Naanum Rowdy Dhaan: ನಯನತಾರಾಳ ಬದುಕು ಬದಲಿಸಿದ ನಾನುಮ್‌ ರೌಡಿ ಧಾನ್‌, ಧನುಷ್‌ಗೆ ಈ ಪರಿ ದ್ವೇಷವೇಕೆ, ಇದು 3 ಸೆಕೆಂಡ್‌ ವಿಡಿಯೋ ವಿಷಯವಲ್ಲ
ಕನ್ನಡ ಸುದ್ದಿ  /  ಮನರಂಜನೆ  /  Naanum Rowdy Dhaan: ನಯನತಾರಾಳ ಬದುಕು ಬದಲಿಸಿದ ನಾನುಮ್‌ ರೌಡಿ ಧಾನ್‌, ಧನುಷ್‌ಗೆ ಈ ಪರಿ ದ್ವೇಷವೇಕೆ, ಇದು 3 ಸೆಕೆಂಡ್‌ ವಿಡಿಯೋ ವಿಷಯವಲ್ಲ

Naanum Rowdy Dhaan: ನಯನತಾರಾಳ ಬದುಕು ಬದಲಿಸಿದ ನಾನುಮ್‌ ರೌಡಿ ಧಾನ್‌, ಧನುಷ್‌ಗೆ ಈ ಪರಿ ದ್ವೇಷವೇಕೆ, ಇದು 3 ಸೆಕೆಂಡ್‌ ವಿಡಿಯೋ ವಿಷಯವಲ್ಲ

Naanum Rowdy Dhaan: ಧನುಷ್‌ ವಿರುದ್ಧ ನಯನತಾರಾ ಬಹಿರಂಗ ಪತ್ರ ಬರೆದ ಬಳಿಕ "ಈಕೆ ಇವರಿಬ್ಬರ ನಡುವೆ ಈ ಪರಿ ದ್ವೇಷ" ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಇದು ಕೇವಲ 3 ಸೆಕೆಂಡ್‌ ವಿಡಿಯೋದ ಕಾಪಿರೈಟ್‌ ವಿಷಯವಲ್ಲ. ಇದರ ಹಿಂದೆ 2015ರ ನಾನುಮ್‌ ರೌಡಿ ಧಾನ್‌ ಸಿನಿಮಾದ ಬಳಿಕದ ಘಟನೆಗಳು ಇವೆ.

ನಯನತಾರಾಳ ಬದುಕು ಬದಲಿಸಿದ ನಾನುಮ್‌ ರೌಡಿ ಧಾನ್‌
ನಯನತಾರಾಳ ಬದುಕು ಬದಲಿಸಿದ ನಾನುಮ್‌ ರೌಡಿ ಧಾನ್‌

Naanum Rowdy Dhaan: ಧನುಷ್‌ ವಿರುದ್ಧ ನಯನತಾರಾ ಬಹಿರಂಗ ಪತ್ರ ಬರೆದ ಬಳಿಕ "ನಾನುಮ್‌ ರೌಡಿ ಧಾನ್‌" ಎಂಬ ಸಿನಿಮಾ ಸುದ್ದಿಯಲ್ಲಿದೆ. "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್"ನಲ್ಲಿ ಆ ಸಿನಿಮಾದ ಮೂರು ಸೆಕೆಂಡ್‌ ವಿಡಿಯೋ ಬಳಸಿದ್ದಕ್ಕೆ ಧನುಷ್‌ 10 ಕೋಟಿ ಪರಿಹಾರದ ಜತೆಗೆ ಲೀಗಲ್‌ ನೋಟೀಸ್‌ ಕಳುಹಿಸಿರುವ ಕುರಿತು ನಯನತಾರಾ ಬಹಿರಂಗವಾಗಿ ಮೂರು ಪುಟಗಳ ಪತ್ರ ಬರೆದಿದ್ದರು. ತಾನು ನಾಯಕಿಯಾಗಿ ನಟಿಸಿರುವ ಸಿನಿಂಆದ ಮೂರು ಸೆಕೆಂಡ್‌ ವಿಡಿಯೋ ಬಳಸಿರುವುದಕ್ಕೆ ಇಷ್ಟೊಂದು ಪರಿಹಾರ ಬಯಸುವುದು ಸರಿಯೇ? ಇದು ಕೇವಲ ಕಾಪಿರೈಟ್‌ ಜಗಳವೇ? ಅಥವಾ ವೈಯಕ್ತಿಕ ದ್ವೇಷ ಸಾಧನೆಯೇ? ಇತ್ಯಾದಿ ಪ್ರಶ್ನೆಗಳು ಜನರಲ್ಲಿ ಇರುವುದು ಸಹಜ. ಇದು ಕೇವಲ ಕಾಪಿರೈಟ್‌ ಜಗಳವಲ್ಲ. ಧನುಷ್‌ಗೆ ನಯನತಾರ ಮತ್ತು ಆಕೆಯ ಪತಿ ವಿಘ್ನೇಶ್‌ ಶಿವಂ ಕುರಿತು ಇರುವ ದ್ವೇಷದ ನೋಟಿಸ್‌ ಕೂಡ ಇದಾಗಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ನಯನತಾರಾಳ ಬದುಕು ಬದಲಿಸಿದ ಚಿತ್ರ

ನಾನುಮ್ ರೌಡಿ ಧಾನ್ ಎನ್ನವುದು ನಯನತಾರಾಳ ಕರಿಯರ್‌ನಲ್ಲಿ ಮೈಲುಗಲ್ಲು. ಈಕೆಯ ಬದುಕು ಬದಲಿಸಿದ ಚಿತ್ರ ಇದು ಎಂದರೂ ತಪ್ಪಾಗದು. ತನ್ನ ನಟನೆಯಿಂದ ತಾನೊಬ್ಬಳು ಪ್ರತಿಭಾನ್ವಿತ ನಟಿ ಎಂದು ತೋರಿಸಿಕೊಟ್ಟಿದ್ದರು ನಯನತಾರಾ. ಈಗ ಇವರ ಪತಿಯಾಗಿರುವ ವಿಘ್ನೇಶ್‌ ಶಿವನ್‌ ಪಾಲಿಗೂ ಈ ಚಿತ್ರವು ಮೈಲುಗಲ್ಲಾಗಿತ್ತು. ಆದರೆ, ಇದೇ ಸಮಯದಲ್ಲಿ ಈ ಚಿತ್ರದ ಬಳಿಕ ಧನುಷ್‌ ಜತೆ ನಯನತಾರಾಳ ವೈಯಕ್ತಿಕ ಮತ್ತು ವೃತ್ತಿಪರ ಬದುಕು ಹಾಳಾಯಿತು ಎಂದು ಇಂಡಿಯನ್‌ ಟುಡೇ ವರದಿ ತಿಳಿಸಿದೆ. ಅಂದಹಾಗೆ, ನಾನುಮ್‌ ರೌಡಿ ಧಾನ್‌ ಸಿನಿಮಾಕ್ಕೆ ಧನುಷ್‌ ನಿರ್ಮಾಪಕರಾಗಿದ್ದರು.

ಚಿತ್ರರಂಗ ಬಿಡ್ತಿನಿ ಅಂದಿದ್ರು ನಯನತಾರಾ

2021ರ ಶ್ರೀರಾಮ ರಾಜ್ಯಂ ಎಂಬ ತೆಲುಗು ಸಿನಿಮಾದ ಬಳಿಕ ನಯನತಾರ ಚಿತ್ರರಂಗ ತೊರೆಯುವ ಕುರಿತು ಮಾತನಾಡಿದ್ದರು. ಸಿಲಂಬರಸನ್ ಮತ್ತು ಪ್ರಭುದೇವ ಅವರ ಜತೆಗಿನ ಸಂಬಂಧ ಕೆಟ್ಟು ನೋವು ಅನುಭವಿಸುತ್ತಿದ್ದ ಕಾಲವದು. ಇದೇ ಕಾರಣಕ್ಕೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಸಿನಿಮಾ ಬಿಡುವ ಮಾತನಾಡಿದ್ದರು. ಆದರೆ, 2013ರಲ್ಲಿ ರಾಜಾ ರಾಣಿ ಸಿನಿಮಾಕ್ಕೆ ನಿರ್ದೇಶಕ ಅಟ್ಲಿ ಈಕೆಯನ್ನು ಕರೆತಂದರು. ಈ ಸಿನಿಮಾದ ಮೂಲಕ ಅಟ್ಲಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾದರು. ರಾಜಾ ರಾಣಿ ಚಿತ್ರವು ಬ್ಲಾಕ್‌ಬಸ್ಟರ್‌ ಹಿಟ್‌ ಆಯ್ತು. ಇದಾದ ಬಳಿಕದ ಕೆಲವು ಸಿನಿಮಾಗಳು ನಯನತಾರಾಳಿಗೆ ಯಶಸ್ಸು ನೀಡಲಿಲ್ಲ.

ಎರಡು ವರ್ಷದ ಬಳಿಕ ನಯನತಾರಾ ಮುಟ್ಟಿದ್ದೆಲ್ಲವೂ ಚಿನ್ನವಾಯ್ತು. ಥಾನಿ ಒರುವನ್‌, ಮಾಯಾ ಸಿನಿಮಾಗಳು ಸೂಪರ್‌ಹಿಟ್‌ ಆಯ್ತು. ಪುರುಷ ಪ್ರಾಬಲ್ಯದ ಸಿನಿಮಾರಂಗದಲ್ಲಿ ನಯನತಾರಾ ದೊಡ್ಡ ಅಲೆಯನ್ನೇ ಸೃಷ್ಟಿಸಿದರು. ಮಾಯಾ ಎಂಬ ತನಿಖಾ ಥ್ರಿಲ್ಲರ್‌ ಸಿಸನಿಮಾದಲ್ಲಿ ಭಯಾನಕ ಪಾತ್ರದಲ್ಲಿ ನಯನತಾರಾ ನಟಿಸಿದ್ದರು.

2015ರಲ್ಲಿ ಬಿಡುಗಡೆಯಾದ ನಾನುಮ್ ರೌಡಿ ಧಾನ್ ಚಿತ್ರದಲ್ಲಿ ನಯನತಾರಾ ಕಾದಂಬರಿ ಎಂಬ ಅಬಲೆ ಪಾತ್ರದಲ್ಲಿ ನಟಿಸಿದರು. ತನ್ನ ತಂದೆಯ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಈಕೆ ಸ್ಥಳೀಯ ರೌಡಿ ಪಾಂಡಿ (ವಿಜಯ್‌ ಸೇತುಪತಿ) ನೆರವು ಪಡೆಯುವ ಕಥೆಯನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ನಡುವೆ ಪ್ರೇಮಾಂಕುರವಾಗಿತ್ತು. ಅವರಿಬ್ಬರ ಕುರಿತು ಗಾಸಿಪ್‌ ಹರಿದಾಡತೊಡಗಿತ್ತು. ಇವರಿಬ್ಬರ ಅರೆಬೆತ್ತಲೆ ಫೋಟೋಗಳು ಇಂಟರ್‌ನೆಟ್‌ನಲ್ಲಿ ಓಡಾಡಲು ಆರಂಭವಾದವು. ಬಳಿಕ ವಿಘ್ನೇಶ್‌ನನ್ನು ನಯನತಾರಾ ಮದುವೆಯಾದರು. ಪತಿಯನ್ನು ನೀಡಿದ ಸಿನಿಮಾವಾಗಿಯೂ ಈಕೆಗೆ ಈ ಸಿನಿಮಾ ಸ್ಪೆಷಲ್‌.

