ಕನ್ನಡ ಸುದ್ದಿ  /  Entertainment  /  Televison News Kaatera Director Tarun Sudeer About Actress Work Mahanati Reality Show Start From March 30 Pcp

ನಿಮ್ಮ ಮನೆ ಹೆಣ್ಣುಮಕ್ಕಳು ದುಡಿದರೆ ಜವಾಬ್ದಾರಿ, ಸಿನಿಮಾದಲ್ಲಿ ಹೆಣ್ಣುಮಕ್ಳು ದುಡಿದ್ರೆ ಅದು ಅಡ್ಡದಾರೀನ? ತರುಣ್‌ ಸುಧೀರ್‌ ಹೀಗೆ ಹೇಳಿದ್ಯಾಕೆ

Kaatera Director Tharun Sudhir: ದರ್ಶನ್‌ ಅಭಿನಯದ ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಅವರು ಹೆಣ್ಣು ಮಕ್ಕಳ ಕೆಲಸದ ಕುರಿತು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ನಿಮ್ಮ ಮನೆ ಹೆಣ್ಣು ಮಕ್ಕಳು ದುಡಿದರೆ ಅದು ಜವಾಬ್ದಾರಿ; ಸಿನಿಮಾದಲ್ಲಿ ಹೆಣ್ಣು ಮಕ್ಳು ದುಡಿದ್ರೆ ಅಡ್ಡದಾರೀನ? ಎಂದು ಪ್ರಶ್ನಿಸಿದ್ದಾರೆ. ಏನಿದು ಹೊಸ ವಿಷಯ ಅಂತೀರಾ?

ಸಿನಿಮಾದಲ್ಲಿ ಹೆಣ್ಣುಮಕ್ಳು ದುಡಿದ್ರೆ ಅಡ್ಡದಾರೀನ? ತರುಣ್‌ ಸುಧೀರ್‌ ಹೀಗೆ ಹೇಳಿದ್ಯಾಕೆ?
ಸಿನಿಮಾದಲ್ಲಿ ಹೆಣ್ಣುಮಕ್ಳು ದುಡಿದ್ರೆ ಅಡ್ಡದಾರೀನ? ತರುಣ್‌ ಸುಧೀರ್‌ ಹೀಗೆ ಹೇಳಿದ್ಯಾಕೆ?

ಬೆಂಗಳೂರು: ಸಿನಿಮಾ, ಸೀರಿಯಲ್‌ನಲ್ಲಿ ನಟಿಸುವ ಹೆಣ್ಣು ಮಕ್ಕಳ ಕುರಿತು ಸಮಾಜದಲ್ಲಿ ಈಗಲೂ ಅಲ್ಲಲ್ಲಿ ಕೊಂಕು ಕೇಳಿ ಬರುವುದು ಸಾಮಾನ್ಯ. ಇಂತಹ ಮಾತುಗಳು ಕನ್ನಡದ ಪ್ರಮುಖ ಫಿಲಂ ಡೈರೆಕ್ಟರ್‌ ಕಿವಿಗೆ ಬಿದ್ದರೆ ಹೇಗಿರುತ್ತದೆ. ಇಂತಹ ಒಂದು ನಾಟಕೀಯ ದೃಶ್ಯದ ವಿಡಿಯೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ತರುಣ್‌ ಸುಧೀರ್‌ ಅವರು ಸಿನಿಮಾದಲ್ಲಿ ಹೆಣ್ಣು ಮಕ್ಕಳ ಕೆಲಸದ ಕುರಿತು ಮಾತನಾಡಿದ್ದಾರೆ.

ಸಿನಿಮಾದಲ್ಲಿ ಹೆಣ್ಣು ಮಕ್ಳು ದುಡಿದ್ರೆ ಅಡ್ಡದಾರೀನ?

ಒಂದು ಶೂಟಿಂಗ್‌ ನಡೆಯುತ್ತ ಇರುತ್ತದೆ. ಸುಂದರವಾದ ಯುವತಿ ಓಡುತ್ತಿದ್ದಾಳೆ. ರೌಡಿಗಳು ಆಕೆಯನ್ನು ಅಟ್ಟಿಸಿಕೊಂಡು ಹೋಗ್ತಾ ಇದ್ದಾರೆ. ಆಗ ಆಕೆ ಪಿಸ್ತೂಲ್‌ ಹಿಡಿದು ಆ ರೌಡಿಗಳ ಎದುರಿಗೆ ನಿಲ್ಲುತ್ತಾಳೆ. ಬೇಡ ಅನ್ತಾಳೆ. ರೌಡಿ ಎದುರು ಬರ್ತಾನೆ. ಶೂಟ್‌ ಮಾಡ್ತಾಳೆ. ಕಟ್‌ ಇಟ್‌ ಎಂಬ ಡೈರೆಕ್ಟರ್‌ ಧ್ವನಿ ಕೇಳುತ್ತದೆ. ಡೈರೆಕ್ಟರ್‌ ಸೀಟ್‌ನಲ್ಲಿ ಕುಳಿತಿರುವುದು ತರುಣ್‌ ಸುಧೀರ್‌. ಕಾಟೇರದಂತಹ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ.

