ಕನ್ನಡ ಸುದ್ದಿ  /  ಮನರಂಜನೆ  /  ‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

ರಮ್ಯಾ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ನ ಒಂದು ಕಾಲದ ಟಾಪ್‌ ನಟಿಮಣಿಯರು. ಸಾಲು ಸಾಲು ಸಿನಿಮಾಗಳ ನಡುವೆಯೂ ಈ ಇಬ್ಬರ ನಡುವೆ ದೊಡ್ಡ ಪೈಪೋಟಿಯೇ ನಡೆಯುತ್ತಿತ್ತು. ಮುನಿಸೂ ಮನೆ ಮಾಡಿತ್ತು. ಅಂದಿನ ಆ ಕಷ್ಟದ ದಿನಗಳು ಹೇಗಿದ್ದವು ಎಂಬುದನ್ನು ನೆನಪಿಸಿಕೊಂಡಿದ್ದಾರೆ ರಕ್ಷಿತಾ.

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?
‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

Rakshitha Prem about Ramya: 2000ರ ಬಳಿಕ ಸ್ಯಾಂಡಲ್‌ವುಡ್‌ ಕಂಡ ಸ್ಟಾರ್‌ ನಟಿಯರ ಪೈಕಿ ರಮ್ಯಾ ಮತ್ತು ರಕ್ಷಿತಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಎರಡು ದಶಕಗಳ ಹಿಂದೆ ಈ ನಟಿಯರು ಇಡೀ ಸ್ಯಾಂಡಲ್‌ವುಡ್‌ ಚಿತ್ರರಂಗವನ್ನೇ ಆಳುತ್ತಿದ್ದರು. ಸ್ಟಾರ್‌ ಹೀರೋಗಳಿಗೆ ನಾಯಕಿಯರಾಗಿ ಒಂದಾದ ಮೇಲೊಂದು ಹಿಟ್‌ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದರು. ಬರೀ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾಗದ ಈ ಇಬ್ಬರು ನಟಿಯರು, ಪಕ್ಕದ ತೆಲುಗು, ತಮಿಳು ಚಿತ್ರೋದ್ಯಮದಲ್ಲೂ ಹೆಸರು ಮಾಡಿದ್ದರು. ಸ್ಟಾರ್‌ ಡಮ್‌ ಸೃಷ್ಟಿಸಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

2002ರಲ್ಲಿ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪು ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು ರಕ್ಷಿತಾ. ಮೊದಲ ಚಿತ್ರವೇ ಸೂಪರ್‌ ಹಿಟ್‌ ಆಗ್ತಿದ್ದಂತೆ, ಸಾಕಷ್ಟು ಸಿನಿಮಾ ಅವಕಾಶಗಳೂ ರಕ್ಷಿತಾ ಅವರನ್ನು ಅರಸಿ ಬಂದವು. ಅದಾದ ಬಳಿಕ 2003ರಲ್ಲಿ ಅದೇ ಪುನೀತ್‌ ರಾಜ್‌ಕುಮಾರ್‌ ಜತೆಗೆ ಅಭಿ ಚಿತ್ರದಲ್ಲಿ ರಮ್ಯಾ ಅವರನ್ನು ಪರಿಚಯಿಸಿದರು ಪಾರ್ವತಮ್ಮ ರಾಜ್‌ಕುಮಾರ್. ಆ ಚಿತ್ರವೂ ಹಿಟ್‌ ಪಟ್ಟ ಪಡೆಯಿತು. ಅಲ್ಲಿಂದ ಶುರುವಾಯ್ತು ರಮ್ಯ ಚೈತ್ರ ಕಾಲ!

ಹೀಗೆ ಒಂದೇ ಸಮಯದಲ್ಲಿಯೇ ಸಿನಿಮಾರಂಗಕ್ಕೆ ಬಂದ ಈ ಇಬ್ಬರೂ ನಟಿಯರು ಒಂದಾದ ಮೇಲೊಂದು ಹಿಟ್‌ ಸಿನಿಮಾಗಳನ್ನು ನೀಡಿದರು. ತಮಿಳು, ತೆಲುಗಿನ ಪ್ರೇಕ್ಷಕರನ್ನು ಸೆಳೆದರು. ಎಕ್ಸ್‌ಕ್ಯೂಸ್‌ ಮಿ, ರಂಗ SSLC, ಕಂಠಿ, ಆಕಾಶ್‌, ಅಮೃತಧಾರೆ.. ಯಶಸ್ಸಿನ ಓಟದಲ್ಲಿ ರಮ್ಯಾ ಓಡುತ್ತಿದ್ದರೆ, ಇತ್ತ ಅದೇ ವೇಗದಲ್ಲಿ ಧಮ್‌, ಗೋಕರ್ಣ, ಲವ್‌, ಕಲಾಸಿಪಾಳ್ಯ, ಅಯ್ಯ, ಡೆಡ್ಲಿ ಸೋಮ, ಸುಂಟರಗಅಳಿ.. ಹೀಗೆ ರಕ್ಷಿತಾ ಸಹ ಗೆಲುವಿನ ಓಟ ಮುಂದುವರಿಸಿದ್ದರು. ಇದೆಲ್ಲದರ ನಡುವೆ ಇಬ್ಬರಲ್ಲೂ ನೆಕ್‌ ಟು ನೆಕ್‌ ಪೈಟೋಟಿಯೂ ಏರ್ಪಟ್ಟಿತ್ತು. ಸ್ಪರ್ಧೆಯ ರೂಪ ಪಡೆದಿತ್ತು.

