ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌-sandalwood news shiva rajkumar released dhanya ram kumar vicky varun starring kaala patthar movie trailer rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌

ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌

ವಿಕ್ಕಿ ವರುಣ್‌ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಲಾ ಪತ್ಥರ್‌ ಸಿನಿಮಾ ಟ್ರೇಲರ್‌ ಭಾನುವಾರ ಬಿಡುಗಡೆ ಆಗಿದೆ. ಸಿನಿಮಾ ಸೆಪ್ಟೆಂಬರ್‌ 13 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಧನ್ಯಾ ರಾಮ್‌ ಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್‌, ಸಿನಿಮಾ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌
ಕಾಲಾಪತ್ಥರ್‌ ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಧನ್ಯಾ ರಾಮ್‌ಕುಮಾರ್‌ ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್‌

2 ವರ್ಷಗಳ ಹಿಂದೆ ಆರಂಭವಾದ ಕಾಲಾಪತ್ಥರ್‌ ಸಿನಿಮಾ ಚಿತ್ರೀಕರಣದ ಮುಗಿದಿದ್ದು ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಈ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರಕ್ಕೆ ಶುಭ ಹಾರೈಸಿದ ಶಿವ ರಾಜ್‌ಕುಮಾರ್

ಕಾಲಾಪತ್ಥರ್‌ ಚಿತ್ರದಲ್ಲಿ ಕಾಲೇಜ್‌ ಕುಮಾರ ಖ್ಯಾತಿಯ ವಿಕ್ಕಿ ವರುಣ್‌ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಧನ್ಯಾ ರಾಮ್‌ ಕುಮಾರ್‌ ನಟಿಸಿದ್ದಾರೆ. ಬೆಂಗಳೂರಿನ ಮಾಲ್‌ವೊಂದರಲ್ಲಿ ಸೆಪ್ಟೆಂಬರ್‌ 8 ರಂದು ನಡೆದ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌, ಟಿಎಸ್‌ ನಾಗಾಭರಣ, ವಿನಯ್‌ ರಾಜ್‌ಕುಮಾರ್‌, ನಿರ್ಮಾಪಕರಾದ ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌, ಟ್ರೇಲರ್‌ ಬಿಡುಗಡೆಗೊಳಿಸಿ ಸೋದರ ಸೊಸೆ ಸಿನಿಮಾಗೆ ಶುಭ ಹಾರೈಸಿದರು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್, ಕಾಲಾಪತ್ಥರ್ ಚಿತ್ರದ ಟ್ರೇಲರ್ ಬಹಳ ಚೆನ್ನಾಗಿದೆ. ಈ ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದು ಹಾರೈಸಿದರು.

ನಾಯಕ ವಿಕ್ಕಿ ವರುಣ್‌ ಮಾತನಾಡಿ "ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇ‌ನೆ.‌ ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಕಡ್ಡಿಪುಡಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದ್ದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೇ ನನ್ನ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತೋಷವಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಸೆಪ್ಟೆಂಬರ್ 13 ರಂದು ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.‌

ನಟನೆಯೊಂದಿಗೆ ನಿರ್ದೇಶನ ಮಾಡಿರುವ ಸಿನಿಮಾ

ನಾಯಕಿ ಧನ್ಯಾ ರಾಮ್‌ ಕುಮಾರ್‌ ಮಾತನಾಡಿ, ಶಿವಣ್ಣ ಮಾವ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸಹ ಬಂದಿದ್ದಾರೆ‌. ಮೊದಲಿನಿಂದಲೂ ನನ್ನ ಕುಟುಂಬ ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರ, ಎಲ್ಲರೂ ಸಿನಿಮಾ ನೋಡಿ ಎಂದು ಧನ್ಯ ರಾಮ್‌ ಕುಮಾರ್‌ ಹೇಳಿದರು. ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಅವರೂ ಕೂಡಾ ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಮಾತನಾಡಿದರು.

ಕಾಲಾಪತ್ಥರ್‌ ಸಿನಿಮಾವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿದ್ದಾರೆ. ಚಿತ್ರಕ್ಕೆ , ಕೆಂಡಸಂಪಿಗೆ , ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ಆಕ್ಷನ್‌ ಕಟ್‌ ಹೇಳಿರುವುದರ ಜೊತೆಗೆ ನಾಯಕನಾಗಿ ಕೂಡಾ ನಟಿಸಿದ್ದಾರೆ.

mysore-dasara_Entry_Point