ಕನ್ನಡ ಸುದ್ದಿ  /  Entertainment  /  Kannada Television News Seetha Rama Serial March 19th Episode Highlights Seetha Raama Serial Public Review Mnk

Seetha Rama Serial: ಅಯ್ಯೋ ನಮ್ಮ ಹೊಟ್ಟೆ ಉರ್ಸ್ಬೇಡಿ ಪಾ ನಾಚಿಕೆ ಆಗುತ್ತೆ; ಮಂಗಳವಾರದ ಸೀತಾ ರಾಮ ಸೀರಿಯಲ್‌ ಸಂಚಿಕೆಗೆ ವೀಕ್ಷಕ ಫಿದಾ

Seetha Rama Serial Latest Episode: ಸೀತಾ ರಾಮ ಧಾರಾವಾಹಿಯಲ್ಲೀಗ ಪ್ರೇಮಾಯಣ ಶುರುವಾಗಿದೆ. ಇಬ್ಬರ ನಡುವೆ ಪ್ರೀತಿಯ ಮೊಳಕೆ ಚಿಗುರುತ್ತಿದೆ. ಇವರಿಬ್ಬರ ಪ್ರೀತಿ ಪಿಸುಮಾತಿಗೆ ವೀಕ್ಷಕ ಫುಲ್‌ ಫಿದಾ ಆಗಿದ್ದಾನೆ. ಟಿವಿ ಪರದೆ ಮೇಲೆ ಇವರಿಬ್ಬರ ಒಲುಮೆ ಕಂಡೊಡನೆ, ನೋಡುಗ ಕುಳಿತಲ್ಲೇ ಕಿರುನಗೆ ಬೀರಿ, ನಾಚಿಕೆ ಹೊರಹಾಕುತ್ತಿದ್ದಾನೆ.

Seetha Rama Serial: ಅಯ್ಯೋ ನಮ್ಮ ಹೊಟ್ಟೆ ಉರ್ಸ್ಬೇಡಿ ಪಾ ನಾಚಿಕೆ ಆಗುತ್ತೆ; ಮಂಗಳವಾರದ ಸೀತಾ ರಾಮ ಸೀರಿಯಲ್‌ ಸಂಚಿಕೆಗೆ ವೀಕ್ಷಕ ಫಿದಾ
Seetha Rama Serial: ಅಯ್ಯೋ ನಮ್ಮ ಹೊಟ್ಟೆ ಉರ್ಸ್ಬೇಡಿ ಪಾ ನಾಚಿಕೆ ಆಗುತ್ತೆ; ಮಂಗಳವಾರದ ಸೀತಾ ರಾಮ ಸೀರಿಯಲ್‌ ಸಂಚಿಕೆಗೆ ವೀಕ್ಷಕ ಫಿದಾ

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಪ್ರೇಮಾಯಣದ ಪಯಣ ಶುರುವಾಗಿದೆ. ಬಹುಕಾಲದಿಂದ ಸ್ನೇಹದ ಸೆಳೆತದಿಂದಲೇ ಹತ್ತಿರವಾಗಿದ್ದ ಜೋಡಿಯೀಗ, ಒಂದೇ ಪ್ರೇಮದ ದೋಣಿಯಲ್ಲಿ ವಿಹಾರಕ್ಕೆ ಹೊರಟಿವೆ. ಕೊನೆಗೂ ರಾಮನ ಆಸೆ ಈಡೇರಿದೆ. ರಾಮನ ಒಲುಮೆಗೆ ಒಪ್ಪಿಗೆ ನೀಡಿದ್ದಾಳೆ ಸೀತಾ. ಪ್ರೇಮನಿವೇದನೆಯನ್ನು ಅಪ್ಪಿಕೊಂಡಿದ್ದಾಳೆ. ಈ ಮೂಲಕ ನೋಡುಗರ ಮನದಲ್ಲಿದ್ದ ದುಗುಡವೀಗ ದೂರವಾಗಿದೆ. ಇನ್ನೇನಿದ್ದರೂ ಪ್ರೀತಿಯ ಪಯಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ರವಾನಿಸುತ್ತಿದ್ದಾರೆ.

