ನಿಮ್ಮ ಹೊಕ್ಕಳ ಫೋಟೋ ಕಳಿಸಿ ಎಂಬ ನೆಟ್ಟಿಗನ ಕೀಳು ಕಾಮೆಂಟ್‌ಗೆ ‘ನಿಮ್ಮ ಅಮ್ಮನ ಹತ್ರ ಕೇಳು, ಕೊಡ್ತಾರೆ’ ಎಂದ ತನಿಷಾ ಕುಪ್ಪಂಡ
ನಟಿ, ಬಿಗ್ ಬಾಸ್ ಶೋ ಖ್ಯಾತಿಯ ತನಿಷಾ ಕುಪ್ಪಂಡ, ಸೋಷಿಯಲ್ ಮೀಡಿಯಾದಲ್ಲಿನ ನೆಗೆಟಿವಿಟಿ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲಿನ ಕೆಲ ಕೊಳಕು ಮನಸ್ಥಿತಿಗಳ ಬಗ್ಗೆ ಬೇಸರದಲ್ಲಿಯೇ ಮಾತನಾಡಿದ್ದಾರೆ. ಸ್ನೇಹಿತರಿಂದ ಆದ ಕೆಲವು ಕಹಿ ಘಟನೆಗಳನ್ನೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ತನಿಷಾ.

Tanisha Kuppanda: ಸೋಷಿಯಲ್ ಮೀಡಿಯಾಕ್ಕೆ ಅಂಕುಶ ಹಾಕುವವರೇ ಇಲ್ಲದಂತಾಗಿದೆ. ಇಲ್ಲಿ ಎಲ್ಲವೂ ಮುಕ್ತ. ಆ ಸ್ವಾತಂತ್ರ್ಯವೇ ಕೆಲವರಿಗೆ ಇಲ್ಲಿ ಸ್ವೇಚ್ಛೆಯಾಗಿದೆ. ಮನಸಿಗೆ ಬಂದಂತೆ ಕಾಮೆಂಟ್ ಹಾಕುವುದೇ ಕೆಲವರ ಕಾಯಕ. ಅದರಲ್ಲೂ ಸೆಲೆಬ್ರಿಟಿ ವಲಯದಲ್ಲಿ ಗುರುತಿಸಿಕೊಂಡವರಿಗೆ, ಅದರಲ್ಲೂ ನಟಿಯರು ಎಂದರೆ ಅವರ ಬಹುತೇಕ ಪೋಸ್ಟ್‌ಗಳಿಗೆ ನೆಗೆಟಿವ್ ಕಾಮೆಂಟ್‌ಗಳೇ ಜಾಸ್ತಿ. ಈ ಬಗ್ಗೆ ಸಾಕಷ್ಟು ಕಲಾವಿದರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ಕೆಲವರು, ಅನ್ನುವವರು ಅನ್ನಲಿ ಎಂದು ಅವರ ಪಾಡಿಗೆ ಅವರ ಕೆಲಸದಲ್ಲಿ ಬಿಜಿಯಾಗಿದ್ದರೆ, ಇನ್ನು ಕೆಲವರು ಕಟು ಕಾಮೆಂಟ್‌ಗಳಿಗೆ ಬೇಸತ್ತ ಉದಾಹರಣೆಗಳೂ ಇವೆ. ಇದೀಗ ಆ ಬಗ್ಗೆ ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಮಾತನಾಡಿದ್ದಾರೆ.
ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಒಳ್ಳೆಯ ಪೈಪೋಟಿಯನ್ನೇ ನೀಡಿದ್ದರು. ಜತೆಗೆ ಕೆಟ್ಟದಾಗಿ ಮಾತನಾಡಿದ್ದವರಿಗೂ ಬಿಗ್ ಬಾಸ್ ಮನೆಯಲ್ಲಿಯೇ ತಾವು ಹೇಗೆ ಎಂಬುದನ್ನು ತೋರಿಸುವ ಮೂಲಕ ಕೌಂಟರ್ ಕೊಟ್ಟಿದ್ದರು. ಬಿಗ್‌ಬಾಸ್ ಮುಗಿದ ಬಳಿಕ ತಮಗೆ ಪುನರ್ಜನ್ಮ ಸಿಕ್ಕಿದೆ ಎಂದೂ ಹೇಳಿಕೊಂಡು ಹಗುರಾಗಿದ್ದರು ತನಿಷಾ. ಇದಕ್ಕೂ ಮುನ್ನ ನಟಿ ತನಿಷಾ ಒಳ್ಳೆಯ ಮಾತುಗಳಿಗಿಂತ ಕಟು ಕಾಮೆಂಟ್‌ಗಳನ್ನೇ ಎದುರಿಸಿದ್ದೇ ಜಾಸ್ತಿ. ಅವರ ಪ್ರತಿ ಪೋಸ್ಟ್‌ಗೂ ಅಸಭ್ಯ ಕಾಮೆಂಟ್‌ಗಳೇ ಸಂದಾಯವಾಗುತ್ತಿದ್ದವು. ಕೆಟ್ಟದಾಗಿ ಪ್ರಶ್ನೆ ಮಾಡುವವರೇ ಹೆಚ್ಚಾಗಿದ್ದರು. ಇದೆಲ್ಲದರ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ತನಿಷಾ.
