ಕನ್ನಡ ಸುದ್ದಿ  /  ಮನರಂಜನೆ  /  ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೊಕೇಟ್; ಸೂಪರ್‌ ಟ್ವಿಸ್ಟ್‌ ಅಣ್ಣಾ ಅಂದ್ರು ಶಿವಣ್ಣ ಫ್ಯಾನ್ಸ್‌

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೊಕೇಟ್; ಸೂಪರ್‌ ಟ್ವಿಸ್ಟ್‌ ಅಣ್ಣಾ ಅಂದ್ರು ಶಿವಣ್ಣ ಫ್ಯಾನ್ಸ್‌

hivarajkumar Bhairathi Ranagal: ಯುಗಾದಿ ಹಬ್ಬದ ಸಮಯದಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ನ ಪೋಸ್ಟರ್‌ವೊಂದನ್ನು ಗೀತಾ ಗ್ರಾಫಿಕ್ಸ್‌ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಅಡ್ವೋಕೇಟ್‌ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೋಕೇಟ್‌;
ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೋಕೇಟ್‌;

ಬೆಂಗಳೂರು: ಯುಗಾದಿ ಹಬ್ಬದ ಸಮಯದಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ನ ಪೋಸ್ಟರ್‌ವೊಂದನ್ನು ಗೀತಾ ಗ್ರಾಫಿಕ್ಸ್‌ ಹಂಚಿಕೊಂಡಿದೆ. ಈ ಸ್ವಾತಂತ್ರ್ಯ ದಿನದಂದು ನ್ಯಾಯದ ಬಣ್ಣ ವಾಪಸ್‌ ಬರಲಿದೆ ಎಂದು ಅಪ್‌ಡೇಟ್‌ ನೀಡಿದೆ. ಶಿವಣ್ಣ ಕಪ್ಪು ಕೋಟು ಹಾಕಿಕೊಂಡು ವಕೀಲರಾಗಿ ಕೋರ್ಟ್‌ನಲ್ಲಿ ಇರುವಂತಹ ಪೋಸ್ಟರ್‌ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಪೋಸ್ಟರ್‌ ನೋಡಿ ಅಭಿಮಾನಿಗಳು "ಶಿವಣ್ಣ ಅಡ್ವೊಕೇಟಾ? ಇದೆಂಥ ಟ್ವಿಸ್ಟ್‌?" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಶಿವಣ್ಣ ಮಾಸ್‌ ಲುಕ್‌" "ಏನ್ರೋ ಟ್ವಿಸ್ಟ್‌?" "ಬಹುದಿನಗಳ ಬಳಿಕ ಬೇರೆ ರೀತಿಯ ಕ್ಯಾರೆಕ್ಟರ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ" ಎಂದೆಲ್ಲ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ 15ರಂದು ಭೈರತಿ ರಣಗಲ್‌ ಸಿನಿಮಾ ಬಿಡುಗಡೆ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಈಗಾಗಲೇ ಚಿತ್ರತಂಡ ಪ್ರಕಟಿಸಿದೆ. ಇದೇ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಭೈರತಿ ರಣಗಲ್‌ ರಿಲೀಸ್‌ ಆಗಲಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ. ಭೈರತಿ ರಣಗಲ್‌ಗೆ ನರ್ತನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಭೈರತಿ ಸಿನಿಮಾವು ಮಫ್ತಿ ಸಿನಿಮಾದ ಕಥೆಯ ತುಣುಕಿನ ಮುಂದುವರೆದ ಭಾಗವಾಗಿದೆ. ಇದು ಮಫ್ತಿಯ ಪ್ರೀಕ್ವೆಲ್‌ ಅಲ್ಲದೆ ಇದ್ದರೂ ಅಲ್ಲಿನ ಪಾತ್ರವೊಂದು ಮತ್ತೊಂದು ಸಿನಿಮಾವಾಗಿ ಹೊರಹೊಮ್ಮುತ್ತಿದೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್‌ನ ಸಣ್ಣಕಥೆಯನ್ನು ಇಲ್ಲಿ ಬೆಳೆಸಲಾಗಿದೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಮಾಹಿತಿ ನೀಡಿದೆ.