ಒಂದು ಇಳಿ ಸಂಜೆಯ ಹೊತ್ತಲ್ಲಿ, ಸೀತಾ ಮತ್ತು ರಾಮನ ನಡುವೆ ಪ್ರೇಮ ನಿವೇದನೆಯಾಗಿದೆ. ರಾಮ ಮನಸ್ಸಿನಲ್ಲಿನ ಮಾತನ್ನು ಹೇಳಿ ಹಗುರಾಗಿದ್ದಾನೆ. ಸೀತೆಯೂ ರಾಮನ ಮಡಿಲಿಗೆ ತಲೆಯಿಟ್ಟು, ಲವ್‌ ಯೂ ಟೂ ಎಂದಿದ್ದಾಳೆ. ಇಬ್ಬರ ನಡುವೆ ಒಂದಷ್ಟು ಮಾತುಕತೆಗಳು ನಡೆದಿವೆ. ಒಬ್ಬರನ್ನೊಬ್ಬರು ಎಷ್ಟು ಇಷ್ಟ ಪಡ್ತೀವಿ ಎಂಬ ಮಾತುಗಳು ಹರಿದಾಡಿವೆ. ಇಬ್ಬರಲ್ಲೂ ಒಂದು ಪುಳಕ ಸೃಷ್ಟಿಯಾಗಿದೆ. ಅದೇ ಪುಳಕ ನೋಡುಗರಲ್ಲೂ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಸೀತಾ ರಾಮ ಸಂಚಿಕೆಯ ಝಲಕ್‌ಗಳಿಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬರಲಾರಂಭಿಸಿವೆ.

ಸೀತಾ ರಾಮನ ನಡುವೆ ಪ್ರೀತಿ ಮಾತು

ರಾಮ ಸೀತಾಳನ್ನು ಕಾರಿನಲ್ಲಿ ಕೂರಿಸಿಕೊಂಡು, ಮನೆಯವರೆಗೂ ನಿಮ್ಮನ್ನು ಬಿಡ್ಲಾ ಸೀತಾ ಎಂದಿದ್ದಾನೆ. ರಾಮನ ಬಾಯಿಂದ ಸೀತಾ ಅನ್ನೋ ಪದ ಎಷ್ಟು ಸ್ವೀಟ್‌ ಅಲ್ವ ಎಂದು ಮನಸ್ಸಲ್ಲೇ ಹೇಳಿಕೊಂಡಿದ್ದಾಳೆ ಸೀತಾ. ನನ್ನ ಹೆಸರು ಇಷ್ಟೊಂದು ಸ್ವೀಟ್‌ ಎಂದು ನಾನು ಅಂದುಕೊಂಡಿರಲಿಲ್ಲ ಎಂದಿದ್ದಾಳೆ. ಅದಕ್ಕೆ ನನ್ನ ಹೆಸರೂ ಶ್ರೀರಾಮ. ಆದರೆ ನಿಮ್ಮ ಬಾಯಿಂದ ರಾಮ್‌ ಕೇಳುವುದೇ ಚಂದ. ಅದಕ್ಕಿಂತ ಈ ನಿಮ್ಮ ನಗು ಇನ್ನೂ ಚೆಂದ ಎಂದಿದ್ದಾನೆ ರಾಮ.