ಆಗ ಸೋಷಿಯಲ್‌ ಮೀಡಿಯಾ ಇರುತ್ತಿರಲಿಲ್ಲ. ಹಾಗಿದ್ದರೂ, ಇಬ್ಬರ ನಡುವಿನ ಮುನಿಸು ಎಲ್ಲರಿಗೂ ಗೊತ್ತಿತ್ತು. ಒಬ್ಬರಿಗೊಬ್ಬರು ಮುಖ ನೋಡಲಾರದಷ್ಟು ತಾರಕಕ್ಕೆ ಏರಿತ್ತು. ಹೀಗೆ ಸಾಗುತ್ತಿರುವಾಗಲೇ ರಕ್ಷಿತಾ, ಪ್ರೇಮ್‌ ಜತೆ ವಿವಾಹವಾಗ್ತಾರೆ. ಸಿನಿಮಾದಿಂದಲೂ ನಿಧಾನಕ್ಕೆ ದೂರ ಉಳಿಯುತ್ತ ಹೋಗುತ್ತಾರೆ. ಇಷ್ಟಾದರೂ ಆ ಮುನಿಸು ಮರೆಯಾಗಿರಲಿಲ್ಲ. ಈಗ ಇದೇ ಮುನಿಸು, ಕಾಂಪಿಟೇಷನ್‌ ಬಗ್ಗೆ ನಟಿ ರಕ್ಷಿತಾ ನೆನಪು ಮಾಡಿಕೊಂಡಿದ್ದಾರೆ. "ಅಂದಿನ ನಮ್ಮಿಬ್ಬರ ಆ ಕಾಂಪಿಟೇಷನ್‌ ಇಲ್ಲದೇ ಇದ್ದಿದ್ದರೆ, ನಮ್ಮ ಸಿನಿ ಜರ್ನಿಯೇ ಅಪೂರ್ಣ’ ಎಂದಿದ್ದಾರೆ ರಕ್ಷಿತಾ.

ಆವಾಗಿನ ಟೈಮೇ ಸರಿ ಇರಲಿಲ್ಲವೇನೋ

ಈಗಿನ ಫ್ಯಾನ್ಸ್‌ ವಾರ್‌ ರೀತಿ ಆಗಲೂ ರಮ್ಯಾ ರಕ್ಷಿತಾ ನಡುವೆ ಇತ್ತಾ? ಈ ಬಗ್ಗೆ Rapid Rashmi ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ರಕ್ಷಿತಾ, " ಇದು ಹೇಗೆ ಕ್ರಿಯೇಟ್‌ ಆಗ್ತಿತ್ತು ಎಂಬುದು ನನಗಂತೂ ಗೊತ್ತಿಲ್ಲ. ನನ್ನ ಕಡೆಯಂತೂ ಆ ಥರ ಇರಲಿಲ್ಲ. ನಾನು ಯಾವತ್ತೂ ಪೈಪೋಟಿಗೆ ಬಿದ್ದಿರಲಿಲ್ಲ. ಈಗಲೂ ನಾನು ಅಂದಿನ ದಿನಗಳನ್ನು ನೆನಪಿಸಿಕೊಂಡರೆ ಅದು ತುಂಬ ಕಷ್ಟದ ಸಮಯವಾಗಿತ್ತು. ಆವತ್ತಿನ ಟೈಮೇ ಸರಿಯಿರಲಿಲ್ಲವೇನೋ ಅನಿಸಿದ್ದಿದೆ. ನಿರ್ಮಾಪಕರು ತಂದ ಸಿನಿಮಾ ಕಥೆಯನ್ನು, ನಾನು ಬೇಡ ಎಂದಾಗ ಅವಳ ಕಡೆ ಹೋಗುತ್ತಿದ್ದರು. ಅವಳಿಗೆ ಬೇಡ ಎಂದಾಗ ನನ್ನ ಕಡೆ ಬರುತ್ತಿದ್ದರು. ಇದು ಕಾಮನ್‌ ಆಗಿತ್ತು"