ಪುಷ್ಪ 2 ಜತೆ ಭೈರತಿ ರಣಗಲ್‌ ಪೈಪೋಟಿ

ಚಿತ್ರಮಂದಿರಗಳಲ್ಲಿ ಭೈರತಿ ರಣಗಲ್‌ ಸಿನಿಮಾ ಬಿಡುಗಡೆಯಾಗುವ ದಿನವೇ ಅಲ್ಲು ಅರ್ಜುನ್‌ ನಟನೆಯ ಪುಷ್ಪ ದಿ ರೂಲ್‌ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ನಿನ್ನೆ ಅಲ್ಲು ಅರ್ಜುನ್‌ ಹುಟ್ಟುಹಬ್ಬದಂದು ಪುಷ್ಪ 2 ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಇದೀಗ ಯುಗಾದಿ ಹಬ್ಬದ ಶುಭದಿನದಂದು ಭೈರತಿ ರಣಗಲ್‌ ತಂಡವು ಪೋಸ್ಟರ್‌ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಶಿವಣ್ಣನ ಕೈಯಲ್ಲಿ ಕಾನೂನು ದಾಖಲೆ ಮತ್ತು ಮೈಯಲ್ಲಿ ವಕೀಲರ ಕೋಟು ಇರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಭೈರತಿ ರಣಗಲ್‌ ಗ್ಯಾಂಗ್‌ಸ್ಟಾರ್‌ ಸ್ಟೋರಿ

ಈಗಾಗಲೇ ಹಲವು ಸಂದರ್ಭಗಳಲ್ಲಿ ನಿರ್ದೇಶಕರಾದ ನರ್ತನ್‌ ಭೈರತಿ ರಣಗಲ್‌ ಬಗ್ಗೆ ಸಾಕಷ್ಟು ವಿವರ ನೀಡಿದ್ದಾರೆ. ಮಫ್ತಿ ಚಿತ್ರದಲ್ಲಿ ಭೈರತಿ ರಣಗಲ್‌ ಪಾತ್ರ ಗಟ್ಟಿಯಾಗಿತ್ತು. ಅದೊಂದು ತೂಕದ ಪತ್ರವಾಗಿತ್ತು. ಮಫ್ತಿಯಲ್ಲಿದ್ದ ಭೈರತಿ ಸಿನಿಪ್ರಿಯರಿಗೆ ಸಾಕಾಗಿರಲಿಲ್ಲ. ಈತನ ಹಿನ್ನೆಲೆಯ ಕಥೆ ಭೈರತಿ ರಣಗಲ್‌ನಲ್ಲಿ ಇರಲಿದೆ. ಭೈರತಿ ರಣಗಲ್‌ ಕಪ್ಪು ಉಡುಗೆ ಯಾಕೆ ಹಾಕುತ್ತಾರೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಈ ಸಿನಿಮಾದ ಕಥೆ ಹೇಳಿದಾಗ ಗೀತಕ್ಕೆ ಮತ್ತು ಶಿವಣ್ಣ ಹೆಚ್ಚು ಮಾತನಾಡದೆ ಚೆನ್ನಾಗಿದೆ ಸಿನಿಮಾ ಮಾಡು ಎಂದು ಪ್ರೋತ್ಸಾಹ ನೀಡಿದ್ದರು. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್‌ ಮುಗಿದಿದೆ" ಎಂದು ನಿರ್ದೇಶಕ ನರ್ತನ್‌ ಇತ್ತೀಚೆಗೆ ಮಾಹಿತಿ ನೀಡಿದ್ದರು. ಇದೀಗ ಶಿವಣ್ಣ ಅಡ್ವೊಕೇಟ್‌ ಪಾತ್ರದಲ್ಲಿ ಕಾಣಿಸಿರುವುದು ಮತ್ತು ಭೈರತಿ ರಣಗಲ್‌ ಧರಿಸುವ ಕಪ್ಪು ಉಡುಗೆಗೂ ಏನೋ ಸಾಮ್ಯತೆ ಇರುವ ಸೂಚನೆಯಿದೆ.

IPL_Entry_Point