ವಾರಕ್ಕೊಮ್ಮೆ ರೇ.. ಆಗುವವಳನ್ನು ವ್ಯವಸ್ಥೆ ಇನ್ನೊಂದು ಬಾರಿ ಮಾಡ್ತು ಎಂದ ರೂಪಾಂತರ ಟ್ರೇಲರ್‌; ರಾಜ್‌ ಬಿ ಶೆಟ್ಟಿ ಸಿನಿಮಾ ಜು 26ಕ್ಕೆ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ವಾರಕ್ಕೊಮ್ಮೆ ರೇ.. ಆಗುವವಳನ್ನು ವ್ಯವಸ್ಥೆ ಇನ್ನೊಂದು ಬಾರಿ ಮಾಡ್ತು ಎಂದ ರೂಪಾಂತರ ಟ್ರೇಲರ್‌; ರಾಜ್‌ ಬಿ ಶೆಟ್ಟಿ ಸಿನಿಮಾ ಜು 26ಕ್ಕೆ ರಿಲೀಸ್‌

ವಾರಕ್ಕೊಮ್ಮೆ ರೇ.. ಆಗುವವಳನ್ನು ವ್ಯವಸ್ಥೆ ಇನ್ನೊಂದು ಬಾರಿ ಮಾಡ್ತು ಎಂದ ರೂಪಾಂತರ ಟ್ರೇಲರ್‌; ರಾಜ್‌ ಬಿ ಶೆಟ್ಟಿ ಸಿನಿಮಾ ಜು 26ಕ್ಕೆ ರಿಲೀಸ್‌

Roopanthara Kannada Movie: ರೂಪಾಂತರ ಎಂಬ ಕನ್ನಡ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗಲಿದೆ. ರಾಜ್‌ ಬಿ ಶೆಟ್ಟಿ ನಟನೆಯ ಈ ಸಿನಿಮಾ ಹಲವು ಕಾರಣಗಳಿಂದ ನಿರೀಕ್ಷೆ ಹೆಚ್ಚಿಸಿದೆ.

ರಾಜ್‌ ಬಿ ಶೆಟ್ಟಿ ರೂಪಾಂತರ ಸಿನಿಮಾ ಜು 26ಕ್ಕೆ ರಿಲೀಸ್‌
ರಾಜ್‌ ಬಿ ಶೆಟ್ಟಿ ರೂಪಾಂತರ ಸಿನಿಮಾ ಜು 26ಕ್ಕೆ ರಿಲೀಸ್‌

ಬೆಂಗಳೂರು: ರಾಜ್‌ ಬಿ ಶೆಟ್ಟಿ ನಟನೆಯ ರೂಪಾಂತರ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಟ್ರೇಲರ್‌ ಡಿಫರೆಂಟ್‌ ಆಗಿದ್ದು, ಕಂಟೆಂಟ್‌ ಆಧರಿತ ಸಿನಿಮಾವಾಗಿರುವ ಸೂಚನೆಯನ್ನು ನೀಡಿದೆ. ರಾಜ್ ಬಿ ಶೆಟ್ಟಿ ನಟನೆಯ ನಿರ್ದೇಶನದ ಒಂದು ಮೊಟ್ಟೆಯ ಕಥೆಯನ್ನು ಬೆಂಬಲಿಸಿದ ಸುಹಾನ್ ಪ್ರಸಾದ್ ಅವರ ಎರಡನೇ ನಿರ್ಮಾಣದ ಸಿನಿಮಾ ಇದಾಗಿದೆ. ರೂಪಾಂತರದಲ್ಲಿ ಲೇಖಾ ನಾಯ್ಡು, ಹನುಮಕ್ಕ, ಭರತ್ ಜಿಬಿ, ಸೋಮಶೇಖರ್ ಬೋಳೆಗಾಂವ್ ಮುಂತಾದವರು ನಟಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ಮಿಧುನ್ ಮುಕುಂದನ್ ಸಂಗೀತವಿದೆ.

