ಮತ್ತೊಂದು ಪ್ರೇಮ ಕಾವ್ಯದ ಜತೆ ಬಂದ್ರು ಯೋಗರಾಜ್ ಭಟ್; ಮುಂಗಾರು ಮಳೆ ಜೋಡಿಯ ಚಿತ್ರದಲ್ಲಿ ಮನಸ್ಸಿಗೂ, ಕಡಲಿಗೂ ಲಿಂಕ್
ಡೈರೆಕ್ಟರ್ ಯೋಗರಾಜ್ ಭಟ್ ಅವರ ಹೊಸ ಸಿನಿಮಾ ಟೈಟಲ್ ಬಿಡುಗಡೆಯಾಗಿದೆ. ಮುಂಗಾರು ಮಳೆ ಸಿನಿಮಾ ಮಾಡಿ ಹಿಟ್ ಆಗಿದ್ದ ಯೋಗರಾಜ್ ಭಟ್ ಹಾಗೂ ಇ ಕೃಷ್ಣಪ್ಪ ಅವರ ಜೋಡಿ ಈಗ ಮನದ ಕಡಲು ಎಂಬ ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಡೈರೆಕ್ಟರ್ ಯೋಗರಾಜ್ ಭಟ್ ಅವರು ಇನ್ನೊಂದು ಹೊಸ ಸಿನಿಮಾವನ್ನು ಮಾಡಲಿದ್ದಾರೆ. ಇಂದು ಅಂದರೆ ನವೆಂಬರ್ 27ರಂದು ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಹಾಗೂ ಮುಂಗಾರು ಮಳೆ ಇ. ಕೃಷ್ಣಪ್ಪ ಜೋಡಿಯಾಗಿ ಮಾಡಲಿರುವ ಈ ಸಿನಿಮಾದ ಹೆಸರು ‘ಮನದ ಕಡಲು’ ಇ. ಕೃಷ್ಣಪ್ಪ ಈ ಸಿನಿಮಾಕ್ಕೆ ಹಣ ಹಾಕಲಿದ್ದಾರೆ. ಈ ಇಬ್ಬರ ಜೋಡಿ ಈಗಾಗಲೇ ಮಾಡಿದ ಮುಂಗಾರು ಮಳೆ ಸಿನಿಮಾ ತುಂಬಾ ಹಿಟ್ ಆಗಿದೆ. ಅದರಂತೆ ಈಗ ಮಾಡುವ ಹೊಸ ಸಿನಿಮಾ ಕೂಡ ಹಿಟ್ ಆಗಬಹುದು ಎಂಬ ನಿರೀಕ್ಷೆ ಮನೆಮಾಡಿದೆ. ಯೋಗರಾಜ್ ಭಟ್ರ ಸಿನಿಮಾಗಳಲ್ಲಿ ಒಳ್ಳೆ ಸಂಗೀತ ಹಾಗೂ ಒಳ್ಳೆಯ ಸಂಭಾಷಣೆ ಇರುವುದಂತೂ ಪಕ್ಕಾ. ಹಾಗಾಗಿ ಸಿನಿಮಾ ನೋಡಲು ಟೈಟಲ್ ತಿಳಿದುಕೊಳ್ಳಲು ಜನರು ಕಾತರದಿಂದಿದ್ದರು.
ಇದು ಮತ್ತೊಂದು ನವಿರಾದ ಪ್ರೇಮ ಕಥೆಯನ್ನು ಜನರ ಮುಂದಿಡಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಪೋಸ್ಟರ್ನಲ್ಲಿ ಕೂಡ ಕಡಲು ಮತ್ತು ಪ್ರೇಮದ ಭಾವ ಎದ್ದು ಕಾಣುವಂತಿದೆ. ಅಪ್ಪಟ ಪ್ರೇಮಮಯ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ ಎಂದು ಯೋಗರಾಜ್ ಭಟ್ರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದರು. ಆ ಪೋಸ್ಟರ್ ನೋಡಿದ ತಕ್ಷಣವೇ ಜನರಲ್ಲಿ ತಲ್ಲಣ ಆರಂಭವಾಗಿತ್ತು. ಪ್ಲೀಸ್ ಈ ಸಿನಿಮಾದ ಹೀರೋ ಗೋಲ್ಡನ್ ಸ್ಟಾರ್ ಗಣಿ ಆಗಿರಲಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿ, ಈ ಬಾರಿ ಸಿನಿಮಾ ಹೆಚ್ಚು ಮನರಂಜನೆ ನೀಡಲಿ ಎಂದು ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ. ಆದರೆ ಸಿನಿಮಾ ಮನದ ಕಡಲು ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಶೀಘ್ರದಲ್ಲಿ ಲಭ್ಯವಾಗಲಿದೆ. ಕರಟಕ ದಮನಕ ಸಿನಿಮಾದ ನಂತರ ಹೊಸ ಚಿತ್ರ ನಿರ್ಮಾಣಕ್ಕೆ ಯೋಗರಾಜ ಭಟ್ಟರು ಈಗ ಮುಂದಾಗಿದ್ದಾರೆ.
ಈ ಹಿಂದೆ ಒಮ್ಮೆ ಮನದ ಮಾತು ಸಿನಿಮಾ ಬಗ್ಗೆ ಸುದ್ದಿಯಾಗಿತ್ತು. ಪೊಲೀಸ್ ವರದಿಗಳ ಪ್ರಕಾರ, ಮೋಹನ್ ಕುಮಾರ್ ಎಂಬ 24 ವರ್ಷದ ಲೈಟ್ ಟೆಕ್ನಿಷಿಯನ್ ಸೆಟ್ನಲ್ಲಿ ಕೆಲಸ ಮಾಡುವಾಗ 30 ಅಡಿ ಏಣಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಮೃತನಾಗಿದ್ದ.