ಕನ್ನಡ ಸುದ್ದಿ  /  Entertainment  /  Mollywood News I Am Ready To Marry Actress Meena Sagar Says Malayalam Film Critic Youtuber Santhosh Varkey Mnk

Meena: ‘ಮಗಳಿದ್ದರೇನಂತೆ, ನಟಿ ಮೀನಾಗೆ ಬಾಳು ಕೊಡಲು ನಾನು ರೆಡಿ, ಇದು ನನ್ನ ಓಪನ್‌ ಆಫರ್‌’ ಎಂದ ಯೂಟ್ಯೂಬರ್‌!

ಬಹುಭಾಷಾ ನಟಿ ಮೀನಾ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪತಿಯ ಅಕಾಲಿಕ ನಿಧನದ ಬಳಿಕ, ಈ ವಿಚಾರ ಗಾಸಿಪ್‌ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈಗ ಇದೇ ನಟಿಯನ್ನು ಮದುವೆಯಾಗುವುದಾಗಿ ಸಿನಿಮಾ ವಿಮರ್ಶಕ, ಯೂಟ್ಯೂಬರ್‌ವೊಬ್ಬರು ಹೇಳಿಕೆ ನೀಡಿದ್ದಾರೆ.

Meena: ‘ಮಗಳಿದ್ದರೇನಂತೆ, ನಟಿ ಮೀನಾಗೆ ಬಾಳು ಕೊಡಲು ನಾನು ರೆಡಿ, ಇದು ನನ್ನ ಓಪನ್‌ ಆಫರ್‌’ ಎಂದ ಯೂಟ್ಯೂಬರ್‌!
Meena: ‘ಮಗಳಿದ್ದರೇನಂತೆ, ನಟಿ ಮೀನಾಗೆ ಬಾಳು ಕೊಡಲು ನಾನು ರೆಡಿ, ಇದು ನನ್ನ ಓಪನ್‌ ಆಫರ್‌’ ಎಂದ ಯೂಟ್ಯೂಬರ್‌!

Meena: ಬಹುಭಾಷಾ ನಟಿ ಮೀನಾ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಒಂದೆರಡಲ್ಲ. ಸಿನಿಮಾ ಬಿಟ್ಟು ಅವರ ವೈಯಕ್ತಿಕ ವಿಚಾರಗಳನ್ನೇ ಕೆದಕಿ ಕೆದಕಿ ಕಾಂಟ್ರವರ್ಸಿ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಮದುವೆ ವಿಚಾರಕ್ಕೆ ನಟಿ ಮೀನಾ ಆಗಾಗ ಸುದ್ದಿಯ ಮುನ್ನೆಲೆಗೆ ಬರುತ್ತಲೇ ಇದ್ದಾರೆ. ಈ ಬಗ್ಗೆ ಕಡ್ಡಿ ಮುರಿದಂತೆ ಹೇಳಿಕೊಂಡರೂ, ನೆಟ್ಟಿಗರು ಮಾತ್ರ ಇದೇ ವಿಷಯವನ್ನು ರಬ್ಬರ್‌ನಂತೆ ಎಳೆಯುತ್ತಿದ್ದಾರೆ. ಈಗ ಇದೇ ಮೀನಾ ಮದುವೆಯ ಬಗ್ಗೆ ಕೇರಳ ಮೂಲದ ಯೂಟ್ಯೂಬರ್‌ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ನಟಿ ಮೀನಾರನ್ನು ನಾನು ಮದುವೆಯಾಗಲಿ ರೆಡಿ ಎಂದಿದ್ದಾನೆ.

ಟೀಕೆಗಳಿಂದ ಕುಗ್ಗಿದ ಮೀನಾ

ಪತಿ ವಿದ್ಯಾ ಸಾಗರ್‌ ನಿಧನದ ಬಳಿಕ ನಟಿ ಮೀನಾ ಸಾಕಷ್ಟು ಕುಗ್ಗಿದ್ದರು. ಆ ನೋವಿನಲ್ಲಿಯೇ ಸಿಂಗಲ್‌ ಪೇರೆಂಟ್‌ ಆಗಿ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದೂ ಹೇಳಿಕೊಂಡಿದ್ದರು. ಹೀಗಿರುವಾಗಲೇ ಇದೇ ಮೀನಾ, ಕಾಲಿವುಡ್‌ ನಟ ಧನುಷ್‌ ಅವರನ್ನು ವರಿಸಲಿದ್ದಾರೆ ಎಂದೂ ಕೆಲವರು ಪುಕಾರು ಹಬ್ಬಿಸಿದ್ದರು. ಜತೆಗೆ ಖ್ಯಾತ ಉದ್ಯಮಿಯೊಬ್ಬರ ಜತೆಗೆ ಎರಡನೇ ಮದುವೆಯಾಗಲಿದ್ದಾರೆ ಎಂದೂ ವದಂತಿ ಹರಡಿದ್ದರು. ಇದೆಲ್ಲದಕ್ಕೂ ಉತ್ತರಿಸಿದ್ದ ಮೀನಾ, ಸದ್ಯಕ್ಕೆ ನನ್ನ ಗಮನ ನನ್ನ‌ ಮಗಳ ಭವಿಷ್ಯದ ಮೇಲಿದೆ. ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅದನ್ನು ಅರಿತು ಮಾತನಾಡಿ ಎಂದು ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು. ಈಗ ಅದೇ ವಿಚಾರ ಮತ್ತೆ ಸದ್ದು ಮಾಡುತ್ತಿದೆ.

