Darshan: ‘ಕಾಟೇರ ಹಿಟ್‌ ಆಗಿದ್ದಕ್ಕೇ ಟಾರ್ಗೆಟ್‌, ದರ್ಶನ್‌ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೀತಿದೆ!’ ರಾಕ್‌ಲೈನ್‌ ವೆಂಕಟೇಶ್‌
ಕನ್ನಡ ಸುದ್ದಿ  /  ಮನರಂಜನೆ  /  Darshan: ‘ಕಾಟೇರ ಹಿಟ್‌ ಆಗಿದ್ದಕ್ಕೇ ಟಾರ್ಗೆಟ್‌, ದರ್ಶನ್‌ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೀತಿದೆ!’ ರಾಕ್‌ಲೈನ್‌ ವೆಂಕಟೇಶ್‌

Darshan: ‘ಕಾಟೇರ ಹಿಟ್‌ ಆಗಿದ್ದಕ್ಕೇ ಟಾರ್ಗೆಟ್‌, ದರ್ಶನ್‌ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೀತಿದೆ!’ ರಾಕ್‌ಲೈನ್‌ ವೆಂಕಟೇಶ್‌

ತಡರಾತ್ರಿವರೆಗೂ ಪಾರ್ಟಿ ನಡೆದಿದೆ ಎಂಬ ಕಾಟೇರ ಸಿನಿಮಾ ತಂಡದ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ, ಚಿತ್ರತಂಡ ಮತ್ತು ಕೆಲವು ಸಿನಿಮಾ ನಟರು ಇಂದು ಬೆಂಗಳೂರಿನ ಸುಬ್ರಮಣ್ಯಂ ನಗರ ಪೊಲೀಸರ ಮುಂದೆ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.

Darshan: ‘ಕಾಟೇರ ಹಿಟ್‌ ಆಗಿದ್ದಕ್ಕೇ ಟಾರ್ಗೆಟ್‌, ದರ್ಶನ್‌ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೀತಿದೆ!’ ರಾಕ್‌ಲೈನ್‌ ವೆಂಕಟೇಶ್‌ ಮಾತು
Darshan: ‘ಕಾಟೇರ ಹಿಟ್‌ ಆಗಿದ್ದಕ್ಕೇ ಟಾರ್ಗೆಟ್‌, ದರ್ಶನ್‌ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೀತಿದೆ!’ ರಾಕ್‌ಲೈನ್‌ ವೆಂಕಟೇಶ್‌ ಮಾತು

Kaatera late night party case: ಬಾಕ್ಸ್‌ ಆಫೀಸ್‌ನಲ್ಲಿ ದರ್ಶನ್‌ ನಟನೆಯ ಕಾಟೇರ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಬಿಡುಗಡೆ ಆದಾಗಿನಿಂದ ಇಂದಿನವರೆಗೂ ಬರೋಬ್ಬರಿ 157 ಪ್ಲಸ್‌ ಕೋಟಿ ಗಳಿಸಿ ಸೂಪರ್‌ ಹಿಟ್‌ ಪಟ್ಟಿಗೆ ಸೇರಿದೆ. ಈ ನಡುವೆಯೇ ಇದೇ ಖುಷಿಯನ್ನು ಸ್ಯಾಂಡಲ್‌ವುಡ್‌ ಆಪ್ತರ ಜತೆಗೆ ಆಚರಿಸಿಕೊಂಡಿತ್ತು ಚಿತ್ರತಂಡ. ತಡರಾತ್ರಿವರೆಗೂ ಪಾರ್ಟಿ ನಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ನೋಟಿಸ್‌ ಸಹ ರವಾನೆಯಾಗಿತ್ತು. ಈಗ ಪೊಲೀಸ್‌ ಸ್ಟೇಷನ್‌ಗೆ ಇಡೀ ತಂಡ ಭೇಟಿ ನೀಡಿದೆ. ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನೂ ನೀಡಿದೆ.

ಕಾಟೇರ ಸಿನಿಮಾ ಭರ್ಜರಿ ಯಶಸ್ಸನ್ನು ಸಂಭ್ರಮಿಸಲು ಬೆಳಗಿನಜಾವದ ವರೆಗೂ ಯಶವಂತಪುರ ಬಳುಯ ಜೆಟ್‌ಲ್ಯಾಗ್‌ ಪಬ್‌ನಲ್ಲಿ ಪಾರ್ಟಿ ನಡೆದಿತ್ತು. ಈ ಪಾರ್ಟಿ ನಡೆಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಪಬ್‌ ಮಾಲೀಕ ಸೇರಿದಂತೆ ಇಬ್ಬರ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟರಾದ ದರ್ಶನ್, ಅಭಿಷೇಕ್ ಅಂಬರೀಷ್, ಧನುಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣಗೂ ನೋಟಿಸ್‌ ರವಾನೆಯಾಗಿತ್ತು.

