ಕನ್ನಡ ಸುದ್ದಿ  /  ಮನರಂಜನೆ  /  ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಂಜನಿಪುತ್ರ ಮತ್ತು ಪವರ್‌ ಸಿನಿಮಾಗಳು ಈ (ಮೇ 10) ಶುಕ್ರವಾರ ಮರು ಬಿಡುಗಡೆ ಆಗಿವೆ. ಈ ನಡುವೆ ಉಪೇಂದ್ರ ಅವರ ಕ್ಲಾಸಿಕ್ ಚಿತ್ರವೂ ರೀ-ರಿಲೀಸ್‌ ಆಗಲು ದಿನಾಂಕ ನಿಗದಿಯಾಗಿದೆ.

ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ
ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

Re-Releasing Kannada Movies: ಲೋಕಸಭಾ ಚುನಾವಣೆ ಮತ್ತು ಐಪಿಎಲ್‌ ಧಮಾಕಾ ನಡುವೆ ಚಿತ್ರಮಂದಿರಗಳು ಮಂಕಾಗಿವೆ. ಸ್ಟಾರ್‌ಗಳ ಸಿನಿಮಾಗಳು ಸದ್ಯಕ್ಕೆ ಬಿಡುಗಡೆ ಇಲ್ಲ. ಹೊಸಬರ ಸಿನಿಮಾಗಳು ರಿಲೀಸ್‌ ಆದರೂ, ಪ್ರೇಕ್ಷಕ ಥಿಯೇಟರ್‌ನತ್ತ ಮುಖ ಮಾಡುತ್ತಿಲ್ಲ. ಹೀಗಿರುವಾಗ, ಹಳೇ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್‌ ಇದೀಗ ಕನ್ನಡದಲ್ಲೂ ಹೆಚ್ಚಾಗುತ್ತಿದೆ. ಆ ಪೈಕಿ ಶುಕ್ರವಾರ (ಮೇ 10) ಪುನೀತ್‌ ರಾಜ್‌ಕುಮಾರ್‌ ನಟನೆಯ ಎರಡು ಸಿನಿಮಾಗಳು ಏಕಕಾಲದಲ್ಲಿ ಮರು ಬಿಡುಗಡೆ ಆಗಿವೆ. ಈ ಸಿನಿಮಾಗಳ ನಡುವೆಯೇ ಉಪೇಂದ್ರ ಅವರ ಸಿನಿಮಾ ಸಹ ರೀ ರಿಲೀಸ್‌ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಂಜನಿಪುತ್ರ ಸಿನಿಮಾ ರೀ ರಿಲೀಸ್‌ ಆಗಿದೆ. ಹೀಗೆ ರಿಲೀಸ್‌ ಸುದ್ದಿ ಕೇಳಿಯೇ ಸಂಭ್ರಮಿಸಿದ್ದ ಅಪ್ಪು ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿಯೇ ಬರಮಾಡಿಕೊಳ್ಳುವ ಪ್ಲಾನ್‌ ಮಾಡಿದ್ದರು. ಆದರೆ, ಯಾವುದೇ ಮುನ್ಸೂಚನೆ ನೀಡದೇ ಪುನೀತ್‌ ನಟನೆಯ ಪವರ್‌ ಚಿತ್ರವೂ ಶುಕ್ರವಾರವೇ ಮರು ಬಿಡುಗಡೆಯಾಗಿದೆ. ನಿರ್ಮಾಪಕರ ಈ ನಡೆ ಅಭಿಮಾನಿ ವಲಯದಲ್ಲಿಯೂ ಕೊಂಚ ಬೇಸರ ತರಿಸಿದೆ.‌

