Yash selfie with Fans: 700 ಫ್ಯಾನ್ಸ್‌ ಜೊತೆ ಪ್ರತ್ಯೇಕವಾಗಿ ಸೆಲ್ಫಿ ತೆಗೆಸಿಕೊಂಡ ಯಶ್‌, ನೀವು ರಿಯಲ್‌ ಸೂಪರ್‌ ಸ್ಟಾರ್‌ ಎಂದ ನೆಟಿಜನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Yash Selfie With Fans: 700 ಫ್ಯಾನ್ಸ್‌ ಜೊತೆ ಪ್ರತ್ಯೇಕವಾಗಿ ಸೆಲ್ಫಿ ತೆಗೆಸಿಕೊಂಡ ಯಶ್‌, ನೀವು ರಿಯಲ್‌ ಸೂಪರ್‌ ಸ್ಟಾರ್‌ ಎಂದ ನೆಟಿಜನ್ಸ್‌

Yash selfie with Fans: 700 ಫ್ಯಾನ್ಸ್‌ ಜೊತೆ ಪ್ರತ್ಯೇಕವಾಗಿ ಸೆಲ್ಫಿ ತೆಗೆಸಿಕೊಂಡ ಯಶ್‌, ನೀವು ರಿಯಲ್‌ ಸೂಪರ್‌ ಸ್ಟಾರ್‌ ಎಂದ ನೆಟಿಜನ್ಸ್‌

ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಯಶ್‌, ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಯಶ್‌ ಅವರನ್ನು ನೋಡಲು ದೂರದೂರುಗಳಿಂದ ಕೂಡಾ ಜನರು ಬಂದಿದ್ದರು. ಕಾರ್ಯಕ್ರಮದ ನಂತರ ಅಭಿಮಾನಿಗಳು ಯಶ್‌ ಜೊತೆ ಸೆಲ್ಫಿಗೆ ಮುಗಿಬಿದ್ದರು.

700 ಅಭಿಮಾನಿಗಳೊಂದಿಗೆ ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಂಡ ಯಶ್
700 ಅಭಿಮಾನಿಗಳೊಂದಿಗೆ ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಂಡ ಯಶ್ (‌PC: Twitter)

ಸಿನಿಮಾ ನಟ-ನಟಿಯರನ್ನು ಬಹಳ ಆರಾಧಿಸುವ ಅಭಿಮಾನಿಗಳು ಒಮ್ಮೆಯಾದ್ರೂ ಅವರನ್ನು ನೋಡಿ, ಫೋಟೋ ತೆಗೆಸಿಕೊಳ್ಳಲು ಆಸೆ ಪಡುತ್ತಾರೆ. ತಮ್ಮ ಮೆಚ್ಚಿನ ನಟಿಯರನ್ನೋ, ಹೀರೋಗಳನ್ನು ನೋಡುವ ಅವಕಾಶ ದೊರೆತರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದರೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳೋದು ಸುಲಭದ ಮಾತಲ್ಲ.

ಕೆಲವೊಮ್ಮೆ ಜನಜಂಗುಳಿಯಲ್ಲಿ ಮೆಚ್ಚಿನ ಸ್ಟಾರ್‌ಗಳ ಬಳಿ ಹೋಗಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವೊಂದು ಸಂದರ್ಭಗಳಲ್ಲಿ ಕೆಲವು ಸ್ಟಾರ್‌ಗಳಿಗೆ ಫ್ಯಾನ್ಸ್‌ ಜೊತೆ ಫೋಟೋ ತೆಗೆಸಿಕೊಳ್ಳುವಷ್ಟು ತಾಳ್ಮೆ ಇರುವುದಿಲ್ಲ. ಆದರೆ ಕೆಲವೇ ಕೆಲವು ಸ್ಟಾರ್‌ಗಳು ಮಾತ್ರ, ತಮ್ಮ ಈ ಸ್ಟಾರ್‌ಡಮ್‌ಗೆ ಅಭಿಮಾನಿಗಳೇ ಕಾರಣ ಅನ್ನೋದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಅವರಲ್ಲಿ ಯಶ್‌ ಕೂಡಾ ಒಬ್ಬರು. ಯಶ್‌, ಈಗ ಬರೀ ಯಶ್‌ ಅಲ್ಲ, ಅವರು ನ್ಯಾಷನಲ್‌ ಸ್ಟಾರ್‌, ಸಿನಿಮಾಭಿಮಾನಿಗಳ ಪ್ರೀತಿಯ ರಾಕಿ ಭಾಯ್‌ ಅನ್ನೋದು ತಿಳಿದಿರುವ ವಿಚಾರ. ಯಶ್‌ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸುಮಾರು 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಪ್ರತ್ಯೇಕವಾಗಿ ಸೆಲ್ಫಿ ತೆಗೆಸಿಕೊಂಡು ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಯಶ್‌, ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಯಶ್‌ ಅವರನ್ನು ನೋಡಲು ದೂರದೂರುಗಳಿಂದ ಕೂಡಾ ಜನರು ಬಂದಿದ್ದರು. ಕಾರ್ಯಕ್ರಮದ ನಂತರ ಅಭಿಮಾನಿಗಳು ಯಶ್‌ ಜೊತೆ ಸೆಲ್ಫಿಗೆ ಮುಗಿಬಿದ್ದರು. ನೀವು ವೇದಿಕೆ ಮೇಲೆ ನಿಂತುಕೊಂಡೇ ಎಲ್ಲಾ ಅಭಿಮಾನಿಗಳೊಂದಿಗೆ ಗ್ರೂಪ್‌ ಫೋಟೋ ತೆಗೆಸಿಕೊಳ್ಳಿ ಎಂದು ಕಾರ್ಯಕ್ರಮದ ಆಯೋಜಕರು ಸಲಹೆ ನೀಡಿದರೂ ಯಶ್‌ ಅದನ್ನು ನಿರಾಕರಿಸಿದ್ದಾರೆ. ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂದು ಬಂದ ಎಲ್ಲಾ ಅಭಿಮಾನಿಗಳೊಂದಿಗೆ ಪ್ರತ್ಯೇಕವಾಗಿ ನಿಂತುಕೊಂಡು ತಾಳ್ಮೆಯಿಂದ, ನಗುನಗುತ್ತಾ ಫೋಟೋಗೆ ಪೋಸ್‌ ನೀಡಿದ್ದಾರೆ.