ಧನುಷ್‌ ಜತೆಗಿನ ಸ್ನೇಹಕ್ಕೆ ಕೊಳ್ಳಿಯಿಟ್ಟ ಸಿನಿಮಾ

ನಾನಮ್‌ ರೌಡಿ ಧಾನ್‌ ಸಿನಿಮಾಕ್ಕೆ ಮುನ್ನ ನಯನತಾರಾ ಮತ್ತು ಧನುಷ್‌ ಒಳ್ಳೆಯ ಫ್ರೆಂಡ್ಸ್‌ಆಗಿದ್ದರು. ಯಾರಾದಿ ನೀ ಮೋಹಿನಿ ಸಿನಿಮಾದಲ್ಲಿ ಇವರಿಬ್ಬರು ನಾಯಕ ನಾಯಕಿಯಾಗಿದ್ದರು. ಇಬ್ಬರ ನಡುವೆ ರಿಯಲ್‌ ಆಗಿ ಲವ್‌ ಇತ್ತಾ? ಗೊತ್ತಿಲ್ಲ. ಆದರೆ, ಇವರಿಬ್ಬರು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಗೆ ಎಲ್ಲಿ ಹೋದರೂ ಜತೆಯಾಗಿ ಇರುತ್ತಿದ್ದರು. ಇದಾದ ಬಳಿಕ ಧನುಷ್‌ ಅವರು ನಯನತಾರಾ ಮತ್ತು ವಿಘ್ನೇಶ್‌ ಜತೆ ನಾನುಮ್‌ ರೌಡಿ ಧಾನ್‌ ಸಿನಿಮಾ ನಿರ್ಮಾಣ ಮಾಡಲು ಮುಂದಾದರು. ಈ ಚಿತ್ರ ಯಶಸ್ವಿಯಾದರೂ "ಈ ಚಿತ್ರ ಧನುಷ್‌ಗೆ ಖುಷಿ ನೀಡಿಲ್ಲ" ಎಂಬ ವದಂತಿಗಳು ಹರಿದಾಡುತ್ತಿದ್ದವಂತೆ.

ಸಿನಿಮಾದ ಬಜೆಟ್‌ ಮೇರೆ ಮೀರಿರುವುದು ಧನುಷ್‌ ಬೇಸರಕ್ಕೆ ಪ್ರಮುಖ ಕಾರಣವಂತೆ. ಕೆಲವೊಂದು ವರದಿಗಳ ಪ್ರಕಾರ, ಬಾಕ್ಸ್‌ ಆಫೀಸ್‌ನಲ್ಲಿ ನಾನುಮ್‌ ರೌಡಿ ಧಾನ್‌ ಯಶಸ್ವಿಯಾದರೂ ನಿರ್ಮಾಪಕ ಧನುಷ್‌ಗೆ ಲಾಭದಾಯಕವಾಗಿರಲಿಲ್ಲವಂತೆ. ಶೂಟಿಂಗ್‌ ವಿಳಂಬವಾದ ಕಾರಣ, ಬಜೆಟ್‌ ಹೆಚ್ಚಾದ ಕಾರಣ ಧನುಷ್‌ ಈ ಸಿನಿಮಾವನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಯಿತಂತೆ. ಈ ಸಿನಿಮಾವು ವಿತರಕರಿಗೆ ಕೈತುಂಬಾ ಹಣ ಪಡೆಯಲು ಕಾರಣವಾದರೂ, ಧನುಷ್‌ಗೆ ನಷ್ಟವಾಯಿತು. ಇಂತಹ ಸಾಕಷ್ಟು ವದಂತಿಗಳಿವೆ. ನಾನುಮ್‌ ರೌಡಿ ಧಾನ್‌ ಬಳಿಕ ನಯನತಾರಾ ಮತ್ತು ಧನುಷ್‌ ನಡುವೆಯೂ ಭಿನ್ನಾಭಿಪ್ರಯ ಆರಂಭವಾಗಿದೆ ಎನ್ನಲಾಗುತ್ತಿದೆ. ಧನುಷ್‌ಗೆ ಅಂದಿನ ಕೋಪ ಕಡಿಮೆಯಾದಂತೆ ಇಲ್ಲ. ಹೀಗಾಗಿ, ನಯನತಾರಾ ಮತ್ತು ಧನುಷ್‌ ನಡುವಿನ ಕಲಹ ಕೇವಲ ಮೂರು ಸೆಕೆಂಡಿನ ವಿಡಿಯೋಗೆ ಅಲ್ಲ. ಇದು ವೈಯಕ್ತಿಕ ದ್ವೇಷದ ಜಗಳ ಎನ್ನಲಾಗುತ್ತಿದೆ.

Whats_app_banner