿ ಕ್ರೈಂ ಥ್ರಿಲ್ಲರ್‌, ನ್ಯೂಡಿಟಿ, ಹಾರರ್‌ ಕಥೆಗಳ ಜತೆಗೆ ರೊಮ್ಯಾಂಟಿಕ್‌ ಕಥೆಗಳನ್ನೂ ಹಿಡಿದು ತರುತ್ತಾರೆ ನಿರ್ದೇಶಕರು. ಆ ಪೈಕಿ, ಸದ್ಯ ಎಲ್ಲರ ಗಮನ ನೆಟ್ಟಿರುವುದು ಮಿರ್ಜಾಪುರ್3‌ , ಫ್ಯಾಮಿಲಿ ಮ್ಯಾನ್‌ 3 ಮತ್ತು ಪಂಚಾಯತ್‌ 3 ವೆಬ್‌ ಸಿರೀಸ್‌ ಮೇಲೆ. ಆ ವೆಬ್‌ ಸಿರೀಸ್‌ಗಳ ಕುರಿತ ಮಾಹಿತಿ ಹೀಗಿದೆ.

ಮಿರ್ಜಾಪುರ್‌ 3

ಗುರ್ಮೀತ್ ಸಿಂಗ್ ಮತ್ತು ಆನಂದ್ ಅಯ್ಯರ್ ನಿರ್ದೇಶಿಸಿದ ಮಿರ್ಜಾಪುರ್‌ 3 ವೆಬ್‌ಸಿರೀಸ್‌ ಇನ್ನೇನು ಶೀಘ್ರದಲ್ಲಿ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಕಮಿಂಗ್‌ ಸೂನ್‌ ಎಂಬ ಸುಳಿವು ನೀಡಿರುವ ಈ ಸರಣಿಯ ಹೊಸ ಪೋಸ್ಟರ್‌ ಸಹ ಬಿಡುಗಡೆಯಾಗಿದೆ. ಪಂಕಜ್‌ ತ್ರಿಪಾಠಿ, ಅಲಿ ಫೈಝಲ್, ಶ್ವೇತಾ ತ್ರಿಪಾಠಿ ಮುಖ್ಯಭೂಮಿಕೆಯಲ್ಲಿರುವ ಈ 3ನೇ ಸೀಸನ್‌ ಬಗ್ಗೆ ಈಗಾಗಲೇ ಕುತೂಹಲ ಗರಿಗೆದರಿದೆ.

ಫ್ಯಾಮಿಲಿ ಮ್ಯಾನ್‌ 3

ಈಗಾಗಲೇ ನೋಡುಗರನ್ನು ಸೆಳೆದ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ವೆಬ್‌ಸಿರೀಸ್‌ ಸ್ಟ್ರೀಮಿಂಗ್‌ ಸನಿಹದಲ್ಲಿದೆ. ಮನೋಜ್‌ ಬಾಜಪೇಯಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿರೀಸ್‌ಅನ್ನು ರಾಜ್‌ ಮತ್ತು ಡಿಕೆ ಜೋಡಿ ನಿರ್ದೇಶನ ಮಾಡಿದೆ. ಕ್ರೈಂ ಥ್ರಿಲ್ಲರ್‌ ಕಥಾಹಂದರದ ಈ ಸಿರೀಸ್‌, ಶೀಘ್ರದಲ್ಲಿ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಪಂಚಾಯತ್‌ 3

ನಟ ಜಿತೇಂದ್ರ ಕುಮಾರ್, ನೀನಾ ಗುಪ್ತಾ ಮತ್ತು ರಘುಬೀರ್ ಯಾದವ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪಂಚಾಯತ್‌ ವೆಬ್‌ಸಿರೀಸ್‌ನ ಮೂರನೇ ಸೀಸನ್‌ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಸರಣಿಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆದ ಹಿನ್ನೆಲೆಯಲ್ಲಿ ಮೂರನೇ ಸೀಸನ್‌ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅಮೆಜಾನ್‌ ಪ್ರೈಂನಲ್ಲಿ ಈ ಸಿರೀಸ್‌ ಸ್ಟ್ರೀಮಿಂಗ್‌ ಆಗಲಿದೆ. ಇನ್ನೇನು ಶೀಘ್ರದಲ್ಲಿ ಪಂಚಾಯತ್‌ 3 ಸಿರೀಸ್‌ನ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.

