Maharaja OTT: ವಿಜಯ್‌ ಸೇತುಪತಿ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ; ಈ ವಾರ ಒಟಿಟಿಯಲ್ಲಿ ಮಹಾರಾಜ ಸಿನಿಮಾ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  Maharaja Ott: ವಿಜಯ್‌ ಸೇತುಪತಿ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ; ಈ ವಾರ ಒಟಿಟಿಯಲ್ಲಿ ಮಹಾರಾಜ ಸಿನಿಮಾ ರಿಲೀಸ್‌

Maharaja OTT: ವಿಜಯ್‌ ಸೇತುಪತಿ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ; ಈ ವಾರ ಒಟಿಟಿಯಲ್ಲಿ ಮಹಾರಾಜ ಸಿನಿಮಾ ರಿಲೀಸ್‌

Vijay Sethupathi Maharaja OTT Release Date: ಮಕ್ಕಳ್‌ ಸೆಲ್ವನ್‌ ವಿಜಯ ಸೇತುಪತಿ ನಟನೆಯ ಹೊಸ ಸಿನಿಮಾ "ಮಹಾರಾಜ" ಒಟಿಟಿ ಬಿಡುಗಡೆ ಕುರಿತು ಅಪ್‌ಡೇಟ್‌ ಬಂದಿದೆ. ವಿಜಯ್‌ ಸೇತುಪತಿಯವರ 50ನೇ ಸಿನಿಮಾವಾಗಿರುವ ಮಹಾರಾಜವು ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು.

ಈ ವಾರ ಒಟಿಟಿಗೆ ಮಹಾರಾಜ ಸಿನಿಮಾ
ಈ ವಾರ ಒಟಿಟಿಗೆ ಮಹಾರಾಜ ಸಿನಿಮಾ

ಬೆಂಗಳೂರು: ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮಹಾರಾಜ' ಕಳೆದ ತಿಂಗಳು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಜಯ್‌ ನಟನೆಯ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಸಾಕಷ್ಟು ಗಳಿಕೆ ಮಾಡಿತು. ಮಕ್ಕಳ್‌ ಸೆಲ್ವನ್‌ ಸೇತುಪತಿ ನಾಯಕನಾಗಿ ತಮಿಳಿನಲ್ಲಿ ತಯಾರಾದ ಈ ಚಿತ್ರ ಜೂನ್ 14 ರಂದು ಬಿಡುಗಡೆಯಾಗಿ ಭಾರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ? ಮನೆಯಲ್ಲಿಯೇ ಕುಳಿತು ಈ ಸಿನಿಮಾ ನೋಡೋದು ಯಾವಾಗ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ನೋಡಲು ಸಾಧ್ಯವಾಗದೆ ಇರುವವರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಮಹಾರಾಜ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಂತಿಮಗೊಳಿಸಲಾಗಿದೆ. ಮನೆಯಲ್ಲಿರುವ ಒಟಿಟಿ ಲಭ್ಯವಿರುವ ಟಿವಿ ಅಥವಾ ಮೊಬೈಲ್‌ ಮೂಲಕವೇ ಮಹಾರಾಜ ಸಿನಿಮಾ ನೋಡಬಹುದಾಗಿದೆ.

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟ್ರೀಮಿಂಗ್‌

ಮಹಾರಾಜ ಚಲನಚಿತ್ರವು ಜುಲೈ 12 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಅಂದರೆ, ಇದೇ ವಾರ ಇದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ.

ಥಿಯೇಟರ್‌ಗೆ ಬಂದು ತಿಂಗಳಾಗಿಲ್ಲ

ಅಚ್ಚರಿಯ ಸಂಗತಿಯೆಂದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಒಂದು ತಿಂಗಳೊಳಗೆ ಈ ಚಿತ್ರ ಒಟಿಟಿಗೆ ಆಗಮಿಸುತ್ತಿದೆ. ಈ ಹಿಂದೆ ಮಹಾರಾಜ ಚಿತ್ರ ಜುಲೈ 19 ರಂದು ಸ್ಟ್ರೀಮ್ ಆಗಲಿದೆ ಎಂಬ ಸುದ್ದಿ ಇತ್ತು. ಆದರೆ, ಅದಕ್ಕೂ ಒಂದು ವಾರದ ಮೊದಲು ಜುಲೈ 12 ರಂದು ಈ ಸಿನಿಮಾವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರಲಿದೆ. ಜೂನ್ 14 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಸೂಪರ್‌ ಹಿಟ್‌ ಆಗಿದ್ದರೂ ಚಿತ್ರಮಂದಿರಗಳಲ್ಲಿ ದಟ್ಟಣೆ ಕಡಿಮೆಯಾದ ತಕ್ಷಣ ಒಟಿಟಿಯತ್ತ ಮುಖ ಮಾಡಿದೆ.

ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು?

ಮಹಾರಾಜ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಇಲ್ಲಿಯವರೆಗೆ ಚಿತ್ರ ಸುಮಾರು 104 ಕೋಟಿ ರೂ ಗಳಿಕೆ ಮಾಡಿದೆ. ಸುಮಾರು ರು.20 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಹಲವು ಪಟ್ಟು ಗಳಿಕೆ ಮಾಡಿ ಸೂಪರ್‌ಹಿಟ್‌ ಆಗಿದೆ.

ಮಹಾರಾಜ ಸಿನಿಮಾಕ್ಕೆ ನಿಥಿಲನ್ ಸ್ವಾಮಿನಾಥನ್ ಆಕ್ಷನ್‌ ಕಟ್‌ ಹೇಳಿದ್ದಾರೆ..ಈ ಚಿತ್ರವನ್ನು ಆಕ್ಷನ್ ಥ್ರಿಲ್ಲರ್ ಆಗಿ ರೋಚಕವಾಗಿ ನಿರ್ಮಿಸಲಾಗಿದೆ. ಕಥೆ ಅಷ್ಟೊಂದು ಹೊಸದಲ್ಲದಿದ್ದರೂ ಚಿತ್ರಕಥೆಯಲ್ಲಿ ಮ್ಯಾಜಿಕ್ ಮಾಡಿದ್ದಾರೆಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ನಟರಾಜ್, ಭಾರತಿರಾಜ, ಅಭಿರಾಮಿ ಮತ್ತು ಅರುಲ್ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ನಟರ ಅಭಿನಯಕ್ಕೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಹಾರಾಜ ಚಿತ್ರವನ್ನು ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸ್ವಾಮಿ ಅವರು ಪ್ಯಾಶನ್ ಸ್ಟುಡಿಯೋಸ್ ಮತ್ತು ದಿ ರೂಟ್ ಥಿಂಕ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಕಥೆಯನ್ನು ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಬರೆದಿದ್ದಾರೆ. ಈ  ಸಿನಿಮಾ ಈ ವಾರ ಒಟಿಟಿಗೆ ಆಗಮಿಸುತ್ತಿದ್ದು, ನೆಟ್‌ಫ್ಲಿಕ್ಸ್‌ ಚಂದಾದಾರರು ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ. 

Whats_app_banner