ನಾವು ಮಂಗಳೂರಿನವರು, ಏನಿವಾಗ? ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತುಳು-ಕನ್ನಡ ಭಾಷೆಯ ಕುರಿತು ಕಾವೇರಿದ ಚರ್ಚೆ; ಹೆಜ್ಜಾರು ನಾಯಕಿ ತಬ್ಬಿಬ್ಬು
ಕನ್ನಡ ಸುದ್ದಿ  /  ಮನರಂಜನೆ  /  ನಾವು ಮಂಗಳೂರಿನವರು, ಏನಿವಾಗ? ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತುಳು-ಕನ್ನಡ ಭಾಷೆಯ ಕುರಿತು ಕಾವೇರಿದ ಚರ್ಚೆ; ಹೆಜ್ಜಾರು ನಾಯಕಿ ತಬ್ಬಿಬ್ಬು

ನಾವು ಮಂಗಳೂರಿನವರು, ಏನಿವಾಗ? ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತುಳು-ಕನ್ನಡ ಭಾಷೆಯ ಕುರಿತು ಕಾವೇರಿದ ಚರ್ಚೆ; ಹೆಜ್ಜಾರು ನಾಯಕಿ ತಬ್ಬಿಬ್ಬು

Hejjaru Kannada Movie: ಹೆಜ್ಜಾರು ಚಿತ್ರತಂಡದ ಜತೆ ಕೆಎಫ್‌ಐ ಯೂಟ್ಯೂಬ್ ಚಾನೆಲ್‌ನಲ್ಲಿ ನಾಯಕ ಭಗತ್‌ ಆಳ್ವಾ, ನಾಯಕಿ ಶ್ವೇತಾ ಡಿಸೋಜಾ ಜತೆ ಸಂದರ್ಶನ ನಡೆಸಲಾಯಿತು. ಈ ಸಮಯದಲ್ಲಿ ತುಳು ಕನ್ನಡ ಭಾಷಾ ವಿಷಯದ ಕುರಿತು ಚರ್ಚೆ ಕಾವೇರಿದೆ.

ನಾವು ಮಂಗಳೂರಿನವರು, ಏನಿವಾಗ? ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತುಳು-ಕನ್ನಡ ಚರ್ಚೆ
ನಾವು ಮಂಗಳೂರಿನವರು, ಏನಿವಾಗ? ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತುಳು-ಕನ್ನಡ ಚರ್ಚೆ

ಬೆಂಗಳೂರು: ಹೆಜ್ಜಾರು ಚಿತ್ರತಂಡದ ಜತೆ ಕನ್ನಡ ಫಿಲ್ಮ್‌ ಇಂಡಸ್ಟ್ರಿ (ಕೆಎಫ್‌ಐ) ಯೂಟ್ಯೂಬ್ ಚಾನೆಲ್‌ನಲ್ಲಿ ನಾಯಕ ಭಗತ್‌ ಆಳ್ವಾ, ನಾಯಕಿ ಶ್ವೇತಾ ಡಿಸೋಜಾ ಜತೆ ಸಂದರ್ಶನ ನಡೆಸಲಾಯಿತು. ಈ ಸಮಯದಲ್ಲಿ ತುಳು ಕನ್ನಡ ಭಾಷಾ ವಿಷಯದ ಕುರಿತು ಚರ್ಚೆ ಕಾವೇರಿದೆ. ಮೊದಲಿಗೆ ಯೂಟ್ಯೂಬ್‌ ಸಂದರ್ಶಕರಾದ ರಂಗನಾಥ್‌ ಗೌಡ ತುಳು ಭಾಷೆಯ ಕುರಿತು ಪ್ರಶ್ನಿಸುತ್ತಾರೆ. ನಾಯಕಿ ಮೂಲತಃ ಕೊಂಕಣಿಯವರು. ನಾಯಕ ತುಳು ಭಾಷೆಯವರು. ಇವರಿಬ್ಬರು ತುಳುವಿನಲ್ಲಿ ಮಾತನಾಡುತ್ತಿರುವಾಗ ನಿರೂಪಕ "ನೀವು ಮಂಗಳೂರಿನವರು ತುಳು ಭಾಷೆಯವರು ಸಿಕ್ಕಾಗ ತುಳುವಿನಲ್ಲೇ ಮಾತನಾಡುತ್ತೀರಿ ಅಲ್ವಾ ಎಂದು ಕೇಳುತ್ತಾರೆ.