ಒಮ್ಮಿಂದೊಮ್ಮೆ ಎಲ್ಲವೂ ಹೇಗೆ ಎಂದು ಪ್ರಶ್ನಿಸಿದ್ದಾರೆ..
"ಬಹಳಷ್ಟು ಜನರ ಮನಸ್ಸಲ್ಲಿದೆ, ಪೆಂಟಗನ್ ಸಿನಿಮಾದಿಂದಲೇ ನಾನು ಇಂಡಸ್ಟ್ರಿಗೆ ಬಂದಿರೋದು ಅಂತ ಆಗಿಬಿಟ್ಟಿದೆ. ನಿನ್ನೆ ಮೊನ್ನೆ ಬಂದ್ಲು ರೆಸ್ಟೋರೆಂಟ್ ಓಪನ್ ಮಾಡಿದ್ಲು, ಕಾರ್ ತಗೊಂಡ್ಲು, ಜ್ಯುವೆಲ್ಲರಿ ಶಾಪ್ ಓಪನ್ ಮಾಡಿದ್ಲು ಈ ಥರ ಏಕವಚನದಲ್ಲಿ ಮಾತನಾಡುತ್ತಾರೆ. ಅದನ್ನು ಕೇಳಿದರೇ ಎರಡು ಬಿಟ್ಟು ಬಿಡಬೇಕು ಅನಿಸುತ್ತೆ. ಅಷ್ಟು ಕೋಪ ಬರುತ್ತೆ. ನೀವು ನಮ್ಮನ್ನ ಸಾಕಿಲ್ಲ, ಮುಂದೆಯೂ ಸಾಕಲ್ಲ, ಯಾಕೆ ಗುರು ಹೀಗೆಲ್ಲಾ ಮಾತನಾಡುತ್ತೀರಾ? ಯಾಕೆ ಕಾಮೆಂಟ್ ಪಾಸ್ ಮಾಡ್ತೀರಾ. ಹೇಳಬೇಕು ಎನ್ನುವುದನ್ನು ಸರಿಯಾದ ಕ್ರಮದಲ್ಲಿ ಹೇಳಿ. ಅದು ಬಿಟ್ಟು ಹೋಗೆ ಬಾರೆ ಎಂದರೆ ಆ ಕ್ಷಣವೇ ನಿಮ್ಮ ಮೇಲಿನ ಮರ್ಯಾದೆ ಹೋಗಿಬಿಡ್ತು" ಎಂದಿದ್ದಾರೆ.
ಹೊಕ್ಕಳ ಫೋಟೋ ಕಳ್ಸು ಅಂತ ಕೇಳಿದ್ರು..
ಮುಂದುವರಿದು ಮಾತನಾಡಿದ ತನಿಷಾ, "ಎಷ್ಟೋ ಜನಕ್ಕೆ ನಾನು ಅಲ್ಲಿಯೇ ಕಾಮೆಂಟ್‌ನಲ್ಲಿ ರಿಪ್ಲೇ ಮಾಡಿರ್ತೀನಿ, ನಿಮ್ ಅಮ್ಮನನ್ನು ಹೋಗಿ ಕೇಳು ಅಂತ ಅಂದಿರ್ತಿನಿ. ಯಾಕಂದ್ರೆ ಕೆಲವರು ನಿಮ್ಮ ಹೊಕ್ಕಳ ಫೋಟೋ ಕಳ್ಸಿ ಎಂದು ಕೇಳಿದವರಿದ್ದಾರೆ. ಅದಕ್ಕೆ ಹೋಗ್ ಗುರು ನಿಮ್ಮ ಅಮ್ಮನನ್ನು ಕೇಳು, ಅವ್ರು ಮನೆಯಲ್ಲೇ ಇರ್ತಾರಲ್ಲ. ನಿನ್ನ ಜೊತೆ ಇರ್ತಾರೆ. ಕೇಳು ಫೋಟೊ ಕಳಿಸ್ತಾರೆ, ಇಲ್ಲ ನೇರವಾಗಿ ನೋಡು. ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣು. ಹುಚ್ಚುಚ್ಚರ ಥರ ಮಾತನಾಡ್ತಾರೆ. ನಾನು ಒಂದು ಕಾರ್ ತೆಗೆದುಕೊಳ್ಳಲು 11 ವರ್ಷ ಕಷ್ಟಪಟ್ಟಿದ್ದೀನಿ. ಆದರೆ, ಜನ ಏನೆನೋ ಮಾತನಾಡ್ತಾರೆ. ನೀವು ದುಡಿದ ದುಡ್ಡು ಅಂದಮೇಲೆ ಯಾವನಿಗೆ ಕೇರ್ ಮಾಡಬೇಕು" ಎಂದು ಕೊಂಚ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ ತನಿಷಾ.