ಯೂಟ್ಯೂಬರ್‌ನ ಉಡಾಫೆ ಮಾತು

ಮಾಲಿವುಡ್‌ ನಟ ಮೋಹನ್ ಲಾಲ್ ನಟಿಸಿದ್ದ ಆರತ್ ಸಿನಿಮಾದ ವಿಮರ್ಶೆಯಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಕೇರಳ ಮೂಲದ ಸಂತೋಷ್ ವರ್ಕಿ, ಈಗ ನಟಿ ಮೀನಾ ಬಗ್ಗೆ ವಿವಾದಾತ್ಮಕ ಕಾಮೆಂಟ್‌ ಮಾಡಿದ್ದಾರೆ. ವಿವಾದಗಳನ್ನೇ ಮೈಮೇಲೆ ಎಳೆದುಕೊಳ್ಳುವ ಈ ಯೂಟ್ಯೂಬರ್‌, ಈ ಹಿಂದೆ ನಿತ್ಯಾ ಮೆನನ್‌ ಅವರನ್ನೂ ಟೀಕಿಸಿ, ಅವರನ್ನೂ ಮದುವೆಯಾಗುವುದಾಗಿ ಹೇಳಿ ಸುದ್ದಿಯಾಗಿದ್ದರು. ಇದಷ್ಟೇ ಅಲ್ಲ ಸೌತ್‌ನ ನಟಿಯರಾದ ನಿಖಿಲಾ ವಿಮಲ್, ಮೋನಿಶಾ ಮೋಹನ್ ಮೆನನ್, ಐಶ್ವರ್ಯ ಲಕ್ಷ್ಮಿ, ಮಂಜು ವಾರಿಯರ್, ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಅವರನ್ನೂ ಮದುವೆಯಾಗಲಿದ್ದೇನೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ಮಗಳಿದ್ದರೂ ಪರ್ವಾಗಿಲ್ಲ!

ಇದೀಗ ನಟಿ ಮೀನಾ ವಿಚಾರವಾಗಿ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ ಯೂಟ್ಯೂಬರ್‌ ಸಂತೋಷ್‌ ವರ್ಕಿ. ಹೊಸ ವಿಡಿಯೋ ಶೇರ್‌ ಮಾಡಿದ ಸಂತೋಷ್‌, ನಾನು ನಟಿ ಮೀನಾಗೆ ಬಾಳು ಕೊಡಲು ರೆಡಿಯಾಗಿದ್ದೇನೆ. ಮಂಜು ವಾರಿಯರ್ ಅವರಂತೆ ಮೀನಾ ಕೂಡ ತುಂಬಾ ಒಳ್ಳೆಯವರು. ಮೀನಾ ಅವರಿಗೆ ಮಗಳಿದ್ದಾರೆ. ಮಗಳಿದ್ದರೂ ಪರ್ವಾಗಿಲ್ಲ. ಅದು ನನಗೆ ಸಮಸ್ಯೆಯೇ ಅಲ್ಲ" ಎಂದು ವಿಡಿಯೋದಲ್ಲಿ ಹೇಳಿಕೊಂಡು, ಟೀಕೆಗೆ ಗುರಿಯಾಗಿದ್ದಾರೆ.

ಇಷ್ಟೊಂದು ಚೀಪ್‌ ಪಬ್ಲಿಸಿಟಿ ಬೇಕಾ?

ಈತನ ಈ ವಿಡಿಯೋ ನೋಡಿದ ನೆಟ್ಟಿಗರು, ಆತನನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದ್ದಾರೆ. "ಪಬ್ಲಿಸಿಟಿಗಾಗಿ ಇಷ್ಟು ಚೀಪ್ ಆಗಬಾರದು. ನಿಮ್ಮ ಪ್ರಚಾರಕ್ಕಾಗಿ ಹೀರೋ, ಹೀರೋಯಿನ್‌ಗಳ ಬಗ್ಗೆ ಬಾಯಿಗೆ ಬಂದಿದ್ದನ್ನು ಹೇಳಬಹುದು ಎಂದುಕೊಳ್ಳುವುದು ತಪ್ಪು" ಎಂದು ಇನ್ನು ಕೆಲವರು ಹೇಳಿದರೆ, "ಇವನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ" ಎಂದೂ ಕಾಮೆಂಟ್‌ ಮಾಡಿದ್ದಾರೆ.

IPL_Entry_Point