ಕನ್ನಡ ಸುದ್ದಿ / ಜೀವನಶೈಲಿ /
ವಿಶ್ವ ಏಡ್ಸ್ ದಿನ, ಕ್ರಿಸ್‌ಮಸ್, ವಿಶ್ವ ಮಣ್ಣಿನ ದಿನ ಸೇರಿ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲಾ ವಿಶೇಷ ದಿನಗಳಿವೆ, ಇಲ್ಲಿದೆ ಪಟ್ಟಿ ಗಮನಿಸಿ
ಇಂಗ್ಲಿಷ್ ಕ್ಯಾಲೆಂಡರ್‌ನ ಕೊನೆಯ ತಿಂಗಳು ಡಿಸೆಂಬರ್. ಈ ಒಂದು ತಿಂಗಳು ಮುಗಿದರೆ 2024ನೇ ವರ್ಷ ಅಂತ್ಯವಾಗುತ್ತದೆ. ಡಿಸೆಂಬರ್ ತಿಂಗಳು ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ತಿಂಗಳಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ ಗಮನಿಸಿ. ಕಿಸ್ಮಸ್ ಮಾತ್ರವಲ್ಲ ಡಿಸೆಂಬರ್‌ನಲ್ಲಿ ಹಲವು ವಿಶೇಷ ದಿನಗಳಿವೆ.
ಡಿಸೆಂಬರ್ ತಿಂಗಳ ವಿಶೇಷ ದಿನಗಳು
ಡಿಸೆಂಬರ್ ಎಂದರೆ ನೆನಪಾಗುವುದು ಕ್ರಿಸ್‌ಮಸ್ ಹಾಗೂ ವರ್ಷಾಂತ್ಯ. ಈ ತಿಂಗಳು ವರ್ಷದ ಕೊನೆಯ ತಿಂಗಳು. ಒಟ್ಟು 31 ದಿನಗಳ ಈ ತಿಂಗಳಲ್ಲಿ ಕ್ರಿಸ್‌ಮಸ್ ಮಾತ್ರವಲ್ಲ ಹಲವು ವಿಶೇಷಗಳಿವೆ. ವಿಶ್ವ ಏಡ್ಸ್ ದಿನ, ವಿಶ್ವ ಮಣ್ಣಿನ ದಿನ, ಇಂಡಿಯನ್ ನೇವಿ ಡೇ, ಮಾನವ ಹಕ್ಕುಗಳ ದಿನ, ಭ್ರಷ್ಟಾಚಾರ ವಿರೋಧಿ ದಿನ ಈ ಎಲ್ಲವೂ ಡಿಸೆಂಬರ್‌ನಲ್ಲೇ ಬರುತ್ತದೆ.
ಡಿಸೆಂಬರ್ ತಿಂಗಳು ಎಂದರೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಜಾತ್ರೆ, ತೇರು ಶುರುವಾಗುವ ಮಾಸವೂ ಹೌದು. ಇದು ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಮಹತ್ವದಿಂದ ಸಮೃದ್ಧವಾದ ತಿಂಗಳಾಗಿದೆ. ಧಾರ್ಮಿಕ ಆಚರಣೆಗಳಿಂದ ರಾಷ್ಟ್ರೀಯ ರಜಾದಿನಗಳವರೆಗೆ ಡಿಸೆಂಬರ್ 1 ರಿಂದ 31ರವರೆಗೆ ಏನೆಲ್ಲಾ ವಿಶೇಷ ದಿನಗಳಿವೆ ಎಂಬ ಪಟ್ಟಿ ಇಲ್ಲಿದೆ ಗಮನಿಸಿ.
