ಕನ್ನಡ ಸುದ್ದಿ  /  ಮನರಂಜನೆ  /  ಮೆಲೋಡಿ ಗುಂಗು ಹಿಡಿಸಿದ ಮಾದೇವ ಚಿತ್ರದ ಎದೇಲಿ ತಂಗಾಳಿ ನಿನ್ನಿಂದಲೇ ಹಾಡು; ವಿನೋದ್ ಪ್ರಭಾಕರ್, ಸೋನಲ್ ಕೆಮಿಸ್ಟ್ರಿ ಸೂಪರ್

ಮೆಲೋಡಿ ಗುಂಗು ಹಿಡಿಸಿದ ಮಾದೇವ ಚಿತ್ರದ ಎದೇಲಿ ತಂಗಾಳಿ ನಿನ್ನಿಂದಲೇ ಹಾಡು; ವಿನೋದ್ ಪ್ರಭಾಕರ್, ಸೋನಲ್ ಕೆಮಿಸ್ಟ್ರಿ ಸೂಪರ್

ವಿನೋದ್‌ ಪ್ರಭಾಕರ್, ಸೋನಲ್ ಮೊಂತೆರೋ ನಾಯಕ ನಾಯಕಿಯಾಗಿ ನಟಿಸಿರುವ ಮಾದೇವ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಹಲವು ಕಾಲಘಟ್ಟದಲ್ಲಿ ನಡೆಯುವ ಈ ಕಥೆಗೆ ನವೀನ್‌ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

ಮೆಲೋಡಿ ಗುಂಗು ಹಿಡಿಸಿದ ಮಾದೇವ ಚಿತ್ರದ ಎದೇಲಿ ತಂಗಾಳಿ ನಿನ್ನಿಂದಲೇ ಹಾಡು; ವಿನೋದ್ ಪ್ರಭಾಕರ್, ಸೋನಲ್ ಕೆಮಿಸ್ಟ್ರಿ ಸೂಪರ್
ಮೆಲೋಡಿ ಗುಂಗು ಹಿಡಿಸಿದ ಮಾದೇವ ಚಿತ್ರದ ಎದೇಲಿ ತಂಗಾಳಿ ನಿನ್ನಿಂದಲೇ ಹಾಡು; ವಿನೋದ್ ಪ್ರಭಾಕರ್, ಸೋನಲ್ ಕೆಮಿಸ್ಟ್ರಿ ಸೂಪರ್

Maadeva Movie Song release: ಚಂದನವನದ ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಮಾದೇವ ಸಿನಿಮಾದಿಂದ ಹೊಸ ಅಪ್‌ಡೇಟ್‌ ಸಿಕ್ಕಿದೆ. ಮಾಸ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್, ನಟಿ ಸೋನಲ್ ಮೊಂಥೆರೋ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಟ್ರೆಂಡಿಂಗ್​ ಸುದ್ದಿ

ನನ್ನ ಕರಿಯರ್‌ನ ಬೆಸ್ಟ್ ಸಿನಿಮಾ

"ನನ್ನ ಕರಿಯರ್‌ನ ಬೆಸ್ಟ್ ಸಿನಿಮಾ ಇದು. ಚಿತ್ರದಲ್ಲಿ ನನ್ನದು ಡಿ-ಗ್ಲಾಮರ್ ಪಾತ್ರ. ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಬಹಳಷ್ಟಿದೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಈ ಸಿನಿಮಾ ಖಂಡಿತ ಹಿಟ್ ಆಗುತ್ತದೆ. ಕೊನೆಯ 40 ನಿಮಿಷ ಪ್ರತಿಯೊಬ್ಬರಿಗೂ ಮಾದೇವನಾಗಿ ಸಿನಿಮಾ ನೋಡುತ್ತಾರೆ. ನಾನೇ ಈ ರೀತಿ ಸಿನಿಮಾವನ್ನು ಮತ್ತೊಮ್ಮೆ ಮಾಡಲು ಆಗುವುದಿಲ್ಲ. ಈ ಕಥೆ ಬಹಳಷ್ಟು ಜನರನ್ನು ಒಳಗಡೆ ಕರೆದುಕೊಂಡು ಬಂದಿದೆ. ಈ ಚಿತ್ರಕ್ಕಾಗಿ ಬಹಳಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಆಂಗ್ರಿ ಯಂಗ್ ಮೆನ್ ಆಗಿ ನಟಿಸಿದ್ದೇನೆ ಎಂದರು ನಟ ವಿನೋದ್ ಪ್ರಭಾಕರ್.‌

ಹೃದಯಕ್ಕೆ ಹತ್ತಿರವಾದ ಸಿನಿಮಾ

"ಮಾದೇವ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾನು ಕಲಾವಿದೆಯಾಗಿ ಅಲ್ಲ ಆಡಿಯನ್ಸ್ ಆಗಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ಈ ರೀತಿ ಪಾತ್ರದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ನನ್ನ ವಿನೋದ್ ಸರ್ ಕೆಮಿಸ್ಟ್ರೀ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಈ ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ" ಎಂದು ತಿಳಿಸಿದರು ನಟಿ ಸೋನಲ್ ಮೊಂಥೆರೋ.

ಎದೆಯಲ್ಲಿ ತಂಗಾಳಿ ಹಾಡು ಬಿಡುಗಡೆ..

ಎದೆಯಲ್ಲಿ ತಂಗಾಳಿ ಎಂಬ ಪ್ರೇಮಗೀತೆಗೆ ಪ್ರಸನ್ನ ಕುಮಾರ್ ಎಂ ಪದ ಗೀಚಿದ್ದು, ಅನನ್ಯ ಭಟ್ ಧ್ವನಿಯಾಗಿದ್ದು, ಪ್ರದ್ದ್ಯೋತ್ತನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೋನಲ್ ಜೋಡಿ ನೋಡುಗರಿಗೆ ಇಷ್ಟವಾಗುತ್ತಾರೆ. ಖಾಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನವೀನ್ ರೆಡ್ಡಿ ಮಾದೇವನಿಗೆ ಸೂತ್ರಧಾರರು.

ಖಳನಾಯಕನಾಗಿ ಶ್ರೀನಗರ ಕಿಟ್ಟಿ

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯುತ್ತದೆ. ಹಿಂದೆಂದೂ ಕಂಡಿರದಂತಹ ವಿಭಿನ್ನವಾದ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಗರಕಿಟ್ಟಿ ಖಳನಾಯಕನಾಗಿ ನಟಿಸುತ್ತಿರುವುದು ವಿಶೇಷ. ನಟಿ ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್‌ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯ್ ಎಂ ಕುಮಾರ್ ಸಂಕಲನ, ಪ್ರದ್ದ್ಯೋತ್ತನ್ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ.

ಟಿ20 ವರ್ಲ್ಡ್‌ಕಪ್ 2024