ನೀವು ಪಾಸಿಟೀವ್‌ ಆಗಿ ಕೇಳಿದ್ದೀರಾ? ನೆಗೆಟಿವ್‌ ಆಗಿ ಕೇಳಿದ್ದೀರಾ? ಎಂದು ಭಗತ್‌ ಪ್ರಶ್ನಿಸುತ್ತಾರೆ. ಅಂದರೆ, ಯಾರೂ ಸಿಕ್ಕರೂ ನೀವು ಮಂಗಳೂರಿನವರಲ್ವ ಎಂದೆಲ್ಲ ಕೇಳುತ್ತಾರೆ. ಇದೆಲ್ಲ ನಮಗೆ ಹಿಂಸೆ ಆಗುತ್ತದೆ ಎನ್ನುತ್ತಾರೆ. ಟ್ರಿಗರ್‌ ಮಾಡುವುದು ನನ್ನ ಇಂಟೆನ್ಷನ್‌ ಅಲ್ಲ ಸರ್‌ ಎಂದು ಸಂದರ್ಶನಕ ಹೇಳುತ್ತಾರೆ. "ನಾವು ಮಂಗಳೂರಿನವರಲ್ವ. ಅದನ್ನು ಮತ್ತೆ ಪ್ರೂವ್‌ ಮಾಡೋದು ಯಾಕೆ" ಎಂದು ಭಗತ್‌ ಕೇಳುತ್ತಾರೆ. ಚರ್ಚೆ ಕಾವೇರಿದಾಗ ನಾಯಕಿಗೆ ಆತಂಕವಾಗಿದೆ. ಅವರು ಹಾಗೆ ಕೇಳಿದ್ದು ಅಲ್ಲ. ನೀವು ಹಾಗೆ ಅಂದುಕೊಂಡಿರಿ ಎಂದು ನಾಯಕನಿಗೆ ಹೇಳುತ್ತಾರೆ. "ಈರ್‌ ತುಳುಡೇ ಪಾತೆರ್ಲೆ. ದಾದ ಆಪುಂಡು ತೂಕ" ಎಂದು ನಾಯಕ ನಾಯಕಿಗೆ ಹೇಳುತ್ತಾರೆ.

"ಅಲ್ಲ ನಾವೆಲ್ಲರೂ ಕರ್ನಾಟಕದವರು. ಯಾಕೆ ಜಗಳ ಮಾಡಬೇಕು" ಎಂದು ನಾಯಕಿ ಆತಂಕದಿಂದ ಹೇಳುತ್ತಾರೆ. "ನಾವು ತುಳುವಿನಲ್ಲಿ ಮಾತನಾಡಿದರೆ ಏನು ತಪ್ಪು" ಎಂದು ಭಗತ್‌ ಹೇಳುತ್ತಾರೆ. "ಮಾತನಾಡಿ, ನನಗೆ ಸ್ವಲ್ಪನೂ ಅರ್ಥ ಆಗೋದಿಲ್ಲ. ನನ್ನ ಬಗ್ಗೆನೂ ಮಾತನಾಡಿರಬಹುದಲ್ವ" ಎಂದು ಹೇಳುತ್ತಾರೆ. ಅದಕ್ಕೆ ನಾಯಕ "ನೀವು ಇವರತ್ರ ಕ್ಲಾರಿಟಿ ತೆಗೆದುಕೊಳ್ಳಿ" ಎಂದು ನಾಯಕಿಯಲ್ಲಿ ಉತ್ತರಿಸುವಂತೆ ಹೇಳುತ್ತಾರೆ. ನಾಯಕಿಗೆ ಯಾಕೋ ಭಯವಾಗುತ್ತದೆ. ನಾನು ಯಾರನ್ನೂ ಬ್ಲೇಮ್‌ ಮಾಡ್ತಾ ಇಲ್ಲ ಎನ್ನುತ್ತಾರೆ.