ಡಿಸೆಂಬರ್ ತಿಂಗಳ ವಿಶೇಷ ದಿನಗಳು
- ಡಿಸೆಂಬರ್ 1: ವಿಶ್ವ ಏಡ್ಸ್ ದಿನ
- ಡಿಸೆಂಬರ್ 2: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ, ಗುಲಾಮಗಿರಿ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನ, ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
- ಡಿಸೆಂಬರ್ 3: ವಿಶ್ವ ಅಂಗವಿಕಲರ ದಿನ
- ಡಿಸೆಂಬರ್ 4: ಭಾರತೀಯ ನೌಕಾಪಡೆಯ ದಿನ
- ಡಿಸೆಂಬರ್ 5: ಅಂತರಾಷ್ಟ್ರೀಯ ಸ್ವಯಂಸೇವಕ ದಿನ, ವಿಶ್ವ ಮಣ್ಣಿನ ದಿನ
- ಡಿಸೆಂಬರ್ 6: ಬಿ ಆರ್ ಅಂಬೇಡ್ಕರ್ ಪುಣ್ಯತಿಥಿ, ರಾಷ್ಟ್ರೀಯ ಮೈಕ್ರೋವೇವ್ ಓವನ್ ದಿನ
- ಡಿಸೆಂಬರ್ 7: ಸಶಸ್ತ್ರ ಪಡೆಗಳ ಧ್ವಜ ದಿನ, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
- ಡಿಸೆಂಬರ್ 8: ಬೋಧಿ ದಿನ
- ಡಿಸೆಂಬರ್ 9: ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
- ಡಿಸೆಂಬರ್ 10: ಮಾನವ ಹಕ್ಕುಗಳ ದಿನ
- ಡಿಸೆಂಬರ್ 11: ಅಂತರಾಷ್ಟ್ರೀಯ ಪರ್ವತ ದಿನ
- ಡಿಸೆಂಬರ್ 11: UNICEF ದಿನ
- ಡಿಸೆಂಬರ್ 12: ಯುನಿವರ್ಸಲ್ ಹೆಲ್ತ್ ಕವರೇಜ್ ಡೇ
- ಡಿಸೆಂಬರ್ 13: ರಾಷ್ಟ್ರೀಯ ಕುದುರೆ ದಿನ
- ಡಿಸೆಂಬರ್ 14: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ
- ಡಿಸೆಂಬರ್ 16: ವಿಜಯ್ ದಿವಸ್
- ಡಿಸೆಂಬರ್ 18: ಭಾರತದ ಅಲ್ಪಸಂಖ್ಯಾತರ ಹಕ್ಕುಗಳ ದಿನ, ಅಂತರಾಷ್ಟ್ರೀಯ ವಲಸಿಗರ ದಿನ
- ಡಿಸೆಂಬರ್ 19: ಗೋವಾ ವಿಮೋಚನಾ ದಿನ
- ಡಿಸೆಂಬರ್ 20: ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
- ಡಿಸೆಂಬರ್ 21: ಬ್ಲೂ ಕಿಸ್‌ಮಸ್, ವಿಶ್ವ ಸೀರೆ ದಿನ
- ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
- ಡಿಸೆಂಬರ್ 23: ಕಿಸಾನ್ ದಿನ
- ಡಿಸೆಂಬರ್ 24: ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ, ಕ್ರಿಸ್‌ಮಸ್ ಈವ್
- ಡಿಸೆಂಬರ್ 25: ಕ್ರಿಸ್‌ಮಸ್
- ಡಿಸೆಂಬರ್ 26: ವೀರ ಬಾಲ ದಿನ, ಬಾಕ್ಸಿಂಗ್ ದಿನ,
- ಡಿಸೆಂಬರ್ 28: ರತನ್ ಟಾಟಾ ಹುಟ್ಟಿದ ದಿನ
- ಡಿಸೆಂಬರ್ 29: ಅಂತರರಾಷ್ಟ್ರೀಯ ಸೆಲ್ಲೋ ದಿನ
- ಡಿಸೆಂಬರ್ 31: ಇಯರ್ ಎಂಡ್
ಈ ಎಲ್ಲವೂ ಡಿಸೆಂಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳು. ಇವುಗಳಲ್ಲಿ ಕೆಲವು ರಜಾದಿನಗಳೂ ಆಗಿರುತ್ತವೆ. ನೀವು ನಿಮ್ಮ ಮಕ್ಕಳ ಜೊತೆ ಡಿಸೆಂಬರ್‌ನಲ್ಲಿ ಟ್ರಿಪ್ ಹೋಗಲು ಪ್ಲಾನ್ ಮಾಡುತ್ತಿದ್ದರೆ ಈ ದಿನಗಳನ್ನು ಗಮನಿಸಿ. ಇದರಂತೆ ಪ್ಲಾನ್ ಮಾಡಿ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.