ಅಪ್ಪು ಫ್ಯಾನ್ಸ್‌ ಅಸಮಾಧಾನ

ಒಂದೊಂದೆ ಸಿನಿಮಾ ಬಿಡುಗಡೆ ಮಾಡಿದ್ದರೆ, ಆ ಚಿತ್ರವನ್ನೇ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದೆವು. ಆದರೆ, ಏಕಕಾಲದಲ್ಲಿ ಅಪ್ಪು ಅವರ ಎರಡು ಸಿನಿಮಾಗಳು ಬಿಡುಗಡೆ ಮಾಡಿದ್ದಕ್ಕೆ ಫ್ಯಾನ್ಸ್‌ ವಲಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಎರಡೂ ಸಿನಿಮಾಗಳ ನಿರ್ಮಾಪಕರ ವಿರುದ್ಧ ಕೊಂಚ ಗರಂ ಆಗಿರುವ ಫ್ಯಾನ್ಸ್‌, ನಮ್ಮ ನಮ್ಮ ನಡುವೆಯೇ ಸ್ಪರ್ಧೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಈ ಎರಡು ಸಿನಿಮಾಗಳಿಗೆ ಅವರ ಫ್ಯಾನ್ಸ್‌ ಕಡೆಯಿಂದ ಒಂದೊಳ್ಳೆ ರೆಸ್ಪಾನ್ಸ್‌ ಸಿಕ್ಕಿದೆ. ಹೀಗಿರುವಾಗಲೇ ಉಪೇಂದ್ರ ಸಿನಿಮಾ ಸಹ ಮರು ಬಿಡುಗಡೆಯ ಹಾದಿಯಲ್ಲಿದೆ.

ಮತ್ತೆ ತೆರೆಮೇಲೆ A ಸಿನಿಮಾ

ರಿಯಲ್‌ ಸ್ಟಾರ್‌ ಉಪೇಂದ್ರ ಸದ್ಯ UI ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಪೋಸ್ಟರ್‌, ಹಾಡಿನ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ ಉಪೇಂದ್ರ. ಇದೆಲ್ಲದರ ಬೆನ್ನಲ್ಲೇ, ಈ ಸಿನಿಮಾದಿಂದ ಏನಾದರೂ ಹೊಸ ಅಪ್‌ಡೇಟ್‌ ಸಿಗಲಿದೆಯೇ ಎಂದು ಫ್ಯಾನ್ಸ್‌ ಕಾತರದಿಂದ ಕಾದಿದ್ದಾರೆ. ಆದರೆ, ಹಾಗೆ ಕಾದಿದ್ದ ಅಭಿಮಾನಿಗಳಿಗೆ ಯೂಐ ಬದಲು ಬೇರೆಯದೇ ಟ್ರೀಟ್‌ ನೀಡಿದ್ದಾರೆ. ಸದ್ದಿಲ್ಲದೆ ಸ್ಯಾಂಡಲ್‌ವುಡ್‌ನ ಕಲ್ಟ್‌ ಕ್ಲಾಸಿಕ್‌ A ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ಆಗಿನ ಕಾಲದಲ್ಲಿಯೇ 20 ಕೋಟಿ ಕಲೆಕ್ಷನ್‌

1998ರಲ್ಲಿ ಸ್ವತಃ ಉಪೇಂದ್ರ ನಾಯಕನಾಗಿ ನಟಿಸಿ ನಿರ್ದೇಶಿಸಿದ್ದ A ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆ ಬರೆದಿತ್ತು. ಇದೀಗ 26 ವರ್ಷಗಳ ಹಿಂದಿನ ಈ ಸಿನಿಮಾವನ್ನು ಮತ್ತೆ ತೆರೆಮೇಲೆ ತರಲು ನಿರ್ಮಾಪಕರು ಪ್ಲಾನ್‌ ಮಾಡಿದ್ದಾರೆ. ಅದರಂತೆ, ಮುಂದಿನ ವಾರ ಮೇ 17ರಂದು A ಸಿನಿಮಾ ಮತ್ತೆ ತೆರೆಮೇಲೆ ಬರಲಿದೆ. ಬಿ ಜಗನ್ನಾಥ್, ಬಿ. ಜಿ ಮಂಜುನಾಥ್‌ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಿನ ಕಾಲದಲ್ಲಿ 1ಕೋಟಿ 25 ಲಕ್ಷ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 20 ಕೋಟಿ ಕಲೆಕ್ಷನ್‌ ಮಾಡಿತ್ತು.

IPL_Entry_Point