ಜನ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ. ಅದು ನನಗೆ ಅಭ್ಯಾಸ ಆಗಿದೆ. ಆದರೆ ಅವರು ನಿಮ್ಮ ಬಗ್ಗೆ ಮಾತಾಡ್ತಾರೆ. ಅದೇ ನನಗೆ ಕೇಳಲು ಆಗಲ್ಲ ಎಂದಿದ್ದಾಳೆ. ಈ ಭಯ ಒದ್ದಾಟ, ಸಂಕಟ ತಲೆಲಿಟ್ಟುಕೊಂಡು ಕೊರಗಬೇಡಿ. ನಾನು ಯಾವಾಗಲೂ ನಿಮ್ಮ ಜತೆಗಿರ್ತಿನಿ ಎಂದಿದ್ದಾನೆ. ಅಷ್ಟೇ ಅಲ್ಲ, ಕೆಳಗಿಳಿದು ಕಾರ್‌ ಡೋರ್‌ ತೆಗೆದಿದ್ದಾನೆ. ಅಲ್ಲೊಂದು ಮೆಲೋಡಿ ಗೀತೆ ಹಿನ್ನೆಲೆಯಲ್ಲಿ ತೇಲಿ ಬಂದಿದೆ. ಸೀತಾ ಮನೆಯತ್ತ ನಡೆದಿದ್ದಾಳೆ. ಪದೇಪದೆ ರಾಮನನ್ನು ತಿರುಗಿ ನೋಡಿದ್ದಾಳೆ. ಇತ್ತ ಥ್ಯಾಂಕ್ಯು ಸೋ ಮಚ್‌ ಸೀತಾ ಎಂದು ಮನದಲ್ಲೇ ಹೇಳಿಕೊಂಡು ಸಂಭ್ರಮಿಸಿದ್ದಾನೆ ರಾಮ್.‌

ಸೀತಾ ರಾಮರ ಪ್ರೇಮಾಯಣಕ್ಕೆ ವೀಕ್ಷಕ ಫಿದಾ..

- ನಿರೀಕ್ಷೆ ಹುಸಿಯಾಗಲಿಲ್ಲ, ಕಾಯಿಸಿದರು ಒಂದು ಸುಂದರವಾದ ಸಂಚಿಕೆಯನ್ನು ನೀಡಿದ ನಿರ್ದೇಶಕರಿಗೆ ಧನ್ಯವಾದಗಳು

-ಇವರಿಬ್ಬರನ್ನ ಈ ರೀತಿ ನೋಡಿ ಯಾರ್ ಯಾರ್ ಮುಖ ದಲ್ಲಿ ಗೊತ್ತಿಲ್ದೆ ಸ್ಮೈಲ್ ಬರ್ತಿದೆ

- ನಿರೀಕ್ಷೆ ಮೀರಿದ ಸಂಚಿಕೆ ಗಗನ್ ಹಾಗೂ ವೈಷ್ಣವಿ ಸಹಜ ಅಭಿನಯ ಸೂಪರ್ ಇದು ಸೀರಿಯಲ್ ನೋಡುತ್ತ ಇರೋದು ಅನ್ನೋದು ಮರೆತು ಹೋಗುತ್ತದೆ

- ವಾವ್‌ ಸುಂದರ,, ಬ್ಯೂಟಿಫುಲ್, ಲವ್ಲಿ ಸಂಚಿಕೆ... ಸೀತಾ ರಾಮ್ ರ ಮಾತುಗಳು.. ಪ್ರೀತಿಯ ಕಣ್ಣಿನ ನೋಟಗಳು, ತುಂಬಾ ಚನ್ನಾಗಿ ಇತ್ತು ಹೆಚ್ಚಾಗಿ ಹೊಗಳಲು,, ನನ್ನಲಿ ಪದಗಳ ಕೊರತೆ,,,, ಆದ್ರೂ ಇಂದಿನ ಸಂಚಿಕೆಲಿ, ಫುಲ್ ಮಾರ್ಕ್ಸ್, ಹಿನ್ನಲೆ ಸಂಗೀತ, ಹಿನ್ನಲೆ ಹಾಡಿಗೆ

- ತುಂಬಾ ಖುಷಿ ಆಗುತ್ತೆ ಈವಾಗ ಈ ಧಾರಾವಾಹಿ ನೋಡೋದಿಕ್ಕೆ ಯಾಕಂದ್ರೆ ಇವರಿಬ್ಬರ ಪ್ರೇಮ ಕಥೆ ನೋಡೋದಿಕ್ಕೆ