ಸ್ನೇಹಿತರಿಂದಲೇ ಸಮಸ್ಯೆ ಆಯ್ತು..
ಇಷ್ಟಕ್ಕೆ ಮುಗಿಯಲಿಲ್ಲ, ಮುಂದುವರಿದು ಮಾತನಾಡಿದ ತನಿಷಾ, ಕಾರ್ ಖರೀದಿಸಿದ ಬಳಿಕ ನನ್ನ ಸೋ ಕಾಲ್ಡ್ ಸ್ನೇಹಿತನಿಂದಲೇ ಸಮಸ್ಯೆ ಆಯ್ತು. ಇಎಂಐ ಮೇಲೆ ನಾನು ಕಾರ್ ಖರೀದಿಸಿ. ತಿಂಗಳು ತಿಂಗಳು ಇಷ್ಟಿಷ್ಟು ತುಂಬು ಪ್ಲಾನ್ ಇತ್ತು. ಹೀಗಿರುವಾಗ ನನ್ನ ಸ್ನೇಹಿತರೊಬ್ಬರು, ನನ್ನ ಕಂಪನಿಯಿಂದಲೇ ಕಾರ್ ಕೊಡಿಸ್ತಿನಿ ಎಂದು, ಕ್ಯಾಶ್ ನೀಡಿ ಕಾರ್ ಕೊಡಿಸಿದರು. ನನ್ನ ಹೆಸರಿಗೇ ಕಾರ್ ಬುಕ್ ಆಯ್ತು. ಹೀಗಿರುವಾಗ ನಾನು ಗುಡ್ ಮಾರ್ನಿಂಗ್, ಗುಡ್ ನೈಟ್, ಊಟ ಆಯ್ತಾ.. ಈ ರೀತಿಯ ರೂಟೀನ್ ಮೆಸೆಜ್‌ಗಳನ್ನು ಮಾಡುವವಳಲ್ಲ. ಒಂದು ವಾರ ಆಯ್ತು, ಒಂದೇ ಒಂದು ಫೋನ್ ಮಾಡಲ್ಲ ಎಂಬ ಮಾತುಗಳೂ ಆ ಕಡೆಯಿಂದ ಬಂದವು.
"ಇಬ್ಬರ ನಡುವೆ ಮಾತು ಜೋರಾಯ್ತು, ಈಗಲೇ ಹಣ ಬೇಕು ಎಂದು ಕೇಳಿದರು. ಪೊಲೀಸ್ ಠಾಣೆ ಮೆಟ್ಟಿಲೇರಿತು. ಯಲಹಂಕ ಸ್ಟೇಷನ್‌ಗೆ ಕಾರು ತಂದು ಬಿಟ್ಟೆ. ಆಗ ನಾನು ಶೋವೊಂದರಲ್ಲಿ ಆಂಕರ್ ಆಗಿದ್ದೆ. ಅಷ್ಟರಲ್ಲಿ ಮೂರುವರೆ ಲಕ್ಷ ಹಣ ಕೊಟ್ಟಿದ್ದೆ. ಕೊನೆಗೆ ಆ ಹಣವನ್ನು ಆ ವ್ಯಕ್ತಿಯಿಂದ ಮರಳಿ ಪಡೆದು, ಕಾರ್‌ನ ಅವರಿಗೆ ಕೊಟ್ಟು ಆಚೆ ಬರ್ತಿನಿ" ಎಂದು ಅಂದಿನ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ತನಿಷಾ.

ವಿಭಾಗ