ಒಟಿಟಿಯತ್ತ ಮುಖ ಮಾಡಿದ ಜೈಗಣೇಶ್; ಎಲ್ಲಿ, ಯಾವಾಗ ನೋಡಬಹುದು ಉನ್ನಿ ಮುಕುಂದನ್ ನಟನೆಯ ನಿಗೂಢ ಥ್ರಿಲ್ಲರ್ ಸಿನಿಮಾ
Jai Ganesh OTT release: ಸದ್ಯದಲ್ಲಿಯೇ ಉನ್ನಿ ಮುಕುಂದನ್ ನಟನೆಯ ನಿಗೂಢ ಥ್ರಿಲ್ಲರ್ ಕಥಾನಕ "ಜೈ ಗಣೇಶ್" ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಧಿಕೃತವಾಗಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟಗೊಳ್ಳದೆ ಇದ್ದರೂ, ಇನ್ನೊಂದು ವಾರದಲ್ಲಿಯೇ ಈ ಸಿನಿಮಾ ಮನೋರಮಾ ಮ್ಯಾಕ್ಸ್‌ನಲ್ಲಿ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು: ಈ ವರ್ಷ ಮಲಯಾಳಂನಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳು ರಿಲೀಸ್ ಆಗಿವೆ. ಮಂಜುಮ್ಮೆಲ್ ಬಾಯ್ಸ್, ಆವೇಶಂ ಸೇರಿದಂತೆ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ಚಿಂದಿ ಉಡಾಯಿಸಿವೆ. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಉನ್ನಿ ಮುಕುಂದನ್ ನಟನೆಯ ಜೈ ಗಣೇಶ್ ಇದೀಗ ಒಟಿಟಿಯತ್ತ ಮುಖ ಮಾಡಿದೆ. ಮಲಯಾಳಂನ ಹೊಸ ಸಿನಿಮಾ ಶೀಘ್ರದಲ್ಲಿ ಡಿಜಿಟಲ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಮನೋರಮಾ ಮ್ಯಾಕ್ಸ್ ಒಟಿಟಿಯು ಜೈಗಣೇಶ್ ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ವರದಿಗಳ ಪ್ರಕಾರ ಇನ್ನೊಂದು ವಾರದಲ್ಲಿಯೇ ಜೈ ಗಣೇಶ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಮನೋರಮಾ ಮ್ಯಾಕ್ಸ್‌ನಲ್ಲಿ ಜೈಗಣೇಶ
ಜೈ ಗಣೇಶ್ ಸಿನಿಮಾದ ತಾರಾಗಣದ ಕುರಿತು ಮನೋರಮಾ ಮ್ಯಾಕ್ಸ್ ಮಾಹಿತಿ ಹಂಚಿಕೊಂಡಿದೆ. ಇದೇ ಸಮಯದಲ್ಲಿ ಜೈ ಗಣೇಶ್ ಸಿನಿಮಾದ ಸ್ಯಾಟ್‌ಲೈಟ್ ಹಕ್ಕುಗಳನ್ನು ಖರೀದಿಸಿರುವ ಕುರಿತು ಮಾಝವಿಲ್ ಮನೋರಮಾ ಮಾಹಿತಿ ನೀಡಿದೆ. ಮುಂಬರುವ ವಾರಗಳಲ್ಲಿ ಮನೋರಮಾ ಮ್ಯಾಕ್ಸ್‌ನಲ್ಲಿ ಜೈ ಗಣೇಶ್ ಪ್ರಸಾರವಾಗಲಿದೆ. ಮೇ 9ಕ್ಕೆ ಫಹಾದ್ ಫಾಸಿಲ್ ನಟನೆಯ ಆವೇಶಂ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಕೂಡ ಚಿತ್ರಮಂದಿರಗಳಲ್ಲಿ ಬಿಸು ಹಬ್ಬದ ಸಮಯದಲ್ಲಿ ರಿಲೀಸ್ ಆಗಿತ್ತು. ವರ್ಷಗಲ್ಕು ಶೇಷಂ ಚಿತ್ರ ಯಾವಾಗ ಒಟಿಟಿಗೆ ಆಗಮಿಸಲಿದೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಈ ಎಲ್ಲಾ ಸಿನಿಮಾಗಳು ಏಪ್ರಿಲ್ 11ರಂದು ಬಿಡುಗಡೆಯಾಗಿದ್ದವು.