ಪಾತಾಳ್‌ ಲೋಕ್‌ 2

ಈ ಹಿಂದೆ ಒಟಿಟಿಯಲ್ಲಿ ಹೊಸ ಹವಾ ಸೃಷ್ಟಿಸಿದ್ದ ಪಾತಾಳ್‌ ಲೋಕ್‌ ಇದೀಗ ಎರಡನೇ ಸೀಸನ್‌ ಜತೆಗೆ ಆಗಮಿಸುತ್ತಿದೆ. ಜೈದೀಪ್ ಅಹ್ಲಾವತ್ ಮತ್ತೊಮ್ಮೆ ಹಾಥಿರಾಮ್‌ ಪಾತ್ರದ ಮೂಲಕ ಒಟಿಟಿ ವೀಕ್ಷಕರ ಮುಂದೆ ಆಗಮಿಸಲಿದ್ದಾರೆ. ಕ್ರೈಂ ಕಥಾಹಂದರದ ಈ ಸಿರೀಸ್‌ ಅನ್ನು ಈ ಮೊದಲು ಅನುಷ್ಕಾ ಶರ್ಮಾ ನಿರ್ಮಾಣ ಮಾಡಿದ್ದರು. ಅವಿನಾಶ್‌ ಅರುಣ್‌ ಮತ್ತು ಪ್ರೋಸಿತ್‌ ರಾಯ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿರೀಸ್‌ 2020ರಲ್ಲಿ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿತ್ತು. ಅದಕ್ಕೆ ಸಿಕ್ಕ ಮನ್ನಣೆಯಿಂದಲೇ ಈಗ ಎರಡನೇ ಸೀಸನ್‌ ಘೋಷಣೆಯಾಗಿದೆ.

ಸಿಟಾಡೆಲ್;‌ ಹನಿ ಬನಿ

ಸೌತ್‌ ನಟಿ ಸಮಂತಾ ರುತ್‌ ಪ್ರಭು ಮತ್ತು ವರುಣ್‌ ಧವನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿಟಾಡೆಲ್‌ ಹನಿ ಬನಿ ವೆಬ್‌ಸಿರೀಸ್‌ ಅನ್ನು ರಾಜ್‌ ಮತ್ತು ಡಿಕೆ ಜೋಡಿ ನಿರ್ದೇಶನ ಮಾಡಿದೆ. ಸ್ಪೈ ಥ್ರಿಲ್ಲರ್‌ ಶೈಲಿಯ ಈ ಸಿರೀಸ್‌ನ ಮೊದಲ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. 90ರ ದಶಕದಲ್ಲಿ ಸಾಗುವ ಕಥೆ ಈ ಸಿರೀಸ್‌ನಲ್ಲಿರಲಿದೆ. ಇದೇ ವರ್ಷದಲ್ಲಿ ಸಿಟಾಡೆಲ್‌ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಕಾಲ್‌ ಮಿ ಬೇ

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಟಿಸಿರುವ ಕಾಲ್ ಮಿ ಬೇ ವೆಬ್‌ ಸಿರೀಸ್‌ ಈಗಾಗಲೇ ಕುತೂಹಲ ಮೂಡಿಸಿದೆ. ಈ ಸಿರೀಸ್‌ನ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಇದೇ ವರ್ಷದಲ್ಲಿ ಅಮೆಜಾನ್ ಪ್ರೈಂನಲ್ಲಿ ಈ ನೂತನ ಸಿರೀಸ್‌ ಸ್ಟ್ರೀಮಿಂಗ್‌ ಆರಂಭಿಸಲಿದೆ. ‌

ಬಂದಿಷ್‌ ಬಂಡಿತ್ಸ್‌ ಸೀಸನ್‌ 2

ಸಂಗೀತ ಮತ್ತು ಪ್ರೀತಿಯ ಹಿನ್ನೆಲೆಯಲ್ಲಿ ಸಾಗುವ ಬಂದಿಷ್‌ ಬಂಡಿತ್ಸ್‌ ಮೊದಲ ಸೀಸನ್‌ ಯಶಸ್ವಿಯಾಗಿದೆ. ಈಗ ಅದರ ಎರಡನೇ ಸೀಸನ್‌ ಫಸ್ಟ್‌ ಲುಕ್‌ ಅನಾರವಣಗೊಳಿಸಿ, ಕುತೂಹಲ ಮೂಡಿಸಿದೆ ಅಮೆಜಾನ್‌ ಪ್ರೈಂ. ಯಾವಾಗ ಬಿಡುಗಡೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

mysore-dasara_Entry_Point