ಅದೇ ಸಮಯದಲ್ಲಿ ಹಿನ್ನಲೆ ಧ್ವನಿ ಕೇಳಿಸುತ್ತದೆ. "ನೋಡ್ರಿ ಇವಳ ದರ್ಬಾರ್‌. ಇನ್ನೂ ನಾಲ್ಕು ಫಿಕ್ಚರ್‌ ಮಾಡಿಲ್ಲ. ಅಲ್ಲಿ ನೋಡಿ ಕೋಟಿಕೋಟಿ ಕಾರು. ಇವಳು ಹೇಗೆ ಸಂಪಾದನೆ ಮಾಡಿದ್ಲೋ, ಅಥವಾ ಇನ್ಯಾರೋ ಕೊಡಿಸಿದ್ರೋ" ಎಂದು ಶೂಟಿಂಗ್‌ ಜಾಗದಲ್ಲಿ ಒಬ್ಬರು ಮಾತನಾಡುವುದು ತರುಣ್‌ ಸುಧೀರ್‌ ಕಿವಿಗೆ ಬೀಳುತ್ತದೆ.

ತಕ್ಷಣ ತರುಣ್‌ ಸುಧೀರ್‌ "ಮಂಜಣ್ಣ ಬಾ ಇಲ್ಲಿ" ಎಂದು ಕರೆಯುತ್ತಾರೆ. ಸರ್‌ ಎಂದು ಮಂಜಣ್ಣ ತರುಣ್‌ ಸುಧೀರ್‌ ಬಳಿಗೆ ಹೋಗುತ್ತಾರೆ. ನಿಮ್ಮ ಮಗಳಿಗೆ ಮದುವೆ ಮಾಡ್ತಾ ಇದ್ದೀರಲ್ವ ಏನಾದರೂ ಹಣಕಾಸು ಬೇಕಿದ್ರೆ ಮುಜುಗರ ಇಲ್ಲದೆ ಕೇಳಿ ಅನ್ತಾರೆ ತರುಣ್‌ ಸುಧೀರ್‌.

ಏನೂ ಬೇಡ ಸರ್‌, ಮದುವೆಗೆ ಎಲ್ಲಾ ನನ್ನ ಮಗಳೇ ದುಡಿದು ಅವಳ ಮದುವೆಗೆ ಅವಳೇ ಹಣ ಮಾಡಿದ್ದಾಳೆ ಸರ್‌ ಎಂದು ಮಂಜಣ್ಣ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದಕ್ಕೆ ಉತ್ತರವಾಗಿ ತರುಣ್‌ ಸುಧೀರ್‌ "ನಿಮ್ಮ ಮನೆ ಹೆಣ್ಣು ಮಕ್ಕಳು ದುಡಿದರೆ ಅದು ಜವಾಬ್ದಾರಿ; ಸಿನಿಮಾದಲ್ಲಿ ಹೆಣ್ಣು ಮಕ್ಳು ದುಡಿದ್ರೆ ಅಡ್ಡದಾರೀನ?" ಎಂದು ಪ್ರಶ್ನಿಸುತ್ತಾರೆ.

"ಮಂಜಣ್ಣ ವ್ಯಕ್ತಿತ್ವದಲ್ಲಿ ಒಳ್ಳೆಯದು ಕೆಟ್ಟದ್ದು ಇರುತ್ತೆ ಹೊರತು ಮಾಡುವ ಕೆಲಸದಲ್ಲಿ ಅಲ್ಲ. ಮಾಡೋ ಕೆಲಸದಲ್ಲಿ ಪ್ರಾಮಾಣಿಕತೆ ಇದ್ರೆ ಯಾರು ಬೇಕಾದ್ರೂ ದಂತಕಥೆ ಆಗಬಹುದು" ಎಂದು ತರುಣ್‌ ಸುಧೀರ್‌ ಹೇಳುತ್ತಾರೆ.

ಇದು ಒಂದು ಕಾಲ್ಪನಿಕ ದೃಶ್ಯ. ಝೀ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲಿಯೇ ಆರಂಭವಾಗಲಿರುವ ಮಹಾನಟಿ ರಿಯಾಲಿಟಿ ಶೋನ ಪ್ರಮೋ ಇದಾಗಿದೆ. ಈ ಮೂಲಕ ಮಹಾನಟಿಯಲ್ಲಿ ಭಾಗವಹಿಸುವ ಸ್ಪರ್ಧಿಗಳ ಕುರಿತು ಒಂದು ಮಹತ್ವದ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಈ ಮಹಾನಟಿ ರಿಯಾಲಿಟಿ ಶೋ ಇದೇ ಶನಿವಾರ ಅಂದರೆ ಮಾರ್ಚ್‌ 30ರಿಂದ ಆರಂಭವಾಗಲಿದೆ. ಮಹಾನಟಿ ರಿಯಾಲಿಟಿ ಶೋದಲ್ಲಿ ಜಡ್ಜ್‌ ಸ್ಥಾನದಲ್ಲಿ ತರುಣ್‌ ಸುಧೀರ್‌, ರಮೇಶ್‌ ಅರವಿಂದ್‌, ನಟಿ ಪ್ರೇಮಾ ಮತ್ತು ಸಪ್ತಮಿ ಗೌಡ ಇರಲಿದ್ದಾರೆ.

IPL_Entry_Point