ಇದಾದ ಬಳಿಕ ಇದು ಫ್ರಾಂಕ್‌ ಮಾತುಕತೆ ಎಂದು ನಾಯಕ ಮತ್ತು ಸಂದರ್ಶಕರು ಹೇಳುತ್ತಾರೆ. ನಾಯಕಿಗೆ ಅಚ್ಚರಿಯಾಗುತ್ತದೆ. ಈ ಮೂಲಕ ಕನ್ನಡ ಫಿಲ್ಮ್‌ ಇಂಡಸ್ಟ್ರಿ (ಕೆಎಫ್‌ಐ) ಯೂಟ್ಯೂಬ್‌ ಚಾನೆಲ್‌ ಮತ್ತು ಹೆಜ್ಜಾರು ಚಿತ್ರತಂಡವು ತಮಾಷೆಗಾಗಿ ಈ ಮಾತುಕತೆ ನಡೆಸಿದೆ.

ಹೆಜ್ಜಾರು ಟ್ರೇಲರ್‌ ನೋಡಿ ಮೆಚ್ಚಿದ ಕಿಚ್ಚ ಸುದೀಪ್‌

ಹರ್ಷಪ್ರಿಯಾ ಆಕ್ಷನ್‌ ಕಟ್‌ ಹೇಳಿರುವ ಹೆಜ್ಜಾರು ಸಿನಿಮಾವು ಜುಲೈ 19ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಈ ಚಿತ್ರದ ಮೊದಲ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಈ ಟ್ರೇಲರ್‌ ನೋಡಿರುವ ಕಿಚ್ಚ ಸುದೀಪ್‌ ಹೊಗಳಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಕಥೆ ಇದೆ, ವಿಶೇಷ ಕಾನ್ಸೆಪ್ಟ್‌ ಇದೆ ಎಂದು ಸುದೀಪ್‌ ಹೇಳಿದ್ದಾರೆ. ಗೋಪಾಲ್‌ ದೇಶಪಾಂಡೆ ಮತ್ತು ಚಿತ್ರತಂಡಕ್ಕೆ ತಮ್ಮ ಶುಭಾಶಯಗಳನ್ನು ಸುದೀಪ್‌ ಹೇಳಿದ್ದಾರೆ.

ಹೆಜ್ಜಾರು ಸಿನಿಮಾದ ವಿಶೇಷವೇನು?

ಎರಡು ಯುಗಳ ಇಬ್ಬರು ವ್ಯಕ್ತಿಗಳ ಜಿಜ್ಞಾಸೆಯ ಜೀವನದ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ರಾಜಾರಂ 1965ರಲ್ಲಿ ಜನಿಸಿದರೆ ಭಗತ್‌ 1995ರಲ್ಲಿ ಜನಿಸಿದ್ದಾರೆ. ಇವರಿಬ್ಬರ ಪ್ಯಾರಲಾಲ್‌ ಕಥೆಯನ್ನು ಇದು ಹೇಳುತ್ತದೆ. ಚಿತ್ರಕ್ಕೆ ಭಗತ್ ಆಳ್ವ ನಾಯಕ ಮತ್ತು ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ. ಗೋಪಾಲ್ ದೇಶಪಾಂಡೆ, ನವೀನ್ ಕೃಷ್ಣ, ಮುನಿ ಮತ್ತು ಅರುಣ್ ಬಾಲರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Whats_app_banner