ಕನ್ನಡ ಸುದ್ದಿ  /  ಮನರಂಜನೆ  /  Sapthami Gowda: ಟಾಲಿವುಡ್‌ನಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ; ನಿತಿನ್‌ ಸಿನಿಮಾಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ ಕಾಂತಾರ ಚೆಲುವೆ

Sapthami Gowda: ಟಾಲಿವುಡ್‌ನಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ; ನಿತಿನ್‌ ಸಿನಿಮಾಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ ಕಾಂತಾರ ಚೆಲುವೆ

ಟಾಲಿವುಡ್‌ನ ತಮ್ಮುಡು ಸಿನಿಮಾದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಪಾಪ್‌ಕಾರ್ನ್‌ ಮಂಕಿ ಟೈಗರ್‌ ನಟಿ ಕುದುರೆ ಸವಾರಿಯನ್ನೂ ಕಲಿಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಸಪ್ತಮಿ ಗೌಡ ತೆಲುಗು ಸಿನಿ ಉದ್ಯಮಕ್ಕೆ ಪದಾರ್ಪಣೆ ಮಾಡಿದ್ದಾರೆ.

Sapthami Gowda: ತೆಲುಗು ಸಿನಿಮಾದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ
Sapthami Gowda: ತೆಲುಗು ಸಿನಿಮಾದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ

ಬೆಂಗಳೂರು: ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡರಿಗೆ ತೆಲುಗು ಚಿತ್ರರಂಗದಲ್ಲಿ ಅವಕಾಶ ದೊರಕಿದೆ. ನಿತಿನ್‌ ನಟನೆಯ ತಮ್ಮಡು ಸಿನಿಮಾದಲ್ಲಿ ಅವಕಾಶ ದೊರಕಿರುವುದನ್ನು ಸಪ್ತಮಿ ಗೌಡ ಖಚಿತ ಪಡಿಸಿದ್ದಾರೆ. "ನಿತಿನ್‌ ತಮ್ಮಡು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಈ ಚಲನಚಿತ್ರದ ಶೂಟಿಂಗ್‌ ಆರಂಭವಾಗಿದೆ. ನಾನು ಶೂಟಿಂಗ್‌ ಸೆಟ್‌ ಸೇರಿಕೊಳ್ಳಬೇಕಿದೆ" ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಈ ಹಿಂದೆಯೇ ಟಾಲಿವುಡ್‌ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುವ ಕುರಿತು ಸುದ್ದಿಗಳಿದ್ದವು. ಇದೀಗ ಸಪ್ತಮಿ ಗೌಡ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕುದುರೆ ಸವಾರಿ ಕಲಿಯುತ್ತಿದ್ದಾರೆ ಸಪ್ತಮಿ ಗೌಡ

ತೆಲುಗಿನ ತಮ್ಮಡು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಪ್ತಮಿ ಗೌಡ ಕುದುರೆ ಸವಾರಿಯನ್ನೂ ಕಲಿಯುತ್ತಿದ್ದಾರೆ. "ನಾನು ಹಾರ್ಸ್‌ ರೈಡಿಂಗ್‌ ಕಲಿಯುತ್ತಿದ್ದೇನೆ. ಇನ್ನೂ ಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ. ಸಿನಿಮಾದಲ್ಲಿ ನನ್ನ ಪಾತ್ರದ ಕುರಿತು ಮಾಹಿತಿ ನೀಡುವಂತೆ ಇಲ್ಲ" ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ. ನಿತಿನ್‌ ನಟನೆಯ ತಮ್ಮಡು ಸಿನಿಮಾದಲ್ಲಿ ಸಪ್ತಮಿ ಗೌಡ ಮಾತ್ರವಲ್ಲದೆ ನಟಿ ಲಯಾ ಕೂಡ ನಟಿಸುತ್ತಿದ್ದಾರೆ. ಇದು ಶ್ರೀರಾಮ್‌ ವೇಣು ನಿರ್ದೇಶನದ ಚಲನಚಿತ್ರವಾಗಿದೆ.

ನಟಿ ಸಪ್ತಮಿ ಗೌಡ ಇತ್ತೀಚೆಗೆ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಸಪ್ತಮಿ ಪಾತ್ರ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿರಲಿಲ್ಲ. ಯುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿತ್ತು. ಹೊಂಬಾಳೆ ಫಿಲ್ಮ್ಸ್‌ನ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಸಿನಿಮಾದಲ್ಲಿ ಯುವನ ಪ್ರೇಯಸಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದರು.

ಕಾಂತಾರ ಸಿನಿಮಾದಲ್ಲಿ ಖ್ಯಾತಿ ಗಳಿಸುವ ಮೊದಲು ಸಪ್ತಮಿ ಗೌಡ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದಲ್ಲಿ ನಟಿಸಿದ್ದರು. 2022ರಲ್ಲಿ ರಿಷಬ್‌ ಶೆಟ್ಟಿ ನಿರ್ದೇಶನ-ನಟನೆಯ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇದು ಸಪ್ತಮಿ ಗೌಡರ ಖ್ಯಾತಿಯನ್ನು ಹೆಚ್ಚಿಸಿತ್ತು. ಬಾಲಿವುಡ್‌ನ ವಿವೇಕ್‌ ಅಗ್ನಿಹೋತ್ರಿಯವರ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ, ಶ್ರೀಲೀಲಾರಂತೆ ಸಪ್ತಮಿ ಗೌಡ ಕೂಡ ಟಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದಾರೆ.

ಸಪ್ತಮಿ ಗೌಡ ಅವರು ಕರ್ನಾಟಕ ಸರಕಾರದ ನನ್ನ ಮೈತ್ರಿ ಸ್ಕೀಮ್‌ನ ಬ್ರಾಂಡ್‌ ಅಂಬಾಸಡರ್‌ ಆಗಿದ್ದಾರೆ. ಈ ಮೂಲಕ ಕರ್ನಾಟಕ ಶಾಲಾ ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಸಮರ್ಥನಂ ಟ್ರಸ್ಟ್‌ ಆಯೋಜಿಸಿದ 2022ರ ಬ್ಲೈಂಡ್‌ ಕ್ರಿಕೆಟ್‌ನ ಮೂರನೇ ಟಿ20 ವಿಶ್ವಕಪ್‌ ಅಡಿಷನ್‌ಗೂ ಇವರು ಬ್ರಾಂಡ್‌ ಅಂಬಾಸಡರ್‌ ಆಗಿದ್ದರು. ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾದ ನಟನೆಗಾಗಿ ಬೆಸ್ಟ್‌ ಫಿಮೇಲ್‌ ಡಿಬಟ್‌-ಕನ್ನಡ ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ಪಡೆದಿದ್ದರು. ಕಾಂತಾರ ಸಿನಿಮಾದ ನಟನೆಗಾಗಿ ಬೆಸ್ಟ್‌ ನಟಿ ನಾಮಿನೇಷನ್‌, ಬೆಸ್ಟ್‌ ನಟಿ ಕ್ರಿಟಿಕ್ಸ್‌ ಪ್ರಶಸ್ತಿ ಪಡೆದಿದ್ದರು.

IPL_Entry_Point