ಕುತೂಹಲ ಕೆರಳಿಸಿದ ರೂಪಾಂತರ ಟ್ರೇಲರ್‌

ರೂಪಾಂತರ ಟ್ರೇಲರ್‌ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತವೆ. ಒಂದು ಕಥೆ ಹೇಳ್ಲಾ ಎಂದು ಟ್ರೇಲರ್‌ ಆರಂಭವಾಗುತ್ತದೆ. “ಈ ಮಗು ಎಲ್ಲಿಂದ ತಂದೆ ಎಂದು ಬಿಕ್ಷುಕಿಯನ್ನು ಪ್ರಶ್ನಿಸುವುದು, ಸಾಹುಕಾರ ಇಂದು ಬರೋದಿಲ್ಲ ಎಂದು ವೇತನಕ್ಕಾಗಿ ಕಾಯುವ ಬಡವ, ಹಬ್ಬದ ದಿನ ಸಾಲ ಕೊಡೋದಿಲ್ಲ ಹೋಗೋ ಎಂದು ಬಯ್ಯುವ ವ್ಯಕ್ತಿ, ನಗರಕ್ಕೆ ಕರೆದುಕೊಂಡು ಹೋಗಿ ಎಂದು ಕೇಳುವ ಬಡಮಹಿಳೆ, ವಾರಕ್ಕೆ ಒಂದು ಸಲ ರೇಪ್‌ ಆಗೋಳಿಗೆ ವ್ಯವಸ್ಥೆ ಇನ್ನೊಂದು ಬಾರಿ ರೇಪ್‌ ಮಾಡ್ತಂತೆ ಎಂಬ ಪೊಲೀಸ್‌ ಅಧಿಕಾರಿಯ ಸ್ವಗತ... ಇವೆಲ್ಲದರ ನಡುವೆ ಇನ್ನೇನೋ ಧ್ವನಿಸುವ ರಾಜ್‌ ಬಿ ಶೆಟ್ಟಿ ಕುಣಿತ..”. ಹೀಗೆ ರೂಪಾಂತರ ಟ್ರೇಲರ್‌ ಸಾಕಷ್ಟು ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತದೆ. ಒಟ್ಟಾರೆ ರೂಪಾಂತರ ಸಿನಿಮಾ ಡಿಫರೆಂಟ್‌ ಜಾನರ್‌ನಲ್ಲಿರುವುದು ಪಕ್ಕಾ ಆಗಿದೆ. ಇದು ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸಿದೆ.

ಟ್ರೇಲರ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಈ ರೂಪಾಂತರ ಸಿನಿಮಾವನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ. "ಅದ್ಬುತವಾದ trailer. ಬಹಳಷ್ಟು ಅಂಶಗಳು ಅಡಗಿವೆ. ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾದಿರುವೆ" "ಈ ಟ್ರೇಲರ್‌ ಸಿನಿಮಾ ಡಿಫರೆಂಟ್‌ ಆಗಿರುವ ಸೂಚನೆಯಾಗಿದೆ" "ಇಂತಹ ಸಿನಿಮಾಗಳನ್ನು ಎಕ್ಸ್‌ಪೀರಿಯನ್ಸ್‌ ಮಾಡಬೇಕು, ಎಕ್ಸ್‌ಪೇಟೇಷನ್‌ ಬಿಲ್ಡ್‌ ಮಾಡಬಾರದು" "ಮಿದುನ್‌ ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್‌ ಇರುವ ಸೂಚನೆ ಇದೆ" "ರಾಜ್‌ ಬಿ ಶೆಟ್ಟಿ ಒಳ್ಳೆಯ ಕಥೆಯೊಂದಿಗೆ ಬಂದಿದ್ದಾರೆ" "ದೇವರೇ ಈ ಸಿನೆಮಾ ಅದ್ಭುತ ಯಶಸ್ಸು ಕಾಣಲಿ" "ಟೋಬಿಯಂತೆ ಈ ಸಿನಿಮಾವನ್ನು ಓವರ್‌ ಹೈಪ್‌ ಮಾಡಬೇಡಿ" "ರಾಜ್‌ ಬಿ ಶೆಟ್ಟಿ ಎಂದಿಗೂ ನಿರಾಶೆ ಮಾಡುವುದಿಲ್ಲ" "ಕಂಟೆಂಟ್‌ ಇರುವ ಸಿನಿಮಾ ಬಯಸುವವರಿಗೆ ಮೃಷ್ಟಾನ್ನ ಖಾತ್ರಿ" "ಹಲವು ಕಥೆಗಳು ಇರುವಂತೆ ಕಾಣಿಸುತ್ತದೆ" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಮಿಥಿಲೇಶ್‌ ಏನಂದ್ರು?

