Vinnod Prabhakar Birthday: ಮರಿ ಟೈಗರ್‌ ವಿನೋದ್‌ ಬರ್ತ್‌ಡೇಗೆ 'ಲಂಕಾಸುರ'ದಿಂದ ಬಂತು 'ಇಂಡಸ್ಟ್ರೀಯ ಹುಲಿಯ ವಂಶ' ಹಾಡು
ಕನ್ನಡ ಸುದ್ದಿ  /  ಮನರಂಜನೆ  /  Vinnod Prabhakar Birthday: ಮರಿ ಟೈಗರ್‌ ವಿನೋದ್‌ ಬರ್ತ್‌ಡೇಗೆ 'ಲಂಕಾಸುರ'ದಿಂದ ಬಂತು 'ಇಂಡಸ್ಟ್ರೀಯ ಹುಲಿಯ ವಂಶ' ಹಾಡು

Vinnod Prabhakar Birthday: ಮರಿ ಟೈಗರ್‌ ವಿನೋದ್‌ ಬರ್ತ್‌ಡೇಗೆ 'ಲಂಕಾಸುರ'ದಿಂದ ಬಂತು 'ಇಂಡಸ್ಟ್ರೀಯ ಹುಲಿಯ ವಂಶ' ಹಾಡು

"ಇಂಡಸ್ಟ್ರೀಯ ಹುಲಿಯ ವಂಶ" ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ 'ಲಂಕಾಸುರ' ತಂಡ ವಿನೋದ್ ಪ್ರಭಾಕರ್ ಅವರಿಗೆ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಮರಿ ಟೈಗರ್‌ ವಿನೋದ್‌ ಬರ್ತ್‌ಡೇಗೆ 'ಲಂಕಾಸುರ'ದಿಂದ ಬಂತು 'ಇಂಡಸ್ಟ್ರೀಯ ಹುಲಿಯ ವಂಶ' ಹಾಡು
ಮರಿ ಟೈಗರ್‌ ವಿನೋದ್‌ ಬರ್ತ್‌ಡೇಗೆ 'ಲಂಕಾಸುರ'ದಿಂದ ಬಂತು 'ಇಂಡಸ್ಟ್ರೀಯ ಹುಲಿಯ ವಂಶ' ಹಾಡು

Vinnod Prabhakar Birthday: ಡಿಸೆಂಬರ್ 3 ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬದ ವಿಶೇಷವೆಂದರೆ, ವಿನೋದ್ ಪ್ರಭಾಕರ್ ಅವರು ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ 'ಲಂಕಾಸುರ' ಚಿತ್ರ ಸಹ ನಿರ್ಮಾಣವಾಗಿದೆ‌. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು.

"ಇಂಡಸ್ಟ್ರೀಯ ಹುಲಿಯ ವಂಶ" ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ 'ಲಂಕಾಸುರ' ತಂಡ ವಿನೋದ್ ಪ್ರಭಾಕರ್ ಅವರಿಗೆ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಚೇತನ್ ಆಲೂರ್ ಬರೆದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಹಾಗೂ ಮದ್ವೇಶ್ ಈ ಹಾಡನ್ನು ಹಾಡಿದ್ದಾರೆ. ಪ್ರಮೋದ್ ಕುಮಾರ್ "ಲಂಕಾಸುರ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

'ಲಂಕಾಸುರ' ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಪ್ರಮಾಣ ಪತ್ರ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡವು ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ. 'ಲಂಕಾಸುರ' ಸಿನಿಮಾ ನೋಡಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನರ ಮೆಚ್ಚುಗೆ ಗಳಿಸಿದೆ. 'ಲಂಕಾಸುರ' ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವ ಹಾಗಿದೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಪ್ರಮೋದ್ ಕುಮಾರ್ ನಿರ್ದೇಶನದ 'ಲಂಕಾಸುರ' ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಇದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ, ವಿನೋದ್ ಪ್ರಭಾಕರ್ ಜೊತೆಯಾಗಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿದ್ದಾರೆ.

Whats_app_banner