Max Movie: ಕನ್ನಡ ಸಿನಿಮಾ ಮ್ಯಾಕ್ಸ್‌ಗೆ ಇಂಗ್ಲೀಷ್ ಹೆಸರು ಯಾಕೆ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ
Max Movie: ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ನಾಳೆ (ಡಿಸೆಂಬರ್ 25) ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರ ಕೂಡ ತುಂಬಾ ಜೋರಾಗಿಯೇ ನಡೆಯುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಭಾಷೆಯ ಚಿತ್ರಕ್ಕೆ ಇಂಗ್ಲಿಷ್‌ನಲ್ಲಿ ಶೀರ್ಷಿಕೆ ಏಕೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸುದೀಪ್ ಖಡಕ್ ಉತ್ತರ ಹೀಗಿತ್ತು.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಜೋರಾಗಿಯೇ ನಡೆಯುತ್ತಿದೆ. ಸಾಕಷ್ಟು ಥಿಯೇಟರ್‌ಗಳಲ್ಲಿ ಮಾರ್ನಿಂಗ್ ಫಸ್ಟ್ ಶೋಗಳು ಹೌಸ್‌ಫುಲ್ ಆಗಿವೆ. ಈ ಸಿನಿಮಾಕ್ಕೆ “ಮ್ಯಾಕ್ಸ್” ಎಂಬ ಇಂಗ್ಲಿಷ್ ಹೆಸರು ಏಕೆ? ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಕಿಚ್ಚ ಸುದೀಪ್ ತನ್ನದೇ ಶೈಲಿಯಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ತಮ್ಮ ಮ್ಯಾಕ್ಸ್ ಚಿತ್ರಕ್ಕೆ ಇಂಗ್ಲಿಷ್ ಶೀರ್ಷಿಕೆಯನ್ನು ಬಳಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಈ ಬಗ್ಗೆ ಸಿಟ್ಟಾಗಿದ್ದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಭಾಷೆಯ ಚಿತ್ರಕ್ಕೆ ಇಂಗ್ಲಿಷ್‌ನಲ್ಲಿ ಶೀರ್ಷಿಕೆ ಏಕೆ ಎಂದು ಕೇಳಿದಾಗ ಸುದೀಪ್ ತುಸು ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ.
ಸುದೀಪ್ ಪ್ರತಿಕ್ರಿಯೆ ಹೀಗಿತ್ತು
ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ಮ್ಯಾಕ್ಸ್‌ಗೆ ಇಂಗ್ಲಿಷ್ ಶೀರ್ಷಿಕೆಯನ್ನು ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದರು. ಅದಕ್ಕೆ ಸುದೀಪ್ ಪ್ರತಿಕ್ರಿಯೆ ಹೀಗಿತ್ತು. “ನಿಮ್ಮ ನ್ಯೂಸ್ ಚಾನೆಲ್‌ಗಳು ಯಾಕೆ ಇಂಗ್ಲೀಷ್ ಹೆಸರನ್ನು ಹೊಂದಿರುತ್ತವೆ? ಸುದ್ದಿ ಓದುಗರು ಅಥವಾ ಟಿವಿ ವೀಕ್ಷಕರು ಕನ್ನಡಿಗರೇ ಆಗಿದ್ದರೂ ನೀವೇಕೆ ಇಂಗ್ಲಿಷ್ ಹೆಸರಿಟ್ಟುಕೊಳ್ಳುತ್ತೀರಿ. ಟಿವಿ ಸಂದರ್ಶನಕ್ಕೆ ಆಗಮಿಸುವವರೂ ಕನ್ನಡಿಗರೇ ಆಗಿರುವಾಗ ಹೀಗ್ಯಾಕೆ ಇಂಗ್ಲೀಷ್ ಹೆಸರು ಬಳಸುತ್ತೀರಿ? ಕರ್ನಾಟಕದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳು ಯಾಕಿವೆ? ಇಂಗ್ಲೀಷ್ ಕಲಿಯಲು ಹೋಗುವವರು ಕನ್ನಡಿಗರೇ ಅಲ್ಲವೇ? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಈಗ ನಿಮ್ಮ ಬಳಿ ಆಪಲ್ ಐಫೋನ್ ಇದೆ ಎಂದಾದರೆ ನೀವು ಅದನ್ನು ಕನ್ನಡದಲ್ಲಿ ಹೇಳಿ ನೋಡೋಣ" ಎಂದು ತಾರ್ಕಿಕವಾಗಿ ಉತ್ತರಿಸಿದ್ದಾರೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟೀಸರ್ ಸುದೀಪ್ ಕತ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದಾರೆ. ಮ್ಯಾಕ್ಸ್ ಹತ್ತಿರ ಮಾತಾಡ್ತಾ ಇದೀರಾ ಮ್ಯಾಗ್ಸಿಮಮ್ ಸೈಲೆನ್ಸ್ ಇರ್ಲಿ ಎಂದು ಹೇಳುವಾಗ ಅವರ ಮುಖದಿಂದ ರಕ್ತ ಸುರಿಯುತ್ತಿರುತ್ತದೆ. ಟ್ರೇಲರ್‌ನ ಉದ್ದಕ್ಕೂ ಆಕ್ಷನ್ ಸಿನಿಮಾದ ಫೈಟಿಂಗ್ ಸೀನ್‌ಗಳೇ ಎದ್ದು ಕಾಣುತ್ತದೆ. ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರ ಇದಾಗಿದ್ದು ಸಾಕಷ್ಟು ಅಭಿಮಾನಿಗಳು ಈ ಸಿನಿಮಾವನ್ನು ನೊಡಲು ಕಾದು ಕುಳಿತಿದ್ದಾರೆ. ಕ್ರಿಸ್‌ಮಸ್ ದಿನದಂದೇ ಈ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರವೂ ಜೋರಾಗಿಯೇ ನಡೆಯುತ್ತಿದೆ. ಟಿಕೆಟ್ ಬುಕಿಂಗ್ ಕೂಡ ಈಗಾಗಲೇ ಆರಂಭವಾಗಿದೆ.
ಕಲೈಪುಲಿ ಎಸ್ ದಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈಗ ಇದೇ ಸಿನಿಮಾ ಐದು ಭಾಷೆಯ ಬದಲು ಕೇವಲ ಮೂರು ಭಾಷೆ ಅಂದರೆ, ಕನ್ನಡ, ತೆಲುಗು, ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆ. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ಕಲೈಪುಲಿ ದಾನು ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಯು\ಎ ಪ್ರಮಾಣ ಪತ್ರ ಸಿಕ್ಕಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ.
ಮೂರು ಭಾಷೆಗಳಲ್ಲಿ ಬಿಡುಗಡೆ
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಸದ್ಯಕ್ಕೆ ಆ ಎರಡು ಭಾಷೆಗಳ ಬಗ್ಗೆ ಯಾವುದೇ ಅಪ್‌ಡೇಟ್ ಸುದ್ದಿ ಹೊರಬಿದ್ದಿಲ್ಲ. ಹಾಗಾಗಿ ಮೂರು ಭಾಷೆಗಳಷ್ಟೇ ಸದ್ಯಕ್ಕೆ ಅಧಿಕೃತವಾಗಿದೆ.