ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ-sandalwood news sundar s directorial prakarana tanikha hantadallide movie trailer released kannada film industry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ

ಕೊಲೆ ಕೇಸ್‌ ಸುತ್ತ ಸುತ್ತಲಿದೆ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ; ಟ್ರೇಲರ್‌ ಜತೆಗೆ ಬಿಡುಗಡೆ ದಿನಾಂಕವೂ ಬಹಿರಂಗ

ಹೊಸಬರ ಹೊಸ ಪ್ರಯತ್ನ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಮರ್ಡರ್‌ ಮಿಸ್ಟರಿ ಜತೆಗೆ ಹತ್ತು ಹಲವು ಅಂಶಗಳನ್ನು ಹಿಡಿದು ಈ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲಿದೆ.

ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರದ ಟ್ರೇಲರ್‌ ಬಿಡುಗಡೆ
ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರದ ಟ್ರೇಲರ್‌ ಬಿಡುಗಡೆ

Prakarana Tanikha hantadallide: ಸ್ಯಾಂಡಲ್‌ವುಡ್‌ನಲ್ಲಿ ಭಿನ್ನ ಸಿನಿಮಾ ಶೀರ್ಷಿಕೆಯಿಂದ ಗಮನ ಸೆಳೆದ ಸಿನಿಮಾಗಳಲ್ಲಿ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಹ ಒಂದು. ಈಗಾಗಲೇ ಮೋಷನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಮೂಲಕ ಗಮನ ಸೆಳೆದ ಈ ಸಿನಿಮಾ ಇದೀಗ ಟ್ರೇಲರ್ ಜತೆಗೆ ಆಗಮಿಸಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಅನಾವರಣಗೊಂಡ ಟ್ರೈಲರ್ ಆರಂಭಿಕವಾಗಿಯೇ ಮೆಚ್ಚುಗೆ ಪಡೆದುಕೊಂಡಿದೆ. ಒಂದಿಒಡೀ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿದ್ದು, ಸಿನಿಮಾದ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಆದ ಮಾಹಿತಿಗಳನ್ನು ಹಂಚಿಕೊಂಡಿದೆ. ಜತೆಗೆ ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಯಾಗಲಿದೆ.

ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ .ಕೆ ಟ್ರೇಲರ್‌ಅನ್ನು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ, ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕಿಗೆ ಸಾಹಿತ್ಯ ಬರೆದಿದ್ದಾರೆ. ಅದು ಈಗಾಗಲೇ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆದಿದೆ. ಈ ಕಥೆ ತಮ್ಮನ್ನು ಸೆಳೆದ ಬಗ್ಗೆ, ಅದಕ್ಕೆ ಸಾಹಿತ್ಯ ಬರೆದ ಹಿನ್ನೆಲೆಯ ಬಗ್ಗೆ ಮಾತನಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರವರು. ಆ ಬಳಿಕ ನಿರ್ಮಾಪಕ ಚಿಂತನ್ ಕಂಬಣ್ಣ ತಾವು ಈ ಚಿತ್ರದ ಭಾಗವಾದ ಬಗ್ಗೆ ಮಾತಾಡಿದ್ದಾರೆ. ಚಿಂತನ್ ನಟನೆಯತ್ತ ಆಕರ್ಷಿತರಾಗಿ ರಂಗತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್ ಎಸ್ ಮತ್ತು ತಂಡದ ಪರಿಚಯವಾಗಿತ್ತಂತೆ. ಆ ಹಂತದಲ್ಲಿ ಸುಂದರ್ ಎಸ್ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇಷ್ಟವಾಗಿ, ಅದನ್ನು ತಾನೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಚಿಂತನ್ ಹೇಳಿಕೊಂಡಿದ್ದಾರೆ.

ರಂಗಭೂಮಿ ಹಿನ್ನೆಲೆಯವರೇ ಹೆಚ್ಚು

ಇನ್ನು ಈ ಚಿತ್ರದ ಸಾರಥಿ ಸುಂದರ್ ಎಸ್ ಕೂಡಾ ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರ ಹುಟ್ಟು ಪಡೆದ ಬಗೆಯನ್ನು ವಿವರಿಸಿದ್ದಾರೆ. "ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಇವರೆಲ್ಲರೂ ನಾನಾ ಕಥೆಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು. ಕಡೆಗೂ ಕಥೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಾಗ ಈಗಿರುವ ಟ್ರೆಂಡಿಗೆ ಸುಂದರ್ ಎಸ್ ಅವರ ಕಥೆ ಸೂಟ್ ಆಗುತ್ತದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ನಂತರ ನಿರ್ಮಾಪಕರನ್ನು ಹುಡುಕೋ ಕೆಲಸದ ನಡುವೆ ಚಿಂತನ್ ಕಂಬಣ್ಣ ತಾನೇ ನಿರ್ಮಾಣ ಮಾಡೋದಾಗಿ ಮುಂದೆ ಬಂದಿದ್ದರು. ಇದೆಲ್ಲದರಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ ಎಂಬುದು ನಿರ್ದೇಶಕ ಸುಂದರ್ ಮಾತಿನ ಸಾರ.

ಈ ಟ್ರೇಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು. ವಿಶೇಷವೆಂದರೆ, ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರಂತೆ.

ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರದ ಪಾತ್ರವರ್ಗ ಮತ್ತು ತಾಂತ್ರಿಕ ಬಳಗ

ಬ್ಯಾನರ್: ಕರದಾಯಾಮ ಸ್ಟುಡಿಯೋಸ್

ಚಿತ್ರ : ಪ್ರಕರಣ ತನಿಖಾ ಹಂತದಲ್ಲಿದೆ

ತಾರಾಗಣ : ಮಹಿನ್ ಕುಬೇರ್ , ಮುತ್ತುರಾಜ್ ಟಿ , ಪ್ರದೀಪ್ ಕುಮಾರ್, ರಾಜ್ ಗಗನ್ , ಶಿವು ಬೈರಾ , ಚಿಂತನ್ ಕಂಬಣ್ಣ, ಮಧು ಬಿ ಜೆ, ಗಣೇಶ್ ಆರ್

ಚಿತ್ರಕಥೆ ಮತ್ತು ನಿರ್ದೇಶನ: ಸುಂದರ್ ಎಸ್

ನಿರ್ಮಾಣ: ಚಿಂತನ್ ಕಂಬಣ್ಣ

ಛಾಯಾಗ್ರಹಣ: ಮೋಹನ್ ಎಂ ಎಸ್, ಜಗದೀಶ್ ಆರ್ ಜೆ

ಚಿತ್ರಕಥೆ ಮತ್ತು ಸಂಭಾಷಣೆ: ಸುಂದರ್ ಎಸ್, ರಕ್ತನ್ ಎಸ್ ಗೌಡ

ಸಾಹಿತ್ಯ: ಡಾ ಶಿವಣ್ಣ ಕೆ, ಸುಂದರ್ ಎಸ್

ಸಂಗೀತ: ಶಿಯೋಮ್

ಸಂಕಲನ: ನಾನಿ ಕೃಷ್ಣ

ನಿರ್ದೇಶನ ತಂಡ: ದೇವ್, ಅದ್ವೈತ್ ಶೆಟ್ಟಿ, ಪ್ರಜ್ವಲ್, ವಿಷ್ಣುವರ್ಧನ್

mysore-dasara_Entry_Point