ಜೈ ಗಣೇಶ್ ಸಿನಿಮಾದ ಕುರಿತು
ಗ್ರಾಫಿಕ್ ಕಲಾವಿದ ಗಣೇಶ್‌ನ ಕಥೆಯನ್ನು ಜೈ ಗಣೇಶ್ ಸಿನಿಮಾ ಹೊಂದಿದೆ. ಅಪಘಾತದಿಂದಾಗಿ ಈತನಿಗೆ ಸೊಂಟದ ಕೆಳಗೆ ಲಕ್ವಾ ಹೊಡೆದಿದೆ. ಎಂಎಲ್‌ಎ ಪ್ರಕಾಶ್ ಪುತ್ರನ್ ಅವರ ಮಗನ ಜತೆ ಸ್ನೇಹ ದೊರಕಿದ ಬಳಿಕ ಗಣೇಶನ ಬದುಕು ಬದಲಾಗುತ್ತದೆ. ನಿಗೂಢ ವ್ಯಕ್ತಿಯೊಬ್ಬ ಎಂಎಲ್‌ಎ ಪುತ್ರನನ್ನು ಅಪಹರಿಸುತ್ತಾನೆ. ಗಣೇಶ್ ಹೇಗೆ ತನ್ನ ಕೌಶಲ ಬಳಸಿ ಆಯನ್ ಅಪಹರಣ ಪ್ರಕರಣ ಬೇಧಿಸುತ್ತಾನೆ ಎನ್ನುವುದು ಈ ಸಿನಿಮಾದ ಪ್ರಮುಖ ಕಥೆಯಾಗಿದೆ.
ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿರಲಿಲ್ಲ. ಆದರೆ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆವೇಶಂ ಮತ್ತು ವರ್ಷಂಗಲ್ಕು ಶೇಷಂ ಚಿತ್ರಗಳ ನಡುವೆ ಈ ಸಿನಿಮಾ ಸಾಕಷ್ಟು ಜನರನ್ನು ಸೆಳೆದಿತ್ತು. ಈ ಸಿನಿಮಾ ಕೊನೆತನಕ ಕೌತಕ ಕಾಯ್ದುಕೊಂಡು ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ. ಉಣ್ಣಿ ಮುಕುಂದನ್ ಅವರ ಅದ್ಭುತ ಅಭಿನಯದಿಂದಾಗಿ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುತ್ತದೆ.
ಈ ನಿಗೂಢ ಥ್ರಿಲ್ಲರ್ ಸಿನಿಮಾದ ಕಥೆ ಮತ್ತು ನಿರ್ದೇಶಣ ರಂಜಿತ್ ಶಂಕರ್ ಅವರದ್ದು. ಅಶೋಕನ್, ಜೊಮೊಲ್, ಮಹಿಮಾ ನಂಬಿಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿದ್ದಾರೆ.
ಒಟಿಟಿಯಲ್ಲಿ ಬೇರೆ ಯಾವ ಸಿನಿಮಾ ಸದ್ಯದಲ್ಲಿ ರಿಲೀಸ್ ಆಗಲಿದೆ?
ಬಾಲಿವುಡ್ ಸಿನಿಮಾ ಪ್ರೇಮಿಗಳು ಈ ವಾರ ಬಸ್ತಾರ್: ದಿ ನಕ್ಸಲ್ ಸ್ಟೋರಿ ಎಂಬ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಬಸ್ತಾರ್: ದಿ ನಕ್ಸಲ್ ಸ್ಟೋರಿ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾರ್ಚ್ 15ರಂದು ಬಿಡುಗಡೆಯಾಗಿತ್ತು. ಸುಮಾರು 15 ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ್ದ ಈ ಸಿನಿಮಾವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 3.75 ಕೋಟಿ ಗಳಿಸಿತ್ತು. ಝೀ5 ಒಟಿಟಿಯಲ್ಲಿ ಇದೇ ಮೇ 17ರಂದು ಬಸ್ತಾರ್ ದಿ ನಕ್ಸಲ್ ಸ್ಟೋರಿ ಸಿನಿಮಾವು ಬಿಡುಗಡೆಯಾಗಲಿದೆ.