Barroz Movie: ಮರಕ್ಕರ್ ದಾಖಲೆಯನ್ನು ಪುಡಿಗಟ್ಟುವುದೇ ಬರೋಜ್‌? ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ 3ಡಿ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  Barroz Movie: ಮರಕ್ಕರ್ ದಾಖಲೆಯನ್ನು ಪುಡಿಗಟ್ಟುವುದೇ ಬರೋಜ್‌? ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ 3ಡಿ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆ

Barroz Movie: ಮರಕ್ಕರ್ ದಾಖಲೆಯನ್ನು ಪುಡಿಗಟ್ಟುವುದೇ ಬರೋಜ್‌? ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ 3ಡಿ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆ

Barroz 3d Movie: ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಿರ್ದೇಶನ ಮತ್ತು ನಟನೆಯ ಬರೋಜ್‌ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆಯಾಗಲಿದೆ. ಈ 3ಡಿ ಸಿನಿಮಾದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಮೊದಲ ದಿನದ ಗಳಿಕೆ ಮರಕ್ಕರ್‌ ಸಿನಿಮಾದ ದಾಖಲೆಯನ್ನು ಮುರಿಯುವುದೇ ಎಂದು ಕಾದು ನೋಡಬೇಕಿದೆ.

ಬರೋಜ್‌; ಮೋಹನ್‌ಲಾಲ್‌ 3ಡಿ ಸಿನಿಮಾ
ಬರೋಜ್‌; ಮೋಹನ್‌ಲಾಲ್‌ 3ಡಿ ಸಿನಿಮಾ

Barroz 3d Movie: ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಿರ್ದೇಶನ ಮತ್ತು ನಟನೆಯ ಬರೋಜ್‌ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆಯಾಗಲಿದೆ. ಈ 3ಡಿ ಸಿನಿಮಾದ ಟ್ರೇಲರ್‌ ಈಗಾಗಲೇ ಚಿತ್ರರಸಿಕರ ಗಮನ ಸೆಳೆದಿದೆ. ಈ ಸಿನಿಮಾದ ಮಂಗಡ ಟಿಕೆಟ್‌ ಬುಕ್ಕಿಂಗ್‌ ಭರದಿಂದ ಸಾಗುತ್ತಿದೆ. ಕಲೆಕ್ಷನ್‌ ವಿಚಾರದಲ್ಲಿ ಈ ಸಿನಿಮಾವು ಮರಕ್ಕರ್‌ ಚಿತ್ರದ ಮೂರು ವರ್ಷಗಳ ಹಿಂದಿನ ಓಪನಿಂಗ್‌ ದಾಖಲೆಯನ್ನು ಮುರಿಯಬಹುದೇ ಎಂಬ ಕಾತರ ಎಲ್ಲರಲ್ಲಿಯೂ ಇದೆ.

ಮುಂಗಡ ಟಿಕೆಟ್‌ ಬುಕ್ಕಿಂಗ್‌ ಹೇಗಿದೆ?

ಈ ವರ್ಷದ ಆರಂಭದಲ್ಲಿ ಮಲೈಕೊಟ್ಟೈ ವಾಲಿಬನ್ ಸಿನಿಮಾದಲ್ಲಿ ಮೋಹನ್‌ ಲಾಲ್‌ ಕಾಣಿಸಿಕೊಂಡಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಆ ಸಿನಿಮಾ ಕಳಪೆ ಪ್ರದರ್ಶನ ಕಂಡಿತ್ತು. ಈಗ ಬರೋಜ್‌ ಎಂಬ ದೊಡ್ಡ ಪ್ರಾಜೆಕ್ಟ್‌ ಬಿಡುಗಡೆಯಾಗಲಿದೆ. ಕ್ರಿಸ್ಮಸ್‌ ರಜೆಯ ದಿನವೇ, ಅಂದರೆ ಡಿಸೆಂಬರ್‌ 25ರಂದು ಬಿಡುಗಡೆಯಾಗಲಿರುವ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ. ಕ್ರಿಸ್ಮಸ್‌ ರಜೆಯಂದು ಸಾಕಷ್ಟು ಜನರು ಥಿಯೇಟರ್‌ಗೆ ಆಗಮಿಸುವ ಸೂಚನೆಯಿದೆ. 3ಡಿ ಸಿನಿಮಾದ ಟಿಕೆಟ್‌ ದರವೂ ಹೆಚ್ಚಿರುವುದರಿಂದ ಗಳಿಕೆ ದೊಡ್ಡಮಟ್ಟದಲ್ಲಿ ಇರಲಿದೆ. ಭಾರತದಲ್ಲಿ ಮೊದಲ ದಿನದಲ್ಲಿ 6.50-8 ಕೋಟಿ ಗಳಿಕೆ ಮಾಡುವ ಸೂಚನೆಯಿದೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಬರೋಜ್‌ ಸಿನಿಮಾದ ಕುರಿತು ಹೈಪ್‌ ಕ್ರಿಯೆಟ್‌ ಆಗಿದೆ. ಇದು 3ಡಿ ಸಿನಿಮಾವಾಗಿರುವ ಕಾರಣ ಮಕ್ಕಳನ್ನೂ ಚಿತ್ರಮಂದಿರಕ್ಕೆ ಕೈಬೀಸಿ ಕರೆಯಲಿದೆ. ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್‌ ಉತ್ತಮವಾಗಿದೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನದ ಟಿಕೆಟ್‌ ಕಲೆಕ್ಷನ್‌ ಉತ್ತಮವಾಗಿತ್ತು. 