- ಅಯ್ಯ್ಯ್ಯೋ ಅಯ್ಯಯ್ಯ್ಯ್ ನಾನು ಹೋಗೋಕೂ ಮೊದ್ಲು ಒಂದ್ ಮಾತು ಹೇಳೇನೇ... ಹಂಗೆ ಒಂದ್ ಲಾಂಗ್ ನೈಟ್‌ ಡ್ರೈವ್ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ಡ್ ಮಾಡಿ ಡೈರೆಕ್ಟ್ರೇ.. ನೋಡ ನೋಡ ಎಂತ ಚಂದ

- ಇವತ್ತಿನ ಎಪಿಸೋಡ್ ಅಂತೂ ಫುಲ್ ಮಸ್ತ್ ಇತ್ತು

- ಪ್ರೀತಿಯು ಎರಡು ದೇಹಗಳಲ್ಲಿ ವಾಸಿಸುವ ಒಂದು ಆತ್ಮ ವಾಗಿದೆ. ಇವಾಗ ಪ್ರೀತಿಯಲ್ಲಿ ಇರೋ ಸೀತಾ ರಾಮರ ಜೀವನ ಪ್ರೇಮಾಯ ಆಗಿದೆ

- ಗಗನ್‌ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ಫುಲ್‌ ಪೈಸಾ ವಸೂಲ್‌ ಫರ್ಪಾಮನ್ಸ್‌, ನಿಮ್ಮನ್ನ ಹೊಗಳೋಕೆ ನಂಗೆ ಶಬ್ದಗಳು ಸಿಗ್ತಿಲ್ಲ. ಆದರೆ, ನಿಮ್ಮಿಬ್ಬರ ನಟನೆ ನೈಜವಾಗಿದೆ. ಸೂಪರ್‌ ಸೂಪರ್‌ ಜೋಡಿ..

- ಅಯ್ಯೋ ನಮ್ಮ ಹೊಟ್ಟೆ ಉರ್ಸ್ಬೇಡಿ. ಪಾ ನಾಚಿಕೆ ಆಗುತ್ತೆ

- ಪ್ರೀತಿಲಿ ಬಿದ್ದದ್ದು ಸೀತಾ ರಾಮ್, ಅವರು ಮಾತಾಡುವಾಗ ನಾಚಿಕೆ ಆಗಿ ಮುಖದಲ್ಲಿ ನಗು ಬರೋದು ನಮ್ಗೆ

- ನೆನ್ನೆ ಸಂಚಿಕೆ ಮಾತ್ರಾ ತುಂಬಾ ಸೂಪರ್ ಆಗಿತ್ತು

- ಹೀಗೆ ರೊಮ್ಯಾಂಟಿಕ್ ಸೀನ್ ಗಳು ಬರ್ತಾ ಇರ್ಲಿ ಇಬ್ಬರನ್ನೂ ಇತರ ನೋಡೋಕೆ ಚೆಂದ

- ಪ್ರೀತಿ ಅನ್ನೋದು ಶುರು ಆದರೆ ಅದಕ್ಕೆ ಹೊತ್ತು ಗೊತ್ತು ಗೊತ್ತಾಗಲ್ಲ

- ಸೂಪರ್ ಸಂಚಿಕೆಗಳು ಮುದ್ದು ಜೋಡಿಗಳ ಮೇಲೆ ಯಾರ ಕೆಟ್ಟ ಕಣ್ಣು ಬೀಳದೆ ಇರ್ಲಿ ಸೀತಾ ರಾಮ

- ಅಯ್ಯೋ ಅಯ್ಯೋ ಡೈರೆಕ್ಟರ್‌ ಬಾಯಿಗೆ ಸಕ್ಕರೇ ಹಾಕಾ.. ತುಂಬ ಖುಷಿ ಆಗ್ತಾ ಇದೆ ಈ ಸೀನ್‌ ನೋಡಿ..

IPL_Entry_Point