ರೂಪಾಂತರ ಸಿನಿಮಾದ ಕುರಿತು ಮಿಥಿಲೇಶ್‌ ಅವರು ಒಟಿಟಿಪ್ಲೇ ಪೋರ್ಟಲ್‌ ಜತೆ ಮಾತನಾಡಿದ್ದಾರೆ. ರೂಪಾಂತರ ಸಿನಿಮಾವು 5 ಐಪರ್‌ ಲಿಂಕ್ಡ್‌ ಕಥೆಗಳನ್ನು ಹೊಂದಿದೆ. ಈ ಕಥೆಗಳು ಪರಸ್ಪರ ಒಂದನ್ನೊಂದು ಸ್ಪರ್ಶಿಸುತ್ತವೆ ಎಂದು ಮಿಥಿಲೇಶ್‌ ಹೇಳಿದ್ದಾರೆ. "ನಿರೂಪಣೆಯು ಪಾತ್ರಗಳನ್ನು ಅನುಸರಿಸುತ್ತದೆ. ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತದೆ. ಕಥೆಗಳು ಒಂದಕ್ಕೊಂದು ಹೋಲಿಕೆ ಇರದು. ಆದರೆ, ವ್ಯಕ್ತಿಗಳ ಕಾರ್ಯಗಳಲ್ಲಿ ಹೋಲಿಕೆ ಕಾಣಬಹುದು. ಈ ಮೂಲಕ ಕಥೆಗಳನ್ನು ವಿಷಯಾಧಾರಿತವಾಗಿ ಅಥವಾ ಭೌತಿಕವಾಗಿ ಲಿಂಕ್‌ ಮಾಡಿದೆ" ಎಂದು ಮಿಥಿಲೇಶ್‌ ಹೇಳಿದ್ದಾರೆ.

ಸಿನಿಮಾ ಬಿಡುಗಡೆಯಾಗಲು ಇಂದು ಸೇರಿ ಒಂಬತ್ತು ದಿನಗಳಿವೆ. ಈ ಚಿತ್ರದ ಮಿಸ್ಟರಿಯ ಕುರಿತು ಪ್ರೇಕ್ಷಕರಲ್ಲಿ ಆಸಕ್ತಿ ಕೆರಳಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. "ಯಾವುದೇ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವಂತೆ ಈ ಚಿತ್ರದಲ್ಲಿ ನಾವು ಭಾವನೆಗಳು, ಸಂಗೀತ, ಕಥೆಗಳನ್ನು ತೋರಿಸಿದ್ದೇವೆ. ಶೀರ್ಷಿಕೆ ಹೇಳುವಂತೆ ಈ ಸಿನಿಮಾವು ಕಥೆಯಲ್ಲಿನ ಪಾತ್ರಗಳು ಹಾದು ಹೋಗುವ ರೂಪಾಂತರದ ಬಗ್ಗೆ ಇದೆ. ಇದು ಕ್ರಾಸ್‌ ಓವರ್‌ಗಿಂತ ಹೆಚ್ಚು ಮುಖ್ಯವಾಗಿದೆ. ಜನರಲ್ಲಿ ಇನ್ನೂ ಮಾನವೀಯತೆಯ ಭರವಸೆ ಇದೆ ಎಂದು ತೋರಿಸುವುದು ಇದರ ಉದ್ದೇಶ" ಎಂದು ಅವರು ಹೇಳಿದ್ದಾರೆ.

ಮಿಥಿಲೇಶ್‌ ಬೆಂಗಳೂರಿನಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ. ಈ ನಗರದಲ್ಲಿ ತಾನು ಭೇಟಿಯಾಗಿರುವ ಜನರ ಜೀವನವನ್ನು ಗಮನಿಸಿಕೊಂಡು ಕಥೆ ಬರೆದಿದ್ದಾರೆ. ಈ ಎಲ್ಲಾ ಪಾತ್ರಗಳೇ ರೂಪಾಂತರವಾಗಿದೆ. ಆದರೆ, ಒಂದು ಪಾತ್ರ ಮಾತ್ರ ಉತ್ತರ ಕರ್ನಾಟಕದ್ದು. ಉಳಿದ ಪಾತ್ರಗಳು ಬೆಂಗಳೂರಿನವು. "ಜನರನ್ನು ಭೌಗೋಳಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ನಾನು ಇರಿಸಬಹುದೇ ಎನ್ನುವ ಕುರಿತು ನನ್ನಲ್ಲಿ ಸ್ಪಷ್ಟತೆ ಇಲ್ಲ" ಎಂದು ಮಿಥಿಲೇಶ್‌ ಹೇಳಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ನಿರ್ದೇಶನದ ಒಂದು ಮೊಟ್ಟೆಯ ಕಥೆಯನ್ನು ಬೆಂಬಲಿಸಿದ ಸುಹಾನ್ ಪ್ರಸಾದ್ ಅವರ ಎರಡನೇ ನಿರ್ಮಾಣ ಇದಾಗಿದೆ. ರೂಪಾಂತರದಲ್ಲಿ ಲೇಖಾ ನಾಯ್ಡು, ಹನುಮಕ್ಕ, ಭರತ್ ಜಿಬಿ, ಸೋಮಶೇಖರ್ ಬೋಳೆಗಾಂವ್ ಮುಂತಾದವರು ನಟಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ಮಿಧುನ್ ಮುಕುಂದನ್ ಸಂಗೀತವಿದೆ.

Whats_app_banner