ಆ ಸ್ಪರ್ಧೆ ಇಲ್ಲದಿದ್ದರೆ ನಮ್ಮ ಜರ್ನಿಯೇ ಅಪೂರ್ಣ

"ನಾನು ಈಗ ನೆನಪಿಸಿಕೊಂಡರೆ, ನಮ್ಮಿಬ್ಬರ ನಡುವಿನ ಆ ಜಗಳ ಇಲ್ಲದೇ ಇದ್ದಿದ್ದರೆ, ನಮ್ಮ ಈ ಸಿನಿಮಾ ಪಯಣವೇ ಅಪೂರ್ಣ ಅಲ್ವಾ ಅಂತ ಅನಿಸಿದ್ದಿದೆ. ಆ ಒಂದು ದ್ವೇಷ ಇದ್ದಿದ್ದಕ್ಕೇ ನಾವು ಜಿದ್ದಿಗೆ ಬಿದ್ದಂತೆ ಸಾಧನೆ ಮಾಡಲು ಸಾಧ್ಯವಾಯ್ತು. ಆ ಒಂದು ಜಿದ್ದು ಇಲ್ಲದಿದ್ದರೆ ನಾವು ಈ ಮಟ್ಟಕ್ಕೆ ಬರುತ್ತಿರಲಿಲ್ಲವೇನೋ? ಅದನ್ನ ಮಾಡಬೇಕು, ಇದನ್ನ ಮಾಡಬೇಕು ಅನ್ನೋ ತುಡಿತ ಇಬ್ಬರಲ್ಲೂ ಇತ್ತು. ಆದರೆ, ಇದು ಆರೋಗ್ಯಕರ ಕಾಂಪಿಟೇಷನ್‌ ಆಗಿರಲಿಲ್ಲ. ವೈಯಕ್ತಿಕವಾಗಿ ನೋಡಿದರೆ, ನಮಗೇನು ಸಿಕ್ತು ಅನ್ನೋ ಭಾವ ಕಾಡುತ್ತದೆ"

ಅದು ಆರೋಗ್ಯಕರ ಕಾಂಪಿಟೇಷನ್‌ ಆಗಿರಲಿಲ್ಲ..

"ಆವತ್ತು ನಮ್ಮಿಬ್ಬರ ನಡುವೆ ತುಂಬ ಕಾಂಪಿಟೇಷನ್‌ ಇತ್ತು. ಅದು ಒಳ್ಳೆಯ ಕಾಂಪಿಟೇಷನ್‌ ಆಗಿರಲಿಲ್ಲ. ಆಗ ಸೋಷಿಯಲ್‌ ಮೀಡಿಯಾ ಇರುತ್ತಿರಲಿಲ್ಲ. ಟ್ಯಾಬ್ಲಾಯ್ಡ್‌ಗಳಿಗೆ ರಮ್ಯಾ ಸಂದರ್ಶನ ಕೊಟ್ಟಿದ್ದರೆ, ಅದರ ಹಿಂದಿನ ದಿನ ನನಗೆ ಫೋನ್‌ ಬರ್ತಿತ್ತು. ರಮ್ಯಾ ಕುರಿತ ಒಂದು ಆರ್ಟಿಕಲ್‌ ಬರ್ತಿದೆ. ನೀವೂ ನಿಮ್ಮ ಸ್ಟೇಟ್‌ಮೆಂಟ್‌ ಕೊಡಿ ಎನ್ನುತ್ತಿದ್ದರು. ಇದಕ್ಕೆ ನಿಮ್ಮ ಅನಿಸಿಕೆ ಏನು ಎಂದು ಕೇಳುತ್ತಿದ್ದರು. ಆಗ ನಾನು ಏನನ್ನೂ ಹೇಳುತ್ತಿರಲಿಲ್ಲ. ಆದರೆ, ಆ ಟೈಮ್‌ ನೆನಪಿಸಿಕೊಂಡರೆ, ಈಗಲೂ ನನಗೆ ಇರಿಟೇಟ್‌ ಆಗುತ್ತೆ" ಎಂದಿದ್ದಾರೆ.

ಈಗ ಇಬ್ಬರ ನಡುವೆ ಮುನಿಸಿಲ್ಲ..

"ಅದಾದ ಮೇಲೆ ನಾನು ಸಿನಿಮಾ ಬಿಟ್ಟೆ. ಮದುವೆ ಆಯ್ತು. ಒಂದಿನ ನನ್ನ ಬರ್ತ್‌ಡೇಗೆ ವಿಶ್‌ ಮಾಡಿದ್ಲು. ಉಡುಗೊರೆ ಕಳಿಸಿದ್ಲು. ಒಮ್ಮೆ ಆಕೆಯ ಸಾಕುನಾಯಿ ನಿಧನವಾದಾಗ, ಹಳೆಯದನ್ನೆಲ್ಲ ತಲೆಯಿಂದ ಕಿತ್ತೆಸೆದು, ನಾನೇ ರಮ್ಯಾಗೆ ಫೋನ್‌ ಮಾಡಿ ಮಾತನಾಡಿದ್ದೆ. ಈಗ ಆ ಮುನಿಸು ನಮ್ಮ ನಡುವೆ ಇಲ್ಲ" ಎಂದು ರಮ್ಯಾ ನಡುವಿನ ಅಂದಿನ ದಿನಗಳು ಹೇಗಿದ್ದವು ಎಂಬುದನ್ನು ಹೇಳಿಕೊಂಡಿದ್ದಾರೆ.

IPL_Entry_Point