ನೋಟಿಸ್‌ ಮೇರೆಗೆ ಎಲ್ಲರೂ ಸುಬ್ರಮಣ್ಯ ಠಾಣೆ ಪೊಲೀಸ್‌ ಠಾಣೆಗೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ನನಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ, ದರ್ಶನ್‌ ಅವರನ್ನೇ ಟಾರ್ಗೆಟ್‌ ಮಾಡ್ತಿರುವುದೇಕೆ ಎಂದೂ ಪ್ರಶ್ನೆ ಮಾಡಿದ್ದಾರೆ. ಇಲ್ಲಿದೆ ರಾಕ್‌ಲೈನ್‌ ವೆಂಕಟೇಶ್‌ ಆಡಿರುವ ಮಾತುಗಳು.

ದರ್ಶನ್‌ ಅವರೇ ಯಾಕೆ ಟಾರ್ಗೆಟ್‌?

"ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೂ ಗೊತ್ತಿದೆ. ದರ್ಶನ್‌ ಅವರನ್ನ, ಒಂದು ಸಿನಿಮಾ ರಾಜ್ಯದಲ್ಲಿ ಹಿಟ್‌ ಆಗುತ್ತಿದ್ದಂತೆ, ಆ ಹೆಸರಿಗೆ ಮಸಿ ಬಳೀಬೇಕು ಅಂತ ಯಾರ್ಯಾರು ಏನೆಲ್ಲ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಈ ಸಮಯದಲ್ಲಿ ಕನ್ನಡದ ಒಂದು ಸಿನಿಮಾ ಯಶಸ್ವಿಯಾಗುವುದು ತುಂಬ ಮುಖ್ಯ. ಹೀಗಿರುವಾಗ ದರ್ಶನ್‌ ಮೇಲೆ ಯಾಕೆ ಟಾರ್ಗೆಟ್‌ ಮಾಡಬೇಕು. ಸಿಇಮಾ ಹಿಟ್‌ ಆಗುತ್ತಿದ್ದಂತೆ, ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ. ಇದರ ಹಿಂದಿರುವವರು ಯಾರೆಂದು ನನಗೂ ಗೊತ್ತು. ಅವರ ಹೆಸರನ್ನು ನಾನು ಇಲ್ಲಿ ಹೇಳಲು ಬಯಸಲ್ಲ" ಎಂದಿದ್ದಾರೆ ರಾಕ್‌ಲೈನ್‌.

ಪೊಲೀಸರ ಮುಂದೆ ಹೇಳಿದ್ದೇನು?

"ತುಂಬ ಲೇಟ್‌ ಆಗಿತ್ತು. ಎಲ್ಲರೂ ಹೊರಡುತ್ತಿದ್ದರು. ಊಟ ಬೇರೆ ಮಾಡಿರಲಿಲ್ಲ. ಅದಾಗಲೇ ದರ್ಶನ್‌ ಹೊರಟಿದ್ದರು. ನಾನೇ ಎಲ್ಲರನ್ನೂ ಕರೆದು, ಊಟ ಮಾಡಿಕೊಂಡೇ ಹೋಗೋಣ ಎಂದೆ. ಜೆಟ್‌ಲ್ಯಾಗ್‌ ಹೊಟೇಲ್‌ ಜಗದೀಶ್‌ ಅವರಿಗೂ ಮನವಿ ಮಾಡಿದೆ. ನಮ್ಮ ಪ್ಲಾನ್ಡ್‌ ಪಾರ್ಟಿ ಅಲ್ಲ. ಅದಾಗಲೇ ಸಿಬ್ಬಂದಿ ಹೋಗಿದ್ದರು. ಅವರನ್ನು ಕರೆಸಿ ಅಡುಗೆ ಮಾಡಿ ಬಡಿಸುವುದು ಲೇಟ್‌ ಆಯ್ತು. ಯಾವುದೇ ಸಣ್ಣ ಗಲಭೆ, ಗಲಾಟೆ ನಡೆದಿಲ್ಲ. ಅಕ್ಕ ಪಕ್ಕ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಊಟ ಮಾಡಿ ಹೊರಡಿದ್ದೇವೆ. ಇಷ್ಟೇ ನಡೆದಿದ್ದು. ಇದನ್ನೇ ಪೊಲೀಸರ ಮುಂದೆಯೂ ಹೇಳಿದ್ದೇವೆ" ಎಂದಿದ್ದಾರೆ ರಾಕ್‌ಲೈನ್‌ ವೆಂಕಟೇಶ್‌.

Whats_app_banner