ಮೋಹನ್‌ ಲಾಲ್‌ ಸುಮಾರು 40 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಮೊದಲ ಸಲ ನಿರ್ದೇಶಕನ ಕ್ಯಾಪ್‌ ಧರಿಸಿರುವ ಸಿನಿಮಾ ಇದಾಗಿದೆ. ಮೇಕಿಂಗ್‌ ಮತ್ತು ಕಂಟೆಂಟ್‌ ಮೂಲಕವೇ ಈ ಚಿತ್ರ ಗಮನ ಸೆಳೆದಿದೆ.ಯಾವುದೋ ಬಾಲಿವುಡ್‌ ಸಿನಿಮಾದಂತೆ ಈ ಸಿನಿಮಾ ಭಾಸವಾಗುತ್ತಿದೆ. ಕನ್ನಡದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಅಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾವನ್ನು ವಿವಿಧ ಭಾಷೆಗಳಲ್ಲಿ ರಿಲೀಸ್‌ ಮಾಡಲಾಗುತ್ತಿದೆ. ಇತ್ತೀಚೆಗೆ ಕಾಂತಾರ ನಟ ರಿಷಬ್‌ ಶೆಟ್ಟಿ ಈ ಸಿನಿಮಾದ ಟ್ರೇಲರ್‌ ಹಂಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಈಗಾಗಲೇ ಬಿಡುಗಡೆಯಾದ ಬರೋಜ್‌ ಟ್ರೇಲರ್‌ನಿಂದಾಗಿ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ. ವಾಸ್ಕೋಡಗಾಮಾ ಅರಮನೆಯೊಳಗೆ ಬರೋಜ್ ಎಂಬ ಭೂತವಿದೆ. ಅರಮನೆಯಲ್ಲಿರುವ ನಿಧಿಯನ್ನು ಅದು ಕಾಯುತ್ತಿದೆ. ಮೋಹನ್‌ ಲಾಲ್‌ ಮಹಾವೀರನಂತಹ ಪಾತ್ರದಲ್ಲಿದ್ದಾರೆ. ಈ ಸಿನಿಮಾದ ಟ್ರೇಲರ್‌ನಲ್ಲಿ ಹೊಸ ಲೋಕವೊಂದು ತೆರೆದುಕೊಂಡಿದೆ. ಭೂತ ಮತ್ತು ವರ್ತಮಾನದ ಕಥೆಯನ್ನು ಈ ಸಿನಿಮಾ ಹೊಂದಿದೆ.

ಮೋಹನ್‌ ಲಾಲ್‌ ನಟಿಸಿ ನಿರ್ದೇಶಿಸಿರುವ ಬರೋಜ್‌ ಸಿನಿಮಾ ಸಹ ಮೂಲ ಮಲಯಾಳಂ ಜತೆಗೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ, 3ಡಿಯಲ್ಲಿ ಬಿಡುಗಡೆ ಆಗಲಿದೆ. ಕಾಲ್ಪನಿಕ ಕಥೆಯ ಮೂಲಕವೇ ವಿಶಿಷ್ಟ ಮೇಕಿಂಗ್‌ನಿಂದಲೂ ಈ ಚಿತ್ರದ ಟ್ರೇಲರ್‌ ಗಮನ ಸೆಳೆದಿದೆ. ಬರೋಜ್‌ ಚಲನಚಿತರವು ಡಿಸೆಂಬರ್ 25ರ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಆಶೀರ್ವಾದ್ ಸಿನಿಮಾಸ್‌ ಬ್ಯಾನರ್‌ನಲ್ಲಿ ಆಂಟೋನಿ ಪೆರುಂಬವೂರ್ ಬರೋಜ್‌ ಸಿನಿಮಾವನ್ನು ನಿರ್ಮಿಸಿದ್ದಾರೆ. ಪಿವಿಆರ್ ಪಿಕ್ಚರ್ಸ್ ಈ ಸಿನಿಮಾವನ್ನು ವಿತರಿಸುತ್ತಿದ್ದಾರೆ.

Whats_app_banner