ಈ ಫೋಟೋ ಹಾಗೂ ವಿಡಿಯೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಭಿಮಾನಿಯೊಬ್ಬರು ತಾವು ಯಶ್‌ ಜೊತೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ''ನನ್ನ ಕನಸು ನನಸಾಯ್ತು. ಅವರನ್ನು ನೋಡಿದ್ದು, ಪಕ್ಕ ನಿಂತು ಫೋಟೋ ತೆಗೆಸಿಕೊಂಡಿದ್ದು ಗೂಸ್‌ ಬಂಪ್ಸ್‌ ಬಂತು'' ಎಂದು ಬರೆದುಕೊಂಡಿದ್ದಾರೆ. ಯಶ್‌ ಅವರ ಈ ಸರಳ ವ್ಯಕ್ತಿತ್ವಕ್ಕೆ ನೆಟಿಜನ್ಸ್‌ ಮಾರುಹೋಗಿದ್ದಾರೆ. ಇವರು ರಿಯಲ್‌ ಸೂಪರ್‌ ಸ್ಟಾರ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಯಶ್‌ ಹೊಸ ಸಿನಿಮಾ ವಿಚಾರಕ್ಕೆ ಬರುವುದಾದರೆ ಮುಂದಿನ ವರ್ಷ ಜನವರಿ 8, ಹುಟ್ಟುಹಬ್ಬದಂದು ಹೊಸ ಸಿನಿಮಾ ಅನೌನ್ಸ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇತರ ಮನರಂಜನೆ ಸುದ್ದಿಗಳು

08-01-2023ಕ್ಕೆ ಯಶ್‌ ಹೊಸ ಸಿನಿಮಾ ಅನೌನ್ಸ್‌ ಮಾಡೋದು ಪಕ್ಕಾ ಅಂತೆ...ಅಂದು ಏನು ಸ್ಪೆಷಲ್‌ ನೆನಪಿದ್ಯಾ?

ಯಶ್‌, ಅಭಿಮಾನಿಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ನೀಡಿದ ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಯಶ್‌ ಮೇಲೆ ಮುನಿಸು ತೋರಿದ್ದಾರೆ. ಆದರೆ ಮೂಲಗಳ ಪ್ರಕಾರ, ಯಶ್‌ 'ಕೆಜಿಎಫ್‌ 2' ಬಿಡುಗಡೆ ಆದಾಗಿನಿಂದ ಇಲ್ಲಿವರೆಗೂ ತೆರೆ ಮರೆಯಲ್ಲೇ ತಮ್ಮ ಹೊಸ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಪೂರ್ತಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಹೊಸಪೇಟೆಯಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆತ...ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದ ಅಭಿಮಾನಿಗಳು

ವೇದಿಕೆಯಲ್ಲಿ ದರ್ಶನ್‌, ರಚಿತಾ ರಾಮ್‌ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಹಾಜರಿದ್ದರು. ನೂಕು ನುಗ್ಗಲನ್ನು ಕಂಟ್ರೋಲ್‌ ಮಾಡಲು ಪೊಲೀಸರು ಕೂಡಾ ವೇದಿಕೆ ಮೇಲೆ ಜಮಾಯಿಸಿದ್ದರು. ಆದರೆ ಯಾರೋ ಕಿಡಿಗೇಡಿ, ವೇದಿಕೆ ಮೇಲಿದ್ದ ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದಾನೆ. ಸಂಪೂರ್ಣ ಮಾಹಿತಿಗೆ ಈ ಲಿಂಕ್‌ ಒತ್ತಿ

Whats_app_banner